ಬಣ್ಣದ ಹಬ್ಬ ಹೋಳಿಗೆ ರೆಡಿಯಾದ ಬೆಂಗಳೂರು; ಎಲ್ಲೆಲ್ಲಿ ನಡೀತಿದೆ ಬಣ್ಣದೋಕುಳಿ?
ಪ್ರತಿ ವರ್ಷ ಬೆಂಗಳೂರಿನಲ್ಲಿ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಬಾರಿ ಕೂಡ ಬೆಂಗಳೂರು ಬಣ್ಣದ ಹಬ್ಬಕ್ಕೆ ಸಜ್ಜಾಗುತ್ತಿದೆ. ಇಲ್ಲಿ ಹೋಳಿ ಹಬ್ಬ ಯುವಕ ಪಾಲಿಗೆ ಎಂಜಾಯ್ಮೆಂಟ್. ಕೆಲವರಿಗೆ ಮೋಜು-ಮಸ್ತಿ. ಮತ್ತೆ ಕೆಲವರಿಗೆ ಸಂಭ್ರಮ. ಹೀಗೆ ಹೋಳಿ ಹಬ್ಬವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತೆ. ಬೃಹತ್ ಸಂಗೀತ ಉತ್ಸವಗಳಿಂದ ಹಿಡಿದು ಆಕರ್ಷಕ ಪಾರ್ಟಿಗಳವರೆಗೆ ಈ ಹಬ್ಬದಲ್ಲಿ ಸಂಭ್ರಮಿಸಲಾಗುತ್ತದೆ.
ಬೆಂಗಳೂರಿನ ವಿವಿದೆಡೆಗಳಲ್ಲಿ ಹೋಳಿ ಹಬ್ಬಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಸಂಗೀತ ಕಾರ್ಯಕ್ರಮಗಳಿಂದ ಅದ್ಧೂರಿ ಪಾರ್ಟಿಗಳು ನಡೆಯುತ್ತವೆ. ಈ ವರ್ಷ ಕೂಡ ಯುವ ಸಮುದಾಯಗಳಿಗಾಗಿ ಬೆಂಗಳೂರಿನ ಹಲವೆಡೆ ಇಮೆಂಟ್‌ಗಳು ನಡೆಯುತ್ತಿವೆ. ಎಲ್ಲೆಲ್ಲಿ ಯಾವ್ಯಾವ ಇವೆಂಟ್ ನಡೆಯುತ್ತಿದೆ ಅನ್ನೋದನ್ನು ಡಿಟೈಲ್ಸ್ ಇಲ್ಲಿದೆ. ಬೆಂಗಳೂರಿನ ಪ್ರಮುಖ ಹೋಳಿ ಇವೆಂಟ್‌ಗಳ ಲಿಸ್ಟ್ ಇಲ್ಲಿದೆ.

1. ಸನ್‌ಬರ್ನ್ ಹೋಳಿ- KSHMR - ಬೆಂಗಳೂರು
ಈ ವರ್ಷ ಸನ್ ಬರ್ನ್ ಫೆಸ್ಟಿವಲ್ ಮತ್ತೆ ಬೆಂಗಳೂರಿಗೆ ಆಗಮಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ EDM ಕಲಾವಿದ KSHMR ಮುಖ್ಯ ಅತಿಥಿಯಾಗಿ ಈ ಇವೆಂಟ್‌ನಲ್ಲಿ ಭಾಗವಹಿಸಲಿದ್ದಾರೆ. ಅದ್ಭುತ ಲೈಟಿಂಗ್ ಜೊತೆಗೆ ಎಲೆಕ್ಟ್ರಾನಿಕ್ ಮ್ಯೂಸಿಕ್ ಇರಲಿದ್ದು, ಈ ಹೋಳಿ ಹಬ್ಬವು ಮರೆಯಲಾಗದ ಅನುಭವ ನೀಡಲಿದೆ. ಈ ಇವೆಂಟ್ ಬೆಂಗಳೂರಿನ ಸನ್‌ಬರ್ನ್ ಯೂನಿಯನ್‌ನಲ್ಲಿ ಶುಕ್ರವಾರ, ಮಾರ್ಚ್ 6, 2026 ಸಂಜೆ 7:00 ಗಂಟೆಗೆ ಆರಂಭ ಆಗುತ್ತಿದೆ.
2. ಮಹಾ ಹೋಳಿ- ಭಾರತದ ಅತೀ ದೊಡ್ಡ ಹೋಳಿ ಸಂಭ್ರಮ
ಮಹಾ ಹೋಳಿ 2026 ಬೆಂಗಳೂರಿನ ಅತಿದೊಡ್ಡ ಹೋಳಿ ಹಬ್ಬವಾಗಿ ಗುರುತಿಸಲ್ಪಟ್ಟಿದೆ. ಈ ಇವೆಂಟ್‌ನಲ್ಲಿ ಲೈವ್ DJ ಮತ್ತು ಕಲಾವಿದರು ಪರ್ಫಾಮೆನ್ಸ್ ಇರುತ್ತೆ. ರೇನ್ ಡ್ಯಾನ್ಸ್ ಅರೆನಾ, ಫೋಮ್ ಜೋನ್‌ಗಳು, ವಿಶೇಷ VIP ಜೋನ್ ಹಾಗೂ ಪೂಲ್ ಲೌಂಜ್ ಇರಲಿವೆ. ಆರ್ಗ್ಯಾನಿಕ್ ಕಲರ್ ಜೊತೆಗೆ ಲೈವ್ ಆರ್ಟ್ ಹೊಸ ಅನುಭವ ನೀಡಲಿವೆ. ಈ ವೈವಿಧ್ಯಮಯ ಹೋಳಿ ಹಬ್ಬ ಬೆಂಗಳೂರಿನ ಭೋರುಕಾ ಟೆಕ್ನಾಲಜಿ ಪಾರ್ಕ್‌ನಲ್ಲಿ ನಡೆಯಲಿದೆ. ಮಾರ್ಚ್ 3 ರಿಂದ ಬುಧವಾರದಿಂದ ಮಾರ್ಚ್ 4, 2026 ರವರೆಗೆ ಬೆಳಗ್ಗೆ 11:00 ವರೆಗೆ ನಡೆಯಲಿದೆ.
3. ರಂಗ್ ವನ್ಷ್
ಬೆಂಗಳೂರಿನಲ್ಲಿ ನಡೆಯುತ್ತಿರುವ ಮತ್ತೊಂದು ಹೋಳಿ ಹಬ್ಬ ರಂಗ್ ವನ್ಸ್.. ಈ ಇವೆಂಟ್ ಸಂಪ್ರದಾಯ ಹಾಗೂ ಆಧುನಿಕತೆಯ ಮಿಶ್ರಣವಾಗಿದೆ. ಈ ಕಾರ್ಯಕ್ರಮದಲ್ಲಿ ನಟ ಹರ್ಷವರ್ಧನ್ ರಾಣೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ನಿವಲ್ ಮಾದರಿಯಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆ ಹಬ್ಬ ಆಚರಿಸಬೇಕು ಅಂತಿರೋರಿಗೆ ಇದು ಸೂಕ್ತ. ಇದು ಬೆಂಗಳೂರಿನ ಈಡನ್ ಇವೆಂಟ್ ಏರಿಯಾ, ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ನಡೆಯಲಿದೆ. ಬುಧವಾರ, ಮಾರ್ಚ್ 4, 2026 ಬೆಳಗ್ಗೆ 11:00 ಗಂಟೆಗೆ ಆರಂಭ ಆಗಲಿದೆ.
4. ವೈಟ್‌ಫಿಲ್ಡ್ ಬಿಗ್ಗೆಸ್ಟ್ ಹೋಳಿ ಫೆಸ್ಟಿವಲ್
ನಾಲ್ಕು ದಿನಗಳ ಕಾಲ ನಡೆಯುವ ಈ ಹೋಳಿ ಉತ್ಸವವು ಬೆಂಗಳೂರಿನ ದೀರ್ಘಾವಧಿ ನಡೆಯವ ಸಂಭ್ರಮ ಆಗಿದೆ. ಓಪನ್-ಏರ್ ಕಲರ್ ಗೇಮ್, ರೇನ್ ಡ್ಯಾನ್ಸ್ , DJ ದೋಲ್ ವಾದ್ಯ ಪ್ರದರ್ಶನ ಇರಲಿದೆ. ಬೆಂಗಳೂರಿನ ರಾಧಾ ಹೋಮ್‌ಟೆಲ್‌ನಲ್ಲಿ ನಡೆಯಲಿದೆ. ಭಾನುವಾರ, ಮಾರ್ಚ್ 1 ರಿಂದ ಬುಧವಾರ, ಮಾರ್ಚ್ 4, 2026 ರವರೆಗೆ ಬೆಳಗ್ಗೆ 11:30 ಗಂಟೆವರೆಗೆ ನಡೆಯಲಿದೆ.
5. ಗಬ್ಬರ್ ಹೋಳಿ
ಗಬ್ಬರ್ ಹೋಳಿಯಲ್ಲಿ ಲೈವ್ DJs, ಬಾಲಿವುಡ್ ಡ್ಯಾನ್ಸ್, EDM ಮತ್ತು ಪಂಜಾಬಿ ಬೀಟ್ಸ್, ಪೂಲ್ ಪಾರ್ಟಿ ಹಾಗೂ ರೇನ್ ಡ್ಯಾನ್ಸ್ ಜೋನ್ ಇರಲಿದೆ. ಐವಿ ರೋಸಾ ರೆಸಾರ್ಟ್, ಸರ್ಜಾಪುರದಲ್ಲಿ ಬುಧವಾರ, ಮಾರ್ಚ್ 4, 2026ರಿಂದ ಬೆಳಗ್ಗೆ 11:00 ಗಂಟೆವರೆಗೆ ಇರಲಿದೆ.
6. ವರ್ಣಂ ಬೈ ಲಿಯಾ
ಇದು ದಕ್ಷಿಣ ಭಾರತದ ಶೈಲಿಯಲ್ಲಿ ನಡೆಯುವ ಹೋಳಿ ಆಚರಣೆಯಾಗಿದೆ. ಪಕ್ಕ ದಕ್ಷಿಣ ಭಾರತದ ಶೈಲಿಯಲ್ಲಿ ಚೆಂಡೆ ಮೇಳ, ಡೊಳ್ಳು ಕುಣಿತ ಹೀಗೆ ವಿವಿಧ ಪ್ರಕಾರದ ಸಂಗೀತದೊಂದಿಗೆ ಸಂಭ್ರಮಿಸಲಾಗುತ್ತಿದೆ. ಅಲ್ಲದೆ ಡಿಜೆ ಬ್ಲ್ಯಾಕ್ ಅವರ ಪ್ರದರ್ಶನ ಇರಲಿದೆ. ಇದು ಲಾಗೋ ಪಾಮ್ಸ್ ರೆಸಾರ್ಟ್, ಬೆಂಗಳೂರಿನಲ್ಲಿ ಶನಿವಾರ, ಫೆಬ್ರವರಿ 28 ಮಧ್ಯಾಹ್ನ 1:00 ಗಂಟೆಗೆ ಆರಂಭ ಆಗುತ್ತಿದೆ.
7. ರಂಗ್ ಇ- ಬಹಾರ್ ವೈಟ್‌ಫೀಲ್ಡ್ ಪ್ರೀಮಿಯಂ ಹೋಳಿ
ಐಷಾರಾಮಿ ಹೋಳಿ ಆಚರಣೆ ಬಯಸುವವರಿಗಾಗಿ ವಿವಂತಾ ಬೈ ತಾಜ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾನುವಾರ, ಮಾರ್ಚ್ 1 ರಿಂದ ಬುಧವಾರ, ಮಾರ್ಚ್ 4, 2026 ರವರೆಗೆ ನಡೆಯಲಿದೆ.
8. ಭಾರತದ ಅತೀ ದೊಡ್ಡ ಹೋಳಿ- ಸನ್‌ಬರ್ನ್ ಯೂನಿಯನ್
ಸನ್‌ಬರ್ನ್ ಯೂನಿಯನ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಸಂಗೀತ ಪ್ರೇಮಿಗಳಿಗೆ ಈ ಇವೆಂಟ್ ಇಷ್ಟ ಆಗುತ್ತೆ. ಸನ್‌ಬರ್ನ್ ಯೂನಿಯನ್ ಬೆಂಗಳೂರಿನಲ್ಲಿ ಮಂಗಳವಾರ (ಮಾರ್ಚ್ 3) ರಿಂದ ಗುರುವಾರ (ಮಾರ್ಚ್ 5) ರವರೆಗೆ ನಡೆಯಲಿದೆ.
9. ಗಬ್ಬರ್ ಹೋಳಿ-ಪ್ಯಾಲೇಸ್ ಗ್ರೌಂಡ್ಸ್
ಬೆಂಗಳೂರಿನ ಐತಿಹಾಸಿಕ ಅರಮನೆ ಮೈದಾನದಲ್ಲಿ ಬೃಹತ್ ಹೋಳಿ ನಡೆಯಲಿದೆ. ಬೆಂಗಳೂರಿನ ಕಿಂಗ್ಸ್ ಕೋರ್ಟ್ ಪ್ಯಾಲೇಸ್ ಗ್ರೌಂಡ್‌ನಲ್ಲಿ ಬುಧವಾರ (ಮಾರ್ಚ್ 4) ಬೆಳಗ್ಗೆ 11:00 ಗಂಟೆಗೆ ಆರಂಭ ಆಗುತ್ತಿದೆ. ಈ ಎಲ್ಲಾ ಹೋಳಿ ಕಾರ್ಯಕ್ರಮಗಳಿಗೆ ಟಿಕೆಟ್ ಬುಕ್ ಮೈ ಶೋನಲ್ಲಿ ಸಿಗಲಿದೆ.


Click it and Unblock the Notifications











