"ಇಷ್ಟು ದಿನ ನಾನು ಮೌನವಾಗಿ ಇದ್ದೆ, ಅಂದ್ರೆ ನಿಮ್ಮ ಟ್ರೋಲ್‌ಗಳನ್ನು ಒಪ್ಪುತ್ತೇನೆ ಎಂದಲ್ಲ"; ನಟಿ ನಮ್ರತಾ ಗೌಡ

ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಕನ್ನಡ 10 ಸ್ಪರ್ಧಿಯಾಗಿರುವ ನಮ್ರತಾ ಗೌಡ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಈ ನಟಿ ಟ್ರೋಲಿಗರ ಕಣ್ಣೀಗೆ ಬೀಳುತ್ತನೇ ಇರುತ್ತಾರೆ. ಇಷ್ಟು ದಿನ ಸಹಿಸಿಕೊಂಡಿದ್ದ ಈ ನಟಿ ಈಗ ಟ್ರೋಲಿಗರಿಗೆ ತಿರುಗೇಟು ಕೊಟ್ಟಿದ್ದಾರೆ.

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋನಿಂದ ಹೊರ ಬಂದ ಬಳಿಕ ನಮ್ರತಾ ಗೌಡ ವಿರುದ್ಧ ಟ್ರೋಲ್ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಇದ್ಯಾವುದರ ಬಗ್ಗೆನೂ ತಲೆ ಕೆಡಿಸಿಕೊಳ್ಳದೆ ನಮ್ರತಾ ಗೌಡ ಮೌನವಾಗಿಯೇ ಇದ್ದರು. ಆದರೆ, ಈಗ ಟ್ರೋಲಿಗರ ವಿರುದ್ಧ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಆ ಪತ್ರದಲ್ಲಿ ಏನಿದೆ? ನಟಿ ನಮ್ರತಾ ಗೌಡ ಈ ಮಟ್ಟಿಗೆ ರೊಚ್ಚಿಗೆಬ್ಬಿಸಲು ಏನು ಕಾರಣ? ಅನ್ನೋದನ್ನು ತಿಳಿಯಲು ಮುಂದೆ ಓದಿ.

namratha Gowda wrote latter on online trolling

ನಮ್ರತಾ ಗೌಡ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ಪತ್ರವನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಸುಮಾರು 13 ಸಾವಿರಕ್ಕೂ ಅಧಿಕ ಮಂದಿ ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ. ನಮ್ರತಾ ಗೌಡ ಬೆಂಬಲಕ್ಕೆ ಬಂದಿದ್ದಾರೆ. ವಿಧವಿಧವಾಗಿ ಕಾಮೆಂಟ್‌ಗಳನ್ನು ಮಾಡಿ ನಟಿಗೆ ಬೆಂಬಲವನ್ನು ಸೂಚಿಸಿದ್ದಾರೆ. ನಟಿ ನಮ್ರತಾ ಗೌಡ ಬರೆದ ಪತ್ರದಲ್ಲಿ ಈ ಎಲ್ಲಾ ಅಂಶಗಳು ಇವೆ.

"ನೆಗೆಟಿವ್‌ಗಳನ್ನು ಹರಡುವ ವ್ಯಕ್ತಿಗಳಿಂದ ನೀವು ಎಷ್ಟು ದೂರು ಇರುತ್ತೀರೋ, ಅವರಿಗೆ ಎಷ್ಟು ಪ್ರತಿಕ್ರಿಯೆಗಳನ್ನು ನೀಡುವಿರೋ ಅಷ್ಟು ಒಳ್ಳೆಯದು. ನೀವು ನಿಮ್ಮ ಜೀವನದಲ್ಲಿ ಅಷ್ಟು ಖುಷಿಯಾಗಿ ಇರುತ್ತೀರ. ಇದರಲ್ಲಿ ನಂಬಿಕೆ ಇಟ್ಟವಳು ನಾನು. ಹಾಗೇ ನಿಮ್ಮ ಆಲೋಚನೆಗಳು ಕೂಡ ಜನರ ಮೇಲೆ ಪರಿಣಾಮ ಬೀರುತ್ತವೆ. ಹಾಗಂತ ಇಷ್ಟು ದಿನ ನಾನು ಮೌನವಾಗಿ ಇದ್ದೇನೆ. ಹಾಗಂತ ನಾನು ನೀವು ಮಾಡುವ ಟ್ರೋಲ್‌ಗಳನ್ನು, ಆಧಾರವಿಲ್ಲದ ಅಭಿಪ್ರಾಯಗಳನ್ನು ಒಪ್ಪುತ್ತೇನೆ ಎಂದು ಅಂದುಕೊಳ್ಳಬೇಡಿ." ಎಂದು ನಟಿ ನಮ್ರತಾ ಗೌಡ ಹೇಳಿದ್ದಾರೆ.

"ಕೆಲವು ಜನರು ಹಾಗೂ ಪೇಜ್‌ಗಳು ನನ್ನ ಬದುಕು ಹಾಗೂ ಪಯಣದ ಬಗ್ಗೆ ತಿಳಿಯದೆ ಬೇರೆಯವರಿಗೆ ಹೋಲಿಕೆ ಮಾಡುತ್ತಿದ್ದಾರೆ. ರಿಯಾಲಿಟಿ ಶೊ ನೀಡಿರುವ ಹೆಸರಿಗೆ ವಿಭಿನ್ನ ರೀತಿಯಲ್ಲಿ ಲೇಬಲ್ ಮಾಡಲಾಗುತ್ತಿದೆ. ಟ್ರೋಲಿಗರು ಏನು ಮಾಡುತ್ತಾರೋ ಅದೆಲ್ಲವನ್ನೂ ಜನರು ನಂಬುತ್ತಿದ್ದಾರೆ ಎಂಬುವುದು ಬೇಸರ ತರಿಸಿದೆ. ಇಂತಹ ಸಂಗತಿಗಳು, ಊಹೆಗಳು ಇನ್ನೊಬ್ಬರ ಜೀವನದ ಮೇಲೆ ಪರಿಣಾಮವನ್ನು ಬೀರುತ್ತವೆ." ಎಂದು ನಮ್ರತಾ ಪತ್ರದಲ್ಲಿ ಬರೆದಿದ್ದಾರೆ.

ನಟಿ ನಮ್ರತಾ ಗೌಡ ಮಾಧ್ಯಮಗಳ ವಿರುದ್ಧವೂ ತಿರುಗಿಬಿದ್ದಿದ್ದಾರೆ. ತಮ್ಮ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. " ಒಂದೂವರೆ ಗಂಟೆಗಳ ಕಾಲ ರಿಯಾಲಿಟಿ ಶೋನಲ್ಲಿ ನನ್ನ ನೋಡಿದ್ದೀರಿ ಎಂದ ಮಾತ್ರಕ್ಕೆ ನಮ್ಮ ಜೀವನ ಹಾಗೂ ಕುಟುಂಬದ ಬಗ್ಗೆ ಕೀಳಾಗಿ ಮಾತಾಡಬಹುದು ಎಂದಲ್ಲ. ಇಷ್ಟೆಲ್ಲ ಮಾಡುವ ಬದಲು ಪಾಸಿಟಿವ್ ಅಂಶಗಳನ್ನು ಬಿತ್ತರಿಸಿ. ನಿಮ್ಮ ಕಂಟೆಂಟ್‌ಗಾಗಿ ನಮ್ಮ ಹೆಸರುಗಳನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಿ. ಒಬ್ಬರನ್ನೊಬ್ಬರು ಹಾನಿ ಮಾಡಿಕೊಳ್ಳುವುದಕ್ಕಿಂತ ಒಟ್ಟಿಗೆ ಬೆಳೆಯೋಣ. ಇಂತಹ ಘಟನೆಯಲ್ಲಿ ಯಾರಿಗೆಲ್ಲ ನೋವಾಗಿದೆಯೋ ಅವರ ಪರವಾಗಿ ಇರೋಣ" ಎಂದು ನಮ್ರತಾ ಬರೆದುಕೊಂಡಿದ್ದಾರೆ.

ಈ ಪತ್ರಕ್ಕೆ ನೆಟ್ಟಿಗರು ನಮ್ರತಾ ಗೌಡ ಬೆಂಬಲಕ್ಕೆ ಬಂದಿದ್ದಾರೆ. ನೆಟ್ಟಿಗರೊಬ್ಬರು "ಡೋಂಟ್ ವರಿ ನಮ್ಮು.. ಅಭಿಮಾನಿಗಳು ಯಾವತ್ತೂ ಕೈ ಬಿಡುವುದಿಲ್ಲ" ಎಂದಿದ್ದಾರೆ. ಹಾಗೇ ಇನ್ನೊಬ್ಬರು "ಡೋಂಟ್ ಫೀಲ್ ಬ್ಯಾಡ್, ನಾವು ನಿಮ್ಮೊಂದಿಗೆ ಇದ್ದೇವೆ" ಎಂದಿದ್ದಾರೆ. ಮತ್ತೊಬ್ಬರು " ಎಲ್ಲರನ್ನೂ ಬೊಗಳುವುದಕ್ಕೆ ಬಿಡಿ. ನೀವು ತಲೆ ಎತ್ತಿ ನಡೆಯಿರಿ. ಯಾಕಂದ್ರೆ, ನೀವು ಬೆಸ್ಟ್" ಎಂದು ಕಾಮೆಂಟ್ ಮಾಡಿದ್ದಾರೆ.

More from Filmibeat

English summary
Bigg Boss Kannada 10 contestant actress Namratha Gowda wrote latter on online trolling
Read more about: bigg boss filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X