ಕೃಷ್ಟಿ ಹೊಂಡಕ್ಕೆ ಕೆಮಿಕಲ್ ಹಾಕಿ ಸ್ಟೋಟ; ಬಿಗ್‌ಬಾಸ್ ಕನ್ನಡ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಬಂಧನ
ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮತ್ತೆ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರಿಂದ ಪ್ರೀತಿಯನ್ನು ಗಳಿಸಿದ್ದ ಪ್ರತಾಪ್ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋವನ್ನು ಹರಿದಾಡಿತ್ತು. ಅದೇ ಡ್ರೋನ್ ಪ್ರತಾಪ್ ಬಂಧನಕ್ಕೆ ಕಾರಣ.
ಡ್ರೋನ್ ಪ್ರತಾಪ್ ಕೃಷಿ ಹೊಂಡದಲ್ಲಿ ರಾಸಾಯನಿಕವನ್ನು ಬಳಸಿ ಸ್ಟೋಟ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದಂತೆ ಡ್ರೋನ್ ಪ್ರತಾಪ್ ವಿರುದ್ಧ ಮಧುಗಿರಿ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ಡ್ರೋನ್ ಪ್ರತಾಪ್ ಅನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಡ್ರೋನ್ ಪ್ರತಾಪ್ ಈಗಾಗಲೇ ವಿವಾದಗಳಿಗೆ ಸಿಕ್ಕಿಕೊಂಡು ಸಂಕಷ್ಟು ಅನುಭವಿಸಿದ್ದರು. ಬಳಿಕ ಬಿಗ್‌ಬಾಸ್ ಮನೆಗೆ ಪ್ರವೇಶ ಕೊಟ್ಟು ಹೊರಬಂದ ಬಳಿಕೆ ಜನರು ಅವರ ತಪ್ಪುಗಳನ್ನು ಮನ್ನಿಸಿದ್ದರು. ಅಲ್ಲಿಂದ ಡ್ರೋನ್ ಪ್ರತಾಪ್ ಹೊಸ ಬದುಕನ್ನು ಆರಂಭಿಸುವುದಾಗಿ ಹೇಳಿದ್ದರು. ಅವರ ಕುಟುಂಬವನ್ನು ಸೇರಿಕೊಂಡಿದ್ದರು. ಎಲ್ಲವೂ ಸರಿ ಹೋಗಿದೆ ಅನ್ನುವಾಗಲೇ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಡ್ರೋನ್ ಪ್ರತಾಪ್ ಇತ್ತೀಚೆಗೆ ವಿಜ್ಞಾನಕ್ಕೆ ಸಂಬಂಧಿಸಿದ ಕೆಲವು ಪ್ರಯೋಗಗಳನ್ನು ಮಾಡುವ ವಿಡಿಯೋಗಳನ್ನು ಮಾಡುತ್ತಿದ್ದರು. ಕೆಲ ವಿಡಿಯೋಗೆ ಜನಪ್ರಿಯತೆ ಸಿಕ್ಕಿದ ಬೆನ್ನಲ್ಲೇ ಮಧುಗಿರಿ ಸಮೀಪವಿರುವ ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿ ಸೋಡಿಯಂ ರಾಸಾಯನಿಕವನ್ನು ಬಳಸಿ, ಕೃಷಿ ಹೊಂಡದಲ್ಲಿ ಸ್ಟೋಟಿಸಿದ್ದರು. ಇದನ್ನು ವಿಡಿಯೋ ಮಾಡಿ ಶೇರ್ ಕೂಡ ಮಾಡಿಕೊಂಡಿದ್ದರು.
ವಿಡಿಯೋ ನೋಡಿದ ಬಳಿಕ ಮಿಡಿಗೇಶಿ ಠಾಣೆಯಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ದೂರನ್ನು ದಾಖಲಿಸಿದ್ದರು. ಈ ದೂರಿನ ಅನ್ವಯ ಡ್ರೋನ್ ಪ್ರತಾಪ್ ಅವರನ್ನು ಮಿಡಿಗೇಶಿ ಠಾಣೆಯ ಪೊಲೀಸರು ಬಂಧಿಸಿ, ವಿಚಾರಣೆ ಮಾಡುತ್ತಿದ್ದಾರೆ. ಸೋಡಿಯಂ ನೀರಿನೊಂದಿಗೆ ಬೆರೆತಾಗ ಸ್ಟೋಟಗೊಳ್ಳುತ್ತದೆ ಎಂಬುವುದನ್ನು ಪ್ರಯೋಗದ ಮೂಲಕ ತೋರಿಸುವುದಕ್ಕೆ ಮುಂದಾಗಿದ್ದರು.
ಡ್ರೋನ್ ಪ್ರತಾಪ್‌ಗೆ ಹೀಗೆ ಸ್ಟೋಟ ಮಾಡಿದ್ದರ ವಿರುದ್ಧ ಐಸಿಸಿ ಸೆಕ್ಷನ್ 288 ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3ರ ಅಡಿ ಡ್ರೋನ್ ಪ್ರತಾಪ್ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ತುಮಕೂರಿನ ಪೊಲೀಸರು ಈ ವಿಚಾರವಾಗಿ ಈಗ ಡ್ರೋನ್ ಪ್ರತಾಪ್ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ಡ್ರೋನ್ ಪ್ರತಾಪ್ ಸ್ಪೋಟ ಮಾಡಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಭಾರಿ ವಿರೋಧ ವ್ಯಕ್ತವಾಗಿತ್ತು.
ಡ್ರೋನ್ ಪ್ರತಾಪ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು. ಹಾಗೇ ಸಾರ್ವಜನಿಕರು ಕೂಡ ಪ್ರತಾಪ್ ವಿರುದ್ಧ ಕಿಡಿಕಾರಿದ್ದರು. ಈಗ ತಾನೇ ತನ್ನ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ತಮ್ಮ ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸಿದ್ದರು. ಜನರು ಕೂಡ ಪ್ರತಾಪ್‌ಗೆ ಪ್ರೀತಿಯನ್ನು ನೀಡಿದ್ದರು. ಇದೇ ವೇಳೆ ಇಂತಹದ್ದೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಬಿಗ್‌ಬಾಸ್ ಅಂತ ರಿಯಾಲಿಟಿ ಶೋಗೆ ಹೋಗಿ ಸಂಪಾಧಿಸಿದ ಗೌರವವೆಲ್ಲ ಮತ್ತೆ ಕಳೆದುಕೊಂಡಂತೆ ಆಗಿದೆ. ಸದ್ಯ ಪೊಲೀಸರು ಡ್ರೋನ್ ಪ್ರತಾಪ್‌ರನ್ನು ಬಂಧಿಸಿದ್ದಾರೆ. ಈ ಪ್ರಕರಣ ಮುಂದೇನಾಗುತ್ತೆ ಅನ್ನೋದು ನೋಡಬೇಕಿದೆ.


Click it and Unblock the Notifications











