Harshika-Bhuvan: ಮದುವೆ ಮುನ್ನ ಗೃಹ ಪ್ರವೇಶ.. ದೀಪ ಹಿಡಿದು ಹೊಸ ಮನೆಗೆ ಎಂಟ್ರಿ ಕೊಟ್ಟ ಹರ್ಷಿಕಾ!

ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಮದುವೆ ಸಮಾರಂಭ ಈಗಾಗಲೇ ಆರಂಭ ಆಗಿವೆ. ಪಕ್ಕ ಕೊಡವ ಶೈಲಿಯಲ್ಲಿ ಸಂಪ್ರದಾಯಗಳು ಜೋರಾಗಿಯೇ ನಡೆಯುತ್ತಿವೆ. ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ದಿನಕ್ಕೊಂದು ಸರ್ಪ್ರೈಸ್ ಕೊಡುತ್ತಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಇಬ್ಬರೂ ಸೇರಿ ನಿರ್ಮಾಣ ಸಂಸ್ಥೆಯನ್ನು ಆರಂಭ ಮಾಡಿದ್ದರು. ಅಷ್ಟೇ ಅಲ್ಲದೆ ಭುವನ್ ಹೊಸ ಸಿನಿಮಾದ ಟೈಟಲ್ ಅನ್ನು ಲಾಂಚ್ ಮಾಡಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದರು.

bhuvan-harshika--new-house-warming-ceremony

ಈಗ ಮದುವೆ ಎರಡು ದಿನಗಳು ಬಾಕಿ ಇರುವಾಗಲೇ ಮತ್ತೊಂದು ಖುಷಿ ವಿಚಾರಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಭುವನ್ ಹೊಸ ಮನೆಯನ್ನು ಕಟ್ಟಿಸಿದ್ದು ಅದರ ಗೃಹ ಪ್ರವೇಶ ಮಾಡಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.

ಮದುವೆಗೂ ಮುನ್ನ ಭುವನ್ ಮನೆಗೆ ಗೃಹಪ್ರವೇಶ

ಭುವನ್ ಪೊನ್ನಣ್ಣ ತಮ್ಮ ತೋಟದ ಮನೆಯಲ್ಲಿ ಹೊಸ ಮನೆಯನ್ನು ಕಟ್ಟಿಸುತ್ತಿದ್ದರು. ಬಾವಿ ಹರ್ಷಿಕಾಗಾಗಿಯೇ ಮನೆ ಕಟ್ಟಿಸಿದ್ದು, ಆ ಮನೆಯ ಗೃಹ ಪ್ರವೇಶವನ್ನು ಮಾಡಲಾಗಿದೆ. ಮದುವೆಗೆ ಇನ್ನೇನು ಎರಡು ದಿನಗಳಿದೆ ಅನ್ನುವಾಗಲೇ ಗೃಹ ಪ್ರವೇಶ ಕಾರ್ಯವೂ ನಡೆದು ಹೋಗಿದೆ.

bhuvan-harshika--new-house-warming-ceremony

ಭುವನ್ ಹಾಗೂ ಹರ್ಷಿಕಾ ಕಳೆದ 12 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಈಗ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ನಿರ್ಧರಿಸಿದ್ದಾರೆ. ಅದರಂತೆ, ಮೊದಲೇ ಒಂದಿಷ್ಟು ತಯಾರಿಗಳನ್ನು ಮಾಡಿಕೊಂಡಿದ್ದರು. ಮದುವೆ ಹೀಗೆಯೇ ವ್ಯವಸ್ಥಿತವಾಗಿ ಆಗಬೇಕು ಎಂದು ಬಯಸಿದ್ದರು. ಅದರಂತೆಯೇ ಭುವನ್ ತಮ್ಮ ಹೊಸ ಮನೆಗೆ ಗೃಹಪ್ರವೇಶ ಮಾಡಿದ್ದಾರೆ.

ದೀಪ ಹಿಡಿದು ಹೊಸ ಮನೆಗೆ ಹರ್ಷಿಕಾ ಎಂಟ್ರಿ

ಭುವನ್ ಹೊಸ ಮನೆಯ ಗೃಹ ಪ್ರವೇಶ ಕೊಡವ ಸಂಪ್ರದಾಯದಂತೆಯೇ ನಡೆದಿದೆ. ಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆದಿವೆ. ತನ್ನ ಭಾವಿ ಪತ್ನಿ ಹರ್ಷಿಕಾ ಪೂಣಚ್ಚ ಕೈಯಿಂದಲೇ ಗೃಹಪ್ರವೇಶ ಕಾರ್ಯವನ್ನು ನೇರವೇರಿಸಿರೋದು ವಿಶೇಷ. ಅದರಂತೆಯೇ ಹರ್ಷಿಕಾ ಪೂಣಚ್ಚ ದೀಪ ಹಿಡಿದು ಹೊಸ ಮನೆಯೊಳಗೆ ಪ್ರವೇಶ ಮಾಡಿದ್ದಾರೆ.

ಇದೇ ವೇಳೆ ಭುವನ್ ಕೊಡವ ಸಂಪ್ರದಾಯದಂತೆಯೇ ಗನ್ ಹಿಡಿದು ಗುಂಡು ಹಾರಿಸಿ ಶುಭಕಾರ್ಯಕ್ಕೆ ಚಾಲನೆಯನ್ನು ನೀಡಿದರು. ಮದುವೆ ಮುನ್ನವೇ ಹರ್ಷಿಕಾ ಪೂಣಚ್ಚ ಗೃಹಪ್ರವೇಶ ಮಾಡಿರೋದು ಮತ್ತೊಂದು ವಿಶೇಷ. ಈ ಫೋಟೊ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಮದುವೆ ಯಾವಾಗ?

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಇಬ್ಬರ ಮದುವೆ ಇದೇ ಆಗಸ್ಟ್ 24ರಂದು ವಿರಾಜಪೇಟೆಯಲ್ಲಿ ಸಂಬಂಧಿಕರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಇಬ್ಬರೂ ಕೊಡವ ಮೂಲದವರಾಗಿದ್ದರಿಂದ ಆ ಸಂಪ್ರದಾಯದಂತೆ ವಿವಾಹ ಕಾರ್ಯಗಳು ಜರುಗಲಿವೆ.

ವಿರಾಜಪೇಟೆಯ ಅಮ್ಮತ್ತಿಯಲ್ಲಿ ಸ್ಯಾಂಡಲ್‌ವುಡ್ ಜೋಡಿಯ ಗ್ರ್ಯಾಂಡ್ ಮದುವೆ ನಡೆಯಲಿದೆ. ಈ ಮದುವೆಗೆ ಸ್ಯಾಂಡಲ್‌ವುಡ್ ಹಾಗೂ ರಾಜಕೀಯ ಕ್ಷೇತ್ರದ ಪ್ರಮುಖ ಗಣ್ಯರು ಭಾಗವಹಿಸುವ ಸಾಧ್ಯತೆಯಿದೆ.

More from Filmibeat

English summary
Bhuvan's new house warming ceremony before marriage with Harshika Poonacha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X