'ಕಿರಿಕ್ ಪಾರ್ಟಿ' ಅಲ್ಲ.. ರಶ್ಮಿಕಾ ಮೊದಲು ಒಪ್ಪಿದ್ದು ಬೇರೆ ಸಿನಿಮಾ: ಆ ಸಿನಿಮಾ ಯಾವುದು? ಏನಾಯ್ತು?
'ಕಿರಿಕ್ ಪಾರ್ಟಿ ಅದೆಷ್ಟೋ ಜನರ ಬದುಕನ್ನೇ ಬದಲಿಸಿತ್ತು. ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಆದರು. ರಕ್ಷಿತ್ ಶೆಟ್ಟಿ ಮೊದಲ ಬಾರಿಗೆ ನಿರ್ಮಾಪಕರಾದರು. ರಿಷಬ್ ಶೆಟ್ಟಿ ನಿರ್ದೇಶಕನಾಗಿ ಮೊದಲ ಹಿಟ್ ಕೊಟ್ಟರು. ಸಂಯುಕ್ತ ಹೆಗ್ಡೆಗೆ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಸಿಕ್ಕಿತು.
ಅಷ್ಟೇ ಅಲ್ಲ 'ಕಿರಿಕ್ ಪಾರ್ಟಿ' ಸ್ಯಾಂಡಲ್‌ವುಡ್‌ಗೊಂದು ಟ್ರೆಂಡ್ ಸೆಟ್ ಮಾಡಿದ ಸಿನಿಮಾ ಆಯ್ತು. ಆದರೆ, ಎಲ್ಲರಿಗಿಂತ ಹೆಚ್ಚು ಶೈನ್ ಆಗಿದ್ದು ಮಾತ್ರ ರಶ್ಮಿಕಾ ಮಂದಣ್ಣ. ಒಂದರ ಹಿಂದೊಂದು ಆಫರ್‌ಗಳು ಈಕೆಯನ್ನು ಹುಡುಕಿಕೊಂಡು ಬಂದಿದ್ದವು.

ಕಿರಿಕ್ ಪಾರ್ಟಿಯಿಂದ ಶುರುವಾದ ರಶ್ಮಿಕಾ ಮಂದಣ್ಣ ಜರ್ನಿ ಈಗ ನಾಲ್ಕು ಭಾಷೆಗಳಿಗೆ ವ್ಯಾಪಿಸಿದೆ. ಆದರೆ, 'ಕಿರಿಕ್ ಪಾರ್ಟಿ' ರಶ್ಮಿಕಾ ಮಂದಣ್ಣ ಒಪ್ಪಿಕೊಂಡ ಮೊದಲ ಸಿನಿಮಾ ಅಲ್ಲ ಅನ್ನೋದು ನಿಮಗೆ ಗೊತ್ತಾ? ಈ ಸಿನಿಮಾಗೂ ಮುನ್ನ ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸಬೇಕಿತ್ತು. ಆ ಸಿನಿಮಾ ಯಾವುದು? ಗೊತ್ತಾ? ಅದ್ಯಾವುದು ಅಂತ ತಿಳಿಯಲು ಮುಂದೆ ಓದಿ.
ಪಿಯುಸಿ ಓದುವಾಗಲೇ ಆಫರ್
ರಶ್ಮಿಕಾ ಮಂದಣ್ಣಗೆ ಪಿಯುಸಿ ಓದುವಾಗಲೇ ಸಿನಿಮಾದಲ್ಲಿ ನಟಿಸುವಂತೆ ಆಫರ್‌ಗಳು ಬರುತ್ತಿದ್ದವು. ಆದರೆ, ರಶ್ಮಿಕಾ ಅಪ್ಪ-ಅಮ್ಮನಿಗೆ ಮಗಳು ಈಗಲೇ ಸಿನಿಮಾರಂಗಕ್ಕೆ ಹೋಗುವುದು ಇಷ್ಟವಿರಲಿಲ್ಲ. ಹೀಗಾಗಿ ಪಿಯುಸಿ ಓದುವಾಗ ಬಂದಿದ್ದ ಆಫರ್ ಅನ್ನು ತಿರಸ್ಕರಿಸಿದ್ದರು.
ರಶ್ಮಿಕಾ ಮಂದಣ್ಣ ಮೈಸೂರಿನಲ್ಲಿ ಪಿಯುಸಿ ಓದುವಾಗ ಅವರ ಕಾಲೇಜಿನ ಒಂದು ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಿದ್ದರು. ಆ ಕಾರ್ಯಕ್ರಮಕ್ಕೆ ಬಂದಿದ್ದ ಕನ್ನಡ ಚಿತ್ರರಂಗದ ನಿರ್ದೇಶಕ ಅಥವಾ ನಿರ್ಮಾಪಕ (ರಶ್ಮಿಕಾಗೆ ಗೊತ್ತಿಲ್ಲ) ಆಫರ್ ಕೊಟ್ಟಿದ್ದರು. ಇದನ್ನು ಲೆಕ್ಚರರ್ ಬಂದು ರಶ್ಮಿಕಾ ಹೇಳಿದ್ದರು. ಆ ವೇಳೆ ರಶ್ಮಿಕಾ ಪೋಷಕರು ಸಿನಿಮಾರಂಗಕ್ಕೆ ಕಳಿಸಲು ಒಪ್ಪಿರಲಿಲ್ಲ. ಆ ವೇಳೆ ಬೇಜಾರಾಗಿತ್ತು ಎಂದು ರಶ್ಮಿಕಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಡಿಗ್ರಿ ಓದುವಾಗ ಬಂದಿತ್ತು ಆಫರ್
ಮೈಸೂರಿನಲ್ಲಿ ಪಿಯುಸಿ ಮುಗಿಸಿದ ಬಳಿಕ ರಶ್ಮಿಕಾ ಮಂದಣ್ಣ ಬೆಂಗಳೂರಿನ ಎಂ ಎಸ್ ರಾಮಯ್ಯ ಕಾಲೇಜಿಗೆ ದಾಖಲಾಗಿದ್ದರು. ಈ ವೇಳೆ ಪ್ರತಿಷ್ಠಿತ ಪತ್ರಿಕೆ ಆಯೋಜಿಸಿದ್ದ ರಾಜ್ಯದ ಮಟ್ಟದ ಕಾಂಪಿಟೇಷನ್‌ನಲ್ಲಿ ಭಾಗವಹಿಸಿದ್ದರು. ಅಲ್ಲಿ ರಶ್ಮಿಕಾಗೆ 'ಫೇಸ್ ಆಫ್ ಬೆಂಗಳೂರು' ಟೈಟಲ್ ಗೆದ್ದಿದ್ದರು. ಆನಂತರ ನ್ಯಾಷನಲ್ ಮಟ್ಟಿದಲ್ಲೂ ಗೆದ್ದಿದ್ದರು. ಇದು ಆ ಪತ್ರಿಕೆಯ ಮುಖಪುಟದಲ್ಲಿ ಪ್ರಕಟ ಆಗಿತ್ತು.
ಇಲ್ಲಿಂದ ರಶ್ಮಿಕಾ ಮಂದಣ್ಣ ಸಿನಿಮಾಗಾಗಿ ಸುಮಾರು 10 ರಿಂದ 15 ಆಡಿಷನ್ ನೀಡಿದ್ದಾರೆ. ಈ ವಿಷಯವನ್ನು ಪ್ರೇಮ ದಿ ಜರ್ನಲಿಸ್ಟ್ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಇಷ್ಟು ಆಡಿಷನ್‌ಗಳಲ್ಲಿ ಒಂದು ಸಿನಿಮಾಗೆ ರಶ್ಮಿಕಾ ಆಯ್ಕೆ ಆಗಿದ್ದರು.

'ಕಿರಿಕ್ ಪಾರ್ಟಿ'ಗಿಂತ ಮುನ್ನ ಒಪ್ಪಿದ ಸಿನಿಮಾ ಯಾವುದು?
'ಕಿರಿಕ್ ಪಾರ್ಟಿ' ಸಿಗುವುದಕ್ಕೂ ಮುನ್ನ ರಶ್ಮಿಕಾ ನಟಿಯಾಗೋಕೆ ಹರಸಾಹಸ ಪಟ್ಟಿದ್ದರು. ನಿರಂತರವಾಗಿ ನೀಡುತ್ತಿದ್ದ ಆಡಿಷನ್‌ನಲ್ಲಿ ರಶ್ಮಿಕಾ 'ಗೆಳೆಯರೇ ಗೆಳತಿಯರೇ' ಅನ್ನೋ ಸಿನಿಮಾಗೆ ಆಯ್ಕೆಯಾಗಿದ್ದರು. ಸ್ಕ್ರಿಪ್ಟ್ ಪೂಜೆ ಕೂಡ ನಡೆದಿತ್ತು. ರಶ್ಮಿಕಾ ಜೊತೆ ಆಯ್ಕೆಯಾದವರಿಗೆ ಪೂರ್ವಾಭ್ಯಾಸ ಕೂಡ ಮಾಡಿಸಲಾಗಿತ್ತು. ಮೂರು ತಿಂಗಳ ಬಳಿಕ 'ಗೆಳೆಯರೇ ಗೆಳತಿಯರೇ' ತಂಡ ಸಿನಿಮಾ ನಿಂತಿದೆ ಎಂದಿದ್ದರು.
ಇದು ರಶ್ಮಿಕಾಗೆ ಸಿಕ್ಕಾಪಟ್ಟೆ ಬೇಸರ ಆಗಿತ್ತು. 'ಗೆಳೆಯರೇ ಗೆಳತಿಯರೇ' ನಿಂತ ಒಂದು ವರ್ಷದ ಬಳಿಕ ರಶ್ಮಿಕಾ ಮಂದಣ್ಣಗೆ ಕಿರಿಕ್ ಪಾರ್ಟಿ ತಂಡದಿಂದ ಕರೆ ಬಂದಿತ್ತು. ಆಗಲೂ ಅನುಮಾನದಿಂದಲೇ ಸಿನಿಮಾ ಒಪ್ಪಿಕೊಂಡಿದ್ದರು. ಆದರೆ, ರಶ್ಮಿಕಾ ಮಂದಣ್ಣ ಅಮ್ಮನಿಗೆ ರಕ್ಷಿತ್ ಶೆಟ್ಟಿ ಬಗ್ಗೆ ಗೊತ್ತಿದ್ದರಿಂದ ಕಿರಿಕ್ ಪಾರ್ಟಿಯಲ್ಲಿ ನಟಿಸಲು ಒಪ್ಪಿದ್ದಾಗಿ ಹೇಳಿದ್ದಾರೆ.


Click it and Unblock the Notifications











