»   » ಸ್ಟಾರ್ ನಿರೂಪಕರಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಸುದೀಪ್

ಸ್ಟಾರ್ ನಿರೂಪಕರಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಸುದೀಪ್

Posted By:
Subscribe to Filmibeat Kannada

ಕನ್ನಡ ಟಿವಿ ವಾಹಿನಿಯಲ್ಲಿ ಎರಡು ಪ್ರಮುಖ ರಿಯಾಲಿಟಿ ಶೋ ಆರಂಭವಾದ ನಂತರ 'ಬೆಸ್ಟ್ ಆಂಕರಿಂಗ್' ಯಾರು ಎನ್ನುವ ಪಶ್ನೆಗೆ ಹೆಚ್ಚಿನ ತೂಕ ಬಂದಿದೆ.

ಕನ್ನಡದ ಕೋಟ್ಯಾಧಿಪತಿ ಮತ್ತು ಬಿಗ್ ಬಾಸ್ ಕಾರ್ಯಕ್ರಮಗಳು ಟಿವಿ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸು ಟಿವಿ ಲೋಕದಲ್ಲಿ ದಂಗುಬಡಿಸುವಂತದ್ದು.

ಸೋಮವಾರದಿಂದ ಗುರುವಾರದ ವರೆಗೆ ಕೋಟ್ಯಾಧಿಪತಿ ಕಾರ್ಯಕ್ರಮ TRPಯಲ್ಲಿ ಮುನ್ನಡೆ ಸಾಧಿಸಿದ್ದರೆ, ವಾರಾಂತ್ಯದಲ್ಲಿ ಸುದೀಪ್ ಅರ್ಪಿಸುವ ವಾರದ ಕಥೆ ಕಿಚ್ಚನ ಜೊತೆ ಬಿಗ್ ಬಾಸ್ ಕಾರ್ಯಕ್ರಮ ಹೆಚ್ಚಿನ ಜನಪ್ರಿಯತೆ ಗಳಿಸಿತ್ತು. [ಬಿಗ್ ಬಾಸ್ 2ನೇ ಆವೃತ್ತಿಗೆ ಸುದೀಪ್ ಇಲ್ಲ]

ಆದರೆ ಕೆಲವಾರಗಳಿಂದ ವಾರದ ಎಲ್ಲಾ ದಿನ ಬಿಗ್ ಬಾಸ್ ರಿಯಾಲಿಟಿ ಶೋ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಈ ಎರಡು ಕಾರ್ಯಕ್ರಮ ಅತಿಯಾಗಿ ಜನಪ್ರಿಯಗೊಳ್ಳಲು ಇಬ್ಬರು ಕನ್ನಡದ ಸ್ಟಾರ್ ಹೀರೋಗಳು ನಿರೂಪಕರಾಗಿರುವುದರಿಂದ ಅಂದರೆ ಅದು ಅತಿಶಯೋಕ್ತಿಯಾಗುವುದಿಲ್ಲ.

ಹಾಗಾಗಿ ಒನ್ ಇಂಡಿಯಾ ಕನ್ನಡ "ಸ್ಟಾರ್ ನಿರೂಪಕರಲ್ಲಿ ಯಾರು ನಿಮಗೆ ಇಷ್ಟ" ಎನ್ನುವ poll question ಹಾಕಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡಾ ವ್ಯಕ್ತವಾಯಿತು. ಇದರಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತಾ, ನಮ್ಮ ಓದುಗರ ಯಾರನ್ನು ಈ ಸ್ಪರ್ಧೆಯಲ್ಲಿ ಗೆಲ್ಲಿಸಿದ್ದಾರೆ ನೋಡೋಣ ಬನ್ನಿ..

ಕಿಚ್ಚ ಸುದೀಪ್

ನಡೆಸಿಕೊಡುತ್ತಿರುವ/ದ್ದ ಟಿವಿ ಶೋ: ಬಿಗ್ ಬಾಸ್ ಕನ್ನಡ
ಅರ್ಧದಷ್ಟು ಮತವನ್ನು ಸುದೀಪ್ ತನ್ನದಾಗಿಸಿಕೊಂಡಿದ್ದಾರೆ. ಅಂದರೆ ಶೇ.48.9 ಪ್ರತಿಶತದೊಂದಿಗೆ 2978 ಮತಗಳನ್ನು ಪಡೆದು ಸುದೀಪ್ ಗೆದ್ದಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್

ನಡೆಸಿಕೊಡುತ್ತಿರುವ/ದ್ದ ಟಿವಿ ಶೋ: ಕನ್ನಡದ ಕೋಟ್ಯಾಧಿಪತಿ
ಸುದೀಪ್ ಗೆ ತುರುಸಿನ ಸ್ಪರ್ಧೆ ನೀಡಿದ ಪುನೀತ್ ಎರಡನೇ ಸ್ಥಾನದಲ್ಲಿದ್ದಾರೆ. ಶೇ. 37.6 ಪ್ರತಿಶತದೊಂದಿಗೆ 2290 ಮತಗಳನ್ನು ಪುನೀತ್ ಪಡೆದಿದ್ದಾರೆ.

ರಮೇಶ್ ಅರವಿಂದ್

ನಡೆಸಿಕೊಡುತ್ತಿರುವ/ದ್ದ ಟಿವಿ ಶೋ: ಪ್ರೀತಿಯಿಂದ ರಮೇಶ್, ರಾಜಾ ರಾಣಿ ರಮೇಶ್
ಮೂರನೇ ಸ್ಥಾನದಲ್ಲಿ ರಮೇಶ್ ಅರವಿಂದ್ ಇದ್ದಾರೆ. ಶೇ.7.5 ಪ್ರತಿಶತದೊಂದಿಗೆ 458 ಮತಗಳನ್ನು ರಮೇಶ್ ಪಡೆದಿದ್ದಾರೆ.

ಅಕುಲ್ ಬಾಲಾಜಿ

ನಡೆಸಿಕೊಡುತ್ತಿರುವ/ದ್ದ ಟಿವಿ ಶೋ: ಪ್ಯಾಟೆ ಮಂದಿ ಕಾಡಿಗೆ ಬಂದ್ರು, ಪ್ಯಾಟೆ ಹುಡ್ಗೀರ ಹಳ್ಳಿ ಲೈಫು, ಮನೆಮುಂದೆ ಮಹಾಲಕ್ಷ್ಮಿ, ಕುಣಿಯೋಣ ಬಾರಾ
ನಾಲ್ಕನೇ ಸ್ಥಾನದಲ್ಲಿ ಅಕುಲ್ ಬಾಲಾಜಿ. ಇವರು ಶೇ.6.1 ಪ್ರತಿಶತದೊಂದಿಗೆ 369 ಮತಗಳನ್ನು ಪಡೆದಿದ್ದಾರೆ.

ನವರಸನಾಯಕ ಜಗ್ಗೇಶ್

ನಡೆಸಿಕೊಡುತ್ತಿರುವ/ದ್ದ ಟಿವಿ ಶೋ: ಕೈಯಲ್ಲಿ ಕೋಟಿ ಹೇಳ್ಬಿಟ್ಟು ಹೊಡೀರಿ
ಜಗ್ಗೇಶ್ ಕನ್ನಡದ ಕೋಟ್ಯಾಧಿಪತಿ ಮೊದಲನೇ ಆವೃತ್ತಿ ನಡೆಯುತ್ತಿದ್ದ ಸಮಯದಲ್ಲಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೈಯಲ್ಲಿ ಕೋಟಿ ಹೇಳ್ಬಿಟ್ಟು ಹೊಡೀರಿ ರಿಯಾಲಿಟಿ ಶೋನ ನಿರೂಪಕರಾಗಿದ್ದರು.

ಡೈಲಾಗ್ ಕಿಂಗ್ ಸಾಯಿಕುಮಾರ್

ನಡೆಸಿಕೊಡುತ್ತಿರುವ/ದ್ದ ಟಿವಿ ಶೋ: ಡೀಲ್ ಆರ್ ನೋ ಡೀಲ್
ಡೈಲಾಗ್ ಕಿಂಗ್ ಸಾಯಿ ಕುಮಾರ್ ಡೀಲ್ ಆರ್ ನೋ ಡೀಲ್ ಅನ್ನೋ ಕಾರ್ಯಕ್ರಮದ ನಿರೂಪಕರಾಗಿದ್ದರು.

English summary
Oneindia Kannada conducted poll on who is the best anchoring from our readers. Here is the winners list. 
Please Wait while comments are loading...