ಸಿನಿಮಾ ಭವಿಷ್ಯ ನುಡಿಯುವ ಥಿಯೇಟರ್ ಊರ್ವಶಿ; 'ಕೆಜಿಎಫ್ 2', 'ಕಾಂತಾರ', 'ಕಬಾಲಿ' 'ಬಾಹುಬಲಿ' ಬರೆದ ದಾಖಲೆ ಏನು?

ಬೆಂಗಳೂರಿನಲ್ಲಿ ಏರಿಯಾಗೆ ಒಂದೊಂದು ಚಿತ್ರಮಂದಿರ ಇದ್ದ ಕಾಲವಿತ್ತು. ಇಲ್ಲಿನ ಕೆಜಿ ರಸ್ತೆಯಲ್ಲಿ ಸಾಲು ಸಾಲು ಚಿತ್ರಮಂದಿರಗಳು ಎದ್ದು ನಿಂತಿದ್ದವು. ಆದ್ರೀಗ ಒಂದೊಂದೇ ಕಣ್ಮರೆಯಾಗುತ್ತಿದೆ. ಅದು ಬೇರೆ ಮಾತು. ಆದರೆ, ಇನ್ನೂ ಕೆಲವು ಥಿಯೇಟರ್‌ಗಳು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿವೆ. ಇಲ್ಲಿವರೆ ಒಂದೊಂದು ಚಿತ್ರಮಂದಿರಕ್ಕೂ ಒಂದೊಂದು ಹಿಸ್ಟರಿ ಇದೆ. ಅಂತಹದ್ದೊಂದು ಐಕಾನಿಕ್ ಥಿಯೇಟರ್ 'ಊರ್ವಶಿ'.

ಬೆಂಗಳೂರಿನ ಲಾಲ್ ಬಾಗ್ ಸಮೀಪ ಇರುವ ಈ ಚಿತ್ರಮಂದಿರ ಸೂಪರ್‌ಸ್ಟಾರ್‌ಗಳ ಫೇವರಿಟ್. ಕನ್ನಡ, ತೆಲುಗು, ತಮಿಳು ಸೂಪರ್‌ಸ್ಟಾರ್‌ಗಳ ಸಿನಿಮಾಗಳು ಇಲ್ಲಿ ಒಳ್ಳೊಳ್ಳೆ ಕಲೆಕ್ಷನ್ ಮಾಡುತ್ತವೆ. ಈ ಚಿತ್ರಮಂದಿರ ಕೆಲವು ದಾಖಲೆಗಳನ್ನು ಬರೆದಿದೆ. ಇಂದಿಗೂ ಊರ್ವಶಿ ಚಿತ್ರಮಂದಿರದ ಬಗ್ಗೆ ಸಿನಿಮಾ ಮಂದಿಯಲ್ಲಿ ಒಂದು ನಂಬಿಕೆ ಇದೆ. ಈ ಥಿಯೇಟರ್‌ನಲ್ಲೊ ಅಡ್ವಾನ್ಸ್ ಬುಕಿಂಗ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದರೆ, ಬೇರೆ ಎಲ್ಲಾ ಕಡೆಗೂ ಅದ್ಭುತ ಓಪನಿಂಗ್ ಸಿಗುತ್ತೆ.

Bengaluru famous iconic theaters Urvashi digital cinema history and records

ಇದು ಕೇವಲ ನಂಬಿಕೆ ಅಷ್ಟೇ ಅಲ್ಲ. ಈ ಹಿಂದೆ ತೆರೆಕಂಡಿರುವ ಸಿನಿಮಾಗಳ ಟಿಕೆಟ್‌ಗಳನ್ನು ದಾಖಲೆ ಲೆಕ್ಕದಲ್ಲಿ ಮಾರಾಟ ಮಾಡಿದೆ. ಹೀಗಾಗಿ ಊರ್ವಶಿ ಥಿಯೇಟರ್‌ಗೆ ಅದರದ್ದೇ ಆದ ಒಂದು ಇತಿಹಾಸವಿದೆ. ಇತ್ತೀಚೆಗೆ ತೆರೆಕಂಡ ಅಲ್ಲು ಅರ್ಜುನ್ 'ಪುಷ್ಪ 2' ಕೂಡ ಅಷ್ಟೇ ಭರ್ಜರಿ ಕಲೆಕ್ಷನ್ ಮಾಡಿದೆ. ಹಾಗಿದ್ದರೆ, ಊರ್ವಶಿಯಲ್ಲಿ ತೆರೆಕಂಡ ಯಾವ್ಯಾವ ಸಿನಿಮಾ ಏನೆಲ್ಲ ದಾಖಲೆ ಬರೆದಿದೆ? ಥಿಯೇಟರ್‌ ಹೈಲೈಟ್‌ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಸೌತ್ ಬೆಂಗಳೂರಿಗರ ಫೇವರಿಟ್

ಸೌತ್ ಬೆಂಗಳೂರಿನಲ್ಲಿ ದೊಡ್ಡ ಥಿಯೇಟರ್ ಇದೆ. ಸುಮಾರು 1100 ಸೀಟಿಂಗ್ ಕ್ಯಾಪಾಸಿಟಿ ಇರುವ ಚಿತ್ರಮಂದಿರವಿದು. ಇದು ಜಯನಗರ, ಬಸವನಗುಡಿ, ಶಾಂತಿನಗರ ಸುತ್ತಮುತ್ತವಿರುವ ಜನರಿಗೆ ಸಮೀಪದ ಚಿತ್ರಮಂದಿರ. ಸಿಂಗಲ್‌ ಸ್ಕ್ರೀನ್ ಆಗಿದ್ದರೂ ಇಲ್ಲಿ ಸಿಗುವ ಥಿಯೇಟರ್ ಎಕ್ಸ್‌ಪ್ರೀರಿಯನ್ಸ್ ಬೇರೆ. ಅಲ್ಲದೆ ಎಲ್ಲಾ ಭಾಷೆಯ ಸಿನಿಮಾಗಳೂ ಇಲ್ಲಿ ಪ್ರದರ್ಶನ ಆಗುತ್ತವೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸೂಪರ್‌ಸ್ಟಾರ್‌ಗಳು ಒಳ್ಳೆಯ ಬ್ಯುಸಿನೆಸ್ ಮಾಡುತ್ತವೆ.

Bengaluru famous iconic theaters Urvashi digital cinema history and records

ಊರ್ವಶಿ ಬರೆದ ದಾಖಲೆಗಳೇನು?

ಊರ್ವಶಿ ಚಿತ್ರಮಂದಿರ ಅಡ್ವಾನ್ಸ್ ಬುಕಿಂಗ್‌ನಲ್ಲಿ ಕೆಲವು ದಾಖಲೆಗಳನ್ನು ಬರೆದಿದೆ. 'ಕೆಜಿಎಫ್ 2'ನಿಂದ ಹಿಡಿದು 'ಕಾಂತಾರ', 'ಕಬಾಲಿ', 'ಜೈಲರ್', 'ಬಾಹುಬಲಿ 2' ಹೀಗೆ ಹಲವು ಸಿನಿಮಾಗಳು ಟಿಕೆಟ್ ಬುಕಿಂಗ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಬುಕ್ ಆಗಿವೆ. ಸೂಪರ್‌ಸ್ಟಾರ್ ರಜನಿಕಾಂತ್ ಅಂತಹ ಸಿನಿಮಾ ಬುಕಿಂಗ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಹೌಸ್‌ಫುಲ್ ಆದ ಇತಿಹಾಸವಿದೆ. ಊರ್ವಶಿ ಬರೆದ ದಾಖಲುಗಳು ಹೀಗಿವೆ.

'ಕೆಜಿಎಫ್ 2' - ಒಂದು ಗಂಟೆಯಲ್ಲಿ 13 ಶೋ ಹೌಸ್‌ಫುಲ್
'ಜೈಲರ್' - ಎರಡು ಗಂಟೆಯಲ್ಲಿ 7 ಶೋ ಹೌಸ್‌ಫುಲ್
'ಬಾಹುಬಲಿ 2' - ಒಂದು ಗಂಟೆಯಲ್ಲಿ 6 ಶೋ ಹೌಸ್‌ಫುಲ್
'ಕಬಾಲಿ' - 2 ನಿಮಿಷದಲ್ಲಿ ಮೊದಲ ಶೋ ಹೌಸ್‌ಫುಲ್
'ಪುಷ್ಪ 2 - 2 ಗಂಟೆಯಗಳಲ್ಲಿ 5.5 ಸಾವಿರ ಟಿಕೆಟ್ ಮಾರಾಟ ಆಗಿತ್ತು.

'ಕೆಜಿಎಫ್ 2' ಒಂದು ವಾರದಲ್ಲಿ 1 ಕೋಟಿ ಕಲೆಕ್ಷನ್

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದ ಸಿನಿಮಾ 'ಕೆಜಿಎಫ್ 2' ಊರ್ವಶಿಯಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಏಳು ದಿನಗಳಲ್ಲಿ ಈ ಚಿತ್ರಮಂದಿರಲ್ಲಿ 1 ಕೋಟಿ 10 ಲಕ್ಷಕ್ಕೂ ಅಧಿಕ ಗಳಿಕೆ ಕಂಡಿತ್ತು. ಸಿನಿಮಾ ತೆರೆಕಂಡ ಮೊದಲ ದಿನ 7 ಶೋ ಪ್ರದರ್ಶನ ಕಂಡಿತ್ತು. ಅದರಿಂದ ಸುಮಾರು 36.57 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು. ಹಾಗೇ ನಂತರದ ನಾಲ್ಕು ದಿನ ಬಹುತೇಕ ಎಲ್ಲಾ ಶೋಗಳು ತುಂಬಿದ್ದವು. ಈ ನಾಲ್ಕು ದಿನ ಸರಾಸರಿ 14 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು.

'ಸೌಂಡ್, ಲೈಟ್ಸ್, ಸ್ಕ್ರೀನ್'

ಊರ್ವಶಿ ಚಿತ್ರಮಂದಿರದಲ್ಲಿ ಅಡ್ವಾನ್ಸ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಸೌಂಡ್‌ಗೆ ಮೇಯರ್ ಅನ್ನುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಭಾರತದಲ್ಲಿ ಎರಡೇ ಎರಡು ಚಿತ್ರಮಂದಿರಗಳಲ್ಲಿ ಈ ತಂತ್ರಜ್ಞಾನವಿದೆ ಎಂದು ಹೇಳಲಾಗುತ್ತಿದೆ. ಪಿಕ್ಚರ್ ಕ್ಲಾರಿಟಿ ಕೊಡುವುದಕ್ಕೆ ಲೈಟ್ಸ್ ಅಳವಡಿಕೆ ಮಾಡಲಾಗಿದೆ. 63/27 ಅಷ್ಟು ದೊಡ್ಡದಾದ ಸ್ಕ್ರೀನ್ ಇದೆ. ಹೀಗಾಗಿ ಜನರಿಗೆ ಒಳ್ಳೆಯ ಎಕ್ಸ್‌ಪ್ರೀರಿಯನ್ ಸಿಗುತ್ತಿದೆ.

'ಪುಷ್ಪ 2'ಗೆ ರೆಸ್ಪಾನ್ಸ್ ಹೇಗಿದೆ?

ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾ ಈ ಚಿತ್ರಮಂದಿರದಲ್ಲಿ ರನ್ನಿಂಗ್ ಇದೆ. ಇಂದಿಗೂ ಸೇರಿ ಸುಮಾರು 12 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಸೇಲ್ ಆಗಿವೆ. ಪೇಯ್ಡ್‌ ಪ್ರೀಮಿಯರ್‌ಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

More from Filmibeat

English summary
Iconic Theaters: Bengaluru famous iconic Urvashi digital cinema history and records
Read more about: theater bengaluru pushpa 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X