ಕೊಟ್ಟ ಮಾತಿನಂತೆ ನಡೆದರೇ ಚಂದನ್ ಶೆಟ್ಟಿ? ದಿವಾಕರ್ ಸಿನಿಮಾ ಟ್ಯೂನ್ ಹಾಕಿದ್ರಾ? ಏನಾಯ್ತು ಆ ಪ್ರಾಜೆಕ್ಟ್?

ಬಿಗ್ ಬಾಸ್ ಕನ್ನಡದ 12ನೇ ಸೀಸನ್ ನಡೆಯುತ್ತಿದೆ. ಈ 12 ಸೀಸನ್‌ಗಳಲ್ಲಿ ವಿಭಿನ್ನವಾಗಿ ನಿಂತಿದ್ದು, 5ನೇ ಸೀಸನ್. ಇದರಲ್ಲಿ ಸೆಲೆಬ್ರೆಟಿಗಳ ಜೊತೆ ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿತ್ತು. ವಿಶೇಷ ಅಂದರೆ, ಈ ಸೀಸನ್‌ನಲ್ಲಿ ಕಾಮನ್‌ಮ್ಯಾನ್ ಕ್ಯಾಟಗರಿಯಲ್ಲಿ ಗಮನ ಸೆಳೆದಿದ್ದು ದಿವಾಕರ್. 5ನೇ ಸೀಸನ್‌ನಲ್ಲಿ ದಿವಾಕರ್ ರನ್ನರ್ ಅಪ್ ಆಗಿದ್ದು ಕೂಡ ವಿಶೇಷ.

ಸಾಮಾನ್ಯವಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಹೊರ ಬರುತ್ತಿದ್ದಂತೆ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಸಿಕ್ಕೇ ಸಿಗುತ್ತೆ. ಅಂತಹದ್ದೊಂದು ಕಾಲದಲ್ಲಿ ದಿವಾಕರ್ ಕೂಡ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದೇ ಸೀಸನ್‌ ವಿನ್ ಆಗಿದ್ದ ಚಂದನ್ ಶೆಟ್ಟಿಯೊಂದಿಗೆ ಇಂದಿಗೂ ದಿವಾಕರ್ ಬಾಂಧವ್ಯ ಚೆನ್ನಾಗಿದೆ. ಆ ಸಮಯದಲ್ಲಿ ದಿವಾಕರ್‌ಗೆ ಚಂದನ್ ಶೆಟ್ಟಿ ಒಂದು ಮಾತು ಕೊಟ್ಟಿದ್ದರು. ಹೀರೋ ಆಗಿ ನಟಿಸುವ ಸಿನಿಮಾಗೆ ಫ್ರೀಯಾಗಿ ಸಿನಿಮಾ ಮಾಡಿ ಕೊಡುತ್ತೇನೆ ಎಂದಿದ್ದರಂತೆ.

BBK 5 Runner up Diwakar remembered Chandan Shetty promise to compose music for his movie

ಚಂದನ್ ಶೆಟ್ಟಿ ಕೊಟ್ಟ ಮಾತಿನಂತೆ ನಡೆದುಕೊಂಡರೇ? ದಿವಾಕರ್ ಸಿನಿಮಾಗೆ ಚಂದನ್ ಶೆಟ್ಟಿ ಫ್ರೀಯಾಗಿ ಮ್ಯೂಸಿಕ್ ಕಂಪೋಸ್ ಮಾಡಿದರೇ? ಈ ಪ್ರಶ್ನೆಗಳಿಗೆ ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ಚಂದನ್ ಶೆಟ್ಟಿ ರಿವೀಲ್ ಮಾಡಿದ್ದಾರೆ. ಇಂದಿಗೂ ಇವರಿಬ್ಬರ ಸಂಬಂಧ ಹಾಗೇ ಇದೆಯೇ? ಚಂದನ್ ಶೆಟ್ಟಿ ಬಗ್ಗೆ ಏನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.

ಬಿಗ್ ಬಾಸ್ ಸೀಸನ್ 5ರಲ್ಲಿ ಚಂದನ್ ಶೆಟ್ಟಿ ಹಾಗೂ ದಿವಾಕರ್ ಇಬ್ಬರೂ ಗೆಳೆಯರಾಗಿದ್ದರು. ಚಂದನ್ ಶೆಟ್ಟಿ ಅದಾಗಲೇ ತನ್ನ ಹಾಡುಗಳಿಂದ ಫೇಮಸ್ ಆಗಿದ್ದರು. ಇತ್ತ ಕಾಮನ್‌ಮ್ಯಾನ್ ಆಗಿ ಹೋಗಿದ್ದ ದಿವಾಕರ್‌ಗೆ ವೀಕ್ಷಕರು ಮೆಚ್ಚುಗೆ ಸೂಚಿಸಿ ಬೆಂಬಲ ನೀಡಿದರು. ಮೂರು ತಿಂಗಳು ಬಿಗ್ ಬಾಸ್‌ ಮನೆಯಲ್ಲಿ ಇವರಿಬ್ಬರಿ ಒಳ್ಳೆಯ ಗೆಳೆಯರಾಗಿದ್ದರು. ಆ ವೇಳೆ ನಿನ್ನ ಸಿನಿಮಾಗೆ ಉಚಿತವಾಗಿ ಮ್ಯೂಸಿಕ್ ಮಾಡುತ್ತೇನೆ ಎಂದಿದ್ದರಂತೆ. ಆ ಬಗ್ಗೆ ದಿವಾಕರ್ ಹೀಗೆ ಹೇಳಿದ್ದಾರೆ.

"ಹೌದು ಚಂದನ್ ಶೆಟ್ಟಿನೇ ಬಂದು ನನಗೆ ಹೇಳಿದ್ದ. ಮಗಾ ನೀನು ಮಾಡುವ ಸಿನಿಮಾಗೆ ನಾನೇ ನಿನಗೆ ಫ್ರೀಯಾಗಿ ಮ್ಯೂಸಿಕ್ ಮಾಡಿಕೊಡುತ್ತೇನೆ. ಫ್ರೆಂಡ್ ಆಗಿ ನಾನು ನಿನಗೆ ಮ್ಯೂಸಿಕ್ ಮಾಡಿಕೊಡುತ್ತೇನೆ ಅಂದಿದ್ದರು. ಅದಾದ್ಮೇಲೆ ಒಂದು ಸಿನಿಮಾ ಶುರುವಾಯ್ತು. ಅದಕ್ಕೆ ಒಂದು ಹಾಡನ್ನು ಮಾಡಿಕೊಟ್ಟಿದ್ದಾನೆ. ಒಂದು ಖುಷಿ ವಿಚಾರ ಏನು ಅಂದರೆ, ನನ್ನ ಗೆಳೆಯ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾನೆ." ಎಂದು ಚಂದನ್ ಶೆಟ್ಟಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಆದರೆ, ಆ ಸಿನಿಮಾ ಇನ್ನೂ ಶುರುವಾಗಿಲ್ಲ. ಒಂದಿಷ್ಟು ಕೆಲಸಗಳು ಬಾಕಿ ಉಳಿದಿದ್ದು, ಆ ಬಳಿಕ ಸಿನಿಮಾ ಸೆಟ್ಟೇರುತ್ತೆ ಎಂದಿದ್ದಾರೆ ದಿವಾಕರ್. "ಅದೊಂದು ಸಿನಿಮಾ ಅತೀ ಶೀಘ್ರದಲ್ಲಿ ಶುರು ಮಾಡಬೇಕು. ಒಂದಿಷ್ಟು ಓಡಾಟಗಳು ಇದ್ದಾವೆ. ಚಂದನ್ ಶೆಟ್ಟಿ ನುಡಿದಂತೆ ನಡೆದುಕೊಂಡಿದ್ದಾನೆ. ಅದು ತುಂಬಾನೇ ಖುಷಿಯಾಗುತ್ತೆ. ಇವತ್ತು ಕೂಡ ಹಾಗೇ ಇದ್ದಾನೆ." ಎಂದಿದ್ದಾರೆ.

BBK 5 Runner up Diwakar remembered Chandan Shetty promise to compose music for his movie

ಇದೇ ಸಂದರ್ಶನದಲ್ಲಿ ಇಂದಿಗೂ ಇವರಿಬ್ಬರೂ ಅದೇ ಬಾಂಡಿಂಗ್‌ನಲ್ಲಿದ್ದಾರೆ. ತಮ್ಮ ಗೆಳೆತನವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. "ಇವತ್ತಿಗೂ ಬಿಗ್ ಬಾಸ್ ಮನೆಯ ಸದಸ್ಯರಲ್ಲಿ ಟಚ್‌ನಲ್ಲಿ ಇರೋದು ಅಂದರೆ, ಅದು ಚಂದನ್ ಶೆಟ್ಟಿ. ಗೆಳೆಯ ಇವತ್ತೂ ಕೂಡ ಫೋನ್ ಮಾಡುತ್ತಿರುತ್ತಾನೆ. ಇವತ್ತಿಗೂ ನಾವು ಮಾತಾಡುತ್ತಿರುತ್ತೇವೆ. ಈತರದ್ದು ಏನೋ ಮಾತಾಡುತ್ತಿದ್ದೇನೆ ಅಂತ ಹೇಳಿದರೆ, ಒಳ್ಳೆಯದಾಯ್ತು ಮಾಡು ಅಂತ ಹೇಳ್ತಾನೆ. ಇವತ್ತಿಗೂ ಟಚ್‌ನಲ್ಲಿ ಇದ್ದೇವೆ." ಎಂದು ಬಿಗ್ ಬಾಸ್ ಸೀಸನ್ 5ರ ರನ್ನರ್‌ ಅಪ್ ದಿವಾಕರ್ ಫಿಲ್ಮಿಬೀಟ್ ಕನ್ನಡದ ಜೊತೆ ರಿಕಾಲ್ ಮಾಡಿಕೊಂಡಿದ್ದಾರೆ.

More from Filmibeat

English summary
BBK 5 Runner up Diwakar remembered Chandan Shetty promise to compose music for his movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X