"ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
ಬಿಗ್‌ಬಾಸ್ ಕನ್ನಡ ಸೀಸನ್ 10ರ ಜನಪ್ರಿಯ ಸ್ಪರ್ಧಿ ವರ್ತೂರು ಸಂತೋಷ್. ಬಿಗ್‌ಬಾಸ್ ಮುಗಿದ ಮೇಲೂ ಸದಾ ಸುದ್ದಿಯಲ್ಲಿರೋರು ಇವರೊಬ್ಬರೇ. ಬಿಗ್‌ಬಾಸ್ ಮನೆಯಿಂದ ವರ್ತೂರು ಸಂತೋಷ್ ಹೊರ ಬರುತ್ತಿದ್ದಂತೆ ಕೆಲವರು ಇವರ ವಿರುದ್ಧ ತಿರುಗಿಬಿದ್ದಿದ್ದರು. ಅಲ್ಲಿಂದಲೂ ನಿರಂತರವಾಗಿ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ.
ವರ್ತೂರು ಸಂತೋಷ್ ಬಿಗ್‌ಬಾಸ್ ರಿಯಾಲಿಟಿ ಶೋಗೆ ಕಾಲಿಡುತ್ತಿದ್ದಂತೆ ರಾಜ್ಯದಾದ್ಯಂತ ಅಪಾರ ಪ್ರಮಾಣದಲ್ಲಿ ಜನರನ್ನು ಸಂಪಾಧಿಸಿದ್ದರು. ವರ್ತೂರು ಸಂತೋಷ್ ನೇರ ನುಡಿಯ ಸ್ವಭಾವಗಳನ್ನು ವೀಕ್ಷಕರು ಮೆಚ್ಚಿಕೊಂಡಿದ್ದರು. ಹೀಗಾಗಿ ಬಿಗ್ ಬಾಸ್ ಮನೆಯಿಂದ ಹೊರಬೀಳುತ್ತಿದ್ದಂತೆ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು.

ಇನ್ನೊಂದು ಕಡೆ ವರ್ತೂರು ಸಂತೋಷ್ ವಿರೋಧಿಗಳು ನಿರಂತರವಾಗಿ ಟೀಕೆಗಳನ್ನು ಮಾಡುತ್ತಲೇ ಇದ್ದಾರೆ. ಇದರಿಂದ ನೊಂದಿರೋ ವರ್ತೂರು ಸಂತೋಷ್ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಕಣ್ಣೀರು ಹಾಕಿದ್ದಾರೆ. ಕೆಟ್ಟದಾಗಿ ಟೀಕೆಗಳನ್ನು ಮಾಡುತ್ತಿರುವುದರಿಂದ ತಾಯಿ ಊಟ ಮಾಡುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ನಮ್ಮ ಜೊತೆಗೆ ಇದ್ದವರೇ ಇವತ್ತು ನಮ್ಮ ಮೇಲೆ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ವರ್ತೂರು ಸಂತೋಷ್ ಬೇಸರ ಹೊರಹಾಕಿದ್ದಾರೆ. "ಒಂದಲ್ಲ ಎರಡಲ್ಲ ಬಹಳ ನೋವಾಗುತ್ತೆ. ಒಂದು ವಿಡಿಯೋ ಮುಂದೆ ಬಂದು ಮಾತಾಡಬೇಕಾದರೆ, ಅವರವರ ನೋವು ಅವರಿಗೆ ಗೊತ್ತಿರುತ್ತೆ. ನಮ್ಮ ತಾಯಿ ನಮ್ಮ ತಂದೆಯನ್ನು ಕಳೆದುಕೊಂಡ ಮೇಲೆ ನನ್ನನ್ನು ಅಷ್ಟೇ ಗೌರವದಿಂದ ಸಾಕಿರೋದು. ನಮ್ಮ ರೇಸ್‌ನಲ್ಲಿ ಇವರೆಲ್ಲ ಒಂದು ಸಾವಿರ, ಎರಡು ಸಾವಿರಕ್ಕೆ ಬಂದವರು. ಇದೇ 2022ರಲ್ಲಿ ರೇಸ್ ಮಾಡಿದಾಗ ಬಂದು ಎಂಜಲು ಕಾಸು ತಿಂದ ಮಕ್ಕಳು ಇವರು. ನಮ್ಮ ಅನ್ನ ತಿಂದು ಇವತ್ತು ನಮಗೆ ಅನ್ನುತ್ತಾರೆ. ಅದಕ್ಕೆ ಭಗವಂತನೇ ಸಾಕ್ಷಿ." ಎಂದು ವರ್ತೂರು ಸಂತೋಷ್ ಬೇಸರ ಪಟ್ಟುಕೊಂಡಿದ್ದಾರೆ.

ತನ್ನ ತಾಯಿ ಬಗ್ಗೆ, ಕುಟುಂಬದ ಬಗ್ಗೆ, ಆಪ್ತರ ಬಗ್ಗೆ ಇಲ್ಲ ಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ವರ್ತೂರು ಸಂತೋಷ್ ಬೇಸರ ಹೊರ ಹಾಕಿದ್ದಾರೆ. "ನಮ್ಮ ತಾಯಿ ಬಗ್ಗೆ ಇರಬಹುದು. ನಮ್ಮ ಸ್ನೇಹಿತರ ಬಗ್ಗೆ ಇರಬಹುದು. ಒಂದಲ್ಲ ಎರಡಲ್ಲ ಇವರು ಮಾತಾಡಿರೋದು. ನೀವು ಸತ್ಯವಾಗಲೂ ನೀವು ಇಷ್ಟ ಬೆಳೆಸಿದ್ದೀರಿ ನನ್ನನ್ನ, ನಾನು ಒಬ್ಬರಿಗೆ ಅನ್ಯಾಯ ಮಾಡಿಲ್ಲ. ಈ ಮೂಲಕ ಹೇಳುವುದೇನಂದ್ರೆ, ನಾನು ಇದೂವರೆಗೂ ಒಬ್ಬರಿಗೆ ಅನ್ಯಾಯ ಮಾಡಿಲ್ಲ. ಒಬ್ಬರ ಅನ್ನ ಕಿತ್ತುಕೊಂಡಿಲ್ಲ. " ಎಂದಿದ್ದಾರೆ.
ಟೀಕಾಗಾರರಿಂದ ಬೇಸತ್ತಿರೋ ವರ್ತೂರು ಸಂತೋಷ್ ಯೂಟ್ಯೂಬ್ ಚಾನೆಲ್‌ನಲ್ಲಿ ತನ್ನ ಆತ್ಮೀಯರೊಂದಿಗೆ ಬಂದು ಕರ್ನಾಟಕದ ಜನರ ಬೆಂಬಲ ಕೇಳಿದ್ದಾರೆ. "ನಮಗೆ ಅನ್ನಬಾರದ ಮಾತುಗಳು, ನಮ್ಮ ಸಂಸಾರದ ಮಾತುಗಳನ್ನೆಲ್ಲಾ ಅಂದಿದ್ದಾರೆ. ನಾನು ಒಬ್ಬರಿಗೆ ಅನ್ಯಾಯ ಮಾಡಿಲ್ಲ. ಆದರೂ ಇವರೆಲ್ಲ ಇಷ್ಟೆಲ್ಲ ಅಂತಿದ್ದಾರೆ. ನೀವೇ ನನಗೆ ನ್ಯಾಯ ದೊರಕಿಸಿಕೊಡಬೇಕು." ಎಂದಿದು ಹೇಳಿದ್ದಾರೆ.
ಇದೇ ವೇಳೆ ತನ್ನ ತಾಯಿ ಬಗ್ಗೆನೂ ಟೀಕೆ ಮಾಡುತ್ತಿರುವುದರಿಂದ ಅವರು ಊಟ ಬಿಟ್ಟಿದ್ದಾರೆಂದು ಕಣ್ಣೀರು ಹಾಕಿದ್ದಾರೆ. "ನಮ್ಮ ತಾಯಿ ಊಟ ಮಾಡಲ್ಲ ಅಣ್ಣ. ಈ ನನ್ ಮಕ್ಕಳು ಒಂದೊಂದಲ್ಲ ಅಣ್ಣ. ಆ ರೆಕಾರ್ಡಿಂಗ್‌ಗಳು ಎಲ್ಲೆಲ್ಲಿ ಸಿಗ್ತಾವೋ ಆ ಭಗವಂತನಿಗೆ ಗೊತ್ತು. ನಮ್ಮ ಹಾಗೇ ಇದ್ದು, ನಮ್ಮೊಂದಿಗೆ ಇದ್ದು ಹೀಗೆ ಮಾಡುತ್ತಿದ್ದಾರೆ. ನಿಮ್ಮ ಮಕ್ಕಳು ತಣ್ಣಗಿರಲಿ. ಒಂದು ಮೀಡಿಯಾ ಮುಂದೆ ನಿಂತು ಏನಂದ್ರೆ ಅದು ಮಾತಾಡುತ್ತಾರೆ. ನಮ್ಮ ಅಪ್ಪನ ಬಗ್ಗೆ ಎಲ್ಲಾ ಮಾತಾಡುತ್ತಾರೆ. ಇವರು ಒಂದೊಂದಲ್ಲ ಮಾತಾಡುತ್ತಿರೋದು. ಇವತ್ತು ನನ್ನ ಮನಸ್ಸಿನಿಂದ ಹೇಳುತ್ತಿದ್ದೇನೆ. ಇವತ್ತು ನೀವೇ ನನ್ನ ಧರ್ಮ ದೇವತೆಗಳು." ಎಂದು ಕಣ್ಣೀರು ಹಾಕಿದ್ದಾರೆ.


Click it and Unblock the Notifications