Don't Miss!
- News
Aero India 2023: ಬೆಂಗಳೂರು ಯಲಹಂಕದಲ್ಲಿ ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಎತ್ತರ ಇಳಿಕೆಗೆ ಸೂಚನೆ
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದುನಿಯಾ ವಿಜಯ್ 48ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ ಬಾಲಕೃಷ್ಣ ಸಿನಿಮಾದ ನಿರ್ದೇಶಕ
ಕನ್ನಡ ಚಿತ್ರರಂಗ 'ಸಲಗ' ದುನಿಯಾ ವಿಜಯ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ದುನಿಯಾ ವಿಜಯ್ ಇಂದು (ಜನವರಿ 20) 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರು ಸ್ಯಾಂಡಲ್‌ವುಡ್ 'ಬ್ಲ್ಯಾಕ್ ಕೋಬ್ರಾ'ಗೆ ಶುಭ ಕೋರುತ್ತಿದ್ದಾರೆ. ಅದರಲ್ಲೂ ದುನಿಯಾ ವಿಜಯ್ ನಟಿಸುತ್ತಿರುವ ಮೊದಲ ತೆಲುಗು ಸಿನಿಮಾದ ನಿರ್ದೇಶಕ ಗೋಪಿಚಂದ್ ಮಲಿನೇನಿ ಶುಭ ಹಾರೈಸಿದ್ದಾರೆ.
Recommended Video
ಕಳೆದ ವರ್ಷ 'ಸಲಗ' ಚಿತ್ರದಿಂದ ದುನಿಯಾ ವಿಜಯ್ ವೃತ್ತಿ ಬದುಕಿಗೆ ಹೊಸ ತಿರುವು ಸಿಕ್ಕಿತ್ತು. ಒಂದಿಷ್ಟು ವೈಯುಕ್ತಿಕ ಜೀವನ ಗೊಂದಲಗಳಿಂದ ಸಿನಿಮಾಗಳಿಂದ ದೂರವಿದ್ದ ವಿಜಯ್ ನಿರ್ದೇಶನದ ಮೂಲಕ ಹೊಸ ಸಂಚಲನವನ್ನು ಸೃಷ್ಟಿಸಿದ್ದರು. ವಿಜಯ್ ನಿರ್ದೇಶಿಸಿದ ಮೊದಲ ಸಿನಿಮಾ 'ಸಲಗ' ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಇದೇ ಯಶಸ್ಸಿನ ಖುಷಿಯಲ್ಲೇ ತೆಲುಗು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
|
ವಿಜಯ್‌ಗೆ ತೆಲುಗು ನಿರ್ದೇಶಕನಿಂದ ಶುಭಾಶಯ
ದುನಿಯಾ ವಿಜಯ್ 'ಸಲಗ' ಸಿನಿಮಾದ ಬಳಿಕ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಇದು ಟಾಲಿವುಡ್ 'ಲೆಜೆಂಡ್' ಬಾಲಕೃಷ್ಣ ನಟಿಸುತ್ತಿರುವ 107ನೇ ಸಿನಿಮಾ. ಈ ಚಿತ್ರದಲ್ಲಿ ದುನಿಯಾ ವಿಜಯ್ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಬಾಲಕೃಷ್ಣ ಸಿನಿಮಾ ನಿರ್ದೇಶಕ ಗೋಪಿಚಂದ್ ಮಲಿನೇನಿ ಶುಭ ಹಾರೈಸಿದ್ದಾರೆ. " ಹುಟ್ಟುಹಬ್ಬದ ಶುಭಾಶಗಳು ವಿಜಯ್ ಅಣ್ಣ. ಈ ವರ್ಷ ನಿಮ್ಮ ಪಾಲಿಗೆ ಬ್ಲಾಕ್‌ಬಸ್ಟರ್ ಆಗಲಿ." ಎಂದು ಗೋಪಿಚಂದ್ ಮಲಿನೇನಿ ಟ್ವಿಟರ್‌ನಲ್ಲಿ ವಿಶ್ ಮಾಡಿದ್ದಾರೆ.

ವಿಜಯ್ ಬರ್ತ್‌ಡೇ ಆಚರಣೆ ಮಾಡಿಕೊಳ್ಳಲ್ಲ
ದುನಿಯಾ ವಿಜಯ್ ಕಳೆದ ವರ್ಷ ಕೊರೊನಾ ಕಾರಣದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಅಂತೆಯೇ ಈ ವರ್ಷ ಬರ್ತ್‌ಡೇ ಆಚರಿಸಿಕೊಳ್ಳಲು ಇಷ್ಟಪಡುವುದಿಲ್ಲವೆಂದು ವಿಜಯ್ ಅಭಿಮಾನಿಗಳಿಗೆ ತಿಳಿಸಿದ್ದರು. ಒಂದು ಕಡೆ ಕೊರೊನಾ ಕಾರಣ. ಇನ್ನೊಂದು ಕಡೆ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ನೋವಿದೆ. ಜೊತೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನಿಂದಾಗಿ ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ.

ವಿಜಯ್ ಹೊಸ ದುನಿಯಾ ಆರಂಭ
2022 ದುನಿಯಾ ವಿಜಯ್ ವೃತ್ತಿ ಬದುಕಿಗೆ ಹೊಸ ತಿರುವು ಸಿಗಲಿದೆ. 'ಸಲಗ'ದಂತಹ ಸೂಪರ್ ಹಿಟ್ ಸಿನಿಮಾ ನೀಡಿರುವ ದುನಿಯಾ ವಿಜಯ್ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ವಿಜಯ್ ಮತ್ತೊಂದು ದುನಿಯಾಗೆ ಕಾಲಿಡುತ್ತಿದ್ದಾರೆ. ಈ ಮೂಲಕ ಟಾಲಿವುಡ್‌ನಲ್ಲೂ ಅಬ್ಬರಿಸಲು ಕಾತುರರಾಗಿದ್ದಾರೆ. ಇದೇ ವರ್ಷ ವಿಜಯ್ ಅಭಿನಯದ ಮೊದಲ ತೆಲುಗು ಸಿನಿಮಾ ಸಿನಿಮಾ ಬಿಡುಗಡೆಯಾಗಲಿದೆ. ಹೀಗಾಗಿ ವೃತ್ತಿ ಬದುಕಿನಲ್ಲಿ ಹೊಸ ತಿರುವು ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಜನವರಿಯಿಂದ ತೆಲುಗು ಸಿನಿಮಾ ಶೂಟಿಂಗ್
ದುನಿಯಾ ವಿಜಯ್ ಹಾಗೂ ಬಾಲಕೃಷ್ಣ ಸಿನಿಮಾದ ಚಿತ್ರೀಕರಣ ಜನವರಿ ತಿಂಗಳಲ್ಲೇ ಆರಂಭ ಆಗಲಿದೆ. ಸಂಕ್ರಾಂತಿ ಸಿನಿಮಾದ ಬಳಿಕ ಶೂಟಿಂಗ್ ಶುರುವಾಗುತ್ತೆ ಎಂದು ದುನಿಯಾ ವಿಜಯ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದರು. ದುನಿಯಾ ವಿಜಯ್ ಟಾಲಿವುಡ್ ಸೂಪರ್‌ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಎದುರು ಅಬ್ಬರಿಸಲಿದ್ದಾರೆ. ದುನಿಯಾ ವಿಜಯ್ ಖಳನಾಯಕನ ಪಾತ್ರಕ್ಕೆ ಹೊಸ ವ್ಯಾಖ್ಯಾನ ನೀಡಲಿದ್ದಾರೆ ಎಂದು ನಿರ್ದೇಶಕ ಗೋಪಿಚಂದ್ ಮಲಿನೇನಿ ಈ ಹಿಂದೆ ಹೇಳಿದ್ದರು.