"ಹುಚ್ಚು ಮನಸೇ.." ಎನ್ನುತ್ತಿರೋ ದಿವ್ಯಾ ಉರುಡುಗ-ಅರವಿಂದ್ ಕೆಪಿ: 'ಅರ್ದಂಬರ್ಧ ಪ್ರೇಮ ಕಥೆ' ಏನು?

ಬಿಗ್ ಬಾಸ್ ಮೂಲಕ ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದ ಜೋಡಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ. ಅದಾಗಲೇ ಕಿರುತೆರೆಯಲ್ಲಿ ಫೇಮಸ್ ಆಗಿದ್ದ ದಿವ್ಯಾ ಉರುಡುಗ ಬಿಗ್ ಬಾಸ್ ಮೂಲಕ ಮತ್ತಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು. ಇನ್ನು ಅರವಿಂದ್ ಕೆಪಿ ರೇಸರ್ ಆಗಿದ್ದರೂ, ಕಿರುತೆರೆ ವೀಕ್ಷಕರಿಗೆ ಪರಿಚಯ ಮಾಡಿಕೊಟ್ಟಿದ್ದೇ ಬಿಗ್ ಬಾಸ್.

ಈ ರಿಯಾಲಿಟಿ ಶೋನಿಂದ ದಿವ್ಯಾ ಉರುಡುಗ ಹಾಗೂ ಅರವಿಂದ್ ಕನ್ನಡ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಇದ್ದಾಗಲೇ ಆತ್ಮೀಯರಾಗಿದ್ದ ಈ ಜೋಡಿ ಹೊರ ಬಂದ್ಮೇಲೆ ಪ್ರೀತಿಯಲ್ಲಿ ಬಿದ್ದಿದೆ ಅಂತನೂ ಸುದ್ದಿಯಾಗಿತ್ತು. ಕೆಲವು ದಿನಗಳ ಹಿಂದಷ್ಟೇ ದಿವ್ಯಾ ಉರುಡುಗ ಅವರ ವಿಡಿಯೋ ಒಂದು ಇಬ್ಬರೂ ಮದುವೆ ಆಗುತ್ತಾರೇನೋ ಅನ್ನೂ ಸಂಚಲನವನ್ನೇ ಸೃಷ್ಟಿಸಿತ್ತು.

divya-uruduga,-movie-ardhambardha-prema-kathe

ರೇಷ್ಮೆ ಸೀರೆ, ಮಲ್ಲಿಗೆ ಹೂ ಮುಡಿದು ಮದುಮಗಳಂತೆ ಕಂಗೊಳಿಸಿದ್ದರು. ಆ ಬಳಿಕ ಇದು ಸಿನಿಮಾಗೆ ಸಂಬಂಧಿಸಿದ ವಿಡಿಯೋ ಅನ್ನೋದು ಗೊತ್ತಾಯ್ತು. ಸದ್ಯ ಇದೇ ಸಿನಿಮಾ 'ಅರ್ದಂಬರ್ಧ ಪ್ರೇಮಕಥೆ' ಮೊದಲ ಹಾಡೊಂದು ಬಿಡುಗಡೆಯಾಗಿದೆ. ಅಭಿಮಾನಿಗಳಿಂದಲೇ ಹಾಡನ್ನು ರಿಲೀಸ್ ಮಾಡಿರೋದು ವಿಶೇಷ.

ಹೌದು.. ಕನ್ನಡ ಕಿರುತೆರೆ, ಸಿನಿಮಾ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ದಿವ್ಯಾ ಉರುಡುಗ ಇದೀಗ ಅರ್ದಂಬರ್ಧ ಪ್ರೇಮಕತೆ ಸಿನಿಮಾ ಮೂಲಕ ಮತ್ತೆ ಸದ್ದು ಮಾಡುವುದಕ್ಕೆ ಬರುತ್ತಿದ್ದಾರೆ. ರಿಯಾಲಿಟಿ ಶೋನಲ್ಲಿ ಜನಮನ ಗೆದ್ದಂತೆ, ಸಿನಿಮಾ ಮೂಲಕವೂ ಪ್ರೇಕ್ಷಕರ ಮನಗೆಲ್ಲುತ್ತಾರಾ? ಕುತೂಹಲ ಮೂಡಿಸಿದ್ದಾರೆ.

'ಅರ್ದಂಬರ್ಧ ಪ್ರೇಮಕಥೆ' ಸಿನಿಮಾದ ಟೀಸರ್ ಹಾಗೂ ಫಸ್ಟ್ ಲುಕ್ ಎಲ್ಲರ ಗಮನ ಸೆಳೆದಿತ್ತು. ಈಗ ಚಿತ್ರತಂಡ ತಮ್ಮ ಸಿನಿಮಾದ ಮೊದಲ ಹಾಡನ್ನು ಅಭಿಮಾನಿಗಳಿಂದಲೇ ಬಿಡುಗಡೆ ಮಾಡಿಸಿರೋದು ವಿಶೇಷ. "ಹುಚ್ಚು ಮನಸೇ.." ಅನ್ನೋ ಹಾಡನ್ನು ಅಭಿಮಾನಿಗಳೇ ರಿಲೀಸ್ ಮಾಡಿದ್ದಾರೆ. ಈ ಮೂಲಕ ಪ್ರೇಮಿಗಳ ಮನ ಕದಿಯಲು ಚಿತ್ರತಂಡ ಮುಂದಾಗಿದೆ.

divya-uruduga,-movie-ardhambardha-prema-kathe

ಅಂದ್ಹಾಗೆ, 'ಅರ್ದಂಬರ್ಧ ಪ್ರೇಮಕಥೆ' ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕ ಅರವಿಂದ್ ಕೌಶಿಕ್ ಅವರೇ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಗಾಯಕ ವಾಸಕಿ ವೈಭವ್ ಮತ್ತು ಪೃಥ್ವಿ ಭಟ್ ಧ್ವನಿ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದೆ.

'ಅರ್ದಂಬರ್ಧ ಪ್ರೇಮ ಕಥೆ'ಯ ರೊಮ್ಯಾಂಟಿಕ್ ಸಾಂಗ್ ಇದು. ಬಿಗ್ ಬಾಸ್ ಬಳಿಕ ದಿವ್ಯಾ ಉರುಡುಗ ಹಾಗೂ ಅರವಿಂದ್ ಇಬ್ಬರನ್ನೂ ಒಟ್ಟಿಗೆ ಮೇಲೆ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಅವರ ಪ್ರತಿ ಹೆಜ್ಜೆಯಲ್ಲೂ ಸಪೋರ್ಟ್ ಮಾಡುತ್ತಾ ಬಂದಿರೋ ಅಭಿಮಾನಿಗಳಿಗೆ ಈ ಹಾಡನ್ನು ಅರ್ಪಣೆ ಮಾಡಿದ್ದಾರೆ.

'ಅರ್ದಂಬರ್ಧ ಪ್ರೇಮ ಕಥೆ' ಸಿನಿಮಾವನ್ನು ಅರವಿಂದ್ ಕೌಶಿಕ್ ನಿರ್ದೇಶನ ಮಾಡಿದ್ದಾರೆ. ಸೂರ್ಯ ಕ್ಯಾಮೆರಾ ವರ್ಕ್ ಇದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಿನಿಮಾ ಮುಗಿದಿದ್ದು, ಪ್ರಚಾರವನ್ನು ಆರಂಭಿಸಿದೆ. ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

More from Filmibeat

English summary
Bigg Boss Fame Divya Uruduga, Aravind KP Movie Ardhambardha Prema Kathe Fist Song Out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X