ಹುಲಿ ಉಗುರು ವಿವಾದದ ಬಳಿಕ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ವರ್ತೂರು ಸಂತೋಷ್; ಈ ಬಾರಿ ಉಲ್ಲಂಘನೆ ಮಾಡಿದ್ದೇನು?
ಬಿಗ್‌ಬಾಸ್ ಕನ್ನಡ ಸೀಸನ್ 10ರ ಐದನೇ ರನ್ನರ್‌ಅಪ್ ಆಗಿದ್ದ ವರ್ತೂರು ಸಂತೋಷ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಗ್‌ಬಾಸ್ ಮನೆಯೊಳಗೆ ಇರುವಾಗಲೇ ಹುಲಿ ಉಗುರು ಧರಿಸಿದ್ದಕ್ಕಾಗಿ ವರ್ತೂರು ಸಂತೋಷ್ ವಿರುದ್ಧ ದಾಖಲಾಗಿತ್ತು. ಹೀಗಾಗಿ ಬಿಗ್‌ಬಾಸ್ ಮನೆಯೊಳಗಿನಿಂದಲೇ ಅವರನ್ನು ಜೈಲಿ ಸೇರಬೇಕಾದ ಅನಿವಾರ್ಯತೆ ಎದುರಾಗಿತ್ತು. ಈಗ ಮತ್ತೊಂದು ದೂರು ದಾಖಲಾಗಿದೆ.
ಬಿಗ್‌ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್‌ಗೆ ಸಂಕಷ್ಟಗಳು ಸರಮಾಲೆಯೇ ಹೆಚ್ಚಾಗಿದೆ. ವರ್ತೂರು ಸಂತೋಷ್‌ರನ್ನು ಪ್ರೀತಿಸುವ ಜನರು ಹೇಗಿದ್ದಾರೋ ಹಾಗೇ ವಿರೋಧಿಸುವವರ ಸಂಖ್ಯೆ ಕೂಡ ಅಷ್ಟೇ ಹೆಚ್ಚಾಗಿದೆ. 'ಹಳ್ಳಿಕಾರ್ ಒಡೆಯ' ಟೈಟಲ್ ವಿಚಾರವಾಗಿಯೂ ವರ್ತೂರು ಸಂತೋಷ್ ವಿವಾದದಲ್ಲಿ ಇದ್ದರು.

ಈಗ ಪ್ರಾಣಿಗಳ ಸಾಗಾಣಿಕೆ ವೇಳೆ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪವನ್ನು ವರ್ತೂರು ಸಂತೋಷ್ ಎದುರಿಸುತ್ತಿದ್ದಾರೆ. ಈ ಸಂಬಂಧ ಪ್ರಾಣಿ ಕಲ್ಯಾಣ ಅಧಿಕಾರಿಯೊಬ್ಬರು ದೂರನ್ನು ದಾಖಲಿಸಿದ್ದಾರೆ. ಈ ಕಾರಣಕ್ಕೆ 'ಹಳ್ಳಿಕಾರ್ ಒಡೆಯ' ವರ್ತೂರು ಸಂತೋಷ್ ಮತ್ತೊಮ್ಮೆ ಜೈಲು ಸೇರುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಅಷ್ಟಕ್ಕೂ ವರ್ತೂರು ಸಂತೋಷ್ ವಿರುದ್ಧ ಕೇಳಿ ಬಂದಿರುವ ಆರೋಪವೇನು? ತಿಳಿಯುವುದಕ್ಕೆ ಮುಂದೆ ಓದಿ.
SPCA ಪ್ರಾಣಿ ಕಲ್ಯಾಣ ಅಧಿಕಾರಿ ಹರೀಶ್ ಎಂಬುವವರು ವರ್ತೂರು ಸಂತೋಷ್ ವಿರುದ್ಧ ದೂರನ್ನು ದಾಖಲು ಮಾಡಿದ್ದಾರೆ. ಪ್ರಾಣಿಗಳನ್ನು ಸಾಗಾಣಿಕೆ ಮಾಡುವಲ್ಲಿ ವರ್ತೂರು ಸಂತೋಷ್ ಹಾಗೂ ತಂಡ ನಿಯಮ ಉಲ್ಲಂಘನೆ ಮಾಡಿದ್ದರೆ ಅನ್ನುವ ಆರೋಪವನ್ನು ಮಾಡಿದ್ದಾರೆ. ವರ್ತೂರು ಸಂತೋಷ್ ಹಳ್ಳಿಕಾರ್ ತಳಿಗಳನ್ನು ಟ್ರಕ್‌ನಲ್ಲಿ ಸಾಗಾಟ ಮಾಡಿದ್ದರು. ಅದೇ ಈಗ ವರ್ತೂರು ಸಂತೋಷ್‌ಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ವರ್ತೂರು ಸಂತೋಷ್ ಹಳ್ಳಿಕಾರ್ ತಳಿಯ 9 ಹೋರಿಗಳು ಹಾಗೂ ಇತರೆ ವಸ್ತುಗಳನ್ನು ಟ್ರಕ್‌ನಲ್ಲಿ ಇಟ್ಟು ಫಾರ್ಮ್ ಹೌಸ್‌ನಿಂದ ಸಾಗಾಟ ಮಾಡಿದ್ದಾರೆಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಮೂಲಕ ಪ್ರಾಣಿಗಳಿಗೆ ಹಿಂಸೆ ಹಾಗೂ ಸಾಗಾಟ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆಂಬ ಆರೋಪವನ್ನು ಕೇಳಿಬಂದಿದೆ. ಈಗಾಗಲೇ ವರ್ತೂರು ಸಂತೋಷ್ ವಿಚಾರಣೆಗೂ ಹಾಜರಾಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.
ಈ ಸಂಬಂಧ ವರ್ತೂರು ಸಂತೋಷ್ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಪ್ರಾಣಿ ಕಲ್ಯಾಣ ಅಧಿಕಾರಿ ಹರೀಶ್ ಪೊಲೀಸರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕೇವಲ ಎನ್‌ಸಿಆರ್ ಮಾಡಿ ಬಿಡುವುದು ಬೇಡ. ಎಫ್‌ಐಆರ್ ಅನ್ನು ದಾಖಲು ಮಾಡಿ ಎಂದು ಮನವಿ ಮಾಡಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ವರ್ತೂರು ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಾದರೆ ಸಂಕಷ್ಟ ಸಿಲುಕುವುದು ಗ್ಯಾರಂಟಿ.
ವರ್ತೂರು ಸಂತೋಷ್ ಬಿಗ್‌ಬಾಸ್‌ನಿಂದ ಹೊರ ಬರುತ್ತಿದ್ದಂತೆ ಹಳ್ಳಿಕಾರ್ ರೇಸ್ ಮಾಡುವುದಾಗಿ ಹೇಳಿಕೊಂಡಿದ್ದರು. ಆ ರೇಸ್ ಮಾಡುವುದರ ಕಡೆಗೆ ಹೆಚ್ಚು ಗಮನ ವಹಿಸಿದ್ದರು. ಇದೇ ವೇಳೆ ವರ್ತೂರು ಸಂತೋಷ್ ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸಂಘಟನೆಗಳಿಂದ ಟೀಕೆಗೂ ಗುರಿಯಾಗಿದ್ದರು. ಈಗ ಮತ್ತೊಂದು ಕೇಸ್‌ಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.


Click it and Unblock the Notifications











