ಶ್ರೀಮುರಳಿ 'ಬಘೀರ' ಸಿನಿಮಾ ಬಾಕ್ಸಾಫೀಸ್ ಗೆದ್ದಿತೇ? ಕಲೆಕ್ಷನ್‌ ಬಗ್ಗೆ ನಿರ್ದೇಶಕರಿಂದ ಅಧಿಕೃತ ಘೋಷಣೆ

ಇದೇ 10 ರಿಂದ 15 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳನ್ನು ಅಳೆಯವ ಮಾನದಂಡವೇ ಬೇರೆ ಇರುತ್ತಿತ್ತು. ಬಿಡುಗಡೆಯಾದ ಸಿನಿಮಾ ನೂರು ದಿನ ಓಡಿದರೇ ಅದು ಬ್ಲಾಕ್ ಬಸ್ಟರ್ ಸಿನಿಮಾ ಆಗುತ್ತಿತ್ತು. 50 ದಿನ ಪ್ರದರ್ಶನ ಕಂಡರೆ ಹಿಟ್ ಸಿನಿಮಾ ಎನಿಸಿಕೊಳ್ಳುತ್ತಿತ್ತು. ಆದ್ರೀಗ ಕಾಲ ಬದಲಾಗಿದೆ. ಸಿನಿಮಾಗಳ ಸಕ್ಸಸ್ ಲೆಕ್ಕಾಚಾರ ಬದಲಾಗಿದೆ. ವ್ಯವಹಾರ ಮಾಡುವ ಪರಿ ಬದಲಾಗಿದೆ.

ಈಗ ಸಿನಿಮಾ ಒಂದೇ ವಾರ ಓಡಿದರೂ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಎಷ್ಟಾಗಿದೆ ಅನ್ನೋದರ ಮೇಲೆ ಸಿನಿಮಾ ಹಿಟ್ ಆಗಿದೆಯಾ? ಇಲ್ವಾ? ಅನ್ನುವ ಲೆಕ್ಕಾಚಾರ ಹಾಕಲಾಗುತ್ತೆ. ಈಗ ಎಲ್ಲಾ ಚಿತ್ರರಂಗದಲ್ಲೂ ಸಿನಿಮಾ ಎಷ್ಟು ದಿನಗಳಲ್ಲಿ ಎಷ್ಟು ಗಳಿಕೆ ಮಾಡಿತು ಅನ್ನುವುದರ ಮೇಲೆ ಸಕ್ಸಸ್, ಫ್ಲಾಪ್ ಅಂತ ಲೆಕ್ಕ ಹಾಕುತ್ತಾರೆ. ಹಾಗಾಗಿ ಇಂದಿನ ದಿನಗಳಲ್ಲಿ ಬಾಕ್ಸಾಫೀಸ್ ಲೆಕ್ಕಾಚಾರದ ಮೇಲೆ ಕುತೂಹಲ ಹೆಚ್ಚು.

Bagheera director Dr Suri revealed six days official box office collection report

'ಬಘೀರ' ಈ ವರ್ಷ ಕನ್ನಡದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಆಗಿತ್ತು. 'ಉಗ್ರಂ' ಬಳಿಕ ನಿರ್ದೇಶನ ಅಲ್ಲದೇ ಇದ್ದರೂ ಶ್ರೀಮುರಳಿ ಸಿನಿಮಾಗಾಗಿ ಪ್ರಶಾಂತ್ ನೀಲ್ ಕೆಲಸ ಮಾಡಿದ್ದರು. ಡಾ. ಸೂರಿ ಬಹಳ ದಿನಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿದಿದ್ದರು. ಆ ಕಾರಣಕ್ಕೆ 'ಬಘೀರ' ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳು ಇದ್ದವು. ಅದಂತೆ ಸಿನಿಮಾ ಸಕ್ಸಸ್ ಆಗಿದೆ. ಸ್ವತ: ನಿರ್ದೇಶಕರೇ ಎಷ್ಟು ಕಲೆಕ್ಷನ್ ಆಗಿದೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಹೌದು, 'ಬಘೀರ' ಖುಷಿಯ ಅಲೆಯಲ್ಲಿ ತೇಲಾಡುತ್ತಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಖುಷಿಯಾಗಿದ್ದಾರೆ. ಇಡೀ ಚಿತ್ರತಂಡ ಫುಲ್ ಖುಷಿಯಾಗಿದೆ. ಇದೇ ಖುಷಿಯಲ್ಲಿ ಡಾ.ಸೂರಿ ಜೊತೆ ಇನ್ನೊಂದು ಸಿನಿಮಾ ಮಾಡುವುದಕ್ಕೆ ಶ್ರೀಮುರಳಿ ಇಷ್ಟ ಪಟ್ಟಿದ್ದಾರೆ. ಡಾ. ಸೂರಿಗೆ ಮತ್ತೊಂದು ಸಿನಿಮಾ ಮಾಡುವುದಕ್ಕೆ ಉತ್ಸಾಹ ಬಂದಿದೆ. ಈ ವಿಷಯವನ್ನು ಇವರಿಬ್ಬರೂ ವೇದಿಕೆ ಹಂಚಿಕೊಂಡಿದ್ದಾರೆ.

Bagheera director Dr Suri revealed six days official box office collection report

ಇನ್ನು 'ಬಘೀರ' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಫಿಲ್ಮಿಬೀಟ್ ಕನ್ನಡ ಪ್ರತಿ ದಿನ ಮಾಹಿತಿ ನೀಡುತ್ತಲೇ ಇತ್ತು. ಬೇರೆ ಬೇರೆ ಮೂಲಗಳಿಂದ ಅಂಕಿ ಅಂಶಗಳನ್ನು ತೆಗೆದು ಬಾಕ್ಸಾಫೀಸ್ ಲೆಕ್ಕ ಇಡಲಾಗಿತ್ತು. ಈಗ ಚಿತ್ರತಂಡವೇ ಅಧಿಕೃತವಾಗಿ 'ಬಘೀರ' ಸಿನಿಮಾ ಕಳೆದ ಆರು ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಅನ್ನೋದನ್ನು ರಿವೀಲ್ ಮಾಡಿದೆ. ನಿರ್ದೇಶಕ ಡಾ. ಸೂರಿ ಮಾಧ್ಯಮದ ಮುಂದೆ ಆ ಕಲೆಕ್ಷನ್ ಏನು ಅನ್ನೋದನ್ನು ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಅಧಿಕೃತವಾಗಿ ಯಾವುದೇ ನಿರ್ಮಾಪಕರು ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಹೇಳಿಕೊಳ್ಳುವುದಿಲ್ಲ. ಆದರೆ, ಡಾ. ಸೂರಿ 'ಬಘೀರ' ಕಲೆಕ್ಷನ್ ಅನ್ನು ರಿವೀಲ್ ಮಾಡಿದ್ದು, ಆರು ದಿನಗಳಲ್ಲಿ 18 ರಿಂದ 20 ಕೋಟಿ ರೂಪಾಯಿ ಕಲೆಕ್ಷನ್ ಎಂಬ ಮಾಹಿತಿ ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ. ಈ ಮೂಲಕ ಪ್ರತಿದಿನ ಸರಾಸರಿ 3 ರಿಂದ 3.5 ಕೋಟಿ ರೂಪಾಯಿಯಂತೆ ಕಲೆಕ್ಷನ್ ಆಗಿದೆ.

'ಬಘೀರ' ಮೊದಲ ವಾರ ಒಳ್ಳೆ ಕಲೆಕ್ಷನ್ ಮಾಡಿದೆ. ಇನ್ನು ಮುಂದಿನ ವಾರ ಹೇಗೆ ಕಲೆಕ್ಷನ್ ಮಾಡುತ್ತೆ. ಎಷ್ಟು ಕೋಟಿ ಕಲೆಕ್ಷನ್ ಆಗಬಹುದು ಅನ್ನುವ ಕುತೂಹಲವಿದೆ. ಅಲ್ಲದೆ ಈ ವೀಕೆಂಡ್‌ನಲ್ಲಿ 'ಬಘೀರ' ಕಲೆಕ್ಷನ್ ಮತ್ತಷ್ಟು ಹೆಚ್ಚಾಗಬಹುದು. 25 ಕೋಟಿ ರೂಪಾಯಿ ಕಲೆಕ್ಷನ್ ಆಗುವ ನಿರೀಕ್ಷೆ ಕೂಡ ಇದೆ. ಒಟ್ನಲ್ಲಿ ಕನ್ನಡದ ಮೊದಲ ಸೂಪರ್ ಹೀರೋಗೆ ಭರ್ಜರಿ ಸಕ್ಸಸ್ ಸಿಕ್ಕಂತೆ ಆಗಿದೆ.

More from Filmibeat

English summary
Bagheera director Dr.Suri revealed six days official box office collection report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X