ಮೊದಲು ಕಣ್ಣಿಗೆ ಪೆಟ್ಟು, ಈಗ ಕತ್ತಿಗೆ ಗಂಭೀರ ಗಾಯ: ಅಭಿಮಾನಿಗಳಿಗೆ ಆತಂಕ!

ದಿಗಂತ್ ಸ್ಯಾಂಡಲ್‌ವುಡ್‌ನ ಸ್ಫುರದ್ರೂಪಿ ನಟ. ಯಾವ ಬಾಲಿವುಡ್‌ ನಟರಿಗೂ ಕಮ್ಮಿಯಿಲ್ಲ ಎನ್ನುವಂತಿದ್ದ ನಾಯಕ ನಟ. ಸಿನಿಮಾಗಳಷ್ಟೇ ಅಲ್ಲ. ಪರ್ಸನಲ್‌ ಲೈಫ್‌ನಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟ ದಿಗಂತ್. ಆದರೆ, ಅವರ ಪ್ರತಿಭೆಗೆ ತಕ್ಕಂತೆ ಅವರಿಗೆ ಸಿನಿಮಾ ಸಿಕ್ಕಿಲ್ಲ ಅನ್ನೋ ಮಾತು ಇದೆ. ಇದರೊಂದಿಗೆ ಆಗಾಗ ಅವರ ಜೀವನದಲ್ಲಿ ಅವಘಡಗಳು ನಡೆಯುತ್ತಲೇ ಇವೆ. ಇದು ಅವರ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ದಿಗಂತ್ ತಮ್ಮ ಪತ್ನಿ ಐಂದ್ರಿತಾ ರೇ ಹಾಗೂ ಆಪ್ತರೊಂದಿಗೆ ಗೋವಾ ಟ್ರಿಪ್‌ಗೆ ತೆರಳಿದ್ದರು. ಈ ವೇಳೆ ಅಲ್ಲಿ ಅಪಘಾತ ಸಂಭವಿಸಿದೆ ಎಂಬ ಸುದ್ದಿ ಅಭಿಮಾನಿಗಳ ಆತಂಕ ಹೆಚ್ಚು ಮಾಡುವಂತೆ ಮಾಡಿದೆ. ಅಸಲಿಗೆ ದಿಗಂತ್‌ಗೆ ಅಪಘಾತ ಸಂಭವಿಸಿದ್ದು ಹೇಗೆ? ಯಾವ ಪ್ರಮಾಣದಲ್ಲಿ ಗಾಯಗಳಾಗಿವೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ದಿಗಂತ್‌ಗೆ ಬೆನ್ನುಮೂಳೆ, ಕತ್ತು ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.

ದಿಗಂತ್‌ಗೆ ಅಪಘಾತ ಆಗಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಕಣ್ಣಿಗೆ ಗಂಭೀರ ಗಾಯವಾಗಿ ತಿಂಗಳುಗಳ ಕಾಲ ಚಿಕಿತ್ಸೆಯನ್ನು ಪಡೆದಿದ್ದರು. ಈಗ ಮತ್ತೆ ಅಪಘಾತ ಸಂಭವಿಸಿದ್ದು ಸಹಜವಾಗಿಯೇ ಸ್ಯಾಂಡಲ್‌ವುಡ್ ಮಂದಿಯನ್ನು ಹಾಗೂ ಅಭಿಮಾನಿಗಳು ಆತಂಕ ಪಡುವಂತೆ ಮಾಡಿದೆ. ದಿಗಂತ್ ವೃತ್ತಿ ಬದುಕಿಗೆ ಅಪಘಾತಗಳೇ ಮುಳುವಾಗುತ್ತಿವೆಯೇನೋ ಅನ್ನೋ ಆತಂಕ ಅಭಿಮಾನಿಗಳಲ್ಲಿದೆ.

ದಿಗಂತ್ ಕಣ್ಣಿಗೆ ಗಾಯ

ದಿಗಂತ್ ಕಣ್ಣಿಗೆ ಗಾಯ

ಅಕ್ಷರಶ: ದಿಗಂತ್ ನೋಡುವುದಕ್ಕೆ ದೂದ್‌ ಪೇಡಾನೇ. ಹ್ಯಾಂಡ್ಸಮ್ ಹೀರೊ ದಿಗಂತ್ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದರು. 'ವೆಡ್ಡಿಂಗ್ ಪುಲಾವ್' ಎಂಬ ಸಿನಿಮಾ ಮೂಲಕ 'ಟಿಕೆಟ್‌ ಟು ಬಾಲಿವುಡ್' ಎನ್ನುವ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ವೇಳೆ ದಿಗಂತ್ ಕಣ್ಣಿಗೆ ಗಂಭೀರ ಗಾಯವಾಗಿತ್ತು. ಸಿನಿಮಾ ಚಿತ್ರೀಕರಣದ ವೇಳೆ ನಾಯಕಿ ದಿಗಂತ್‌ಗೆ ಚಪ್ಪಲಿ ಎಸೆದಿದ್ದರು. ಸಿನಿಮಾದ ದೃಶ್ಯವೊಂದಕ್ಕಾಗಿ ಚಪ್ಪಲಿ ಎಸೆದಿದ್ದರು. ಅದು ಬಲ ಕಣ್ಣಿಗೆ ತಾಗಿ ಗಂಭೀರ ಗಾಯವೇ ಆಗಿತ್ತು.

ದಿಗಂತ್ ಬಲಗಣ್ಣು ಅಸ್ಪಷ್ಟ

ದಿಗಂತ್ ಬಲಗಣ್ಣು ಅಸ್ಪಷ್ಟ

ದೂದ್ ಪೇಡಾ ದಿಗಂತ್ ಕಣ್ಣಿಗೆ ಏಟು ಬೀಳುತ್ತಿದ್ದಂತೆ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು ಎನ್ನಲಾಗಿದೆ. ಅದೆಷ್ಟೇ ಪ್ರಯತ್ನ ಪಟ್ಟರೂ ದಿಗಂತ್ ಬಲ ಭಾಗದ ಕಣ್ಣು ಮೊದಲನಷ್ಟು ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಆಪ್ತರು ಹೇಳುತ್ತಾರೆ. ಈ ಅಪಘಾತ ಕೂಡ ದಿಗಂತ್ ಏಳಿಗೆಗೆ ಒಂದು ಹಂತಕ್ಕೆ ಅಡ್ಡ ಗೋಡೆಯಾಯಿತು. ಆದರೂ, ದಿಗಂತ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಮತ್ತೆ ಎಂದಿನಂತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದರು.

ಕೈ ಬಿಟ್ಟು ಹೋಯ್ತು ಬಾಲಿವುಡ್ ಸಿನಿಮಾ

ಕೈ ಬಿಟ್ಟು ಹೋಯ್ತು ಬಾಲಿವುಡ್ ಸಿನಿಮಾ

ಬಾಲಿವುಡ್‌ನಲ್ಲಿ ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳು ಸಿಗುವುದಕ್ಕೆ ಆರಂಭ ಆಗಿತ್ತು. ಕೈಯಲ್ಲಿ ಎರಡೆರಡು ಸಿನಿಮಾಗಳಿದ್ದವು. ಅಷ್ಟರಲ್ಲೇ ಕಣ್ಣಿಗೆ ಬಿದ್ದ ಏಟಿನಿಂದ ಬಾಲಿವುಡ್ ಸಿನಿಮಾಗಳು ಕೈ ತಪ್ಪಿ ಹೋದವು. ಈ ಮೂಲಕ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುವ ಎಲ್ಲಾ ಅರ್ಹತೆಗಳಿದ್ದರೂ, ಕಣ್ಣಿಗಾದ ಪೆಟ್ಟು ದಿಗಂತ್ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗೆ ಮಾಡಿತ್ತು. 'ಟಿಕೆಟ್‌ ಟು ಬಾಲಿವುಡ್' ಬಳಿಕ ದಿಗಂತ್ ಮತ್ಯಾವುದೇ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಲಿಲ್ಲ.

ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್ ಬ್ಯುಸಿ

ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್ ಬ್ಯುಸಿ

ಬಾಲಿವುಡ್‌ ಸಿನಿಮಾಗಳು ಮಿಸ್ ಆದರೆ ಏನಂತೆ, ದಿಗಂತ್ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಕೆಲವು ದಿನಗಳ ಹಿಂದಷ್ಟೇ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾ ಬಿಡುಗಡೆಯಾಗಿತ್ತು. ಇನ್ನೊಂದು ಕಡೆ ಯೋಗರಾಜ್ ಭಟ್‌ ನಿರ್ದೇಶನದ 'ಗಾಳಿಪಟ- 2' ಸಿನಿಮಾದ ಶೂಟಿಂಗ್ ಮುಗಿದಿದ್ದು, ಇನ್ನು ಕೆಲವು ಸಿನಿಮಾಗಳು ಕೈಯಲ್ಲಿವೆ. ಈಗ ಬೆನ್ನುಮೂಳೆ ಹಾಗೂ ಕತ್ತಿನ ಭಾಗದ ಪೆಟ್ಟಾಗಿದ್ದು, ಇದರ ಸ್ವರೂಪ ಎಷ್ಟಿದೆ ಅನ್ನುವುದು ಇನ್ನೂ ಗೊತ್ತಿಲ್ಲ. ದಿಗಂತ್‌ಗೆ ಒಂದರ ಹಿಂದೊಂದು ಬ್ಯಾಡ್‌ ಲಕ್‌ ಎದುರಾಗುತ್ತಿರುವುದು ಆತಂಕ ಸೃಷ್ಟಿಸಿದೆ.

More from Filmibeat

English summary
Before Goa Accident Kannada Actor Diganth Eye Injury, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X