Agam-Grammy Awards 2026: 2026ರ ಗ್ರ್ಯಾಮಿ ಪ್ರಶಸ್ತಿಗೆ ಬೆಂಗಳೂರು ಮೂಲದ ಬ್ಯಾಂಡ್ 'ಅಗಂ' ಸೃಷ್ಟಿಸಿದ ಹೊಸ ಅಲ್ಬಮ್

ಕರ್ನಾಟಕದ ರಾಕ್ ಬ್ಯಾಂಡ್ 'ಅಗಂ' ಮತ್ತೆ ಸುದ್ದಿಯಲ್ಲಿದೆ. ತಮ್ಮ ಹೊಸ ಮ್ಯೂಸಿಲ್ ಅಲ್ಬಮ್ 'ಅರೈವಲ್ ಆಫ್ ದಿ ಎಥೆರಿಯಲ್' ಜೊತೆ ಸದ್ದು ಮಾಡುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ಕರ್ಣಾಟಿಕ್ ಮ್ಯೂಸಿಕ್‌ನಲ್ಲಿ ಅಗಂ ಬ್ಯಾಂಡ್ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದೆ. ಸುಮಾರು ಏಳು ಜನರ ಈ ತಂಡ ಸಂಗೀತ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ಇತ್ತೀಚೆಗೆ ಇವರ ಬತ್ತಳಿಕೆಯಿಂದ ಬಂದಿರುವ 'ಅರೈವಲ್ ಆಫ್ ದಿ ಎಥೆರಿಯಲ್' ಅಲ್ಬಮ್ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 2026ರ ಗ್ರ್ಯಾಮಿ ಪ್ರಶಸ್ತಿಯ ಆಯ್ಕೆ ಸಮಿತಿ ಈ ಅಲ್ಬಮ್ ಅನ್ನು 'ಬೆಸ್ಟ್ ಗ್ಲೋಬಲ್ ಮ್ಯೂಸಿಕ್' ಕ್ಯಾಟಗರಿಗೆ ನಾಮಿನೇಟ್ ಮಾಡಿದೆ. ಈ ಕಾರಣಕ್ಕೆ ಬೆಂಗಳೂರು ಮೂಲದ ಏಳು ಜನರ ತಂಡದ ಈ ಮ್ಯೂಸಿಕ್ ಬ್ಯಾಂಡ್ ಸಂಗೀತ ಕ್ಷೇತ್ರದಲ್ಲಿ ಹಲ್‌ಚಲ್ ಎಬ್ಬಿಸಿದೆ. ಹಾಗಿದ್ದರೆ, ಈ ಬ್ಯಾಂಡ್ ಹಿನ್ನೆಲೆಯೇನು? ಇವರ ಸಾಧನೆ ಏನು ಗೊತ್ತೇ?

Bengaluru based Band Agam new album Arrival of the Ethereal nominated for 2026 Grammy Awards

'ಅಗಂ' ಬ್ಯಾಂಡ್ ಉಗಮ ಹೇಗಾಯ್ತು?

2007ರಲ್ಲಿ ಒಂದೇ ಕಾಲೇಜಿನ ಬೇರೆ ಬ್ಯಾಚ್‌ನ ವಿದ್ಯಾರ್ಥಿಗಳು ಸೇರಿಕೊಂಡು ಮ್ಯೂಸಿಕ್ ಬ್ಯಾಂಡ್ ಅನ್ನು ಹುಟ್ಟಾಕಿದರು. ಗಣೇಶ್ ರಾಮ್ ನಾಗರಾಜನ್, ಹರೀಶ್ ಶಿವರಾಮಕೃಷ್ಣನ್, ಸ್ವಾಮಿನಾಥನ್ ಸೀತಾರಾಮನ್, ಶಿವಕುಮಾರ್ ನಾಗರಾಜನ್, ಪ್ರವೀಣ್ ಕುಮಾರ್ ತ್ಯಾಗರಾಜನ್ ಹಾಗೂ ವಿಘ್ನೇಶ್ ಲಕ್ಷ್ಮಿನಾರಾಯಣನ್ ಎಂಬುವವರು ಆರಂಭದಲ್ಲಿ ಹುಟ್ಟು ಹಾಕಿದ ಬ್ಯಾಂಡ್ 'ಅಗಂ'. ಇವರು ಸನ್ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಮ್ಯೂಸಿಕ್ ರಿಯಾಲಿಟಿ ಶೋನಿಂದ ಭಾಗವಹಿಸಿದ್ದರು. ಅಲ್ಲಿಂದ ಇವರ ಬ್ಯಾಂಡ್ ಉಗಮ ಆಯ್ತು.

ಸಂಗೀತದ ಶೈಲಿ

'ಅಗಂ' ಮ್ಯೂಸಿಕ್ ಬ್ಯಾಂಡ್‌ ಕರ್ಣಾಟಿಕ್ ಕ್ಲಾಸಿಕಲ್ ಮ್ಯೂಸಿಕ್ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಬ್ಯಾಂಡ್‌ ಕಂಪೋಸ್ ಮಾಡುವ ಪ್ರತಿಯೊಂದು ಹಾಡು ಹಾಗೂ ಗೀತ ರಚನೆ ಭಾರತೀಯ ರಾಗಗಳನ್ನು ಅವಲಂಭಿಸಿರುತ್ತೆ. ಭಾರತೀಯ ಸಂಗೀತ ಬೇರನ್ನು ಹಿಡಿದು ಮಾಡರ್ನ್ ಶೈಲಿಯಲ್ಲಿ ಕಂಪೋಸಿಷನ್ ಮಾಡುವುದು ಇವರ ಶೈಲಿ. ಇದರಲ್ಲಿ ರಾಕ್ ಎಲಿಮೆಂಟ್ಸ್, ಟೈಮ್ ಸಿಗ್ನೇಚರ್, ಮೆಟಲ್ ಗಿಟಾರ್‌ಗಳನ್ನ ಸೌಂಡ್ ಅನ್ನು ಕೇಳಬಹುದು. ಹೀಗಾಗಿ ಈ ಬ್ಯಾಂಡ್ ಕಂಪೋಸ್ ಮಾಡುವ ಶೈಲಿಯಲ್ಲಿ ಕ್ಲಾಸಿಕಲ್ ಹಾಗೂ ಮಾಡರ್ನ್ ಶೈಲಿಯ ಸಂಗೀತವಿದೆ.

ಸಾಧನೆ ಹಾಗೂ ಕೆಲಸಗಳೇನು?

'ಅಗಂ' ಬ್ಯಾಂಡ್ ಭಾರತದ ಜನಪ್ರಿಯ ಸಂಗೀತಗಾರರೊಂದಿಗೆ ಕೈ ಜೋಡಿಸಿದೆ. 'ಲಿವ್ ಅಗೈನ್' ಎಂಬ ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಬಹುಭಾಷಾ ಗಾಯಕಿ ಶ್ರೇಯಾ ಘೋಷಾ ಜೊತೆ ಕೆಲಸ ಮಾಡಿದೆ. ಕರ್ಣಾಟಿಕ್ ಸಂಗೀತ ಐಕಾನಿಕ್ ಫೇಸ್ ಅರುಣಾ ಸೈರಾಮ್ ಚೆನ್ನೈನಲ್ಲಿ ಹಮ್ಮಿಗೊಂಡಿದ ನಾಟ್ಯೋತ್ಸವ ಕಾನ್ಸರ್ಟ್‌ನಲ್ಲಿ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಕರ್ನಾಟಕ ಸಂಗೀತದ ಗಾಯಕರಾದ ರಂಜನಿ ಹಾಗೂ ಗಾಯತ್ರಿ ಅವರೊಂದಿಗೆ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಕೌಶಿಕಿ ಚಕ್ರವರ್ತಿಯ ಕಲಾ ಉತ್ಸವಂನಲ್ಲಿ ಭಾಗವಹಿಸಿದ್ದರು. ಹಾಗೇ 2017ರಲ್ಲಿ ತೆರೆಕಂಡಿದ್ದ 'ಬಿಜೊಯ್ ನಂಬಿಯಾರ್' ಸಿನಿಮಾದಲ್ಲಿ ಇವರೇ ಕಂಪೋಸ್ ಮಾಡಿದ "ದಿ ಬೋಟ್ ಸಾಂಗ್" ಸಿನಿಮಾದಲ್ಲಿ "ಒರು ವಂಚಿ ಪಟ್ಟು" ಆಗಿ ಪರಿವರ್ತಿಸಲಾಗಿತ್ತು.

Bengaluru based Band Agam new album Arrival of the Ethereal nominated for 2026 Grammy Awards

ಎ.ಆರ್. ರೆಹಮಾನ್ ಮೆಚ್ಚುಗೆ

'ಅಗಂ' ಬ್ಯಾಂಡ್ ಸಾಧನೆಗಳನ್ನು ಗುರುತಿಸಿ ಸಂಗೀತ ಲೋಕದ ದಿಗ್ಗಜ ಎ.ಆರ್‌.ರೆಹಮಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಸಂಗೀತದ ಶೈಲಿಯನ್ನು ಮೆಚ್ಚಿಕೊಂಡಿದ್ದು, ಈ ತಂಡವನ್ನು ಖುದ್ದಾಗಿ ಕರೆದು ಅವರೊಂದಿಗೆ ಸಂಗೀತದ ಚರ್ಚೆ ಮಾಡಿದ್ದಾಗಿ ತಂಡವೇ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ. ಅಗಂ ತಂಡವನ್ನು ಟ್ಯೂನ್‌ಗಳನ್ನು ಹೇಗೆ ಹಾಕುತ್ತೆ ಅನ್ನೋದನ್ನು ಸಂಕ್ಷಿಪ್ತವಾಗಿ ಕೇಳದೆ, ವಿವರವಾಗಿ ಕೇಳಿದ್ದಾಗಿ ಪ್ರತಿಕ್ರಿಯೆ ನೀಡಿದ್ದಲ್ಲದೆ, ಸಲಹೆಯನ್ನೂ ನೀಡಿದ್ದಾಗಿ ಈ ತಂಡ ಮಾಧ್ಯಮಗಳಿಗೆ ಹೇಳಿಕೊಂಡಿತ್ತು.

ಜಾಗತಿಕ ಮಟ್ಟಕ್ಕೆ ಕರ್ನಾಟಕ ಸಂಗೀತ

'ಅಗಂ' ಬ್ಯಾಂಡ್‌ನ ಸದಸ್ಯರು ಕರ್ನಾಟಕ ಸಂಗೀತವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಹಾದಿಯಲ್ಲಿದ್ದಾರೆ. ಶತಮಾನಗಳಿಂದ ಅಸ್ತಿತ್ವದಲ್ಲಿ ಇರುವ ಈ ಸಂಗೀತದ ಪ್ರಕಾರವನ್ನು ಜಾಗತಿಕ ಮಟ್ಟಕ್ಕೆ ತಮ್ಮದೇ ಶೈಲಿಯಲ್ಲಿ ಪರಿಚಯಿಸುವುದಕ್ಕೆ ನಿರ್ಧರಿಸಿದ್ದಾರೆ. ಈ ಪ್ರಯತ್ನದಲ್ಲಿ ಗ್ಯಾಮಿ ಪ್ರಶಸ್ತಿ ಅವರಿಗೆ ಮತ್ತಷ್ಟು ಉತ್ತೇಜನ ನೀಡಬಹುದು. 'ಬೆಸ್ಟ್ ಗ್ಲೋಬಲ್ ಮ್ಯೂಸಿಕ್' ವಿಭಾಗದಲ್ಲಿ ಅಗಂ ಕಂಪೋಸ್ ಮಾಡಿದ 'ಅರೈವಲ್ ಆಫ್ ದಿ ಎಥೆರಿಯಲ್' ಪ್ರಶಸ್ತಿ ಗೆದ್ದರೆ, ಜಾಗತಿಕ ಮಟ್ಟದಲ್ಲಿ ಈ ಬ್ಯಾಂಡ್ ಸದ್ದು ಮಾಡಲಿದೆ.

More from Filmibeat

English summary
Bengaluru based Band Agam new album Arrival of the Ethereal nominated for 2026 Grammy Awards for ‘Best global music performance’ category.
Read more about: bangalore grammy awards music
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X