ಚೈತ್ರಾ ಕುಂದಾಪುರ ಜೊತೆ ರಕ್ಷಿತ್, ರಿಷಬ್ ಶೆಟ್ಟಿ 'ಕಿರಿಕ್' ಸಂದರ್ಶನ; ಆಗ ಹೇಗಿದ್ದರು ನೋಡಿದ್ದೀರಾ?

ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಗಳದ್ದು ಒಂದೊಂದು ಹಿನ್ನೆಲೆಯಿದೆ. ಸಿನಿಮಾ, ಕಿರಿತೆರೆ, ಹೋರಾಟ ಹೀಗೆ ಒಂದೊಂದು ಕ್ಷೇತ್ರದಿಂದ ಒಬ್ಬೊಬ್ಬರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲಿ ಫೈರ್ ಬ್ರ್ಯಾಂಡ್ ಅಂತಲೇ ಬಿಗ್‌ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿ ಚೈತ್ರಾ ಕುಂದಾಪುರ. ಗಟ್ಟಿ ಧ್ವನಿಯ ಚೈತ್ರಾ ಕುಂದಾಪುರ ಮನೆಯೊಳಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೂ ಮುನ್ನ ಚೈತ್ರಾ ಕುಂದಾಪುರ ಹೆಸರು ಜನಪ್ರಿಯರವಾಗಿತ್ತು. ಫೈರ್ ಬ್ರ್ಯಾಂಡ್ ಭಾಷಣಕಾರ್ತಿ ಎಂದೇ ಚೈತ್ರಾ ಕುಂದಾಪುರ ಜನಪ್ರಿಯತೆ ಪಡೆದುಕೊಂಡಿದ್ದರು. ವೇದಿಕೆ ಮೇಲೆ ನಿರ್ಭಯವಾಗಿ ಭಾಷಣ ಮಾಡುತ್ತಿದ್ದ ಚೈತ್ರಾ ಕುಂದಾಪುರ ಅವರಿಗೆ ಅವರದ್ದೇ ಆದ ಫ್ಯಾನ್ ಫಾಲೋವಿಂಗ್ ಇದೆ. ಈಗ ಬಿಗ್‌ ಬಾಸ್ ಮನೆಯೊಳಗೆ ಸದ್ದು ಮಾಡುತ್ತಿದ್ದಾರೆ.

Bigg Boss Kannada 11 contestant Chaitra Kundapura once interviewed Rakshit Shetty and Rishab Shetty

ಚೈತ್ರಾ ಕುಂದಾಪುರ ಬಿಗ್‌ಬಾಸ್ ಮನೆಗೆ ಸೇರುವುದಕ್ಕೂ ಮುನ್ನ ವಿವಾದದಲ್ಲಿಯೂ ಸಿಕ್ಕಿಕೊಂಡಿದ್ದರು. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಎಂಬುವವರಿಂದ 5 ಕೋಟಿ ರೂಪಾಯಿ ಪಡೆದಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಸದ್ಯ ಅವರೀಗ ಜಾಮೀನ ಮೇಲೆ ಹೊರಗಿದ್ದು, ಕೇಸ್ ನಡೆಯುತ್ತಿದೆ. ಇಷ್ಟೆಲ್ಲ ಸದ್ದು ಮಾಡಿರುವ ಚೈತ್ರಾ ಜನಪ್ರಿಯತೆ ಪಡೆದುಕೊಳ್ಳುವುದಕ್ಕೂ ಮುನ್ನ ನಿರೂಪಕಿಯಾಗಿದ್ದರು ಅನ್ನೋ ವಿಷಯ ಗೊತ್ತೇ?

ಲಾಯರ್ ಜಗದೀಶ್ ಬಳಿಕ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳನ್ನು ನಡುಗಿಸುತ್ತಿರುವವರು ಚೈತ್ರಾ ಕುಂದಾಪುರ. ತಮ್ಮ ಆಕ್ರಮಣಕಾರಿ ಮಾತುಗಳಿಂದ ಚೈತ್ರಾ ಕುಂದಾಪುರ ಸ್ಪರ್ಧಿಗಳನ್ನು ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಕಾರಣಕ್ಕೆ ಕೆಲವರ ವಿರೋಧವನ್ನೂ ಕಟ್ಟಿಕೊಂಡಿದ್ದಾರೆ. ಕೆಲವೊಮ್ಮೆ ಚೈತ್ರಾ ಅವರು ಬಳಸುತ್ತಿರುವ ಪದ ಬಳಕೆಯ ಬಗ್ಗೆನೂ ಹೊರಗಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಕೂಡ ಇದೇ ವಿಚಾರಕ್ಕೆ ಕ್ಲಾಸ್ ತೆಗೆದುಕೊಂಡಿದ್ದರು.

ನಿಮಗೆ ಗೊತ್ತಾ ಚೈತ್ರಾ ಕುಂದಾಪುರ ಫೈರ್‌ ಬ್ರ್ಯಾಂಡ್ ಭಾಷಣಗಾರ್ತಿ ಆಗುವುದಕ್ಕೂ ಮುನ್ನ ಅವರು ನಿರೂಪಕಿಯಾಗಿದ್ದರು. ಉಡುಪಿ ಜಿಲ್ಲೆಯ ಕುಂದಾರಪುರದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ಬಳಿಕ ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದ್ದರು. ಬಳಿಕ ಉಡುಪಿಯ ಲೋಕಲ್ ನ್ಯೂಸ್ ಚಾನೆಲ್ ಸ್ಪಂದನಾ ಹಾಗೂ ಮುಕ್ತ ನ್ಯೂಸ್‌ನಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಮುಕ್ತ ನ್ಯೂಸ್‌ನಲ್ಲಿ ಕೆಲಸ ಮಾಡುವಾಗ ಚೈತ್ರಾ ಕುಂದಾಪುರ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ಸಂಯುಕ್ತ ಹೆಗ್ಡೆಯನ್ನು ಸಂದರ್ಶನ ಮಾಡಿದ್ದರು.

Bigg Boss Kannada 11 contestant Chaitra Kundapura once interviewed Rakshit Shetty and Rishab Shetty

ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ ಬಂದಾಗ ಚೈತ್ರಾ ಕುಂದಾಪುರ ಅವರಿಗೆ ಶುಭ ಕೋರಿ ಒಂದು ಫೋಟೋವನ್ನು ಹಂಚಿಕೊಂಡಿದ್ದರು. ಇದರಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ಸಂಯುಕ್ತ ಹೆಗ್ಡೆ ಇದ್ದಾರೆ. ಈ ಫೋಟೋ ಜೊತೆಗೆ "ಸುದ್ದಿ ನಿರೂಪಕಿ ಆಗಿದ್ದಾಗ ಕಿರಿಕ್ ಪಾರ್ಟಿ ಸಕ್ಸಸ್ ಇಂಟರ್ವ್ಯೂವ್ ನಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಸಂಯುಕ್ತ ಹೆಗ್ಡೆ ಜೊತೆ" ಎಂದು ಬರೆದುಕೊಂಡಿದ್ದಾರೆ. ಇದೇ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ದಿಢೀರನೇ ಸದ್ದು ಮಾಡುತ್ತಿದೆ.

ಈಗ ಬಿಗ್ ಬಾಸ್ ಮನೆಯೊಳಗೆ ಚೈತ್ರಾ ಕುಂದಾಪುರ ಹವಾ ಎಬ್ಬಿಸಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳಿಗೆ ಖಡಕ್ ಉತ್ತರ ಕೊಡುತ್ತಿರುವ ಚೈತ್ರಾ ಕುಂದಾಪುರ ಪದ ಬಳಕೆ ಬಗ್ಗೆ ಟೀಕೆಗಳು ಎದ್ದಿವೆ. ಲಾಯರ್ ಜಗದೀಶ್ ಅಂತೆಯೇ ಚೈತ್ರಾ ಬಳಸುವ ಪದಗಳ ಬಗ್ಗೆಯೂ ಮನೆಯ ಹೊರಗೆ ಗರಂ ಆಗಿದ್ದಾರೆ. ಈ ವಿಚಾರವಾಗಿ ಕಿಚ್ಚ ಸುದೀಪ್ ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಆದರೆ, ಚೈತ್ರಾ ಮಾತ್ರ ಕಿಚ್ಚನ ಸಲಹೆಗಳನ್ನು ವಿರೋಧಿಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X