"IVF ಓಕೆ.. ಮದುವೆ ಆಗದೆ ಮಕ್ಕಳು ಬೇಕು ಅನ್ನೋದೂ ಓಕೆ; ಆದರೆ ಮನಸ್ಸಿಗೆ ಸ್ವಲ್ಪ ನೋವಾಯ್ತು"; ಲಾಯರ್ ಜಗದೀಶ್
'ಚಂದ್ರಮುಖಿ ಪ್ರಣಸಖಿ' ನಟಿ ಭಾವನಾ ರಾಮಣ್ಣ ಇತ್ತೀಚೆಗೆ ಭಾರೀ ಚರ್ಚೆಯಲ್ಲಿ ಇರೋದಕ್ಕೆ ಕಾರಣವೇನು ಅನ್ನೋದು ಗೊತ್ತೇ ಇದೆ. IVF ಮೂಲಕ ಭಾವನಾ ಅವರು ಮಕ್ಕಳನ್ನು ಪಡೆಯುವ ಗಟ್ಟಿ ನಿರ್ಧಾರಕ್ಕೆ ಬಂದಿದ್ದರು. ಸದ್ಯ ಏಳು ತಿಂಗಳ ಗರ್ಭಿಣಿಯಾಗಿರುವ ಭಾವನಾ ಅವರ ಈ ನಿರ್ಧಾರದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.
ಮದುವೆ ಆಗದೇ ಮಕ್ಕಳನ್ನು ಪಡೆಯುವ ನಿರ್ಧಾರ ಅಷ್ಟು ಸುಲಭದ್ದಲ್ಲ. ಮುಂದೆ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡೇ ಈ ನಿರ್ಧಾರಕ್ಕೆ ಬಂದಿದ್ದಾಗಿ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇದರ ಜೊತೆಗೆನೇ ಜನರು ಈಗ ಐವಿಎಫ್ ಬಗ್ಗೆ ಹೆಚ್ಚು ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಐವಿಎಫ್ ಬಗ್ಗೆ ಭಯ ಬೀಳುತ್ತಿದ್ದವರಿಗೆ ಭಾವನಾ ರಾಮಣ್ಣ ಮಾದರಿಯಾಗಿದ್ದಾರೆ.

ಇದೇ ವೇಳೆ ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ವಿರುದ್ಧ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಮದುವೆ ಆಗದೇ ಭಾವನಾ ರಾಮಣ್ಣ ಗರ್ಭಿಣಿಯಾಗಿರುವ ಬಗ್ಗೆ ಚರ್ಚೆ ಆಗುತ್ತಿರೋದೇನೋ ಸತ್ಯ. ಆದರೆ, ಪರೋಕ್ಷವಾಗಿ ಐವಿಎಫ್ ಬಗ್ಗೆ ಪ್ರಚಾರ ಮಾಡುತ್ತಿದ್ದಾರಾ? ಆಸ್ಪತ್ರೆಗಳು ಐವಿಎಫ್ ಪ್ರಚಾರದಲ್ಲಿ ತೊಡಗಿದ್ದಾರಾ? ಎಂದು ಲಾಯರ್ ಜಗದೀಶ್ ಅನುಮಾನದ ಜೊತೆಗೆ ನೋವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಲಾಯರ್ ಜಗದೀಶ್ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಮುಂದೆ ಓದಿ
ನಟಿ ಭಾವನಾ ರಾಮಣ್ಣ ಐವಿಎಫ್ ಪ್ರಚಾರ ಮಾಡುತ್ತಿದ್ದಾರೇ?
ಪ್ರತಿಷ್ಠಿತ ಆಸ್ಪತ್ರೆಗಳು ಭಾವನಾ ಅವರನ್ನು ಬಳಸಿಕೊಂಡಿವೆಯೇ?
ಲಾಯರ್ ಜಗದೀಶ್ ನೋವನ್ನು ಹೊರ ಹಾಕಿದ್ದು ಯಾಕೆ?
ಐವಿಎಫ್ ಮಾಫಿಯಾ ಅಂತ ಅನುಮಾನ ವ್ಯಕ್ತಪಡಿಸಿದ್ದೇಕೆ?
ಒಂದಿಷ್ಟು ದಿನ ಸೈಲೆಂಟ್ ಆಗಿದ್ದ ಲಾಯರ್ ಜಗದೀಶ್ ಈಗ ಮತ್ತೆ ಭಾವನಾ ವಿಚಾರಕ್ಕೆ ಮುನ್ನೆಲೆಗೆ ಬಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಭಾವನಾ ನೀಡಿದ ಸಂದರ್ಶನಗಳ ಬಗ್ಗೆ ಲಾಯರ್ ಜಗದೀಶ್ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗಳು ಭಾವನಾ ಅವರನ್ನು ಬಳಸಿಕೊಂಡು ಐವಿಎಫ್ ಪ್ರಚಾರ ಮಾಡುತ್ತಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ವಿಚಾರವನ್ನು ಇಟ್ಟುಕೊಂಡು ಒಂದು ವಿಡಿಯೋ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
"ಐವಿಎಫ್ ಬಳಸಿ, ಮದುವೆಯಾಗದೇ ತಾಯಿಯಾಗುತ್ತಿದ್ದಾರೆ. ಭಾವನಾ ಅವರಿಗೆ ಅಭಿನಂದನೆಗಳು. ನಿಮ್ಮ ಭಾವನೆಗಳಿಗೆ ಕರ್ನಾಟಕದ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಅದು ನಿಮ್ಮ ಖಾಸಗಿ ಬದುಕು. ಅದರ ಬಗ್ಗೆ ಯಾರೂ ಕಮೆಂಟ್ ಮಾಡುವಂತಿಲ್ಲ. ಅದು ನಿಮ್ಮ ಇಚ್ಚೆ. ಆದರೆ, ಮಾಧ್ಯಮಗಳ ಮುಂದೆ ಸೋಶಿಯಲ್ ಮೀಡಿಯಾದಲ್ಲಿ ನೀವು ಐವಿಎಫ್‌ನಿಂದ ತಾಯಿಯಾಗುತ್ತಿರುವ ವಿಚಾರ ಚರ್ಚೆಯಾಗುತ್ತಿದೆ. ಮಾಧ್ಯಮದ ಮುಂದೆ ಬಂದು ಐವಿಎಫ್ ವಿಚಾರವಾಗಿ ಮಾತಾಡಿದಾಗ ಅದರ ಆಗು ಹೋಗುಗಳ ಬಗ್ಗೆ ಮಾತಾಡಬೇಕಾದ ಪರಿಸ್ಥಿತಿ ಇರುತ್ತೆ. ಭಾವನಾ ಅವರು ತಾಯಿ ಆಗುತ್ತಿರೋದು ಓಕೆ. ಆದರೆ, ಆಸ್ಪತ್ರೆಗಳು ಭಾವನಾ ಅವರನ್ನು ಬಳಸಿಕೊಂಡು ಐವಿಎಫ್ ಪ್ರಚಾರ ಮಾಡುತ್ತಿದ್ದಾರಾ? ಎಂದು ನನಗೆ ಮೆಸೇಜ್‌ಗಳನ್ನು ಮಾಡುತ್ತಿದ್ದಾರೆ. ಹಾಗೇ ಇಲ್ಲಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರಿಕೆಯಿಲ್ಲದೆ ಭಾವನಾ ಅವರು ತಮ್ಮ ಭಾವನೆಗಳನ್ನು ಹೇಳಿಕೊಳ್ಳುತ್ತಿದ್ದಾರಾ?" ಎಂದು ಲಾಯರ್ ಜಗದೀಶ್ ಪ್ರಶ್ನೆ ಮಾಡಿದ್ದಾರೆ.

ಸದ್ಯ ಸಮಾಜದಲ್ಲಿ ವಿಚ್ಛೇದನ ಹೆಚ್ಚಾಗುತ್ತಿರುವಾಗ ಐವಿಎಫ್ ಯಾವ ರೀತಿ ಪರಿಣಾಮ ಬೀರಬಹುದೆಂಬ ಚರ್ಚೆಯನ್ನು ಹುಟ್ಟಾಕಿದ್ದಾರೆ. "2016ರಿಂದ ಫ್ಯಾಮಿಲಿ ಕೋರ್ಟ್‌ನಲ್ಲಿ ನೋಡುತ್ತಿದ್ದೇನೆ. ಸಾವಿರಾರು ಜನರು ಡಿವೋರ್ಸ್‌ಗೆ ಅರ್ಜಿ ಹಾಕುತ್ತಿದ್ದಾರೆ. ಗಂಡ ಈಕಡೆಗೆ ಹೋಗುತ್ತಾನೆ. ಹೆಂಡತಿ ಆ ಕಡೆಗೆ ಹೋಗುತ್ತಾಳೆ. ಮಕ್ಕಳು ನೊಂದುಕೊಳ್ಳುತ್ತಾರೆ. ಇದನ್ನು ನೋಡಿ ಕಣ್ಣಲ್ಲಿ ನೀರು ಬರುತ್ತೆ. ರೈತರಿಗೆ ಮದುವೆ ಆಗುವುದಕ್ಕೆ ಹೆಣ್ಣು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಭಾವನಾ ಅವರ ಈ ಮಾತು ಒಂದು ವರ್ಗದ ಜನರಿಗೆ ತಪ್ಪು ಸಂದೇಶ ರವಾನೆ ಆದಂತೆ ಆಗುವುದಿಲ್ಲವೇ?" ಎಂದು ಪ್ರಶ್ನೆ ಮಾಡಿದ್ದಾರೆ.
ಹಾಗೇ ಐವಿಎಫ್ ಆಸ್ಪತ್ರೆಗಳು ಭಾವನಾ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. "ಗಂಡೇ ಬೇಡ. ಮದುವೆನೇ ಬೇಡ. ನಾನು ತಾಯಿ ಆಗಿದ್ದೀನಿ ಅಂತ ಮಾಧ್ಯಮಗಳ ಮುಂದೆ ಪ್ರಮೋಷನ್ ಮಾಡಿದಾಗ ಎಲ್ಲೋ ಒಂದು ಕಡೆ ಐವಿಎಫ್ ಆಸ್ಪತ್ರೆಗಳು ಭಾವನಾ ಅವರನ್ನು ಪ್ರಮೋಷನ್‌ಗೆ ಬಳಸುತ್ತಿದ್ದಾರಾ? ಅಂತ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿದ್ದಾರೆ. ಗಂಡುನೂ ಬೇಕಾಗಿಲ್ಲ. ಮದುವೆನೂಬೇಕಾಗಿಲ್ಲ ಅಂತ ಕೆಲವರು ಹೇಳಿರೋದು. ಮಕ್ಕಳಾಗದವರು ಐವಿಎಫ್ ಬಳಸುವುದು ಓಕೆ. ಅಥವಾ ಇಚ್ಛೆ ಪಟ್ಟು ಭಾವನಾ ತರ ಮದುವೆನೇ ಬೇಡ ಅಂತ ಬಳಸುವವರೂ ಓಕೆ. ಆದರೆ, ಈ ಪ್ರಮೋಷನ್ಸ್ ಯಾಕೆ? ಎಲ್ಲೋ ಒಂದು ಕಡೆ ಐವಿಎಫ್ ಆಸ್ಪತ್ರೆಯವರು ಭಾವನಾ ಅವರನ್ನು ಬಳಸುತ್ತಿದ್ದಾರಾ ಅಂತ ನನ್ನ ಮನಸ್ಸಿಗೂ ಸ್ವಲ್ಪ ನೋವಾಯ್ತು." ಎಂದು ಲಾಯರ್ ಜಗದೀಶ್ ಹೊಸ ಚರ್ಚೆಯನ್ನು ಹುಟ್ಟಾಕಿದ್ದಾರೆ.


Click it and Unblock the Notifications











