ಮದುವೆ ಬಳಿಕ ಚೈತ್ರಾ ಕುಂದಾಪುರ ಹೆಸರು ಬದಲಾಗಿದ್ದೇಕೆ? ಹೊಸ ಹೆಸರೇನು?

ಕಳೆದ ವಾರ ದೊಡ್ಡದಾಗಿ ಸುದ್ದಿ ಮಾಡಿದವರಲ್ಲಿ ಚೈತ್ರಾ ಕುಂದಾಪುರ ಕೂಡ ಒಬ್ಬರು. ಒಂದು ಕಡೆ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಮಾಜಿ ಬಿಗ್‌ ಬಾಸ್ ಕನ್ನಡದ ಸ್ಪರ್ಧಿ ಸುದ್ದಿಯಲ್ಲಿದ್ದರು. ವಿವಾಹವಾದ ಬೆನ್ನಲ್ಲೇ ಮಗಳ ಮೇಲೆ ತಂದೆಯೇ ಆರೋಪಗಳ ಸುರಿಮಳೆಯನ್ನು ಸುರಿಸಿದ್ದರು. ಮಗಳನ್ನೇ ಕಳ್ಳಿ ಎಂದು ಹೇಳಿದ್ದರು. ಖುಷಿಯಾಗಿ ಮದುವೆಯಾಗಿದ್ದ ಚೈತ್ರಾ ಕುಂದಾಪುರ ತಂದೆಯ ಟೀಕೆಯನ್ನು ಎದುರಿಸುವಂತಾಗಿತ್ತು.

ಚೈತ್ರಾ ಕುಂದಾಪುರ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡಕ್ಕೆ ಎಂಟ್ರಿ ಕೊಟ್ಟಲ್ಲಿಂದ ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. ವಿವಾದದ ಬಳಿಕ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದ ಚೈತ್ರಾ ರಿಯಾಲಿಟಿ ಶೋ ಎಂಟ್ರಿ ಕೊಡುತ್ತಿದ್ದಂತೆ ಅವರ ಅದೃಷ್ಟವೇ ಬದಲಾಗಿತ್ತು. ಇದೇ ಜೋಷ್‌ನಲ್ಲಿ ವೈವಾಹಿಕ ಜೀವನಕ್ಕೂ ಕಾಲಿಡುವುದಕ್ಕೆ ನಿರ್ಧರಿಸಿದ್ದರು. ಕೊನೆಗೂ ತಾನು ಪ್ರೀತಿಸಿದ ಹುಡುಗನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

BBK 11 Contestant Chaitra Kundapura name changed after her marriage with Srikanth Kashyap

ಈ ಮಧ್ಯೆ ವಿವಾಹದ ಬಳಿಕ ಚೈತ್ರಾ ಕುಂದಾಪುರ ಅವರ ಹೆಸರನ್ನು ಬದಲಾಯಿಸಲಾಗಿದೆ ಎಂದು ವರದಿಗಳಾಗಿವೆ. ಮದುವೆ ಬಳಿಕ ಯಾಕೆ ಹೆಸರನ್ನು ಬದಲಾಯಿಸಿದರು? ಈ ಹೆಸರು ಬದಲಾವಣೆ ಸಂಪ್ರದಾಯವೇ? ಚೈತ್ರಾ ಕುಂದಾಪುರ ತಾಯಿಗೂ ಹೆಸರು ಬದಲಾಯಿಸಿದ್ದರೇ? ಚೈತ್ರಾ ಕುಂದಾಪುರ ಹೊಸ ಹೆಸರೇನು ಎಂಬುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಕಾಲೇಜು ದಿನಗಳಿಂದ ಅಂದರೆ, ಸರಿ ಸುಮಾರು 12 ವರ್ಷಗಳಿಂದ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಪ್ರೀತಿ ಮಾಡುತ್ತಿದ್ದರು. ಕೊನೆಗೂ ಇಬ್ಬರೂ ಅವರ ಮನೆಯವರನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಎಂಟ್ರಿಕೊಟ್ಟಿದ್ದಾರೆ. ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರಿಗಷ್ಟೇ ಆಹ್ವಾನ ನೀಡಲಾಗಿತ್ತು. ಇವರ ಮದುವೆಗೆ ಬಿಗ್‌ ಬಾಸ್‌ನ ಸ್ನೇಹಿತರಾದ ಉಗ್ರಂ ಮಂಜು, ರಜತ್, ಧನರಾಜ್ ಸೇರಿದಂತೆ ಹಲವು ಮಂದಿ ಭಾಗವಹಿಸಿ ಆಶೀರ್ವಾದವನ್ನು ಮಾಡಿದ್ದರು.

BBK 11 Contestant Chaitra Kundapura name changed after her marriage with Srikanth Kashyap

ಮದುವೆ.. ಮದುವೆ ಬಳಿಕ ವಿವಾದ. ಇದೆಲ್ಲವೂ ಮುಗಿಯುತ್ತಿದ್ದಂತೆ ಚೈತ್ರಾ ಕುಂದಾಪುರ ಹೆಸರು ಬದಲಾವಣೆ ಬಗ್ಗೆನೂ ಸುದ್ದಿಯಾಗುತ್ತಿದೆ. ಪತಿ ಶ್ರೀಕಾಂತ್ ಕಶ್ಯಪ್ ಅವರ ತಾಯಿ ಚೈತ್ರ ಕುಂದಾಪುರ ಅವರ ಹೆಸರನ್ನು ಬದಲಾಯಿಸಿದ್ದಾರೆ ಎಂದು ಹೇಳಲಾಗಿದೆ. ಸಂಪ್ರದಾಯ ಬದ್ಧವಾಗಿ ಚೈತ್ರಾ ಕುಂದಾಪುರ ಅವರ ಹೆಸರನ್ನು ಶ್ರೀಮೇಧಾ ಎಂದು ಬದಲಾವಣೆ ಮಾಡಲಾಗಿದೆ. ಪತಿ ಶ್ರೀಕಾಂತ್ ಅವರ ತಾಯಿ ಬಾಳೆ ಹಣ್ಣನ್ನು ತಿನ್ನಿಸುವ ಮೂಲ ಚೈತ್ರಾ ಹೆಸರನ್ನು ಸಂಪ್ರದಾಯದಂತೆ ಬದಲಾವಣೆ ಮಾಡಿದ್ದಾರೆ. ಇದು ಅವರ ಕಡೆಯ ಶಾಸ್ತ್ರ ಎಂದು ಹೇಳಲಾಗಿದೆ.

ಇನ್ನು ಚೈತ್ರಾ ಕುಂದಾಪುರ ಅವ ತಾಯಿ ಹೆಸರನ್ನು ಬದಲಾವಣೆ ಮಾಡಲಾಗಿತ್ತಂತೆ. ಮದುವೆಗೂ ಮುನ್ನ ರೋಹಿಣಿ ಎಂದು ಇದ್ದ ಹೆಸರು. ಮದುವೆ ಬಳಿಕ ಭಾರತಿ ಎಂದು ಹೆಸರನ್ನು ಬದಲಾವಣೆ ಮಾಡಲಾಗಿತ್ತು ಎಂದು ವರದಿಗಳಾಗಿವೆ. ಒಟ್ನಲ್ಲಿ ಮದುವೆ ಬಳಿಕ ಬದುಕಷ್ಟೇ ಬದಲಾಗಲಿಲ್ಲ. ಅವರ ಹೆಸರು ಕೂಡ ಬದಲಾವಣೆಯಾಗಿದೆ. ಈ ಮೂಲಕ ಮುಂದೆ ಚೈತ್ರಾ ಯಾವ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆಂದು ನೋಡಬೇಕಿದೆ.

More from Filmibeat

English summary
BBK 11 Contestant Chaitra Kundapura name changed after her marriage with Srikanth Kashyap;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X