ರೀಲ್ಸ್ ಮಾಡಿ ಅರೆಸ್ಟ್‌ ಆಗಿದ್ದ ವಿನಯ್ ಗೌಡ ರಿಲೀಸ್; "ಇನ್ಮುಂದೆ ಹೊಸ ಆರಂಭ" ಬಿಗ್ ಬಾಸ್ ಮಾಜಿ ಸ್ಪರ್ಧಿ

ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರೂ ರೀಲ್ಸ್ ಮಾಡುವುದಕ್ಕೆ ಹೋಗಿ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದರು. ಇವರಿಬ್ಬರೂ ಲಾಂಗ್ ಹಿಡಿದು ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ಅದನ್ನು ರಜತ್ ಕಿಶನ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಆ ವಿಡಿಯೋಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಶಸ್ತ್ರಾಸ್ತ್ರ ಕಾಯ್ದೆ ಅಡಿ ಇಬ್ಬರನ್ನೂ ಬಂಧಿಸಲಾಗಿತ್ತು.

ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರು ವಿನಯ್ ಗೌಡ ಹಾಗೂ ರಜತ್ ಕಿಶನ್ ವಿರುದ್ಧ ದೂರನ್ನು ದಾಖಲಿಸಿದ್ದರು. ನಿನ್ನೆ (ಮಾರ್ಚ್ 14) ಇವರಿಬ್ಬರನ್ನು ಬಂಧಿಸಲಾಗಿತ್ತು. ಬಂಧನದ ಬಳಿಕ ವಿಚಾರಣೆ ಮಾಡಿ ವಿನಯ್ ಗೌಡ ಹಾಗೂ ರಜತ್ ಇಬ್ಬರನ್ನೂ ರಿಲೀಸ್ ಮಾಡಲಾಗಿದೆ. ಇತ್ತ ರಿಲೀಸ್ ಆಗುತ್ತಿದ್ದಂತೆ ವಿನಯ್ ಗೌಡ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಎರಡು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.

Bigg Boss fame Vinay Gowda shared Instagram story after police arrest on reels

ಬಂಧನದ ಬಳಿಕ ಅದೇ ದಿನ ರಾತ್ರಿ ರಿಲೀಸ್ ಆಗಿರುವ ವಿನಯ್ ಗೌಡ ಮತ್ತೆ ಅದೇ ವಿಡಿಯೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅದೇ ಗತ್ತು, ಅದೇ ರಗಡ್ ಲುಕ್ ಅನ್ನು ತೋರಿಸಿದ್ದಾರೆ. ಆದರೆ, ಲಾಂಗ್ ಮಾತ್ರ ಮಿಸ್ಸಿಂಗ್. ಮತ್ತೆ ಅದೇ ಗತ್ತಿನ ವಿಡಿಯೋ ಹಂಚಿಕೊಂಡು ಯಾವುದಕ್ಕೂ ಅಂಜುವುದಿಲ್ಲ ಎನ್ನುವ ಸಂದೇಶ ನೀಡಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ಇದರ ಜೊತೆಗೆ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ತಾವೇ ಪೋಸ್ಟ್ ಮಾಡಿದ್ದ ವಿಡಿಯೋ ಅದು. ಅದರಲ್ಲಿ ಪ್ರಾಣಿಗಳು ಉತ್ಸಾಹದಲ್ಲಿ ಓಡುತ್ತಿರುವ ದೃಶ್ಯಗಳಿವೆ. ಇದನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಗೆ ಹಾಕಿಕೊಂಡು, "ಮತ್ತೊಂದು ಹೊಸ ದಿನ.. ಹೊಸ ಆರಂಭ" ಎಂದು ಆ ವಿಡಿಯೋದಲ್ಲಿ ಹಾಕಿ ಸ್ಟೋರಿಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಎಲ್ಲವನ್ನೂ ಮರೆತು ಹೊಸ ಆರಂಭ ಮಾಡುತ್ತಿದ್ದಾರಾ? ಅಥವಾ ಇದರ ಹಿಂದೆ ಬೇರೆ ಏನಾದರೂ ಒಳ ಅರ್ಥ ಇದೆಯಾ? ಅಂತ ನೆಟ್ಟಿಗರು ಲೆಕ್ಕಾಚಾರ ಹಾಕುತ್ತಿದ್ದಾರೆ.

Bigg Boss fame Vinay Gowda shared Instagram story after police arrest on reels

ಇನ್ನು ಘಟನೆ ಬಗ್ಗೆ ಬರುವುದಾದರೇ, ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರೂ ಇತ್ತೀಚೆಗೆ ಲಾಂಗ್ ಅನ್ನು ಹಿಡಿದು ವಿಡಿಯೋ ಮಾಡಿದ್ದರು. ಆ ವಿಡಿಯೋದಲ್ಲಿ ಇಬ್ಬರೂ ಲಾಂಗ್ ಹಿಡಿದು ಕ್ಯಾಮರಾ ಮುಂದೆ ಬಿಲ್ಡಪ್ ಕೊಟ್ಟಿದ್ದರು. ಆ ವಿಡಿಯೋವನ್ನು ರಜತ್ ಕಿಶನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಭಯ ಬೀಳಿಸುವಂತಹ ವಾತಾವರಣವನ್ನು ಸೃಷ್ಟಿ ಮಾಡಿದೆ ಎಂದು ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿತ್ತು. ಬಸವೇಶ್ವರ ನಗರ ಪೊಲೀಸರು ಮಧ್ಯಾಹ್ನ ಬಂಧಿಸಿ, ರಾತ್ರೋರಾತ್ರಿ ರಿಲೀಸ್ ಮಾಡಿದ್ದಾರೆ.

ಅಂದ್ಹಾಗೆ, ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರೂ ಕಲರ್ಸ್ ಕನ್ನಡದ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪ್ರೋಮೊದಲ್ಲಿ ಇವರಿಬ್ಬರೂ ಅದೇ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ 'ಬಾಯ್ಸ್ vs ಗರ್ಲ್ಸ್' ರಿಯಾಲಿಟಿ ಶೋ ಶೂಟಿಂಗ್ ಮಾಡುವಾಗಲೇ ಇವರಿಬ್ಬರೂ ಲಾಂಗ್ ಹಿಡಿದು ವಿಡಿಯೋ ಮಾಡಿದ್ದರು ಎಂದು ಗೆಸ್ ಮಾಡಬಹುದು. ಒಟ್ನಲ್ಲಿ ತಮಾಷೆಗೆ ಅಂತ ಮಾಡಿದ ರೀಲ್ಸ್ ಈಗ ಸಂಕಷ್ಟ ತಂದೊಡ್ಡಿದೆ.

ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಹಾಗೂ ರಜತ್ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದರು. ಈ ವೇಳೆ ಇವರಿಬ್ಬರೂ ತಾವು ಹಿಡಿದಿದ್ದು ಫೈಬರ್ ಲಾಂಗ್, ಶೂಟಿಂಗ್‌ಗಾಗಿ ಸೆಟ್ಟಿನಲ್ಲಿದ್ದ ಪ್ರಾಪರ್ಟಿ. ಅದನ್ನು ಬಳಸಿ ರೀಲ್ಸ್ ಮಾಡಿದ್ದೇವೆ. ಅದು ಒರಿಜಿನಲ್ ಲಾಂಗ್ ಅಲ್ಲ ಎಂದು ಹೇಳಿಕೊಂಡಿರುವುದಾಗಿ ವರದಿಯಾಗಿವೆ. ಅದೇನೆ ಇದ್ದರೂ ಇಬ್ಬರೂ ರೀಲ್ಸ್ ಮಾಡಿ ಪೊಲೀಸ್ ಠಾಣೆ ಮೆಟ್ಟಿಲು ಏರಿ ಬಂದಿದ್ದಾರೆ. ಅಲ್ಲದೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು ಎಂದು ಹೇಳಲಾಗಿದೆ.

More from Filmibeat

English summary
Bigg Boss fame Vinay Gowda shared Instagram story after police arrest on reels
Read more about: vinay gowda bigg boss arrest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X