ಬೆಂಗಳೂರು ರೇವ್ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾ ಡ್ರಗ್ಸ್ ವರದಿ ಬಹಿರಂಗ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಈ ಪಾರ್ಟಿಯಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದ ಬಗ್ಗೆ ವರದಿಯಾಗಿತ್ತು. ಇದರಲ್ಲಿ ತೆಲುಗು ಚಿತ್ರರಂಗದ ನಟಿಯರ ಹೆಸರು ಕೂಡ ಬೆಳಕಿಗೆ ಬಂದಿತ್ತು. ತೆಲುಗು ನಟಿ ಹೇಮಾ ಹಾಗೂ ಆಶಿ ರಾಯ್ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ವರದಿಯಾಗಿತ್ತು.
ತಮ್ಮ ಹೆಸರು ಬರುತ್ತಿದ್ದಂತೆ ತೆಲುಗು ನಟಿ ಹೇಮಾ ವಿಡಿಯೋ ಮಾಡಿ ರೇವ್ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದರು. ಅದೇ ಫಾರ್ಮ್ ಹೌಸ್‌ನಲ್ಲಿ ವಿಡಿಯೋ ಮಾಡಿ ಸುಳ್ಳಿನ ಮೇಲೆ ಸುಳ್ಳು ಹೇಳಿದ್ದರು. ನಟಿ ಹೇಮಾ ವಿಡಿಯೋ ರಿಲೀಸ್ ಮಾಡುತ್ತಿದ್ದಂತೆ ಬೆಂಗಳೂರು ಪೊಲೀಸರು ನಟಿ ಹೇಮಾ ರೇವ್ ಪಾರ್ಟಿಯಲ್ಲಿ ಭಾಗಿಯಾಗಿರುವುದನ್ನು ಕನ್ಫರ್ಮ್ ಮಾಡಿದ್ದರು.

ಸದ್ಯ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೆ ಮತ್ತಷ್ಟು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದವರನ್ನೆಲ್ಲ ವಿಚಾರಣೆಗೆ ಒಳಪಡಿಸಲಾಗಿತ್ತು. ಹಾಗೇ ಪಾರ್ಟಿ ಮಾಡಿದ್ದವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಈಗ ಹೊರಬಿದ್ದಿದ್ದೆ.
ರೇವ್ ಪಾರ್ಟಿಯಲ್ಲಿ ಸುಮಾರು 103 ಮಂದಿ ಭಾಗಿಯಾಗಿದ್ದು,ರಕ್ತದ ಮಾದರಿಯಲ್ಲಿ 86 ಮಂದಿ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ತೆಗೆದುಕೊಂಡಿರುವುದು ಧೃಡಪಟ್ಟಿದೆ. ಇದರಲ್ಲಿ ತೆಲುಗು ನಟಿ ಹೇಮಾ ಹಾಗೂ ಆಶಿ ರಾಯ್ ಇಬ್ಬರ ರಕ್ತ ಸ್ಯಾಂಪಲ್‌ನಲ್ಲಿ ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾಗಿದೆ. ಈ ಮೂಲಕ ತೆಲುಗು ನಟಿ ಹೇಮಾ ಸುಳ್ಳು ಹೇಳಿರುವುದು ಕನ್ಫರ್ಮ್ ಆಗಿದೆ.
ಇನ್ನೊಬ್ಬ ನಟಿ ಆಶಿ ರಾಯ್ ಕೂಡ ತಮ್ಮ ಹೆಸರು ಬರುತ್ತಿದ್ದಂತೆ ವಿಡಿಯೋ ರಿಲೀಸ್ ಮಾಡಿದ್ದರು. ಇದರಲ್ಲಿ "ಪಾರ್ಟಿ ಮಾಡುವ ಹವ್ಯಾಸ ಅನ್ನದ್ದಲ್ಲ. ಈ ಪಾರ್ಟಿಯಲ್ಲಿ ನಾನು ಭಾಗವಹಿಸಿದ್ದು ನಿಜ, ಆದರೆ, ಒಳಗೆ ಏನು ನಡೆಯುತ್ತಿತ್ತೋ ನನಗೆ ಗೊತ್ತಿಲ್ಲ." ಎಂದು ಹೇಳಿಕೊಂಡಿದ್ದರು. ಆದರೆ, ಈ ನಟಿ ಕೂಡ ಸುಳ್ಳು ಹೇಳಿರುವುದು ರಕ್ತದ ವರದಿ ಬಂದ್ಮೇಲೆ ಸಾಬೀತಾಗಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭಾನುವಾರ (ಮೇ 19) ಮಧ್ಯರಾತ್ರಿ ರೇವ್ ಪಾರ್ಟಿ ನಡೆದಿತ್ತು. ಈ ಸಂಬಂಧ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಈಗ ಅಧಿಕೃತವಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಸದ್ಯ ಸಿಸಿಬಿಯ ಆಂಡಿ ನಾರ್ಕೊಟಿಕ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಬರ್ತ್‌ಡೇ ಹೆಸರಿನಲ್ಲಿ ಈ ಪಾರ್ಟಿ ಶನಿವಾರ ಸಂಜೆ ಐದು ಗಂಟೆಯಿಂದಲೇ ಆರಂಭ ಆಗಿತ್ತು ಎಂದು ಹೇಳಲಾಗುತ್ತಿದೆ. ಈ ರೇವ್ ಪಾರ್ಟಿಯಲ್ಲಿ ಸುಮಾರು ಇನ್ನೂರೈವತ್ತು ಮಂದಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಶನಿವಾರ ಹಾಗೂ ಭಾನುವಾರ ಪ್ರತ್ಯೇಕವಾಗಿ ಪಾರ್ಟಿಯಲ್ಲಿ ಕೆಲವರು ಭಾಗಿಯಾಗಿದ್ದರು ಎನ್ನಲಾಗಿದೆ.


Click it and Unblock the Notifications











