ಬೇಬಿ ಇಂದಿರಾ-ಸುದೀಪ್ ಬಾಲ್ಯದ ಫೋಟೊ ವೈರಲ್; ಈ ಫೋಟೊ ತೆಗೆಸಿಕೊಂಡಿದ್ದು ಯಾವಾಗ? ಯಾವ ಸಂದರ್ಭ?

ಬೇಬಿ ಇಂದಿರಾಗೂ, ಕಿಚ್ಚ ಸುದೀಪ್‌ಗೂ ಎಲ್ಲಿಂದ ಎಲ್ಲಿಯ ಸಂಬಂಧ? ಇಬ್ಬರ ಬಾಲ್ಯದ ಫೋಟೊ ನೋಡಿದಾಗ ಇಂತಹದ್ದೊಂದು ಪ್ರಶ್ನೆ ಖಂಡಿತಾ ಮೂಡುತ್ತೆ. ಕಿಚ್ಚ ಸುದೀಪ್ ಬಾಲ್ಯದಲ್ಲಿ ಚಿತ್ರರಂಗಕ್ಕೆ ಬಂದೇ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಬೇಬಿ ಇಂದಿರಾ ಹಾಗೂ ಕಿಚ್ಚ ಸುದೀಪ್ ಭೇಟಿ ಹೇಗಾಯಿತು? ಇಬ್ಬರೂ ಜೊತೆಯಲ್ಲಿ ನಿಂತು ಫೋಟೊ ತೆಗೆಸಿಕೊಂಡಿದ್ದು ಯಾವಾಗ? ಎಲ್ಲಿ? ಅನ್ನೋ ಕುತೂಹಲ ಮೂಡುತ್ತೆ.

ಬೇಬಿ ಇಂದಿರಾ ಯಾರಿಗೆ ಗೊತ್ತಿಲ್ಲ ಹೇಳಿ? 70 ಹಾಗೂ 80ರ ದಶಕದಲ್ಲಿ ಬಾಲ ನಟಿಯಾಗಿ ಈಕೆ ಸ್ಟಾರ್ ಪಟ್ಟಕ್ಕೇರಿದ್ದರು. ಕನ್ನಡದ ಹಲವು ಸಿನಿಮಾಗಳಲ್ಲಿ ಇವರನ್ನು ನೋಡಬಹುದು. ಆ ಮಟ್ಟಿಗೆ ಬೇಡಿಕೆ ಇಟ್ಟುಕೊಂಡಿದ್ದ ನಟಿಯೇ ಬೇಬಿ ಇಂದಿರಾ. ಆದರೆ, ಕೆಲವು ವರ್ಷಗಳಿಂದ ಸಿನಿಮಾದಿಂದ ದೂರವೇ ಉಳಿದಿದ್ದಾರೆ. ಮದುವೆ, ಮಕ್ಕಳು, ಸಂಸಾರ ಅಂತ ಬ್ಯುಸಿಯಾಗಿದ್ದಾರೆ.

Baby Indira said in an interview about her childhood photo with Kichcha Sudeep

ಬಾಲ ನಟಿಯಾಗಿದ್ದರೂ, ಒಂದು ಕಾಲದಲ್ಲಿ ಬಿಡುವಿಲ್ಲದೆ ನಟಿಸುತ್ತಿದ್ದ ಈ ನಟಿ ರಘು ರಾಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಎಷ್ಟೋ ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡಿದ್ದು, ತಮ್ಮ ಸಿನಿಮಾ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನಿರೂಪಕ ರಘುರಾಮ್ ಈ ಅಪರೂಪ ಫೋಟೊವನ್ನು ಬೇಬಿ ಇಂದಿರಾ ಅವರಿಗೆ ತೋರಿಸಿದಾಗ, ಅವರ ಪ್ರತಿಕ್ರಿಯೆ ಹೀಗಿತ್ತು ನೋಡಿ.

ಬಾಲ ನಟಿಯಾಗಿದ್ದಾಗ ಬೇಬಿ ಇಂದಿರಾ ಹಾಗೂ ಕಿಚ್ಚ ಸುದೀಪ್ ಫೋಟೊ ತೆಗೆಸಿಕೊಂಡಿದ್ದರು. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಸಂದರ್ಶನಕ್ಕೂ ಮುನ್ನ ಅವರ ಸಂಬಂಧಿಯೊಬ್ಬರು ಬೇಬಿ ಇಂದಿರಾ ಹಾಗೂ ಸುದೀಪ್ ಫೋಟೊವನ್ನು ಕಳುಹಿಸಿಕೊಟ್ಟಿದ್ದರು. ಆ ಕ್ಷಣವನ್ನು ಬೇಬೆ ಇಂದಿರಾ ರಘುರಾಮ್ ಯೂಟ್ಯೂಬ್ ಚಾನೆಲ್‌ನಲ್ಲಿ ನೆನಪಿಸಿಕೊಂಡಿದ್ದಾರೆ.

"ಈ ಫೋಟೊದೊಂದು ಕಥೆಯಿದೆ. ನನ್ನ ಸಂಬಂಧಿ ಬೆಂಗಳೂರಿನಲ್ಲಿ ಇದ್ದಾರೆ. ಅವರು ನನಗೆ ಇತ್ತೀಚೆಗೆ ಈ ಫೋಟೊ ಕಳಿಸಿ, ಇಂದಿರಾ ಈ ಪಿಕ್ಚರ್‌ನಲ್ಲಿ ಇರೋದು ಯಾರು ಅಂತ ಗೊತ್ತಾಯ್ತಾ? ಅಂತ ಹೇಳಿದ್ರು. ನನಗೆ ಗೊತ್ತಾಯ್ತು. ಯಾಕೆ ಕೇಳುತ್ತಿದ್ದಾರಾ? ಅಂತ ಕೇಳಿದೆ. ಈ ಫೋಟೊ ಇಡೀ ಕರ್ನಾಟಕ ಓಡಾಡುತ್ತಿದೆ. ಅದಕ್ಕೆ ಕೇಳಿದ ಅಂದರು. ಹಾಗೇ ಇವರು ಯಾರು ಅಂತ ಗೊತ್ತಾಯ್ತಾ? ಅಂತ ಕೇಳಿದ್ರು." ಎಂದು ಆ ಕ್ಷಣವನ್ನು ನೆನೆಪಿಸಿಕೊಂಡಿದ್ದಾರೆ.

Baby Indira said in an interview about her childhood photo with Kichcha Sudeep

ಕಿಚ್ಚ ಸುದೀಪ್ ಜೊತೆ ಇರುವ ಈ ಫೋಟೊವನ್ನು ಯಾವಾಗ ತೆಗೆಸಿಕೊಂಡಿದ್ದು ಅನ್ನೋದನ್ನು ಬೇಬಿ ಇಂದಿರಾ ನೆನಪು ಮಾಡಿಕೊಂಡಿದ್ದಾರೆ. ಇವರು ಬಾಲ ನಟಿಯಾಗಿದ್ದಾಗ ರೆಬೆಲ್ ಸ್ಟಾರ್ ಅಂಬರೀಶ್ ಶಿವಮೊಗ್ಗದಲ್ಲಿದ್ದ ಕಿಚ್ಚ ಸುದೀಪ್ ಮನೆಗೆ ಕರೆದುಕೊಂಡು ಹೋಗಿದ್ದಾಗ ತೆಗೆಸಿಕೊಂಡ ಫೋಟೊ. "ನಾನು ಈ ಫೋಟೊ ನೋಡಿ, ಅಂಬರೀಶ್ ಅಂಕಲ್ ಅವರ ಕ್ಲೋಸ್ ಫ್ರೆಂಡ್ ಇದ್ದಾರೆ ಶಿವಮೊಗ್ಗದಲ್ಲಿ ಅವರ ಮಗ ಇವರು ಅಂತ ನಮ್ಮ ಸಂಬಂಧಿಗೆ ಹೇಳಿದೆ. ನಾನು ಸಿನಿಮಾ ಶೂಟಿಂಗ್ ಇದ್ದಾಗ ಅವರ ಮನೆಗೆ ಹೋಗಿದ್ವಿ. ಅಂಬರೀಶ್ ಅಂಕಲ್ ನಮ್ಮನ್ನೆಲ್ಲ ಕರೆದುಕೊಂಡು ಹೋಗಿದ್ದರು. ಅವರು ಒಮ್ಮೆ ಡಿನ್ನರ್‌ಗೆ ಕರೆದಿದ್ದರು. ಅವರ ಮನೆಗೆ ಹೋಗಿ ಊಟ ಮಾಡಿ, ಆಟ ಆಡಿದ್ದೇವೆ. ಈ ತಮ್ಮ ನನಗೆ ಚೆನ್ನಾಗಿ ಗೊತ್ತಿದೆ" ಎಂದು ಅವರು ತಮ್ಮ ಸಂಬಂಧಿಗೆ ತಿಳಿಸಿದ್ದರು.

ಸಂಬಂಧಿ ಈ ಪೋಟೊದಲ್ಲಿ ಇರುವವರು ಕಿಚ್ಚ ಸುದೀಪ್ ಅಂತ ಹೇಳುವವರೆಗೂ ಬೇಬಿ ಇಂದಿರಾಗೆ ಈ ವಿಷಯ ಗೊತ್ತೇ ಇರಲಿಲ್ಲ. ಅವರ ಸಂಬಂಧಿ ಬೇಬಿ ಇಂದಿರಾಗೆ, " ನಿಮಗೆ ಕಿಚ್ಚ ಸುದೀಪ್ ಅನ್ನೋರು ಗೊತ್ತಿದ್ದಾರಾ? ಅಂತ ಕೇಳಿದರು. ಕಿಚ್ಚ ಸುದೀಪ್ ಚೆನ್ನಾಗಿ ಗೊತ್ತಿದೆ. ಅವರ ಸಿನಿಮಾಗಳನ್ನೆಲ್ಲ ನೋಡಿದ್ದೀನಿ ಎಂದೆ. ಅವರು ಕನ್ನಡದ ಟಾಪ್ ಸ್ಟಾರ್ ಅನ್ನೋದು ಗೊತ್ತಿದೆ ಎಂದೆ. ನನಗೆ ಬಹಳ ಶಾಕ್ ಆಯ್ತು. ಸರ್ಪ್ರೈಸ್ ಆಯ್ತು. ಹಾಗೇ ಸಂತೋಷನೂ ಆಯ್ತು." ಎಂದು ಹೇಳಿಕೊಂಡಿದ್ದಾರೆ.

ಹಾಗೇ ಸುದೀಪ್ ಬಗ್ಗೆನೂ ಮಾತಾಡಿದ್ದಾರೆ. "ನಮ್ಮ ಜೊತೆ ಆಟ ಆಡುತ್ತಿದ್ದ ಒಬ್ಬ ಚಿಕ್ಕ ತಮ್ಮ. ಇವತ್ತು ಕನ್ನಡ ಇಂಡಸ್ಟ್ರಿಯಲ್ಲಿ ಇಷ್ಟು ದೊಡ್ಡ ಹೆಸರು ಮಾಡಿ, ದೊಡ್ಡ ಹೀರೊ ಆಗಿದ್ದಾರೆ. ಕಿಚ್ಚ ಸುದೀಪ್ ಅವರ ಕೆಲವು ಸಿನಿಮಾಗಳನ್ನು ನಾನು ನೋಡಿದ್ದೀನಿ. ಅವರು ಒಬ್ಬ ಸಹಜ ನಟ. ನಮ್ಮ ಜೊತೆ ಒಬ್ಬ ಫ್ಯಾಮಿಲಿಯಾಗಿ, ಫೋಟೊ ತೆಗೆದುಕೊಂಡ ತಮ್ಮ ಅಂತ ಗೊತ್ತಾದ ಮೇಲೆ ಅವರ ಮೇಲೆ ಹೆಮ್ಮೆ ಜಾಸ್ತಿ ಆಯ್ತು" ಎಂದು ಬೇಬಿ ಇಂದಿರಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
Baby Indira reaction on childhood photo with Kichcha Sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X