Gilli Nata: ಬಿಗ್ ಬಾಸ್‌ನಲ್ಲೂ ಹವಾ..ಹೊರಗೂ ಹವಾ; ಗಿಲ್ಲಿ ಹೀರೋ ಆದ ಸಿನಿಮಾದ ಟೀಸರ್ ನೋಡಿದ್ರಾ?

ಬಿಗ್ ಬಾಸ್‌ ಮನೆಯಲ್ಲಿ ಗಿಲ್ಲಿಯದ್ದೇ ಹವಾ. ಮನೆಯೊಳಗೆ ಎಲ್ಲರ ಕಾಲೆಳೆಯುತ್ತಾ, ಕಾಮಿಡಿ ಮಾಡುತ್ತಾ ವೀಕ್ಷಕರನ್ನು ರಂಜಿಸುತ್ತಿರುವ ಗಿಲ್ಲಿ ಎರಡು ತಿಂಗಳಲ್ಲಿ ಕನ್ನಡಿಗರ ಫೇವರಿಟ್ ಆಗಿದ್ದಾರೆ. ಕಾಮಿಡಿ ಶೋಗಳ ಮೂಲಕ ಫೇಮಸ್ ಆಗಿದ್ದರೂ, ಬಿಗ್ ಬಾಸ್ ಗಿಲ್ಲಿಗೆ ಹೊಸ ಇಮೇಜ್ ಅನ್ನೇ ಕೊಟ್ಟಿದೆ. ಈ ಗ್ಯಾಪ್‌ನಲ್ಲಿ ಗಿಲ್ಲಿ ಸಿನಿಮಾವೊಂದು ಪ್ರಚಾರವನ್ನು ಆರಂಭಿಸಿದೆ.

ಗಿಲ್ಲಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಕೆಲವು ತಯಾರಿಗಳನ್ನು ಮಾಡಿಕೊಂಡೇ ಬಂದಿದ್ದರು ಅನಿಸುತ್ತಿದೆ. ಇನ್ನು ಒಂದು ಒಂದೂವರೆ ತಿಂಗಳಲ್ಲಿ ಮನೆಯಿಂದ ಹೊರ ಬರುತ್ತಿದ್ದಂತೆ ಗಿಲ್ಲಿಯ ನಟಿಸಿದ ಸಿನಿಮಾಗಳಿಂದ ಪ್ರತಿಯೊಂದು ರಿಲೀಸ್‌ಗೆ ರೆಡಿಯಾಗುತ್ತವೆ. ಬಿಗ್ ಬಾಸ್ ಮುಗಿಯುವುದಕ್ಕೆ ಇನ್ನು ಕೆಲವೇ ವಾರಗಳು ಇರುವಾಗಲೇ ಗಿಲ್ಲಿ ನಾಯಕನಾಗಿ ನಟಿಸಿದ 'ಸೂಪರ್ ಹಿಟ್' ಸಿನಿಮಾ ಪ್ರಚಾರ ಶುರು ಮಾಡಿಕೊಂಡಿದೆ.

BBK 12 contestant Gilli Nata new movie Super Hit teaser is trending

ಹೌದು, ಬಿಗ್ ಬಾಸ್ ಎಂಟ್ರಿ ಕೊಡುವುದಕ್ಕೂ ಮುನ್ನ ಗಿಲ್ಲಿ ನಟ ನಾಯಕನಾಗಿ 'ಸೂಪರ್‌ ಹಿಟ್' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದ ಟೀಸರ್ ಈಗ ರಿಲೀಸ್ ಆಗಿದ್ದರು, ಗಿಲ್ಲಿ ಅಭಿಮಾನಿಗಳಿಂದ, ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದೊಂದು ಪಕ್ಕಾ ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಆಗಿದ್ದು, ಗಿಲ್ಲಿ ಜನಪ್ರಿಯತೆ ಸಿನಿಮಾಗೆ ವರವಾಗುತ್ತಾ? ಅನ್ನೋ ಕುತೂಹಲ ಸಿನಿಮಾ ಮಂದಿಯಲ್ಲಿ ಹುಟ್ಟಿಕೊಂಡಿದೆ.

ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆದ್ಮೇಲೆ 'ಸೂಪರ್‌ ಹಿಟ್' ಅನ್ನೋ ಪದವನ್ನು ಬಳಸುತ್ತಾರೆ. ಆದರೆ, ಈ ಸಿನಿಮಾಗೆ ಟೈಟಲ್ ಅನ್ನೇ ಸೂಪರ್‌ ಹಿಟ್ ಅಂತ ಇಟ್ಟಿದ್ದಾರೆ. ಅಂದ್ಹಾಗೆ ಈ ಸಿನಿಮಾವನ್ನು ಕನ್ನಡ ಹಿರಿಯ ಸಿನಿ ಸಾಹಿತಿ ನಾಗೇಂದ್ರ ಪ್ರಸಾದ್ ಅವರ ಸಹೋದರ ವಿಜಯಾನಂದ್ ಆಕ್ಷನ್ ಕಟ್ ಹೇಳಿದ್ದಾರೆ. ಹಾಸ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಸಿನಿಮಾವನ್ನು ನಿರ್ದೇಶಿಸಿದ್ದು, ಟೀಸರ್ ಗಿಲ್ಲಿ ಅಭಿಮಾನಿಗಳು ಇಷ್ಟ ಆಗಿದೆ.

ಈಗಾಗಲೇ ಒಂದಷ್ಟು ಏಳುಬೀಳು ಕಂಡಿದ್ದ ಈ ಸಿನಿಮಾ ನಿರ್ಮಾಪಕರಾದ ಜಿ. ಉಮೇಶ್ 'ಸೂಪರ್ ಹಿಟ್' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದು ಅವರ ಕನಸಾಗಿತ್ತು. ಇದನ್ನೇ ಗಮನದಲ್ಲಿಟ್ಟುಕೊಂಡಿದ್ದ ನಿರ್ದೇಶಕರು, ಕಥೆಗೂ ಹೊಂದಿಕೆಯಾಗುತ್ತಿದ್ದರಿಂದ ಅದನ್ನೇ ಶೀರ್ಷಿಕೆಯಾಗಿಟ್ಟಿರೋದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. 'ಸು ಫ್ರಂ ಸೋ' ಸಿನಿಮಾಗೆ ಸಿಕ್ಕ ಯಶಸ್ಸು ನಿರ್ದೇಶಕ ವಿಜಯಾನಂದ್‌ಗೆ ಹೊಸ ಹುರುಪುಕೊಟ್ಟಿದೆ.

BBK 12 contestant Gilli Nata new movie Super Hit teaser is trending

ನಿರ್ದೇಶಕ ವಿಜಯಾನಂದ್ ಸಿನಿಮಾ ಸಾಹಿತಿ ನಾಗೇಂದ್ರ ಪ್ರಸಾದ್ ಅವರ ಸಹೋದರ. ಹಾಸ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಪಕ್ಕಾ ಕಮರ್ಷಿಯಲ್ ಸಿನಿಮಾವನ್ನು ನಿರ್ದೇಶಿಸಿದ್ದಾಗಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಸಿನಿಮಾದ ಎಲ್ಲಾ ಕೆಲಸಗಳೂ ಮುಕ್ತಾಯಗೊಂಡಿವೆ. ಒಂದೊಳ್ಳೆ ಸಮಯ ನೋಡಿ ಸಿನಿಮಾ ಬಿಡುಗಡೆ ಮಾಡುವುದಾಗಿ ವಿಜಯಾನಂದ್ ಮಾಹಿತಿ ಹಂಚಿಕೊಂಡಿದ್ದಾರೆ.

'ಸೂಪರ್ ಹಿಟ್' ಈಗಿನ ಯುವ ಸಮುದಾಯಕ್ಕೆ ಹತ್ತಿರಾಗಿರೋ ಕಥೆ. ಈ ಸಿನಿಮಾದಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಕಾಮಿಡಿ ಸ್ಟಾರ್ ಎನಿಸಿಕೊಂಡಿರುವ ಗೌರವ್ ಶೆಟ್ಟಿ ಮತ್ತು ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿ. ಸಿನಿ ಸಾಹಿತಿ ನಾಗೇಂದ್ರ ಪ್ರಸಾದ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನ್ನಿಸ್ ಕೃಷ್ಣ, ಕರಿಸುಬ್ಬು, ಸೋಮಶೇಖರ್, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಅಶ್ವಿನಿ ರಾವ್, ಸ್ವಪ್ನ ಶೆಟ್ಟಿಗಾರ್, ಮಂಗಳೂರು ಮೀನನಾಥ ಮುಂತಾದವರು ನಟಿಸಿದ್ದಾರೆ.

More from Filmibeat

English summary
BBK 12 contestant Gilli Nata new movie Super Hit teaser is trending.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X