ತೃತೀಯ ಲಿಂಗಿಗಳಿಗೆ ಕಿರಣ್ ರಾಜ್ ಸಹಾಯ: ಮಂಗಳಮುಖಿಯರ ಆಶೀರ್ವಾದ

ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಕಿರಣ್ ರಾಜ್ ಈಗ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಗಳಲ್ಲಿ ಜನಪ್ರಿಯರಾದ ಬಳಿಕ 'ಬಹದ್ದೂರು ಗಂಡು' ಚಿತ್ರದಲ್ಲಿ ಸಕ್ರಿಯರಾಗಿದ್ದಾರೆ. ಕಿರುತೆರೆ ನಟರು ಕನ್ನಡ ಚಿತ್ರರಂಗ ಬರುವಾಗ ಸ್ಯಾಂಡಲ್‌ವುಡ್‌ನಲ್ಲಿ ಕೈ ಬೀಸಿ ಕರೆದಿದೆ. ಕಿರುತೆರೆಯಿಂದ ಸಿನಿಮಾಗಳಿಗೆ ಬಂದ ನಟರಿಗೆ ಚಿತ್ರರಂಗದಲ್ಲಿ ಯಶಸ್ಸು ಕೂಡ ಸಿಕ್ಕಿದೆ. ಕೆಲವರಿಗೆ ಸಿನಿಮಾಗಳಲ್ಲಿ ಅದೃಷ್ಟ ಒಲಿದರೆ. ಮತ್ತೆ ಕೆಲವರು ಸೋಲನ್ನು ಅನುಭವಿಸಬೇಕಾಗಿದೆ. ಈಗ ಕಿರಣ್ ರಾಜ್ ಕೂಡ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ.

ಧಾರಾವಾಹಿಯಲ್ಲಿ ನಟಿಸಿ ಮನೆ ಮಾತಾಗಿರುವ ಕಿರಣ್ ರಾಜ್ 'ಬಹದ್ದೂರು ಗಂಡು' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಸಿನಿಮಾ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಇದೇ ಬಿಡುವಿನ ವೇಳೆಯಲ್ಲಿ ಕಿರಣ್ ರಾಜ್ ತಮ್ಮ ಕಿರಣ್ ರಾಜ್‌ ಫೌಂಡೇಷನ್ ಮೂಲಕ ಮಂಗಳ ಮುಖಿಯರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಮಂಗಳ ಮುಖಿಯರ ಕಷ್ಟಕ್ಕೆ ಸ್ಪಂದಿಸಿದ ಕಿರಣ್ ರಾಜ್

ನಟ ಕಿರಣ್ ರಾಜ್ ತಮ್ಮದೇ ಕಿರಣ್ ರಾಜ್ ಫೌಂಡೇಶನ್ ವತಿಯಿಂದ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಕಾಲದಲ್ಲಿ ಹಲವು ಮಂದಿಗೆ ಆಹಾರದ ಕಿಟ್‌ಗಳನ್ನು ನೀಡಿ ಅವರ ಕಷ್ಟಗಳಿಗೆ ನೆರವಾಗಿದ್ದರು. ವಸತಿಯಿಲ್ಲದೆ ಫುಟ್ ಪಾತ್ ಆಶ್ರಯ ಪಡೆದಿರುವ ಹಲವಾರು ಮಂದಿಗೆ ಅಗತ್ಯ ವಸ್ತುಗಳನ್ನು ನೀಡಿ ಅವರ ಕಷ್ಟಗಳಿಗೆ ಸ್ಪಂಸದಿಸಿದ್ದರು. ಈಗ ಮಂಗಳಮುಖಿಯರ ಕಷ್ಟಗಳಿಗೆ ಸ್ಪಂದಿಸಿದ್ದಾರೆ.

Bahaddur Gandu Starrer Kiran Raj helps for Transgenders

ಚಳಿಗಾಲದಲ್ಲಿ ಮಂಗಳ ಮುಖಿಯರಿಗೆ ಬೆಚ್ಚಗಿನ ಹೊದಿಕೆಗಳನ್ನು ನೀಡಿದ್ದಾರೆ. ಅಲ್ಲದೆ ಮಂಗಳ ಮುಖಿಯರಿಗೆ ಬಾಳೆಎಲೆ ಊಟ ಹಾಕಿಸಿ, ಅವರೊಂದಿಗೆ ಕೂತು ಊಟ ಮಾಡಿದ್ದಾರೆ. ‌"ಮಂಗಳಮುಖಿಯರು ಈಗ ಯಾವುದರಲ್ಲೂ ಕಡಿಮೆ ಇಲ್ಲ. ನಮ್ಮ ಸಮಾಜ ಇವರನ್ನು ನೋಡುವ ರೀತಿಯೆ ಬದಲಾಗಬೇಕು. ನಾವು‌ ದುಡಿದಿದ್ದನ್ನು‌ ನಮ್ಮ ನಿತ್ಯ‌ಜೀವನಕ್ಕೆ ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು, ಮಿಕ್ಕ ಹಣದಿಂದ ನೊಂದ ಮನಸ್ಸುಗಳಿಗೆ ಸಹಾಯ ಮಾಡಬೇಕೆಂಬ ಗುಣವಿರಬೇಕು. ಎರಡು ವರ್ಷಗಳಿಂದ ಎಷ್ಟೋ ‌ಜನರ ಜೀವನ‌ ಏರುಪೇರಾಗಿದೆ. ಬಹುತೇಕ ಜನರು ದಿನನಿತ್ಯದ ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಕೈಲಾದಷ್ಟು ಸಹಾಯ ಮಾಡುವುದು ನನ್ನ ಉದ್ದೇಶ." ಎನ್ನುತ್ತಾರೆ ಕಿರಣ್ ರಾಜ್.

Bahaddur Gandu Starrer Kiran Raj helps for Transgenders

ಮಂಗಳಮುಖಿಯರಿಂದ ನಟನಿಗೆ ಆಶೀರ್ವಾದ

'ಬಹದ್ದೂರು ಗಂಡು' ನಟ ಕಿರಣ್ ರಾಜ್ ಸಹಾಯವನ್ನು ಮಂಗಳಮುಖಿಯರು ಮನಸಾರೆ ಹರಸಿದ್ದಾರೆ. ಕಿರಣ್ ರಾಜ್ ಒಳ್ಳೆಯ ‌ಗುಣ ಇರುವ ನಟ ಅವರಿಗೆ ಒಳ್ಳೆಯದು ಮಾಡಲಿ ಎಂದು ಮಂಗಳಮುಖಿಯರು ಮನಸಾರೆ‌ ಹಾರೈಸಿದ್ದಾರೆ. ಕಿರಣ್ ರಾಜ್ ಕರ್ನಾಟಕದಲ್ಲಷ್ಟೇ ಅಲ್ಲ ದೂರದ ಮುಂಬೈನಲ್ಲೂ‌ ಸಮಾಜಮುಖಿ ಕೆಲಸಗಳಲ್ಲೂ ನಿರತರಾಗಿದ್ದಾರೆ.‌

More from Filmibeat

English summary
Bahaddur Gandu Starrer Kiran Raj helps for Transgenders. Kiran Raj gave food kits and bedsheets to Transgenders.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X