5 ಮಂದಿ ಸ್ನೇಹಿತರ ಭಾವನಾತ್ಮಕ ಜರ್ನಿ 'ಸೋಲ್ ಆಫ್ ಹೊಂದಿಸಿ ಬರೆಯಿರಿ'!

ಇತ್ತೀಚೆಗೆ ಕನ್ನಡ ಸಿನಿಮಾಗಳ ಟೈಟಲ್‌ಗಳು ಪ್ರೇಕ್ಷಕರನ್ನು ಗಮನ ಸೆಳೆಯುತ್ತಿವೆ. ಇಂತಹ ಸಿನಿಮಾಗಳಲ್ಲೊಂದು 'ಹೊಂದಿಸಿ ಬರೆಯಿರಿ'. ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ಸಿನಿಮಾ ಪ್ರೇಕ್ಷಕರ ಹಾಡುಗಳ ಮೂಲಕವೇ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಬಿಡುಗಡೆಗೆ ಸನಿಹದಲ್ಲಿರುವಾಗಲೇ ಮತ್ತೊಂದು ಹಾಡನ್ನು ರಿಲೀಸ್ ಮಾಡಿದೆ.

'ಹೊಂದಿಸಿ ಬರೆಯಿಸಿ' ಸಿನಿಮಾ ಫೆಬ್ರವರಿ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹೀಗಾಗಿ ಚಿತ್ರತಂಡ ಪ್ರಮೋಷನಲ್ ಸಾಂಗ್ ಒಂದನ್ನು ರಿಲೀಸ್ ಮಾಡಿದೆ. ಹಾಗಂತ ಇದು ಕೇವಲ ಪ್ರಚಾರಕ್ಕಾಗಿ ರೆಡಿಯಾದ ಹಾಡಲ್ಲ. ಈ ಹಾಡಿನಲ್ಲಿ ಇಡೀ ಸಿನಿಮಾ ಜೀವವೇ ಅಡಗಿದೆ. ಅದುವೇ 'ಸೋಲ್ ಆಫ್ ಹೊಂದಿಸಿ ಬರೆಯಿರಿ'.

'ಸೋಲ್ ಆಫ್ ಹೊಂದಿಸಿ ಬರೆಯಿರಿ' ಸಾಂಗ್‌ಗೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯ ರಂಗರಾಜನ್ ಈ ಹಾಡನ್ನು ಹಾಡಿದ್ದಾರೆ. ಇಡೀ ಹಾಡು, ಇಡೀ ಸಿನಿಮಾದ ಆಶಯವನ್ನು ಪ್ರೇಕ್ಷಕರಿಗೆ ತಿಳಿಸುತ್ತಿದೆ. ಜೋ ಕೋಸ್ಟ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

Bhavana Rao, Praveen Tej, Naveen Shankar Movie Hondisi bareyiri Releasing Feb 10th

"ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ" ಎಂಬ ಎಳೆಯನ್ನೇ ಇಟ್ಟುಕೊಂಡು ಸಿನಿಮಾವನ್ನು ಹೆಣೆಯಲಾಗಿತ್ತು. ಅಂದ್ಹಾಗೆ ಈ ಸಿನಿಮಾ ಐದು ಜನ ಸ್ನೇಹಿತರ ಬದುಕಿನ ಭಾವನಾತ್ಮಕ ಜರ್ನಿ. ಈ ಸಿನಿಮಾದಲ್ಲಿ ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಪಾತ್ರಗಳ ಕಲರ್‌ಫುಲ್ ಜರ್ನಿ ಇದೆ.

Bhavana Rao, Praveen Tej, Naveen Shankar Movie Hondisi bareyiri Releasing Feb 10th

ರಾಮೇನಹಳ್ಳಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದು, ಸ್ನೇಹಿತರೊಡಗೂಡಿ ಈ ಸಿನಿಮಾವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಅಂದ್ಹಾಗೆ ಈ ಸಿನಿಮಾ ಎಂಟು ಹಾಡುಗಳಿವೆ. ಅವೆಲ್ಲವೂ ಸನ್ನಿವೇಶಕ್ಕೆ ತಕ್ಕಂತೆಯೇ ಇದೆ. ಈಗಾಗಲೇ ನಾಲ್ಕು ಹಾಡುಗಳು ರಿಲೀಸ್ ಆಗಿದ್ದು ಪ್ರೇಕ್ಷಕರ ಮನ ಸೆಳೆಯುಯತ್ತಿವೆ. ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ನಟಿಸಿದ್ದಾರೆ.

More from Filmibeat

English summary
Bhavana Rao, Praveen Tej, Naveen Shankar Movie Hondisi bareyiri Releasing Feb 10th, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X