ಕಿಚ್ಚ ಸುದೀಪ್‌ಗೆ ಬಾಂಗ್ಲಾದೇಶದ ಅಭಿಮಾನಿ ಬರೆದ ಮೆಚ್ಚುಗೆಯ ಪತ್ರ
ನಟ ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೆ ದೇಶದ ಅನೇಕ ಕಡೆ ಅಭಿಮಾನಿಗಳನ್ನು ಹೊಂದಿದ್ದಾರೆ. ನೆರೆಯ ಭಾಷೆಗಳಲ್ಲಿ, ಹಿಂದಿಯಲ್ಲಿ ಕೂಡ ನಟಿಸಿರುವ ಅವರ ಅಭಿನಯವನ್ನು ಎಲ್ಲ ಭಾಷೆಯ ಸಿನಿಮಾ ಪ್ರಿಯರೂ ಮೆಚ್ಚಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅವರಿಗೆ ತೆಲುಗು, ತಮಿಳು, ಹಿಂದಿ ಅಥವಾ ಅನೇಕ ಭಾಷೆಗಳಲ್ಲಿ ಅಭಿಮಾನಿಗಳಿದ್ದಾರೆ.
ಆದರೆ ಭಾರತದಲ್ಲಷ್ಟೇ ಅಲ್ಲ, ಅವರಿಗೆ ವಿದೇಶದಲ್ಲಿಯೂ ಅಭಿಮಾನಿಗಳಿದ್ದಾರೆ. ಅವರ ಸಿನಿಮಾ, ಕ್ರಿಕೆಟ್, ಕಾರ್ಯಕ್ರಮ ಹೀಗೆ ಎಲ್ಲ ಚಟುವಟಿಕೆಗಳನ್ನೂ ವೀಕ್ಷಿಸುವ ಹುಚ್ಚುತನ ಹೊಂದಿರುವವರು ಬೇರೆ ದೇಶದಲ್ಲಿಯೂ ಇದ್ದಾರೆ ಎಂದರೆ ಅಚ್ಚರಿಯಾಗಬಹುದು. ನಿಜ ಬಾಂಗ್ಲಾದೇಶದ ಯುವತಿಯೊಬ್ಬರು ಕಿಚ್ಚ ಸುದೀಪ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಬಾಂಗ್ಲಾದೇಶದ ಶಾನಿಲಾ ಖಾನ್ ಎಂಬ ಯುವತಿ ಸುದೀರ್ಘ ಪತ್ರವನ್ನು ಬರೆದಿದ್ದು, ಅದರಲ್ಲಿ ಸುದೀಪ್ ಅವರ ಬಗೆಗಿನ ತಮ್ಮ ಅಭಿಮಾನವನ್ನು ಹಂಚಿಕೊಂಡಿದ್ದಾರೆ. ಆ ಪತ್ರದಲ್ಲಿ ಏನಿದೆ? ಮುಂದೆ ಓದಿ...

ನಿಮ್ಮನ್ನು ವರ್ಣಿಸಲು ಪದಗಳು ಸಾಲುತ್ತಿಲ್ಲ
ಹಾಯ್ ಕಿಚ್ಚ ಸುದೀಪ್ ಸರ್. ನಾನು ನಿಮ್ಮ ಬಹಳ ದೊಡ್ಡ ಅಭಿಮಾನಿ. ನಿಮ್ಮ ಎಲ್ಲ ಸಿನಿಮಾಗಳನ್ನು, ನಿಮ್ಮ ಸಿಸಿಎಲ್ ಮತ್ತು ಕೆಸಿಎಲ್ ಕ್ರಿಕೆಟ್ ಮ್ಯಾಚ್‌ಗಳನ್ನು, ಸಂದರ್ಶನಗಳನ್ನು, ಕಾರ್ಯಕ್ರಮಗಳನ್ನು, ಸಂಗೀತ, ಹೀಗೆ ಎಲ್ಲವನ್ನೂ ನನ್ನಾಣೆ ನೋಡಿದ್ದೇನೆ! ನಿಮ್ಮನ್ನು ವರ್ಣಿಸಲು ಹಾಗೂ ನಿಮ್ಮ ಕುರಿತಾದ ನನ್ನ ಭಾವನೆಗಳನ್ನು ವಿವರಿಸಲು ಪದಗಳು ಸಾಲುತ್ತಿಲ್ಲ.

ನೀವು ಅಸಾಧಾರಣ ಪ್ರತಿಭಾವಂತ
ನೀವು ಅಸಾಧಾರಣ ಪ್ರತಿಭಾವಂತ ಮತ್ತು ಖಂಡಿತವಾಗಿಯೂ ಅದ್ಭುತ. ನಿಮ್ಮಲ್ಲಿ ಯಾವುದೇ ಲೋಪದೋಷಗಳನ್ನು ನಾನು ಕಂಡಿಲ್ಲ ಮತ್ತು ನಿಮ್ಮ ವಿಶಿಷ್ಟ ವ್ಯಕ್ತಿತ್ವ ಹಾಗೂ ಶೈಲಿಯಿಂದ ಮೋಹಿತಳಾಗಿದ್ದೇನೆ. ನಿಮ್ಮ ಪ್ರಾಮಾಣಿಕತೆ, ಶಾಂತತೆ, ಶ್ರದ್ಧೆ ಮತ್ತು ಕಾಂತಿಯನ್ನು ನಾನು ಎಷ್ಟು ಮೆಚ್ಚಿಕೊಂಡಿದ್ದೇನೆ ಎಂದು ನನಗೆ ವರ್ಣಿಸಲು ಸಾಧ್ಯವಾಗುತ್ತಿಲ್ಲ.

ನೀವು ನಿಜವಾದ ಹೀರೋ
ನಿಮ್ಮ ಹೆಸರು, ಸುದೀಪ್ ಎಂದರೆ ಪ್ರಕಾಶಮಾನ (ನಾನು ತಪ್ಪು ಹೇಳಿಲ್ಲ ಎಂದುಕೊಳ್ಳುತ್ತೇನೆ). ಇದೇ ನಿಮ್ಮ ಮತ್ತು ಹಿರಿಮೆಯ ಕುರಿತಾದ ಕೊನೆಯ ವ್ಯಾಖ್ಯಾನ. ನಿಮ್ಮನ್ನು ಕೇವಲ ಸಿನಿಮಾ ತಾರೆಯಲ್ಲ, ನಿಜವಾದ ಹೀರೋ ಎಂದೇ ನಾನು ಪರಿಗಣಿಸಿದ್ದೇನೆ. ನಿಮ್ಮೆಡೆಗಿನ ನನ್ನ ಅತೀವ ಪ್ರೀತಿ, ಗೌರವ ಮತ್ತು ಗೀಳು ಬದಲಿಸಲಾಗದ್ದು.

ಬಾಂಗ್ಲಾದೇಶದಿಂದ ಪ್ರೀತಿಯೊಂದಿಗೆ...
ನಿಮ್ಮ ಅದ್ಭುತ ಸಿನಿಮಾಗಳಿಂದ ನಮಗೆ ಮನರಂಜನೆ ನೀಡುತ್ತಿರುವುದಕ್ಕೆ ಮತ್ತು ನಮ್ಮ ಮುಖಗಳಲ್ಲಿ ನಗು ತರುತ್ತಿರುವುದಕ್ಕೆ ಹಾಗೂ ಕೆಲವೊಮ್ಮೆ ಕಣ್ಣೀರು ತರುವುದಕ್ಕೆ ನಿಮಗೆ ಧನ್ಯವಾದಗಳು. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುದೀರ್ಘ ಬದುಕು, ಶಾಶ್ವತ ನೆಮ್ಮದಿ, ಸಮೃದ್ಧಿ ಮತ್ತು ಒಳ್ಳೆಯ ಆರೋಗ್ಯ ನೀಡುವ ಮೂಲಕ ದೇವರು ಒಳ್ಳೆಯದನ್ನು ಮಾಡಲಿ. ನಾನು ನಿಮಗಾಗಿ ಅದನ್ನು ಬಯಸುತ್ತೇನೆ. ಬಾಂಗ್ಲಾದೇಶದಿಂದ ಅಪಾರ ಪ್ರೀತಿಯೊಂದಿಗೆ... ಎಂದು ಶಾನಿಲಾ ಖಾನ್ ಬರೆದಿದ್ದಾರೆ.


Click it and Unblock the Notifications











