"ನಮ್ಮ ವಿರೋಧಿಗಳು ಯಾರು ಅಂತ ಗೊತ್ತಿಲ್ಲ": ದರ್ಶನ್ ಸಂದರ್ಶನ ನಿರ್ಬಂಧಕ್ಕೆ ಅಭಿಷೇಕ್ ಪ್ರತಿಕ್ರಿಯೆ!

ಯಂಗ್ ರೆಬೆಲ್‌ಸ್ಟಾರ್ ಅಭಿಷೇಕ್ ಅಂಬರೀಶ್ ನಟಿಸಿರುವ ಎರಡನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ಈ ವಾರ ರಿಲೀಸ್ ಆಗಿದೆ. ಹೀಗಾಗಿ ಥಿಯೇಟರ್‌ನಿಂದ ಥಿಯೇಟರ್‌ಗೆ ಅಭಿಷೇಕ್ ತಿರುಗುತ್ತಿದ್ದಾರೆ. ಸಿನಿಮಾ ನೋಡಿ ಹೊರ ಬಂದ ಅಭಿಮಾನಿಗಳ ಅಭಿಪ್ರಾಯವನ್ನು ಕಲೆ ಹಾಕುತ್ತಿದ್ದಾರೆ.

ಇದೇ ವೇಳೆ ಸಿನಿಮಾದ ಪ್ರಚಾರಕ್ಕೆ ಚಿತ್ರಮಂದಿರಕ್ಕೆ ಹೋದಾಗ ಅಭಿಷೇಕ್ ಅಂಬರೀಷ್‌ಗೆ ದರ್ಶನ್ ಸಂದರ್ಶನದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಸಿನಿಮಾ ಬಿಡುಗಡೆಗೂ ಮುನ್ನವೇ ದರ್ಶನ್ ಹಾಗೂ ಅಭಿಷೇಕ್ ಅಂಬರೀಶ್ ಸಂದರ್ಶನ ಮಾಡಲಾಗಿತ್ತು. ಈ ವಿಡಿಯೋ ಯೂಟ್ಯೂಬ್‌ನಲ್ಲಿ ರಿಲೀಸ್ ಆಗುತ್ತಿದ್ದಂತೆ ಬ್ಲಾಕ್ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ.

Bad Manners hero Abhishek Ambareesh on Darshan interview blocking issue

ಅಭಿ ಹಾಗೂ ದರ್ಶನ್ ಸಂದರ್ಶನ ಬ್ಲಾಕ್ ಮಾಡಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ಬಗ್ಗೆನೇ ಅಭಿಷೇಕ್ ಅಂಬರೀಶ್‌ಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಅಭಿಷೇಕ್ "ನಮ್ಮ ವಿರೋಧಿಗಳು ಯಾರು ಅನ್ನೋದೇ ಗೊತ್ತಿಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

"ನೀವು ಮತ್ತು ಡಿ ಬಾಸ್ ಮಾಡಿರುವ ವಿಡಿಯೋವನ್ನು ಬ್ಲಾಕ್ ಮಾಡಿಸುತ್ತಾರೆ. ಅದ್ಯಾಕೆ ಅಂತ ನಿಮಗೆ ಗೊತ್ತಾ?" ಎಂದು ಒಬ್ಬರು ಪ್ರಶ್ನೆ ಮಾಡುತ್ತಾರೆ ಅದಕ್ಕೆ ಅಭಿಷೇಕ್ ಅಂಬರೀಶ್ ನೀಡಿದ ಪ್ರತಿಕ್ರಿಯೆ ಹೇಗಿದೆ. "ನಮ್ಮ ವಿರೋಧಿಗಳು ಯಾರು ಅನ್ನೋದು ನಮಗೇನು ಗೊತ್ತಾಗುತ್ತೆ ಸರ್. ಎದುರುಗಡೆ ಬಂದರೆ ಗೊತ್ತಾಗುತ್ತೆ. ಹೀಗೆ ಹಿಂದೆಯಿಂದ ಬಂದರೆ ನಮಗೆ ಗೊತ್ತಾಗುವುದಿಲ್ಲ. ಇಲ್ಲಿವರೆಗೂ ನಾವಂತೂ ಯಾರಿಗೂ ಕೆಟ್ಟದ್ದು ಬಯಸಿಲ್ಲ. ನಮಗೆ ಕೆಟ್ಟದ್ದು ಬಯಸುವವರು ಯಾರಾದರೂ ಇದ್ದರೆ, ಅವರಿಗೆ ಒಳ್ಳೆಯದಾಗಲಿ ಸರ್." ಎಂದು ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.

ಇದೇ ವೇಳೆ ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ಸಿಕ್ಕಿರುವ ಪ್ರತಿಕ್ರಿಯೆ ಬಗ್ಗೆ ಮಾತಾಡಿದ್ದಾರೆ. "ಆಡಿಯನ್ಸ್ ಫೀಡ್ ಬ್ಯಾಕ್ ಸತ್ಯವಾಗಿರುತ್ತೆ. ಅಲ್ಲಿಗೆ ಹೋದಾಗ ಏನು ಇಷ್ಟ ಆಯ್ತು. ಅವರು ಏನು ಮಾತಾಡುತ್ತಾರೆ. ಏನು ಕನೆಕ್ಟ್ ಆಯ್ತು. ಯಾವುದು ಇಷ್ಟ ಆಯ್ತು ಅಂತ ಹೇಳಿದಾಗ, ಓಕೆ ಅಂದುಕೊಂಡಂತೆ ಕನೆಕ್ಟ್ ಆಗಿದೆ ಅಂತ ಅನಿಸುತ್ತೆ. ನನಗಿಂತ ನನ್ನ ಕೋ ಆಕ್ಟರ್‌ಗಳನ್ನು ಗುರುತಿಸಿ ಮಾತಾಡುತ್ತಿದ್ದಾರೆ ಅಂದರೆ, ಅದು ಇಷ್ಟ ಆಗಿದೆ ಅಂತ ಅರ್ಥ." ಎಂದು ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್‌ಗೆ ಪ್ರತಿಕ್ರಿಯಿಸಿದ್ದಾರೆ.

Bad Manners hero Abhishek Ambareesh on Darshan interview blocking issue

ಹಾಗೇ, "ಸೂರಿ ಸರ್ ಸಿನಿಮಾ ಅಂದಾಗ ಹುಡುಗರು ಬರ್ತಾರೆ. ಬಾಯ್ಸ್ ಬರ್ತಾರೆ ಅಂದುಕೊಂಡಿದ್ದೆ. ಫ್ಯಾಮಿಲಿನೂ ಬಂದು ಎಂಜಾಯ್ ಮಾಡುತ್ತಿರೋದು ನನಗೆ ನಿಜಕ್ಕೂ ಖುಷಿ ಆಯ್ತು." ಎಂದು ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.

More from Filmibeat

English summary
Abhishek Ambareesh reacted on Darshan interview block issue
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X