Jolly Jolly Jack: 'ಭೀಮ' ಸಿನಿಮಾ ಆದ್ಮೇಲೆ ಜಾಲಿ ಜಾಲಿ.. ಕೈಯಲ್ಲಿ 10 ಸಿನಿಮಾ.. ಏರಿತು ಜಾಕ್ ಸಂಭಾವನೆ!

ಜಾಲಿ ಜಾಲಿ.. ಎಲ್ಲಾ ಜಾಲಿ.. ಒಂದಿಷ್ಟು ದಿನ ಈ ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದ್ದಕ್ಕಿದ್ದಂತೆ ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಯೊಂದು ಫೇಮಸ್ ಆಗಿತ್ತು. ಬಿಗ್ ಬಜೆಟ್ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಇವರ ಪಾತ್ರದ ಇಂಪ್ಯಾಕ್ಟ್ ಜೋರಾಗಿಯೇ ಇತ್ತು. ಅಲ್ಲಿಂದ ಇಲ್ಲಿವರೆಗೂ ಇವರ ವೃತ್ತಿ ಬದುಕು ಫುಲ್ ಜಾಲಿ ಜಾಲಿ ಆಗ್ಬಿಟ್ಟಿದೆ.

ಬೆಂಗಳೂರಿನ ಊರ್ವಶಿ ಚಿತ್ರಮಂದಿರದ ಹಿಂಭಾಗದ ಸ್ಲಂನಲ್ಲಿ ಬೆಳೆದಿರುವ ಈ ಪ್ರತಿಭೆ ಕನ್ನಡ ಚಿತ್ರರಂಗದ ಬ್ಯುಸಿ ನಟ. ಅಂದ್ಹಾಗೆ 'ಭೀಮ' ಸಿನಿಮಾದ ಬಳಿಕ ಜಾಲಿ ಜಾಲಿ ಜಾಕ್ ಅಂತಲೇ ಜನಪ್ರಿಯವಾಗಿದ್ದು, ಈಗ ಇವರ ಕೈಯಲ್ಲಿ ಬರೋಬ್ಬರಿ ಹತ್ತು ಸಿನಿಮಾಗಳಿವೆ. ಸುಮಾರು 8 ಸಿನಿಮಾಗಳು ಈಗಾಗಲೇ ಕೊನೆಯ ಹಂತದಲ್ಲಿ ಇವೆ.

Bheema Movie fame Jolly Jolly Jack has 10 movies in his hand and hiked remuneration

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ ನಟಿಸಿದ 'ಟಗರು' ಸಿನಿಮಾದಿಂದ ಇವರ ವೃತ್ತಿ ಬದುಕು ಆರಂಭ ಆಗಿತ್ತು. ಬಳಿಕ 'ಸಲಗ', 'ಭೀಮ', 'ಎಕ್ಕ' ಹಾಗೂ 'ಯುಐ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಐದು ಸಿನಿಮಾಗಳ ಬಳಿಕ ಜಾಕ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೇ ವೇಳೆ ಸಂಭಾವನೆ ಕೂಡ ಏರಿಕೆಯಾಗಿದೆ. ಇಂಡಸ್ಟ್ರಿ ಮೂಲಗಳ ಪ್ರಕಾರ ಜಾಕ್ ಸಂಭಾವನೆ ಎಷ್ಟು ಏರಿಕೆಯಾಗಿದೆ ಗೊತ್ತೇ?

ಜಾಲಿ ಜಾಲಿ ಜಾಕ್ ಹಿನ್ನೆಲೆ ಏನು?

ಜಾಕ್ ಸಿನಿಮಾಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಬಿಲ್ಡರ್ ಆಗಿ ಗುರುತಿಸಿಕೊಂಡಿದ್ದರು. ಇಷ್ಟೇ ಅಲ್ಲದೆ, ರಾಜಕೀಯದಲ್ಲಿಯೂ ಇದ್ದಾರೆ. ಚಿಕ್ಕಪೇಟೆ ಕ್ಷೇತ್ರದ ಮಾಜಿ ಶಾಸಕ ದಿವಂಗತ ಆರ್‌.ವಿ. ದೇವರಾಜ್ ಅವರೊಂದಿಗೆ ಒಡನಾಟವಿತ್ತು. 'ಟಗರು' ಬಳಿಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಜಾಕ್ ಈಗ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಆದರೂ, ಅವರ ಹಿಂದಿನ ವೃತ್ತಿಯನ್ನು ಬಿಟ್ಟಿಲ್ಲ.

ಜಾಕ್ ಕೈಯಲ್ಲಿ 10 ಸಿನಿಮಾಗಳು

ಜಾಲಿ ಜಾಲಿ ಜಾಕ್ ಕನ್ನಡ ಚಿತ್ರರಂಗ ಬಹುಬೇಡಿಕೆಯ ಹಾಸ್ಯ ಹಾಗೂ ಖಳನಟ. ಇವರು ನಟಿಸಿದ 8 ಸಿನಿಮಾಗಳು ಶೂಟಿಂಗ್ ಹಂತದಲ್ಲಿ ಇವೆ. ಇನ್ನೂ ಹೆಸರು ಸಿನಿಮಾಗಳು ಮಾತುಕತೆಯ ಹಂತದಲ್ಲಿ ಇವೆ. ದುನಿಯಾ ವಿಜಯ್ ನಟಿಸುತ್ತಿರುವ ಹೊಸ ಸಿನಿಮಾದ ಮಾತುಕತೆ ಕೂಡ ನಡೆಯುತ್ತಿದೆ ಅನ್ನೋ ಮಾಹಿತಿ ಇದೆ. ಸದ್ಯ ಜಾಕ್ 'ಸಿಟಿ ಲೈಟ್ಸ್', 'ಹಲ್ಕಡಾನ್','ಅತಿಕಾಯ','ಸಾಲಗಾರರ ಸಹಕಾರ ಸಂಘ','ಬೀಟ್ ಪೊಲೀಸ್', 'ಬೈರ', 'ಡಿಯರ್ ಜಾನು','ಗೋಲ್ಮಾಲ್ ಗ್ಯಾಂಗ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Bheema Movie fame Jolly Jolly Jack has 10 movies in his hand and hiked remuneration

ಸಿನಿಮಾದ ಸಂಭಾವನೆ ಎಷ್ಟು?

ಜಾಲಿ ಜಾಲಿ ಜಾಕ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಸಂಭಾವನೆ ಕೂಡ ಹೆಚ್ಚಾಗಿದೆ ಎನ್ನಲಾಗಿದೆ. ಇಂಡಸ್ಟ್ರೀ ಮೂಲಗಳ ಪ್ರಕಾರ ಜಾಕ್‌ಗೆ ಒಂದು ಸಿನಿಮಾದಲ್ಲಿ ನಟಿಸುವುದಕ್ಕೆ ದಿನಕ್ಕೆ ಒಂದು ಲಕ್ಷದವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಕೇವಲ ನಾಲ್ಕನೇ ತರಗತಿ ಓದಿರುವ ಜಾಕ್ ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಹೆಸರು ಗಳಿಸಿ ಉತ್ತಮ ರೀತಿಯಲ್ಲಿ ಸಂಪಾದನೆಯನ್ನೂ ಮಾಡುತ್ತಿದ್ದಾರೆ. ಒಂದು ವೇಳೆ ದಿನಕ್ಕೆ ಒಂದು ಲಕ್ಷ ಸಂಪಾದನೆ ಪಡೆಯುತ್ತಿರೋದು ನಿಜವಾಗಿದ್ದರೆ, ಇದೊಂದು ಒಳ್ಳೆಯ ಅಚೀವ್‌ಮೆಂಟ್ ಆಗಲಿದೆ.

ಸೂರ್ಯ ಅಭಿಮಾನಿ ಸಂಘದ ಅಧ್ಯಕ್ಷ

ಜಾಕ್ ತಮಿಳು ನಟ ಸೂರ್ಯ ಅವರ ಫ್ಯಾನ್. ಹೀಗಾಗಿ ಜಾಕ್ ಕರ್ನಾಟಕದಲ್ಲಿನ ಸೂರ್ಯ ಅವರ ಅಭಿಮಾನಿ ಸಂಘದ ಅಧ್ಯಕ್ಷರಾಗಿದ್ದಾರೆ. ಸೂರ್ಯ ಅವರೊಂದಿಗೆ ನೇರವಾಇಗಿ ಒಡನಾಟವನ್ನು ಇಟ್ಟಿಕೊಂಡಿದ್ದಾರೆ. ಇವೆಲ್ಲದರ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದು, ಬೆಂಗಳೂರಿನ GBA ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಆಸೆಯನ್ನು ಇಟ್ಟುಕೊಂಡಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಜಾಲಿ ಜಾಲಿ ಜಾಕ್ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ.

English summary
Bheema Movie fame Jolly Jolly Jack has 10 movies in his hand and hiked remuneration after viral dialogue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X