BIFFES 2026: ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇಂದು (ಫೆ.3) ನೋಡಬಹುದಾದ 10 ಅತ್ಯುತ್ತಮ ಸಿನಿಮಾಗಳಿವು

ಬೆಂಗಳೂರಿನಲ್ಲಿ ಸಿನಿಮಾ ಹಬ್ಬ ನಡೆಯುತ್ತಿದೆ. ಪ್ರತಿ ವರ್ಷದಂತೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ ಆಗೊಂಡು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ದೇಶ-ವಿದೇಶದಿಂದ ಸುಮಾರು 250ಕ್ಕೂ ಅಧಿಕ ಸಿನಿಮಾಗಳು ಈ ಚಿತ್ರೋತ್ಸವದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿವೆ. ಚಿತ್ರರಂಗದ ಗಣ್ಯರು ಸಿನಿಮಾ ಆಸಕ್ತರಿಗೆ ಸಲಹೆ ಸೂಚನೆಗಳನ್ನು ನೀಡುವ ಕಾರ್ಯಗಾರ ಕೂಡ ನಡೆಯುತ್ತಿದೆ.

ಬೆಂಗಳೂರಿನ ಲುಲು ಮಾಲ್‌ನಲ್ಲಿ ಫೆಬ್ರವರಿ 6ರವರೆಗೂ ಪ್ರತಿದಿನ ಸಿನಿಮಾ ಪ್ರದರ್ಶನ ನಡೆಯುತ್ತವೆ. ಎಂಟು ರೆಗ್ಯೂಲರ್ ಸ್ಕ್ರೀನ್ ಹಾಗೂ ಮೂರು ವಿಐಪಿ ಸಿನಿಮಾಗಳಲ್ಲಿ ಸಿನಿಮಾಗಳನ್ನು ನೋಡಬಹುದಾಗಿದೆ. ಇನ್ನು ಚಾಮರಾಜಪೇಟೆಯಲ್ಲಿರುವ ಡಾ.ರಾಜ್‌ಕುಮಾರ್ ಭವನ ಹಾಗೂ ಸುಚಿತ್ರ ಫಿಲ್ಮ್ಸ್ ಅಂಡ್ ಕಲ್ಚರ್ಲ್ ಸೊಸೈಟಿಯಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.

Bengaluru International Film Festival recommended 10 movies can watch on Feb 3

ಜನವರಿ 29ರಿಂದ ಆರಂಭ ಆಗಿರುವ 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಈಗಾಗಲೇ ನೂರೆಂಟು ಸಿನಿಮಾಗಳು ಪ್ರದರ್ಶನ ಕಂಡಿವೆ. ಇಂದು (ಫೆಬ್ರವರಿ 3) ಕೂಡ 35ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಅವುಗಳಲ್ಲಿ ನೋಡುಬಹುದಾದ 10 ಅತ್ಯುತ್ತಮ ಸಿನಿಮಾಗಳ ಲಿಸ್ಟ್ ಇಲ್ಲಿದೆ.

1. ಡೆಡ್ ಡಾಗ್ - ಲೆಬನಾನ್/ ಫ್ರಾನ್ಸ್
ಸಮಯ: ಮಧ್ಯಾಹ್ನ 3:10, ಸ್ಕ್ರೀನ್ 1
ಮಾಹಿತಿ: ಡೆಡ್ ಡಾಗ್ ಸಿನಿಮಾವನ್ನು ಸಾರಾ ಫ್ರಾನ್ಸಿಸ್ ನಿರ್ದೇಶನ ಮಾಡಿದ್ದಾರೆ. 2025ರಲ್ಲಿ ತೆರೆಕಂಡಿದ್ದ ಅರೇಬಿಕ್ ಸಿನಿಮಾ ಸಮಕಾಲೀನ ಸಂಬಂಧಗಳ ಸಂಕೀರ್ಣತೆಯನ್ನು ತೆರೆದಿಡುತ್ತಿದೆ. ಸುಮಾರು 92 ನಿಮಿಷಗಳ ಅವಧಿಯ ಈ ಸಿನಿಮಾ ಅಂತರಾಷ್ಟ್ರೀಯ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿದೆ.

2. ಆ್ಯಶಸ್ ಅಂಡ್ ಡೈಮಂಡ್ಸ್ - ಪೋಲೆಂಡ್
ಸಮಯ: ಬೆಳಗ್ಗೆ 9:50, ವಿಐಪಿ ಸ್ಕ್ರೀನ್ 3
ಮಾಹಿತಿ: 1958ರಲ್ಲಿ ತೆರೆಕಂಡ ಪೋಲಿಷ್ ಭಾಷೆಯ ಸಿನಿಮಾ. ಆಂಡ್ರೆಜ್ ವಾಜ್ದಾ ನಿರ್ದೇಶಿಸಿದ ಈ ಸಿನಿಮಾ ಯುದ್ಧದ ನಂತರದ ಪರಿಸ್ಥಿತಿಯನ್ನು ತೆರೆಮೇಲೆ ತಂದಿದೆ. ಇದು ವಿಶ್ವದ ಅತ್ಯಂತ ಶ್ರೇಷ್ಠ ಸಿನಿಮಾಗಳಲ್ಲಿ ಒಂದಾಗಿದೆ.

Bengaluru International Film Festival recommended 10 movies can watch on Feb 3

3. ದ ಪೋರ್ಚುಗೀಸ್ ಹೌಸ್ - ಸ್ಪೇನ್
ಸಮಯ: ಬೆಳಗ್ಗೆ 10:10, ಸ್ಕ್ರೀನ್ 2
ಮಾಹಿತಿ: ಅವೆಲಿನಾ ಪ್ರಾಟ್ ನಿರ್ದೇಶನದ ಈ ಸ್ಪ್ಯಾನಿಷ್ ಚಿತ್ರವು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಬಿಂಬಿಸಿದೆ. ಸುಮಾರು 114 ನಿಮಿಷಗಳ ಈ ಭಾವನಾತ್ಮಕ ಪ್ರಯಾಣ ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತೆ.

4. ಮದರ್ ಟಂಗ್ - ಚೀನಾ
ಸಮಯ: ಮಧ್ಯಾಹ್ನ 12:00, ಸ್ಕ್ರೀನ್ 3
ಮಾಹಿತಿ: ಮದರ್ ಟಂಗ್ ಚೀನಾ ಭಾಷೆಯ ಸಿನಿಮಾ. ಜಾಂಗ್ ಲು ನಿರ್ದೇಶನದ ಈ ಸಿನಿಮಾ ಭಾಷೆ ಹಾಗೂ ಸಂಸ್ಕೃತಿಯ ನಡುವಿನ ಕೊಂಡಿ ಮಹತ್ವವನ್ನು ವಿವರಿಸುತ್ತದೆ. ಸುಮಾರು 122 ನಿಮಿಷಗಳಷ್ಟು ಉದ್ದದ ಈ ಮ್ಯಾಂಡರಿನ್ ಭಾಷೆಯ ಚಿತ್ರ, ಸಿನಿಮಾ ಪ್ರೇಮಿಗಳಿಗೆ ಉತ್ತಮ ಆಯ್ಕೆ.

5. ದ ನೇಚರ್ ಆಫ್ ಇನ್ವಿಸಿಬಲ್ ಥಿಂಗ್ಸ್- ಬ್ರೇಜಿಲ್
ಸಮಯ: ಸಂಜೆ 6:00, ಸುಚಿತ್ರಾ ಫಿಲ್ಮ್ ಸೊಸೈಟಿ
ಮಾಹಿತಿ: ರಾಫೆಲಾ ಕ್ಯಾಮೆಲೊ ನಿರ್ದೇಶನದ ಈ 2025ರ ಪೋರ್ಚುಗೀಸ್ ಸಿನಿಮಾ ವಿಭಿನ್ನ ಕಥಾವಸ್ತುವನ್ನು ಹೊಂದಿದೆ. ಕಲಾತ್ಮಕ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಇಷ್ಟ ಆಗುತ್ತೆ. ಈ ಸಿನಿಮಾ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಪ್ರದರ್ಶನವಾಗುತ್ತಿದೆ.

6. ಚಾಪಿನ್, ಎ ಸೋನಾಟಾ ಇನ್ ಪ್ಯಾರಿಸ್ - ಪೋಲೆಂಡ್
ಸಮಯ: ಬೆಳಗ್ಗೆ 10:10, ಸ್ಕ್ರೀನ್ 4
ಮಾಹಿತಿ: ಇದು ಫೆಬ್ರವರಿ 3ರಂದು ನೋಡಬಹುದಾದ ಮತ್ತೊಂದು ಪೋಲಿಷ್ ಸಿನಿಮಾ. ಮೈಕಲ್ ಕ್ವಿನ್ಸಿನ್ಸ್ಕಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸಿನಿಮಾ ಸಂಗೀತ ಪ್ರೇಮಿಗಳಿಗೆ ಇಷ್ಟವಾಗಲಿದೆ. ಇದು 133 ನಿಮಿಷಗಳ ಸುದೀರ್ಘ ಕಥಾಹಂದರವನ್ನು ಹೊಂದಿದೆ.

7. ಭವನಿ ಭವಾಯಿ - ಗುಜರಾತಿ
ಸಮಯ: ರಾತ್ರಿ 8:10, ವಿಐಪಿ ಸ್ಕ್ರೀನ್ 3
ಮಾಹಿತಿ: ಜನಪ್ರಿಯ ನಿರ್ದೇಶಕ ಕೇತನ್ ಮೆಹ್ತಾ ಅವರ 1980ರ ಈ ಕ್ಲಾಸಿಕ್ ಸಿನಿಮಾವಿದು. ಇದು ಜಾನಪದ ಶೈಲಿಯಲ್ಲಿದೆ. ಜಾತಿ ಪದ್ಧತಿಯ ವಿಡಂಬನೆ ಮಾಡುವ ಈ ಸಿನಿಮಾ ಭಾರತೀಯ ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು.

8. ವಾಸ್ತುಹಾರ - ಮಲಯಾಳಂ
ಸಮಯ: ರಾತ್ರಿ 8:30, ವಿಐಪಿ ಸ್ಕ್ರೀನ್ 2
ಮಾಹಿತಿ: ಜಿ. ಅರವಿಂದನ್ ನಿರ್ದೇಶನದ ಈ 1991ರ ಸಿನಿಮಾ ಬಂಗಾಳದ ವಿಭಜನೆಯ ಸಂದರ್ಭದ ನಿರಾಶ್ರಿತರ ಕಥೆಯನ್ನು ಹೇಳುತ್ತದೆ. ಇದು ಬಹಳ ಗಂಭೀರವಾದ ಮತ್ತು ಅರ್ಥಪೂರ್ಣವಾದ ಸಿನಿಮಾ ಎನಿಸಿಕೊಂಡಿದೆ.

9. ಎ ಪೋಯೆಟ್ - ಕೊಲಂಬಿಯಾ/ ಸ್ಪೇನ್
ಸಮಯ: ರಾತ್ರಿ 8:00, ಸ್ಕ್ರೀನ್ 5
ಮಾಹಿತಿ: ಸಿಮೋನ್ ಮೆಸಾ ಸೊಟೊ ನಿರ್ದೇಶನದ ಈ ಸ್ಪ್ಯಾನಿಷ್ ಸಿನಿಮಾ ಕವಿ ಮತ್ತು ಅವನ ಬದುಕಿನ ಸುತ್ತ ಹೆಣೆಯಾಗಿರುವ ಕಥೆ.

10. ಎ ಪ್ರೆಗ್ನೆಂಟ್ ವಿಡೋ - ಮಲಯಾಳಂ
ಸಮಯ: ಮಧ್ಯಾಹ್ನ 3:10, ಸ್ಕ್ರೀನ್ 2
ಮಾಹಿತಿ: ಇದೊಂದು ಮಲಯಾಳಂ ಸಿನಿಮಾ. ಉಣ್ಣಿ ಕೆ.ಆರ್.ನಿರ್ದೇಶನದ ಈ ಹೊಸ ಸಿನಿಮಾ ಕೇರಳದ ಸಮಕಾಲೀನ ಸಾಮಾಜಿಕ ಚಿತ್ರಣವನ್ನು ನೀಡಲಿದೆ. 125 ನಿಮಿಷಗಳ ಈ ಸಿನಿಮಾ ನೋಡುಗರನ್ನು ಗಂಭೀರ ಚರ್ಚೆಗೆ ಎಡೆ ಮಾಡಿಕೊಡುತ್ತೆ.

More from Filmibeat

English summary
Bengaluru International Film Festival recommended 10 movies can watch on Feb 3.
Read more about: biffes film festival movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X