For Quick Alerts
  ALLOW NOTIFICATIONS  
  For Daily Alerts

  ಬಿಜೆಪಿ ಗೆಲುವಿಗೆ ಬಹುಪರಾಕ್ ಎಂದ ಸೆಲೆಬ್ರಿಟಿಗಳು

  By Suneetha
  |

  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಆಗಸ್ಟ್ 22 ರಂದು ನಡೆದಿದ್ದು, ಇಂದು (ಆಗಸ್ಟ್ 25) ಚುನಾವಣಾ ಫಲಿತಾಂಶ ಪ್ರಕಟಣೆಗೊಂಡಿದೆ.

  ಬೆಂಗಳೂರಿನಲ್ಲಿ ಮತ್ತೆ ಬಿಜೆಪಿ ಅಧಿಕಾರ ಸ್ಥಾಪಿಸುವ ಹಂತಕ್ಕೆ ಬಂದಿರುವುದಕ್ಕೆ ಸ್ಯಾಂಡಲ್ ವುಡ್ ನ ತಾರೆಯರು ಟ್ವೀಟ್ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ.[ಬಿಜೆಪಿಗೆ ಸ್ಪಷ್ಟ ಬಹುಮತ, ಕಾಂಗ್ರೆಸ್ಸಿಗೆ ಮುಖಭಂಗ]

  ಸ್ಯಾಂಡಲ್ ವುಡ್ ನ ಖ್ಯಾತ ನಟಿ ಕಮ್ ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಅವರು ಬಿಜೆಪಿ ಪರವಾಗಿ ಕಾವೇರಿ ಪುರ ವಾರ್ಡ್ ನಲ್ಲಿ ಸ್ಪರ್ಧಿಸಿದ್ದು, 2 ಸಾವಿರ ಮತಗಳ ಅಂತರದಲ್ಲಿ ಮೂರನೇ ಸ್ಥಾನಕ್ಕೆ ಕುಸಿದು ಸೋಲನ್ನು ಅನುಭವಿಸಿದರೂ ಕೂಡ ಎಲ್ಲೆಡೆ ಬಿಜೆಪಿ ಅಗ್ರಸ್ಥಾನದಲ್ಲಿದೆ.

  ಈ ಬಗ್ಗೆ ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಜಗ್ಗೇಶ್, ಮಾಳವಿಕ ಅವಿನಾಶ್ ಹಾಗೂ ಶಿಲ್ಪಾ ಗಣೇಶ್ ಮುಂತಾದವರು ತಮ್ಮ ತಮ್ಮ ಟ್ವಿಟ್ಟರ್ ಮೂಲಕ ಬಿಜೆಪಿ ಜಯಭೇರಿ ಬಾರಿಸಿದ್ದಕ್ಕಾಗಿ ಶುಭಾಶಯ ಕೋರಿದ್ದಾರೆ.

  ನವರಸ ನಾಯಕ ಜಗ್ಗೇಶ್ ಅವರು ಬಿಜೆಪಿ ಗದ್ದುಗೆ ಹಿಡಿದ ಸಂಭ್ರಮದಲ್ಲಿ ಮೋದಿಯವರು ಮಾಡಿದ ಟ್ವೀಟ್ ಗೆ ತಿರುಗಿ ಟ್ವೀಟ್ ಮಾಡುವ ಮೂಲಕ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ಮುಂದೆ ಓದಿ...

  ನವರಸ ನಾಯಕ ಜಗ್ಗೇಶ್

  ನವರಸ ನಾಯಕ ಜಗ್ಗೇಶ್

  ಮೋದಿ ಅವರ ಸರಳ ನಡೆಯನ್ನು ನವರಸ ನಾಯಕ ಜಗ್ಗೇಶ್ ಅವರು ತುಂಬು ಮನಸ್ಸಿನಿಂದ ಮೋದಿ ಭಾರತೀಯರ ಹೆಮ್ಮೆಯ ಮಗ ಎಂದು ಟ್ವೀಟ್ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾರೆ.

  ಸ್ಯಾಂಡಲ್ ವುಡ್ ನಟಿ ಮಾಳವಿಕ ಅವಿನಾಶ್

  ಈಗಾಗಲೇ ಬೆಂಗಳೂರು ಬಿಜೆಪಿ ಪಕ್ಷ ಅನ್ನೋದನ್ನ ನಿರ್ಧರಿಸಿದೆ, ಜೊತೆಗೆ ಕಾಂಗ್ರೆಸ್ ಸೋತು ನೆಲಕಚ್ಚಿದೆ ಎಂದು ಸ್ಯಾಂಡಲ್ ವುಡ್ ನಟಿ ಮಾಳವಿಕ ಅವಿನಾಶ್ ಟ್ವೀಟ್ ಮಾಡಿ ಬಿಜೆಪಿ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

  ಸ್ಯಾಂಡಲ್ ವುಡ್ ಸ್ಟಾರ್ ಜಗ್ಗೇಶ್

  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೋದಿ ನಾಯಕತ್ವದ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಕರಿಸಿದ ಬೆಂಗಳೂರಿನ ಮತದಾರರಿಗೆ ಕನ್ನಡ ನಟ ಜಗ್ಗೇಶ್ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

  ನಿರ್ಮಾಪಕಿ ಶಿಲ್ಪಾ ಗಣೇಶ್

  ಕನ್ನಡ ನಟ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಅವರು ಬೆಂಗಳೂರು ಬಿಬಿಎಂಪಿ ಗೆ 100 ಜನ ಬಿಜೆಪಿಗರನ್ನು ತಂದುಕೊಟ್ಟ ಮತದಾರರು ಅಂತ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ನಟ ಜಗ್ಗೇಶ್

  ಮೋದಿಯವರ ನಡೆ ಅಂದರೆ ಇದೆ.ಸಹಾಯ ಮಾಡಿದ ಮಂದಿಗೆ ಧನ್ಯವಾದ ಹೇಳೊ ಮನುಷ್ಯನ ಹೃದಯ ನಿಷ್ಕಲ್ಮಷವಾಗಿ ಇರುತ್ತದೆ.ಮೋದಿ ಭಾರತೀಯರ ಹೆಮ್ಮೆಯ ಮಗ, ಎಂದು ಟ್ವೀಟ್ ಮಾಡಿದ್ದಾರೆ.

  English summary
  BBMP Election 2015: Sandalwood stars Actor Jaggesh, Actress Malavika, Producer Shilpa Ganesh Twitter reaction about BJP Victory.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X