ಬಿಗ್‌ಬಾಸ್ ಸ್ಟುಡಿಯೋ ಸೀಸ್.. ಸುದೀಪ್ ಸೇರಿ ಮೂವರಿಗೆ ಡಿಕೆಶಿ ಮೆಸೇಜ್: ಪ್ರಶಾಂತ್ ಸಂಬರ್ಗಿ
ಕಳೆದ ಮೂರು ವರ್ಷಗಳಿಂದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇದೆ. ಸೀಸನ್ 9ರಿಂದ ಈ ಶೋ ವಿಘ್ನಗಳನ್ನು ಎದುರಿಸುತ್ತಲೇ ಇದೆ. ಈ ಬಾರಿ ಬಿಡದಿ ಬಳಿ ನಡೆಸುತ್ತಿದ್ದ ಬಿಗ್ ಬಾಸ್ ಶೋ ಅನ್ನು ಸ್ಥಗಿತಗೊಳಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್ ಬಾಸ್ ಮನೆಗೆ ಬೀಗ ಜಡಿದಿದ್ದು, ಪರಿಸರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಈ ಕ್ರಮ ತೆಗೆದುಕೊಂಡಿದ್ದಾಗಿ ಕಾರಣ ನೀಡಿದೆ.
ಅದ್ಯಾವಾಗ ಬಿಗ್ ಬಾಸ್ ಶೋ ಸ್ಥಗಿತಗೊಳಿಸಲಾಯಿತೋ ಅಲ್ಲಿಂದ ಚಿತ್ರರಂಗದಿಂದ ಪ್ರತಿಕ್ರಿಯೆಗಳು ಬರುತ್ತಿವೆ. ಅದರಲ್ಲೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರ್ಗಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ನಡೆಯನ್ನು ಖಂಡಿಸಿದ್ದಾರೆ. ಇದನ್ನು ರಾಜಕೀಯ ಪ್ರೇರಿತ ಎಂದು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಈ ನಡೆಯ ಮೂಲಕ ಮೂವರಿಗೆ ಸಂದೇಶವನ್ನು ರವಾನೆ ಮಾಡಿದ್ದಾರೆ. ಅದರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು ಎಂದು ಪ್ರಶಾಂತ್ ಸಂಬರ್ಗಿ ಹೇಳಿಕೆ ನೀಡಿದ್ದಾರೆ. ನಿಜಕ್ಕೂ ಕಿಚ್ಚ ಸುದೀಪ್ ಮೇಲಿನ ದ್ವೇಷಕ್ಕೆ ಇಷ್ಟೆಲ್ಲ ನಡೀತಾ? ಡಿಕೆ ಶಿವಕುಮಾರ್ ಮೂವರ ಮೇಲೆ ಹಗೆ ಸಾಧಿಸುತ್ತಿದ್ದಾರಾ? ಪ್ರಶಾಂತ್ ಸಂಬರ್ಗಿ ಹೀಗೆ ಹೇಳಿದ್ದೇನು? ತಿಳಿಯುವುದಕ್ಕೆ ಮುಂದೆ ಓದಿ.
"ನಟ್ಟು ಬೋಲ್ಟು ಟೈಟ್ ಮಾಡಿದ್ದಾರೆ"
ಈ ಹಿಂದೆ ಡಿಕೆ ಶಿವಕುಮಾರ್ ಕನ್ನಡ ಚಿತ್ರರಂಗ ನಟ್ಟು ಬೋಲ್ಟು ಟೈಟ್ ಮಾಡುತ್ತೇವೆ ಎಂದು ಹೇಳಿದ್ದರು. ಆಗ ಡಿಕೆಶಿಯವರ ಹೇಳಿಕೆಯನ್ನು ಕಿಚ್ಚ ಸುದೀಪ್ ವಿರೋಧಿಸಿದ್ದರು. ಅದಕ್ಕೆ ಈಗ ಸೇಡು ತೀರಿಸಿಕೊಂಡಿದ್ದಾರೆಂದು ಪ್ರಶಾಂತ್ ಸಂಬರ್ಗಿ ಆರೋಪಿಸಿದ್ದಾರೆ. "ಇದೊಂದು ರಾಜಕೀಯ ಪ್ರೇರಿತವಾದ ದುರುದ್ದೇಶ. ಕರ್ನಾಟಕದಲ್ಲಿ ನಡೆದ ಫಿಲ್ಮ್ ಫೆಸ್ಟ್‌ಗೆ ಸ್ಟಾರ್‌ಗಳು ಹೋಗಲಿಲ್ಲ. ಆಗ ಉಪಮುಖ್ಯಮಂತ್ರಿಗಳು ನಟ್ಟು ಬೋಲ್ಟು ಹೇಗೆ ಟೈಟ್ ಮಾಡೋದು ಅಂತ ಗೊತ್ತು ಅಂದರೋ ಅದನ್ನು ಇಂದು ಅವರ ಸ್ವಂತ ಜಿಲ್ಲೆ ರಾಮನಗರದಲ್ಲಿ ಮಾಡಿದ್ದಾರೆ. ಈ ಮೆಸೇಜ್ ಅನ್ನು ಮೂರು ಜನರಿಗೆ ಕೊಡಬೇಕಾಗಿತ್ತು. ಬಿಜೆಪಿಯಲ್ಲಿ ಕಾಣಿಸಿಕೊಂಡ ಸುದೀಪ್‌ಗೆ ಕೊಟ್ಟಿದ್ದಾರೆ" ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.
ಶೋಕಾಸ್ ನೋಟೀಸ್ ಕೊಡ್ಬೇಕಿತ್ತು
"ಮೂರು ಶೋಕಾಸ್ ನೋಟೀಸ್ ಅನ್ನು ಕೊಡಬೇಕು. ನಾನು ಒಬ್ಬ ಕೈಗಾರಿಕೋದ್ಯಮಿ,ಬಿಲ್ಡರ್. ನನಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ರೂಲ್ಸ್ ಗೊತ್ತಿದೆ. ಇಂಡಸ್ಟ್ರಿಯಲ್ ಏರಿಯಾದಲ್ಲಿ ಇಂತಹ ಸೆಟಪ್ ಇರುವಾಗ 45 ದಿನಗಳ ಗ್ಯಾಪ್ ಅನ್ನು ಕೊಡಬೇಕು. ಆ ಶೋ ಉದ್ಯೋಗವನ್ನು ಸೃಷ್ಟಿ ಮಾಡುವ ಇಂಡಸ್ಟ್ರಿ, ಜಿಎಸ್‌ಟಿ ಕಟ್ಟು ಇಂಡಸ್ಟ್ರಿ" ಎಂದು ಪ್ರಶಾಂತ್ ಸಂಬರ್ಗಿ ಆಕ್ರೋಶ ಹೊರ ಹಾಕಿದ್ದಾರೆ.

ಮಾಲಿನ್ಯ ಮಂಡಳಿ ಉದ್ದೇಶವೇನು?
ಬಿಗ್ ಬಾಸ್ ರಿಯಾಲಿಟಿ ಶೋಗೆ ಒಂದಲ್ಲ ಒಂದು ವಿಘ್ನಗಳನ್ನು ಉಂಟು ಮಾಡುತ್ತಲೇ ಇದ್ದಾರೆಂದು ಆರೋಪಿಸಿದ್ದಾರೆ. "ಸೀಸನ್ 11 ದೊಡ್ಡ ಆಲದ ಮರದ ಹತ್ತಿರವಿತ್ತು. ಆಗ ಹುಲಿ ಉಗುರು ಅಂತ ಹೇಳಿ ತೊಂದರೆ ಕೊಟ್ಟರು. ಈಗಿರುವ ಜಾಲಿ ಸ್ಟುಡಿಯೋ ಟೊಯೋಟಾ ಕಂಪನಿ ಹತ್ತಿರವಿದೆ. ಅದು ಇಂಡಸ್ಟ್ರಿಯಲ್ ಏರಿಯಾ. ಅಲ್ಲಿಯೇ ಒಂದು ಸಂಘವಿದೆ. ಅವರು ನಿಯಾಮಾವಳಿಗಳನ್ನು ತಿಳಿದುಕೊಂಡಿರುತ್ತಾರೆ. ಇಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಉದ್ದೇಶವೇನು? ನಿಯಮ ಪಾಲನೆ ಮಾಡಿ ಅಂತ ಹೇಳೋದು. ಬಂದ್ ಮಾಡುವುದಲ್ಲ" ಎಂದು ಕಿಡಿ ಕಾರಿದ್ದಾರೆ.
ಮೂವರಿಗೆ ಮೆಸೇಜ್ ಕೊಡ್ಬೇಕಿತ್ತು
ಡಿಕೆ ಶಿವಕುಮಾರ್ ಇಲ್ಲಿ ಮೂವರಿಗೆ ಮೆಸೇಜ್ ಕೊಟ್ಟಿದ್ದಾರೆಂದು ಪ್ರಶಾಂತ್ ಸಂಬರ್ಗಿ ಆರೋಪಿಸಿದ್ದಾರೆ. "ಇಲ್ಲಿ ಸುದೀಪ್ ಅವರಿಗೆ ಒಂದು ಮೆಸೇಜ್ ಕೊಡಬೇಕಿತ್ತು. ಹೆಚ್.ಡಿ. ಕುಮಾರಸ್ವಾಮಿಯವರಿಗೆ ಒಂದು ಮೆಸೇಜ್ ಕೊಡಬೇಕಿತ್ತು. ನಿಖಿಲ್ ಕುಮಾರಸ್ವಾಮಿಗೊಂದು ಮೆಸೇಜ್ ಕೊಡಬೇಕಿತ್ತು. ಅದನ್ನು ಡಿಕೆ ಶಿವಕುಮಾರ್ ಮಾಡಿದ್ದಾರೆ. ಇದಕ್ಕೆಲ್ಲ ಕವಡೆ ಕಾಸಿನ ಕಿಮ್ಮತ್ತಿಲ್ಲ ಅನ್ನೋದು ಇನ್ನು 2 ದಿನಗಳಲ್ಲಿ ಪ್ರೂವ್ ಆಗುತ್ತೆ." ಎಂದು ಪ್ರಶಾಂತ್ ಸಂಬರ್ಗಿ ಗುಡುಗಿದ್ದಾರೆ.


Click it and Unblock the Notifications











