'ತನುಜಾ' ಸಿನಿಮಾದಲ್ಲಿ ಬಿಎಸ್‌ವೈ, ಸಚಿವ ಸುಧಾಕರ್ ಸ್ಪೆಷಲ್ ಎಂಟ್ರಿ: ಏನು ಹೇಳ್ತಿದೆ ಟ್ರೈಲರ್?

ಕೊರೊನಾ ಸಮಯದಲ್ಲಿ ಆದ ಅವಾಂತರಗಳು ಒಂದೆರಡಲ್ಲ. ಅದೆಷ್ಟೋ ಮಂದಿಗೆ ಏನೇನೋ ತೊಂದರೆಗಳನ್ನು ಅನುಭವಿಸಿದ್ದರು. ಈ ವೇಳೆ ನಡೆದ ನೈಜ ಘಟನೆಯನ್ನು ಆಧರಿಸಿ 'ತನುಜಾ' ಅನ್ನೋ ಸಿನಿಮಾವೊಂದು ನಿರ್ಮಾಣ ಆಗಿದೆ.

'ತನುಜಾ' ಕೊರೊನಾ ಹಾವಳಿ ವೇಳೆ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಈ ವೇಳೆ ಶಿವಮೊಗ್ಗದ ಕುಗ್ರಾಮವೊಂದರಿಂದ ಬೆಂಗಳೂರಿಗೆ ಬಂದು ತನುಜಾ ನೀಟ್ ಪರೀಕ್ಷೆ ಬರೆದಿದ್ದರು. ಆ ವಿದ್ಯಾರ್ಥಿನಿ ನೀಟ್ ಪರೀಕ್ಷೆ ಬರೆಯಲು ಅಂದು ನೆರವಾಗಿದ್ದು, ಆಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್. ಇವರೊಂದಿಗೆ ಪತ್ರಕರ್ತ ವಿಶ್ವೇಶ್ವರ್ ಭಟ್ ಹಾಗೂ ಪ್ರದೀಪ್ ಈಶ್ವರ್ ನೆರವು ನೀಡಿದ್ದರು.

ಅದೇ ತನುಜಾ ಅಂದು ನೀಟ್ ಪರೀಕ್ಷೆ ಬರೆದು, ಇಂದು ಬೆಳಗಾವಿಯಲ್ಲಿ ಎರಡನೇ ವರ್ಷದ ಎಂ.ಬಿ.ಬಿ.ಎಸ್ ಅಭ್ಯಾಸ ಮಾಡುತ್ತಿದ್ದಾರೆ. ಈ ನೈಜ ಘಟನೆಯನ್ನೇ ಇಟ್ಟುಕೊಂಡು ಹರೀಶ್ ಎಂ ಡಿ ಹಳ್ಳಿ 'ತನುಜಾ' ಸಿನಿಮಾ ಮಾಡಿದ್ದಾರೆ. ಇದೇ ಸಿನಿಮಾದ ಟ್ರೈಲರ್ ಇತ್ತೀಚಿಗೆ ಬಿಡುಗಡೆಯಾಗಿದೆ. ವೈದ್ಯಕೀಯ ಸಚಿವರಾದ ಸುಧಾಕರ್ 'ತನುಜಾ' ಸಿನಿಮಾದ ಟ್ರೈಲರ್ ಅನ್ನು ರಿಲೀಸ್ ಮಾಡಿದ್ದಾರೆ.

B S Yediyurappa, Minister Sudhakar Starrer Tanuja Movie Trailer Released

'ತನುಜಾ' ಸಿನಿಮಾದಲ್ಲಿ ಸಚಿವ ಸುಧಾಕರ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರವೇನು ಅನ್ನೋದನ್ನು ಸುಧಾಕರ್ ಅವರೇ ಹೇಳಿದ್ದಾರೆ. "ನಾನು ಸಾಮಾನ್ಯವಾಗಿ ಎಲ್ಲರ ಟ್ವೀಟ್‌ಗಳನ್ನೂ ಫಾಲೋ ಮಾಡುತ್ತಿರುತ್ತೇನೆ. ನನ್ನ ಆತ್ಮೀಯ ಸ್ನೇಹಿತರಾದ ವಿಶ್ವೇಶ್ವರ ಭಟ್ ಅವರು ತನುಜಾ ನೀಟ್ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ಟ್ವೀಟ್ ಮಾಡಿದ್ದರು. ಅದನ್ನು ಗಮನಿಸಿ, ಆ ಹುಡುಗಿ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ದೆಹಲಿಯ ನೀಟ್ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಈ ವಿಷಯದಲ್ಲಿ ನಮ್ಮ ನಾಯಕರೂ ಹಾಗೂ ಆಗ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರ ಸಹಕಾರ ನೀಡಿದ್ದರು. ಆಮೇಲೆ ವಿಶ್ವೇಶ್ವರ ಭಟ್ ಅವರು ನಿರ್ದೇಶಕ ಹರೀಶ್ ಅವರನ್ನು ಪರಿಚಯ ಮಾಡಿಸಿ, ತನುಜಾ ಕುರಿತಾದ ಸಿನಿಮಾ ಮಾಡುತ್ತಿದ್ದಾರೆ‌ ಎಂದರು. ಹಾಗೇ ಹರೀಶ್ ಅವರು ನೀವು ಸಹ ಸಚಿವರಾಗಿಯೇ ಇದರಲ್ಲಿ ಅಭಿನಯಿಸಬೇಕು ಎಂದರು. ಡಾಕ್ಟರ್ ಆಗಿರುವ ನನ್ನನ್ನು ಆಕ್ಟರ್ ಮಾಡಿದರು." ಎಂದು ಸುಧಾಕರ್ ತಿಳಿಸಿದ್ದಾರೆ.

B S Yediyurappa, Minister Sudhakar Starrer Tanuja Movie Trailer Released

'ತನುಜಾ' ಸಿನಿಮಾದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂಪ್ಪ ಅವರು ಸಿ ಎಂ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕೊರೊನಾ ವೇಳೆ ವಿದ್ಯಾರ್ಥಿನಿಯೊಬ್ಬರು ಬೆಂಗಳೂರಿಗೆ ಬಂದು ನೀಟ್ ಬರೆದು ಎಂಬಿಬಿಎಸ್ ಸೇರಿದ ಘಟನೆಯನ್ನು ತೆರೆಮೇಲೆ ತರುತ್ತಿದ್ದಾರೆ. ಇದೇ ವೇಳೆ 'ತನುಜಾ' ನಿಜಕ್ಕೂ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿ. ಆಕೆಯ ಪಾತ್ರ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ" ಎನ್ನುತ್ತಾರೆ ನಟಿ ಸಪ್ತ ಪಾವೂರ್.

More from Filmibeat

English summary
B S Yediyurappa, Minister Sudhakar Starrer Tanuja Movie Trailer Released, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X