"ಈ ಪಾಪಿಯನ್ನು ಕ್ಷಮಿಸುವುದಿಲ್ಲ, ನಮ್ಮ ಬಾಳಿನಲ್ಲಿ ಬರಲೇಬಾರದು"; ಮಗಳ ವಿರುದ್ಧವೇ ಚೈತ್ರಾ ಕುಂದಾಪುರ ತಂದೆ ಆರೋಪ
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು 12 ವರ್ಷಗಳಿಂದ ಪ್ರೀತಿಸುತ್ತಿದ್ದ ಶ್ರೀಕಾಂತ್ ಕಶ್ಯಪ್ ಎಂಬುವವರ ಜೊತೆ ಸಪ್ತಪದಿಯನ್ನು ತುಳಿದಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿಯೇ ವಿವಾಹವಾಗಿದ್ದ ಚೈತ್ರಾ ತನ್ನ ತಂದೆಗೆ ಆಹ್ವಾನ ನೀಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಆರೋಪವನ್ನು ಮಾಡುತ್ತಿರುವುದು ಮತ್ಯಾರೂ ಅಲ್ಲ ಸ್ವತ: ಚೈತ್ರಾ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯ್ಕ್. ಮಾಧ್ಯಮಗಳೊಂದಿಗೆ ಸಿಕ್ಕಾಪಟ್ಟೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಗಳಿ ಹಾಗೂ ಅಳಿಯ ಇಬ್ಬರನ್ನೂ ಕಳ್ಳರು ಎಂದಿದ್ದಾರೆ. ಹಾಗೇ ಮಗಳು ಗೋವಿಂದ ಪೂಜಾರಿಗೆ ಮೋಸ ಮಾಡಿ ಹಣವನ್ನು ಬೇರೆ ಬೇರೆ ಖಾತೆಯಲ್ಲಿ ಇಟ್ಟಿದ್ದಾಗಿಯೂ ಹೇಳಿದ್ದಾರೆ. ಇವರು ಹೇಳಿಕೆಗಳು ಚರ್ಚೆಯನ್ನು ಹುಟ್ಟಾಕಿದೆ.

ಬಿಗ್‌ಬಾಸ್ ಮೂಲಕ ಮತ್ತೆ ಜನರ ಪ್ರೀತಿಯನ್ನು ಗಳಿಸಿದ್ದ ಚೈತ್ರಾ ಕುಂದಾಪುರ ತಂದೆಯ ಹೇಳಿಕೆಗಳಿಂದಲೇ ಪೇಚಿಗೆ ಸಿಲುಕಿದ್ದಾರೆ. ತಂದೆ ಬಾಲಕೃಷ್ಣ ನಾಯ್ಕ್ ಅವರೇ ಮಗಳನ್ನು ದೂಷಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಅಷ್ಟಕ್ಕೂ ಚೈತ್ರಾ ತಂದೆ ಮಾಡುತ್ತಿರುವ ಆರೋಪಗಳೇನು? ತಿಳಿಯುವುದಕ್ಕೆ ಮುಂದೆ ಓದಿ.
ಇಬ್ಬರು ಕಳ್ಳರು ಮದುವೆ ಆದರು
"ಕಳ್ಳರು ಕಳ್ಳರು ಮದುವೆ ಆಗುವುದು. ಅದರ ಬಗ್ಗೆ ನಾನು ಏನೂ ಹೇಳುವುದಕ್ಕೆ ಇಷ್ಟ ಪಡುವುದಿಲ್ಲ. 12 ವರ್ಷದಿಂದ ಅವನು ನಮ್ಮ ಮನೆಯಲ್ಲಿ ಇದ್ದವನು. ಅವನು ಕಳ್ಳ. ಇಬ್ಬರು ಕಳ್ಳರು ಕಳ್ಳರು ಮದುವೆ ಆದರು. ದರೋಡೆ ಮಾಡುವುದು, ದೇಶಕ್ಕೆ ದ್ರೋಹ ಮಾಡುವುದು, ಅಂತಹದ್ದೇ ಮಾಡುವುದು. ಅವರಿಗೆ ಅದೇ ಕಸುಬು. ಅವರಿಗೆ ಮಾನ ಮರ್ಯಾದೆ ಏನೂ ಇಲ್ಲ. ನಮ್ಮ ಕುಟುಂಬದ ಮಾನ ಮರ್ಯಾದೆಯನ್ನು ತೆಗೆದು ಬಿಟ್ಟಳು. ಅವಳನ್ನು ಕಂಡರೆ ನನಗೆ ಆಗುವುದಿಲ್ಲ. ಅವರು ಎಂದೂ ಉದ್ದಾರ ಆಗುವುದಿಲ್ಲ." ಎಂದು ತಂದೆ ಬಾಲಕೃಷ್ಣ ಆಕ್ರೋಶ ಹೊರ ಹಾಕಿದ್ದಾರೆ.
ನಾನು ಕ್ಷಮಿಸುವುದಿಲ್ಲ
"ಅವಳು ಮಾಡುವ ಕೆಲಸಗಳಿಗೆ ನಾನು ಒಪ್ಪಿಗೆ ಕೊಟ್ಟಿಲ್ಲ. ನಾನು ಸತ್ಯ ಧರ್ಮದಲ್ಲಿ ಇರುವವನು. ನಮ್ಮ ಹಿರಿಯ ಮಗಳು ಗಾಯತ್ರಿ ಕೂಡ ಹಾಗೇ ಇದ್ದಾಳೆ. ಅವಳು ಗೌರವದಿಂದ ಮರ್ಯಾದೆಯಿಂದ ಬಾಳುವವಳು. ಅವಳು ಟೀಸರ್, ಸ್ಕೂಲ್ ಅಂತ ಜೀವನ ನಡೆಸುತ್ತಿದ್ದಾಳೆ. ಅವಳ ಮೇಲೂ ಒಂದು ಸುಳ್ಳು ಅಪವಾದವನ್ನು ಹಾಕಿದರು. ದುಡ್ಡು ಕೊಟ್ಟಿದ್ದೇನೆ ಅಂತ. ಚೈತ್ರಾಗೆ ಬಿಗ್ ಬಾಸ್ ವೇದಿಕೆ ಸಿಕ್ಕಾಗ ಹೇಳುವುದಕ್ಕೆ ಅವಕಾಶ ಸಿಕ್ಕಿತ್ತು. ಏನಕ್ಕೂ ಹೇಳಲೇ ಇಲ್ಲ ಅವಳಿಗೆ ತನಗೆ ಕೀರ್ತಿ ಬರಬೇಕು. ತಾನೇ ಮನೆಯನ್ನು ನೆಡೆಸಿಕೊಂಡು ಹೋಗುತ್ತಿದ್ದೇನೆ ಅಂತ ಸುಳ್ಳು ಸುಳ್ಳು ವರದಿಯನ್ನು ಕೊಡುತ್ತಾಳೆ. ಈ ಪಾಪಿಯನ್ನು ನಾನು ಎಂದಿಗೂ ಕ್ಷಮೆ ಕೊಡುವುದಿಲ್ಲ." ಎಂದು ಹೇಳಿದ್ದಾರೆ.
ಕೋಟಿ ಕೋಟಿ ಹಣ ಹೊಡೆದಿದ್ದಾಳೆ
"ಗೋವಿಂದ ಪೂಜಾರಿ ಹಗರಣದಲ್ಲಿ ಕೋಟಿ ಕೋಟಿ ಹಣ ಹೊಡೆದಿರುವುದು ಸಾಬೀತಾಗಿದೆ. ಕೋಟಿ ಹಣವನ್ನು ಡಿವೈಡ್ ಮಾಡಿ, ನನ್ನ ಹಾಗೂ ನನ್ನ ಹೆಂಡತಿ ಹೆಸರಲ್ಲಿ, ಶ್ರೀಕಾಂತ ಹೆಸರಲ್ಲಿ, ಪಡ್ಡೆ ಹುಡುಗರ ಹೆಸರಲ್ಲಿ ಡಿಪಾಸಿಟ್ ಮಾಡಿ ಅದರ ಮೇಲೆ ಮತ್ತೆ ಸಾಲ ತೆಗೆದು ಅದರಲ್ಲಿ ಬರುವ ಬಡ್ಡಿಯಲ್ಲಿ ವಂಚನೆ ಮಾಡಿದ್ದಾಳೆ. ಇವಳು ದೇಶಕ್ಕೆ ಒಂದು ಮಾರಕ. ಇವಳನ್ನು ನನ್ನ ಮಗಳು ಅಂತ ಹೇಳುವುದಕ್ಕೆ ನನಗೆ ನಾಚಿಕೆ ಆಗುತ್ತೆ. ಇವಳು ಮತ್ತೆ ಎಂದೂ ನಮ್ಮ ಬಾಳಿನಲ್ಲಿ ಬರಬಾರದು." ಎಂದು ಮಗಳ ವಿರುದ್ಧ ಗುಡುಗಿದ್ದಾಳೆ.
ಅವಳು ಕ್ರಿಮಿನಲ್
"ಅವಳೊಬ್ಬಳು ಕ್ರಿಮಿನಲ್. ಜನರು ಅವಳಿಗೆ ಮನ್ನಣೆಯನ್ನು ಕೊಡಬಾರದು. ಅವಳ ಸುಳ್ಳು ಹೇಳಿಕೆಗಳಿಗೆ ಮನ್ನಣೆ ಕೊಡಬಾರದು. ಅವಳು ಬೇರೆ ಬೇರೆ ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದಾಳೆ" ಎಂದು ಚೈತ್ರಾ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯ್ಕ್ ಆರೋಪ ಮಾಡಿದ್ದಾರೆ.


Click it and Unblock the Notifications











