ಬಾಯ್‌ಫ್ರೆಂಡ್ ಜೊತೆ ಬಿಗ್‌ಬಾಸ್ 'ಬೆಂಕಿ' ತನಿಷಾ ಕುಪ್ಪಂಡಾ ಬ್ರೇಕಪ್ ಮಾಡಿಕೊಂಡಿದ್ದೇಕೆ?

ಬಿಗ್‌ಬಾಸ್ ಕನ್ನಡ ಸೀಸನ್ 10 ಈ ಹಿಂದೆ ಬಂದಿದ್ದಕ್ಕಿಂತ ಹೆಚ್ಚು ಯಶಸ್ಸು ಕಂಡ ರಿಯಾಲಿಟಿ ಶೋ. ಈ ರಿಯಾಲಿಟಿ ಶೋನ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ತನಿಷಾ ಕುಪ್ಪಂಡಾ ಮತ್ತಷ್ಟು ಜನಪ್ರಿಯತೆ ಸಿಕ್ಕಿತ್ತು. ಈ ಶೋನಿಂದಲೇ ತನಿಷಾಗೆ ಬೆಂಕಿ ಅನ್ನೋ ಬಿರುದು ಕೂಡ ಸಿಕ್ಕಿದೆ. ಇದೇ ಜನಪ್ರಿಯತೆಯನ್ನು ತನಿಷಾ ಕೂಡ ಮುಂದುವರೆಸಿಕೊಂಡು ಮುನ್ನುಗ್ಗುತ್ತಿದ್ದಾರೆ.

ಬಿಗ್‌ಬಾಸ್‌ನಿಂದ ಹೊರಬರುತ್ತಿದ್ದಂತೆ ನಟನೆ ಜೊತೆ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ತಮ್ಮದೇ ಜ್ಯುವೆಲರಿ ಮಳಿಗೆಯನ್ನು ಇತ್ತೀಚೆಗಷ್ಟೇ ಓಪನ್ ಮಾಡಿದ್ದಾರೆ. ಬಹುದಿನಗಳ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇಷ್ಟು ದೂರು ನಡೆದು ಬಂದಿರೋ ತನಿಷಾ ಕುಪ್ಪಂಡಾಗೂ ಹಿಂದೆ ಲವ್ ಆಗಿತ್ತು. ಬಾಯ್‌ಫ್ರೆಂಡ್ ಇದ್ದರು.

Bigg Boss Kannada 10 fame Tanisha Kuppanda opens up about her break up with boyfriend

ತನಿಷಾ ಕುಪ್ಪಂಡಾ ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಲವ್‌ನಲ್ಲಿ ಬಿದ್ದಿದ್ದರು. ಇವರ ಬಾಯ್‌ಫ್ರೆಂಡ್ ಕೂಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದರು. ಬರೋಬ್ಬರಿ 6 ವರ್ಷಗಳ ಕಾಲ ಪ್ರೀತಿ ಮಾಡಿದ್ದ ಈ ಜೋಡಿ ಬ್ರೇಕಪ್ ಮಾಡಿಕೊಂಡಿತ್ತು. ಅಷ್ಟಕ್ಕೂ ಬ್ರೇಕಪ್ ಯಾವ ಕಾರಣಕ್ಕೆ ಆಯ್ತು ಅನ್ನೋದನ್ನು ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ಎಲ್ಲರ ಲೈಫ್‌ನಲ್ಲೂ ಲವ್ ಅನ್ನೋದು ಇದ್ದೇ ಇರುತ್ತೆ. ನನ್ನ ಲೈಫ್‌ನಲ್ಲೂ ಇತ್ತು. ಕಾಲೇಜ್ ಮುಗಿಯುವವರೆಗೂ ಪ್ರೀತಿ ಮಾಡಬಾರದು ಅನ್ನೋದು ಕ್ಲಿಯರ್ ಇತ್ತು. ಬಳಿಕ ಲವ್ ಆಗಿತ್ತು. ಅವರು ಸಿನಿಮಾದವರೇನೆ. ಒಂದೆರಡು ಸಿನಿಮಾ ಮಾಡಿದ್ದಾರೆ. ಈಗ ಅವರು ಚಿತ್ರರಂಗದಲ್ಲೂ ಇದ್ದಾರಾ ಅನ್ನೋದು ನನಗೆ ಗೊತ್ತಿಲ್ಲ. ಆ ಟೈಮ್‌ನಲ್ಲಿ ಅವರು ಮತ್ತು ನಾನು ಇಬ್ಬರು ಕಷ್ಟ ಪಡುತ್ತಿದ್ದೇವು. ಈ ಪ್ರೀತಿ ಕೆಟ್ಟದು ಅಂತ ಹೇಳುತ್ತಿದ್ದಲ್ಲ. ಆದರೆ, ಬ್ರೇಕಪ್ ಆಗಿದ್ದು ಕೆಟ್ಟದಾಗಿತ್ತು" ಎಂದು ತನಿಷಾ ಕುಪ್ಪಂಡಾ ಹೇಳಿಕೊಂಡಿದ್ದಾರೆ.

ತನಿಷಾ ಕುಪ್ಪಂಡಾಗೆ ಆಫರ್‌ಗಳು ಬರುತ್ತಿದ್ದವು. ಇತ್ತ ಬಾಯ್‌ಫ್ರೆಂಡ್‌ ಸಿಕ್ಕಾಪಟ್ಟೆ ಪೊಸೆಸಿವ್ ಆಗಿದ್ದರು. ತನಿಷಾರನ್ನು ಕಂಟ್ರೋಲ್ ಮಾಡುವುದಕ್ಕೆ ಹೊರಟಿದ್ದರು. ಇದು ಅವರ ವೃತ್ತಿ ಬದುಕಿಗೆ ಹಿನ್ನೆಡೆಯಾಗಿತ್ತು.

Bigg Boss Kannada 10 fame Tanisha Kuppanda opens up about her break up with boyfriend

"ಅಪ್ಪ ಅಮ್ಮ ಫ್ಯಾಮಿಲಿ ಫ್ರೆಂಡ್ಸ್ ಎಲ್ಲರನ್ನೂ ಎದುರಾಕಿಕೊಂಡು ಇದೇ ಇಂಡಸ್ಟ್ರಿಯಲ್ಲಿ ಏನಾದರೂ ಸಾಧಿಸುತ್ತೇನೆ ಅಂತ ಮುನ್ನುಗ್ಗುತ್ತಿರುವಾಗ, ಸಣ್ಣ ಪುಟ್ಟ ಅವಕಾಶ ಸಿಗುತ್ತಿದ್ದ ಸಮಯದಲ್ಲಿ ಇಂಡಸ್ಟ್ರಿ ಸರಿಯಿಲ್ಲ ಅಂತ ಹೇಳಿ ಸಿನಿಮಾ ಬೇಡ ಅಂತ ಹೇಳಿರುವಂತಹದ್ದು. ಸರಿ ಸಿನಿಮಾ ಬೇಡ ಅಂತ ಸೀರಿಯಲ್‌ಗೆ ಬಂದಿರುವಂತಹದ್ದು. ಸೀರಿಯಲ್ ಚೆನ್ನಾಗಿ ನಡೀತಿದೆ ಅನ್ನುವಾಗ, ನಾನು ಒಳ್ಳೆಯ ಮನೆತನಕ್ಕೆ ಸೇರಿದವನು. ಸೀರಿಯಲ್ ಎಲ್ಲಾ ನಡೆಯಲ್ಲ ಅನ್ನೋದು ಬಂದಾಗ, ನೀವು ಮುಖ್ಯ ಅಂತ ಸೀರಿಯಲ್ ಅನ್ನು ಕೂಡ ಬಿಡುತ್ತೇನೆ." ಎಂದು ಧಾರಾವಾಹಿಯಿಂದಲೂ ದೂರವಾಗಿದ್ದನ್ನು ನೆನಪಿಸಿಕೊಂಡಿದ್ದಾರೆ.

ತನಿಷಾ ತಪ್ಪಂಡಾ ಅವರೇ ಅವಕಾಶಗಳಿಗಾಗಿ ಹುಡುಕಿಕೊಂಡು ಹೋಗುತ್ತಿದ್ದರು. ಆದರೆ, ಸೀರಿಯಲ್‌ನಲ್ಲಿ ನಟಿಸುವ ಸಂದರ್ಭದಲ್ಲಿ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಸುಮಾರು 8 ರಿಂದ 10 ಆಫರ್‌ಗಳನ್ನು ಬಾಯ್‌ಫ್ರೆಂಡ್‌ಗಾಗಿ ಬಿಟ್ಟಿದ್ದರು. ಆ ಸಮಯದಲ್ಲಿ ಭಾಯ್‌ಫ್ರೆಂಡ್ ತುಂಬಾನೇ ಮುಖ್ಯ ಅಂತ ಭಾವಿಸಿದ್ದರು. ಮತ್ತೆ 'ಪ್ರೀತಿ ಅಂದರೇನು?' ಅನ್ನೋ ಸೀರಿಯಲ್ ಮೂಲಕ ಮರಳಿದ್ದರು.

"ಮತ್ತೆ ಪ್ರಮುಖ ಪಾತ್ರ ಮಾಡಿದ್ರೆ ತಾನೇ ಸಮಸ್ಯೆ. ಅತ್ತಿಗೆ ಪಾತ್ರ ಚಿಕ್ಕಪುಟ್ಟ ಪಾತ್ರ ಮಾಡ್ತೀನಿ ಅಂತ ಬಾಯ್‌ಫ್ರೆಂಡ್ ಅನ್ನು ಒಪ್ಪಿಸಿದ್ದರು. ಈ ವೇಳೆನೂ ಸ್ವಲ್ಪ ಮುಜುಗರವಿತ್ತು. ಅಣ್ಣ ಅಂತ ಕರೆಯಬೇಕು. ಜಾಸ್ತಿ ಮಾತಾಡಬೇಡ ಅದೆಲ್ಲ ಇತ್ತು. ಸೀರಿಯಲ್‌ಗೆ ಬಂದು ಚೆಕ್ ಮಾಡೋದು. ಫೋನ್‌ನಲ್ಲೇ ಇರಬೇಕು ಅಂತ ಅನ್ನೋದು ಎಲ್ಲ ಇತ್ತು. ಹೀಗಿದ್ದರೂ ಯಾರೋ ಒಬ್ಬರ ಮೇಲೆ ಅನುಮಾನ ಬರುತ್ತೆ. ಆಗ ಕಿತ್ತಾಟ, ಕೋಪ ಎಲ್ಲಾ ನಡೆಯುತ್ತಿರುತ್ತೆ. ಅವರು ಅನುಮಾನ ಪಟ್ಟವರು ಆರೋಗ್ಯಕ್ಕೀಡಾಗುತ್ತಾರೆ. ಆ ನನ್ನ ಸಹನಟನ ಸಾವಾಗುತ್ತೆ. ಆಗಲೇ ನಾನು ಡಿಸೈಡ್ ಮಾಡಿದೆ. ಇಲ್ಲ ಇದು ಇನ್ನೂ ಮುಂದೆ ಹೋದರೆ ಚೆನ್ನಾಗಿರಲ್ಲ ಅಂತ ಹೇಳಿ 6 ವರ್ಷ ರಿಲೇಷನ್‌ಶಿಪ್‌ ಅನ್ನು ಮುರಿದುಕೊಂಡೆ." ಎಂದು ತನಿಷಾ ಕುಪ್ಪಂಡ ಬ್ರೇಕಪ್ ಬಗ್ಗೆ ರಿವೀಲ್ ಮಾಡಿದ್ದಾರೆ.

More from Filmibeat

English summary
Actress Tanisha Kuppanda opens up about her break up:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X