₹10 ಕೋಟಿಯ ರೋಲ್ಸ್ ರಾಯ್ಸ್ ಓನರ್ ರಚಿತಾ ರಾಮ್ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕು: ಲಾಯರ್ ಜಗದೀಶ್

ಕಳೆದ ಕೆಲವು ದಿನಗಳಿಂದ ರಚಿತಾ ರಾಮ್ ಹಾಗೂ ಬಿಗ್‌ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ಈ ಹಿಂದೆ ಲಾಯರ್ ಜಗದೀಶ್ ನಟಿ ರಚಿತಾ ರಾಮ್ ಅವರ ರೋಲ್ಸ್ ರಾಯ್ಸ್ ಕಾರು ಖರೀದಿ ಮಾಡಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದರು. ರಚಿತಾ ರಾಮ್ ಸಂಭಾವನೆ ಎಷ್ಟು? ರೋಲ್ಸ್ ರಾಯ್ಸ್ ಕಾರು ಖರೀದಿ ಮಾಡುವುದಕ್ಕೆ ಹಣ ಎಲ್ಲಿಂದ ಬಂತು? ಅಂತೆಲ್ಲ ಪ್ರಶ್ನೆ ಮಾಡಿದ್ದರು.

ಲಾಯರ್ ಜಗದೀಶ್ ಟೀಕೆಗಳಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ತಿರುಗೇಟು ನೀಡಿದ್ದರು. 'ಸಂಜು ವೆಡ್ಸ್ ಗೀತಾ 2' ಸಿನಿಮಾದ ಪ್ರಚಾರದ ವೇಳೆ ಗರಂ ಆಗಿದ್ದ ರಚಿತಾ ರಾಮ್ ಸುಮ್ಮನೆ ಕೂತಿಲ್ಲ. ಕಷ್ಟ ಪಟ್ಟು ದುಡಿಯುತ್ತಿದ್ದು, ರೋಲ್ಸ್ ರಾಯ್ಸ್ ಕಾರನ್ನು ಖರೀದಿ ಮಾಡಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದರು. ಅಲ್ಲಿಗೆ ಇಬ್ಬರ ನಡುವಿನ ಆರೋಪ- ಪ್ರತ್ಯಾರೋಪಕ್ಕೆ ಅಂತ್ಯ ಬಿತ್ತು ಅಂತಲೇ ಎಂದುಕೊಳ್ಳಲಾಗಿತ್ತು.

BBK 11 contestant Lawyer Jagadish again criticized Rachita Ram having rolls royce car

ಆದ್ರೀಗ ಲಾಯರ್ ಜಗದೀಶ್ ನಟಿ ರಚಿತಾ ರಾಮ್ ಅವರನ್ನು ಸುಮ್ಮನೆ ಬಿಟ್ಟಂತೆ ಕಾಣುತ್ತಿಲ್ಲ. ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮತ್ತೆ ರಚಿತಾ ರಾಮ್ ರೋಲ್ಸ್ ರಾಯ್ಸ್ ಕಾರಿನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಚಿತ್ರರಂಗದಲ್ಲಿ ಮಂಚದ ಸಂಸ್ಕೃತಿ ಹೆಚ್ಚಿದೆ. ಹೆಣ್ಣು ಮಕ್ಕಳ ರಕ್ಷಣೆಗೆ ರಚಿತಾ ರಾಮ್ ಅಂತಹ ನಾಯಕಿ ಮುಂದೆ ನಿಲ್ಲಬೇಕು ಎಂದಿದ್ದರೆ.

ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಅಪರಾಧ ತಡೆಯುವುದಕ್ಕೆ ಕಮಿಟಿಯನ್ನು ರಚಿಸುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಚಿತ್ರರಂಗದಲ್ಲಿ ಅಂತಹದ್ದೇನು ಇಲ್ಲ ಅಂದರೆ ವಿರೋಧ ಯಾಕೆ? ಎಂದು ಲಾಯರ್ ಜಗದೀಶ್ ಪ್ರಶ್ನೆ ಮಾಡಿದ್ದಾರೆ. ಕೊನೆಗೂ ಕಮಿಟಿ ರಚನೆಯಾಗಿದ್ದು, ಅವಕಾಶಕ್ಕೆ ಮಂಚಕ್ಕೆ ಕರೆಯುವ ಸಂಸ್ಕೃತಿಯನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

BBK 11 contestant Lawyer Jagadish again criticized Rachita Ram having rolls royce car

"ಯಾವುದೋ ಒಬ್ಬ ಹೆಣ್ಣು ಮಗಳು ಹೀರೋಯಿನ್ ಆಗಬೇಕು ಅಂತ ಕನಸು ಕಾಣುತ್ತಾಳೆ. ಮೇಕಪ್ ಹಾಕಿಕೊಂಡು ಕನ್ನಡಿ ಮುಂದೆ ನಿಂತಾಗ ನಾನೂ ಐಶ್ವರ್ಯಾ ರೈ ಆಗಬಹುದು ಅಂತ ಆಕೆ ಮನಸ್ಸಿಗೆ ಬಂದಾಗ, ಆಕೆ ಬಂದು ಕೆಲಸ ಕೇಳುತ್ತಾಳೆ. ಆಗ ಬಾರಮ್ಮ ಮಂಚದಲ್ಲಿ ಮಲಗಿಕೋ ನಾವೆಲ್ಲ ಮಜಾ ಮಾಡುತ್ತೇವೆ. ಆಮೇಲೆ ನಿನ್ನನ್ನು ಹೀರೋಯಿನ್ ಮಾಡುತ್ತೇವೆ ಅಂದರೆ, ಇದು ಯಾವ ಸಂಪ್ರದಾಯ? ಇವನ್ನೆಲ್ಲ ಯಾಕೆ ನಿಲ್ಲಿಸಬಾರದು?" ಎಂದು ಪ್ರಶ್ನೆ ಮಾಡಿದ್ದಾರೆ.

ಚಿತ್ರರಂಗದಲ್ಲಿರುವ ಮಂಚದ ಸಂಸ್ಕೃತಿಯನ್ನು ಪ್ರಶ್ನೆ ಮಾಡುವಾಗ ರಚಿತಾ ರಾಮ್ ಹೆಸರನ್ನು ಎಳೆದು ತಂದಿದ್ದಾರೆ. "ಮಾನ್ಯ ರಚಿತಾ ರಾಮ್ ಅವರು ಹೇಳುತ್ತಿದ್ದರು. ಈ ಪ್ರಶ್ನೆಯನ್ನು ಅವರ ಹತ್ತಿರವೇ ಕೇಳಿ. ಈ ಸಂಪ್ರದಾಯವಿದೆಯೋ ಇಲ್ಲವೋ ಅಂತ ಅವರನ್ನೇ ಕೇಳಿ. ಎಲ್ಲಾ ಹೆಣ್ಣು ಮಕ್ಕಳು ಅದೇ ತರ ಅಂತಲ್ಲ. ಕೆಲವು ಹೆಣ್ಣು ಮಕ್ಕಳು ಅದಕ್ಕೆಲ್ಲ ಸಿಕ್ಕಿಕೊಳ್ಳುತ್ತಾರೆ. ಅವರನ್ನು ಹೇಗೆ ರಕ್ಷಣೆ ಮಾಡುತ್ತಾರೆ? ರಚಿತಾ ರಾಮ್ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಯಾಕೆ ಅವರ ರಕ್ಷಣೆಗೆ ಮುಂದಾಳತ್ವವನ್ನು ವಹಿಸಿಕೊಳ್ಳಬಾರದು?" ಎಂದು ರಚಿತಾ ರಾಮ್‌ಗೆ ಪ್ರಶ್ನೆ ಮಾಡಿದ್ದಾರೆ.

ಹಾಗೇ ಮತ್ತೆ ರಚಿತಾ ರಾಮ್ ಖರೀದಿಸಿರುವ ರೋಲ್ಸ್ ರಾಯ್ಸ್ ಕಾರಿನ ಬಗ್ಗೆನೂ ಪ್ರಶ್ನೆ ಮಾಡಿದ್ದಾರೆ. "ಸ್ಟಾರ್ ನಟಿ ರೋಲ್ಸ್ ರಾಯ್ಸ್ ಕಾರಿನ ಓನರ್ ಅವರು. ರೋಲ್ಸ್ ರಾಯ್ಸ್ ಅಂದರೆ ತಮಾಷೆನಾ? ₹10 ಕೋಟಿಯ ರೋಲ್ಸ್ ರಾಯ್ಸ್ ತೆಗೆದುಕೊಳ್ಳುವವರು ದೊಡ್ಡ ಮಟ್ಟಕ್ಕೆ ಬೆಳೆದಿರುವ ನಟಿ ಅಂತ ಅರ್ಥ. ಅವರು ಹೆಣ್ಣು ಮಕ್ಕಳಿಗಿರುವ ಸಮಸ್ಯೆಗಳಿಗೆ ಲೀಡ್ ಮಾಡಬೇಕು. ಸುಮ್ಮನೆ ಹೇಳಿಕೆಗಳನ್ನು ಕೊಡುವುದಲ್ಲ." ಎಂದು ಕರ್ನಾಟಕ ಟಿವಿಯ ಸಂದರ್ಶನದಲ್ಲಿ ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ ರಚಿತಾ ರಾಮ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಮಂಜದ ಸಂಸ್ಕೃತಿ ಹೆಚ್ಚಾಗಿದೆ. ಇದು ಅವರಿಗೆ ಗೊತ್ತಿರಬಹುದು. ಇಲ್ಲ ಗೊತ್ತಿಲ್ಲದೆಯೂ ಇರಬಹುದು. ಎರಡು ಸಾಧ್ಯತೆನೂ ಇದೆ. ಗೊತ್ತಿದೆ ಅಂತ ಭಾವಿಸಿದ್ದು, ಈ ಕಮಿಟಿಗೆ ನೀವೇ ಶಕ್ತಿಯನ್ನು ತುಂಬಿ ಮುಂದೆ ಬರುವ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ.

More from Filmibeat

English summary
BBK 11 contestant Lawyer Jagadish again criticized Rachita Ram having Rolls Royce Luxuary car;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X