For Quick Alerts
  ALLOW NOTIFICATIONS  
  For Daily Alerts

  ಅಂತಾರಾಷ್ಟ್ರೀಯ ಸಿನಿಮಾ ಹಬ್ಬಕ್ಕೆ ಬೆಂಗಳೂರು ಸಜ್ಜು

  By Rajendra
  |

  ಆರನೇ ಅಂತಾರಾಷ್ಟ್ರೀಯ ಚಲನ ಚಿತ್ರೋತವಕ್ಕೆ ಬೆಂಗಳೂರಿನಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಇದೇ ಡಿಸೆಂಬರ್ 26 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

  ಸಂಜೆ 5.30 ಕ್ಕೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇರಾಕ್ ದೇಶದ ಖರ್ಜನ್ ಖಾದರ್ ನಿರ್ದೇಶನದ 'ಬೇಕಾಸ್' ಚಿತ್ರದ ಮೂಲಕ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಖ್ಯಾತ ನಟ ಕಮಲ್ ಹಾಸನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಾರ್ತಾ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಕೆ.ಆರ್.ನಿರಂಜನ್ ತಿಳಿಸಿದರು.

  ಇದೇ ಡಿಸೆಂಬರ್ 27 ರಿಂದ ಒಂದು ವಾರ‌ ಕಾಲ ಪ್ರತಿ ದಿನ ಏಳು ಸ್ಕ್ರೀನ್ ಗಳಲ್ಲಿ ಐದು ಪ್ರದರ್ಶನಗಳನ್ನು ಕಾಣಬಹುದು. ದೇಶವಿದೇಶಗಳ ಹಲವು ವೈವಿಧ್ಯಮಯ ಚಿತ್ರಗಳು ಸಿನಿರಸಿಕರನ್ನು ರಂಜಿಸಲಿವೆ.

  ಉದ್ಘಾಟನಾ ಸಮಾರಂಭದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಕನ್ನಡ ಚಿತ್ರೋದ್ಯಮ ಇಅದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್ ಡಿ ಗಂಗರಾಜು ಈ ಸಂದರ್ಭದಲ್ಲಿ ತಿಳಿಸಿದರು.

  ಉದ್ಘಾಟನಾ ದಿನ ಡಿಸೆಂಬರ್ 26 ರಂದು ಚಿತ್ರೋದ್ಯಮಕ್ಕೆ ರಜೆ ಘೋಷಿಸಲಾಗಿದೆ. ಅಂದು ಕನ್ನಡ ಚಿತ್ರ ರಂಗದ ಕಲಾವಿದರು, ತಂತ್ರಜ್ಞರು ಭಾಗಿಯಾಗಲಿದ್ದಾರೆ ಎಂದು ಗಂಗರಾಜು ತಿಳಿಸಿದ್ದಾರೆ.

  ವಾರ್ತಾ ಇಲಾಖೆಯ ಕಾರ್ಯದರ್ಶಿ ನಿರಂಜನ್ ಮಾತನಾಡಿ, ಡಿಸೆಂಬರ್ 26 ರಂದು ಪ್ರಾದೇಶಿಕ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ವಿಚಾರವಾಗಿ ಚರ್ಚೆ ನಡೆಯಲಿದೆ. ಡಿಸೆಂಬರ್ 29 ರಂದು ಡಿಜಿಟಲ್ ಕ್ಯಾಮೆರಾಗಳ ಕುರಿತು ವಿಚಾರಸಂಕಿರಣ ನಡೆಯಲಿದೆ. ಡಿಸೆಂಬರ್ 30 ರಂದು ಶಬ್ಧಗ್ರಹಣ ಕುರಿತು ವಿಚಾರಸಂಕಿರಣ ನಡೆಯಲಿದೆ ಎಂದು ತಿಳಿಸಿದರು.

  ಜನವರಿ 2 ರಂದು ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯಪಾಲ ಎಚಾರ್ ಭಾರದ್ವಾಜ್ ಅವರು ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಆಸ್ಟ್ರೇಲಿಯಾದ ನಿರ್ದೇಶಕ ಕಿಮ್ ಮೋರ್ದಂ ಅವರ 'ದಿ ರಾಕೆಟ್' ಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಏಕಕಾಲಕ್ಕೆ ಏಳು ಪರದೆಗಳ ಮೇಲೆ ಈ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ ಎಂದು ಕಲಾತ್ಮಕ ಚಿತ್ರಗಳ ನಿರ್ದೇಶಕ ಎಚ್ ಎನ್ ನರಹರಿ ರಾವ್ ತಿಳಿಸಿದರು. (ಏಜೆನ್ಸೀಸ್)

  English summary
  The 6th BIFFES (Bengaluru International Film Festival) will be held from 26 December 2013 – 2 January 2014 . The festival is conducted by the Karnataka Chalanachitra Academy, set up by the Government of Karnataka to promote cinema culture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X