ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಅಯೋಗ್ಯ' ಸಿನಿಮಾದ ನಿರ್ದೇಶಕ ಮಹೇಶ್ ಕುಮಾರ್: ಮಧು ಯಾರು?
ಕನ್ನಡ ಚಿತ್ರರಂಗದಲ್ಲಿ ಮಹೇಶ್ ಕುಮಾರ್ ತುಂಬಾನೇ ಚಿರಪರಿಚಿತ. ಸ್ಯಾಂಡಲ್‌ವುಡ್‌ನ ಕೆಲವು ಸೂಪರ್‌ಸ್ಟಾರ್‌ಗಳಿಗೆ ಆತ್ಮೀಯ. ಯೋಗರಾಜ್ ಭಟ್, ದುನಿಯಾ ಸೂರಿ ಅಂತ ನಿರ್ದೇಶಕ ಜೊತೆ ಕೆಲಸ ಮಾಡಿರುವ ಮಹೇಶ್ ಕುಮಾರ್ ನಿರ್ದೇಶನದ ಜೊತೆ ಸಿನಿಮಾ ಪ್ರಚಾರವನ್ನೂ ಮಾಡಿದವರು. ಮಹೇಶ್ ನಿರ್ದೇಶಿಸಿದ ಎರಡೂ ಸಿನಿಮಾಗಳು ಕೂಡ ಹಿಟ್ ಲಿಸ್ಟ್ ಸೇರಿದ್ದು, ಮೂರನೇ ಸಿನಿಮಾಗೆ ಕೈ ಹಾಕಿದ್ದರು.
ಮೊದಲ ಸಿನಿಮಾ 'ಅಯೋಗ್ಯ' ಮೂಲಕವೇ ಮಹೇಶ್ ಕುಮಾರ್ ಯಶಸ್ಸನ್ನು ಗಿಟ್ಟಿಸಿಕೊಂಡಿದ್ದರು. ನೀನಾಸಂ ಸತೀಶ್, ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ನಟಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಬಳಿಕ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟಿಸಿದ 'ಮದಗಜ' ಸಿನಿಮಾಗೂ ಆಕ್ಷನ್ ಕಟ್ ಹೇಳಿ ಗಮನ ಸೆಳೆದಿದ್ದರು.

ನಿರ್ದೇಶಕನ ಜೊತೆಗೆ ಬೇರೆ ಸಿನಿಮಾಗಳ ಪ್ರಚಾರ ಮಾಡಿ ಸದ್ದು ಮಾಡುತ್ತಿದ್ದರು. ಆದರೆ, ಮದುವೆ ವಿಷಯದಲ್ಲಿ ಮಾತ್ರ ಸೌಂಡು ಮಾಡದೆ ಸೈಲೆಂಟ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ನಿರ್ದೇಶಕ ಮಹೇಶ್ ಕುಮಾರ್ ಮೈಸೂರು ಮೂಲದ ಚೈತ್ರಾ ಎಂಬುವವರೊಂದಿಗೆ ವಿವಾಹವಾಗಿದ್ದಾರೆ. ಇವರ ಮದುವೆ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಮಹೇಶ್ ಕುಮಾರ್ ಸದ್ದಿಲ್ಲದೆ ಮದುವೆ ಆಗಿದ್ದಕ್ಕೆ ಕಾರಣಗಳನ್ನು ಇನ್ನೂ ತಿಳಿಸಿಲ್ಲ. ಆದರೆ, ಇದೊಂದು ಅರೇಂಜ್ಡ್ ಮ್ಯಾರೇಜ್ ಎಂದು ಹೇಳಿಕೊಂಡಿದ್ದಾರೆ. ಮನೆಯವರೇ ನೋಡಿದ ಹುಡುಗಿಯೊಂದಿಗೆ ಮಹೇಶ್ ವಿವಾಹವಾಗಿರುವುದಾಗಿ ಮಹೇಶ್ ಮಾಹಿತಿಯನ್ನು ನೀಡಿದ್ದಾರೆ. ಇನ್ನು ಮದುವೆ ಯಾವಾಗ ನಡೆಯಿತು? ಎಲ್ಲಿ ಎಂಬ ಮಾಹಿತಿ ಇಲ್ಲ. ಕೆಲವು ಮೂಲಗಳ ಪ್ರಕಾರ ಇತ್ತೀಚೆಗೆ ಮೈಸೂರಿನಲ್ಲಿ ವಿವಾಹವಾಗಿರುವ ಬಗ್ಗೆ ಕೆಲವು ವೆಬ್ ಸೈಟ್‌ಗಳು ವರದಿ ಮಾಡಿವೆ.
ಮಹೇಶ್ ಕುಮಾರ್ ವಿವಾಹಕ್ಕೂ ಮುನ್ನ 'ಅಯೋಗ್ಯ 2' ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಈ ಗ್ಯಾಪ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವು ಮೂಲಗಳ ಪ್ರಕಾರ, ಮೈಸೂರಿನ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಕೆಲವೇ ದಿನಗಳ ಹಿಂದೆ ಎರಡು ಕುಟುಂಬದವರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ. ತಮ್ಮ ವಿವಾಹದ ವಿಡಿಯೋವನ್ನು ಹಂಚಿಕೊಂಡಿದ್ದು, ಮನೆಯವರು ತೋರಿಸಿದ ಹುಡುಗಿ, ಮನಮೆಚ್ಚಿದ ಹುಡುಗಿ ಎಂದು ಹೇಳಿದ್ದಾರೆ. ಆದರೆ, ಈ ಮದುವೆ ಸಮಾರಂಭಕ್ಕೆ ಸಿನಿಮಾರಂಗದಿಂದ ಗಣ್ಯರು ಭಾಗಿಯಾಗಿದ್ದರ ಬಗ್ಗೆ ಮಾಹಿತಿ ಇಲ್ಲ.
ಇನ್ನು ನಿರ್ದೇಶಕ ಮಹೇಶ್ ಮದುವೆ ಆಗಿರುವ ಚೈತ್ರಾ ಮೈಸೂರು ಮೂಲದವರು. ಇವರ ಎಂ.ಎ ಎಕನಾಮಿಕ್ಸ್‌ನಲ್ಲಿ ಪದವಿಯನ್ನು ಪಡೆದಿದ್ದಾರೆ ಎಂದು ನ್ಯೂಸ್ ಫರ್ಸ್ಟ್ ವರದಿ ಮಾಡಿದೆ. ಮದುವೆಯನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಆಗಿದ್ದು, ಸಿನಿಮಾ ರಂಗದ ಗಣ್ಯರಿಗಾಗಿ ಆರತಕ್ಷತೆಯನ್ನು ಇಟ್ಟುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ರಿಸೆಪ್ಷನ್ ಬಗ್ಗೆ ಮಹೇಶ್ ಕಡೆಯಿಂದ ಇನ್ನೂ ಮಾಹಿತಿ ಸಿಕ್ಕಿಲ್ಲ.


Click it and Unblock the Notifications