For Quick Alerts
  ALLOW NOTIFICATIONS  
  For Daily Alerts

  ಮಂಗಳೂರು ಬಿಗ್ FM ಈಕೋ ಫ್ರೆಂಡ್ಲಿ ಗಣೇಶನ ದರ್ಶನ ಮಾಡಿದ್ರಾ?

  |

  ಮಂಗಳೂರು 92.7 ಬಿಗ್ FMನ ಎಂಟನೇ ವರ್ಷದ ಪರಿಸರ ಸ್ನೇಹಿ ಈಕೋ ಫ್ರೆಂಡ್ಲಿ ಗ್ರೀನ್ ಗಣೇಶನ ಪ್ರತಿಷ್ಠಾಪನೆ ನಗರದ ಪಾಂಡೇಶ್ವರದ ಫಾರಂ ಮಾಲ್ ನಲ್ಲಿ ಗಣೇಶ ಚತುರ್ಥಿಯ (Sep 17) ದಿನದಂದು ನಡೆಯಿತು.

  ರಾಜ್ಯ ಆರೋಗ್ಯ ಸಚಿವ ಯು ಟಿ ಖಾದರ್, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜೆಸಿಂತ ಆಲ್ಫ್ರೆಡ್, ಪಣಂಬೂರು ಬೀಚ್ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಯತೀಶ್ ಬೈಕಂಪಾಡಿ, ಲಯನ್ಸ್ ಕ್ಲಬ್ ಸದಸ್ಯರಾದ ತಾರನಾಥ ಶೆಟ್ಟಿ ಬೋಳಾರ್ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಹಾಜರಿದ್ದರು.

  ಜೊತೆಗೆ, ಬಿಡುಗಡೆಗೆ ಸಿದ್ದವಾಗಿರುವ ಚಂಡಿಕೋರಿ ತುಳು ಸಿನಿಮಾ ತಂಡದ ಸದಸ್ಯರು ಕೂಡಾ ಹಾಜರಿದ್ದರು.

  ಬಿಗ್ ಗೋಲ್ಡನ್ ವಾಯ್ಸ್ ನ ವಿಜೇತೆ ಐಶ್ವರ್ಯ ಮಲ್ಲಿಕಾರ್ಜುನ ಅವರು ಹಾಡಿದ ವಿಘ್ನ ನಿವಾರಕ ಗಣೇಶನ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

  ನಗರದ ಫಾರಮ್ ಮಾಲ್ ನಲ್ಲಿ ಇದೇ ಶನಿವಾರದವರೆಗೆ (ಸೆ 26) ಸಾರ್ವಜನಿಕರಿಗೆ ಈಕೋ ಫ್ರೆಂಡ್ಲಿ ಗ್ರೀನ್ ಗಣೇಶ ದರ್ಶನಕ್ಕೆ ಅವಕಾಶ ನೀಡಲಾಗಿದೆ.

  92.7 ಬಿಗ್ ಎಫ್ ಎಮ್ ನ ಆರ್ ಜೆ ಗಳಾದ ಎರಲ್ , ರಕ್ಷಿತ , ರೂಪೇಶ್ ಶೆಟ್ಟಿ , ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಶಿಲ್ಪಾ ಶೆಟ್ಟಿ , ಪ್ರೊಮೋ ಪ್ರೊಡ್ಯೂಸರ್ ಜಾಯಲ್ , ಚಂಡಿಕೋರಿ ಸಿನೆಮಾ ತಂಡದ ನಿರ್ದೇಶಕರಾದ ದೇವದಾಸ್ ಕಾಪಿಕಾಡ್, ನಾಯಕ ಅರ್ಜುನ್ ಕಾಪಿಕಾಡ್, ನಟಿ ಕರಿಷ್ಮಾ, ಜೊತೆಗೆ ನಿರ್ಮಾಪಕರಾದ ಶ್ರೀಮತಿ ಶರ್ಮಿಳಾ ಕಾಪಿಕಾಡ್, ಸಚಿನ್ ಉಪ್ಪಿನಂಗಡಿ ಹಾಗೂ ಫಾರಂ ಮಾಲ್ ನ ಕಾರ್ತಿಕ್ ಮತು ನಿಖಿಲ್ ಉಪಸ್ಥಿತರಿದ್ದರು.

  English summary
  92.7 BIG FM kicks off its 8th edition of the BIG Green Ganesha at Mangaluru on Sep 17th. BIG Green Ganesha darshana is available for the public till 26th of September at Forum Mall, Mangaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X