Spandana Death: "ವೀಕ್ ಇರಲಿಲ್ಲ.. ಊಹಾ-ಪೋಹಾ ಹಬ್ಬಿಸ್ಬೇಡಿ ಮರಣೋತ್ತರ ವರದಿ ಬರಲಿ" ಚಿಕ್ಕಪ್ಪ ಬಿಕೆ ಹರಿಪ್ರಸಾದ್

ಆಗಸ್ಟ್ 7, ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತದ ಸುದ್ದಿ ಬಂದಿತ್ತು. ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬರಸಿಡಿಲಿನಂತೆ ಬಂದಿತ್ತು.

ಸಂಬಂಧಿಯೊಂದಿಗೆ ಬ್ಯಾಂಕಾಕ್‌ಗೆ ತೆರಳಿದ್ದ ಸ್ಪಂದನಾ ವಿಜಯ್ ರಾಘವೇಂದ್ರಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬ್ಯಾಂಕಾಕ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಆ ಬಳಿಕ ಸಾವಿಗೆ ಅಸಲಿಗೆ ಕಾರಣವೇನು? ಅನ್ನೋದು ತಿಳಿದು ಬರಲಿದೆ.

B K Hariprasad says dont spread rumours about Spandana death wait for autopsy report

ಇದೇ ವೇಳೆ ಸ್ಪಂದನಾ ದೊಡ್ಡಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಮಾಧ್ಯಮಗಳಿಗೆ ಒಂದು ಹೇಳಿಕೆ ಕೊಟ್ಟಿದ್ದಾರೆ. ಸ್ಪಂದನಾ ಸಾವಿನ ಬಗ್ಗೆ ಊಹಾ-ಪೋಹಾವನ್ನು ಹಬ್ಬಿಸಬೇಡಿ ಅಂತಲೂ ಮನವಿ ಮಾಡಿಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿನ ಕುರಿತು ಚಿಕ್ಕಪ್ಪ ಬಿ ಕೆ ಹರಿಪ್ರಸಾದ್ ಹೇಳಿಕೆ ಹೀಗಿದೆ.

"ರಾತ್ರಿ ಮಲಗಿದವರು ಎದ್ದಿಲ್ಲ"

ಸ್ಪಂದನಾ ವಿಜಯ್ ರಾಘವೇಂದ್ರ ಪ್ರವಾಸಕ್ಕೆ ತೆರಳಿದರ ಬಗ್ಗೆ ಬಿ ಕೆ ಹರಿಪ್ರಸಾದ್‌ಗೆ ಮಾಹಿತಿ ಇರಲಿಲ್ಲ. ಆದರೆ, ಅಲ್ಲಿ ಹಾರ್ಟ್‌ ಅಟ್ಯಾಕ್ ಆಗಿದೆ ಎಂಬ ಮಾಹಿತಿ ತಿಳಿದು ಬಂದಿದ್ದಾಗಿ ಹೇಳಿದ್ದಾರೆ.

"ಪ್ರವಾಸ ಯಾವತ್ತು ಹೋಗಿದ್ದರು ಅನ್ನೋದು ಗೊತ್ತಿಲ್ಲ. ಅವರ ಸಂಬಂಧಿಗಳ ಜೊತೆ ಹೋಗಿದ್ದಾರೆ. ವಿಜಯ್ ರಾಘವೇಂದ್ರ ಶೂಟಿಂಗ್ ಮುಗಿಸಿ ಹೋಗಿದ್ದಾರೆ. ಇವರು ಹೋಗುವಷ್ಟರಲ್ಲಿ ಸ್ವಲ್ಪ ಡಲ್ ಇದ್ದರು. ರಾತ್ರಿ ಮಲಗಿದವರು ಎದ್ದಿಲ್ಲ. ಹಾರ್ಟ್ ಅಟ್ಯಾಕ್ ಆಗಿದೆ ಅಂತ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದೆ." ಎಂದು ಸ್ಪಂದನಾ ಚಿಕ್ಕಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ.

B K Hariprasad says dont spread rumours about Spandana death wait for autopsy report

"ಊಹಾ ಪೋಹಗಳಿಗೆ ಅವಕಾಶ ಕೊಡಬೇಡಿ"

"ನಿಮ್ಮಲ್ಲಿ ಕೇಳಿಕೊಳ್ಳುವುದು ಇಷ್ಟೇ. ನೀವೇ ಏನೇ ಪ್ರಸಾರ ಮಾಡುವುದಕ್ಕೂ ಫ್ರೀ ಇದ್ದೀರಿ. ಮರಣೋತ್ತರ ಪರೀಕ್ಷೆ ವರದಿ ಬಂದ್ಮೇಲೆ ನೀವು ಪ್ರಸಾರ ಮಾಡಿ. ಹಾರ್ಟ್ ಅಟ್ಯಾಕ್ ಆಗಿದೆ. ಮರಣೋತ್ತರ ವರದಿ ಬಂದ್ಮೇಲೆ ನೀವು ಪ್ರಸಾರ ಮಾಡುವುದರಲ್ಲಿ ಅಭ್ಯಂತರವಿಲ್ಲ. ಊಹಾ ಪೋಹಗಳಿಗೆ ಅವಕಾಶ ಕೊಡಬೇಡಿ. ಯಾಕಂದರೆ, ಹೆಣ್ಣು ಮಗಳು." ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ.

"ಮರಣೋತ್ತರ ಪರೀಕ್ಷೆ ವರದಿ ಬಂದ್ಮೇಲೆ ಗೊತ್ತಾಗುತ್ತೆ"

ಇದೇ ವೇಳೆ ಬಿಕೆ ಹರಿಪ್ರಸಾದ್ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಅ ವರದಿ ಬಂದ್ಮೇಲೆ ಏನಾಗಿದೆ ಅನ್ನೋದು ಗೊತ್ತಾಗುತ್ತೆ. ಅದಕ್ಕೂ ಮುನ್ನ ಊಹಾ-ಪೋಹಗಳನ್ನು ಹಬ್ಬಿಸಬೇಡಿ ಎಂದು ಹೇಳಿದ್ದಾರೆ.

"ಹಾರ್ಟ್ ಅಟ್ಯಾಕ್ ಆಗಿರೋದಂತೂ ಪಕ್ಕಾ.. ಆದರೆ, ಅಷ್ಟೊಂದು ವೀಕ್ ಅಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ್ಮೇಲೆ ಗೊತ್ತಾಗುತ್ತೆ." ಎಂದು ಸ್ಪಂದನಾ ಚಿಕ್ಕಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ.

More from Filmibeat

English summary
B K Hariprasad requested media to do not spread rumours about Spandana death. Wait for autopsy report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X