ಜಗದೀಶ್ Vs ನಾಗರಾಜ್; 'ಜೋಡೆತ್ತು', 'ಬೆಂಕಿ ಜೋಡಿ','ನಾಗ್ಯ ಬಾಸ್' ನೆಟ್ಟಿಗರು ಕೊಟ್ಟ ಟೈಟಲ್ ಒಂದೆರಲ್ಲ!
ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಇಬ್ಬರು ವ್ಯಕ್ತಿಗಳು ಅಂದರೆ, ಅದು ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಹಾಗೂ ಹಾವೇರಿ ಹುಲಿ ಲಾಯರ್ ನಾಗರಾಜ್ ಕುಡಪಲಿ. ಇಬ್ಬರೂ ವೃತ್ತಿಯಲ್ಲಿ ವಕೀಲರಾಗಿದ್ದವರು. ಈಗ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಕಾರಣಗಳಿಗೆ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಲಾಯರ್ ಜಗದೀಶ್ ಬಿಗ್ ಬಾಸ್‌ಗೆ ಹೋಗಿ ಬಂದಲ್ಲಿಂದ ನಾಗರಾಜ್ ಕುಡಪಲಿ ಕೆಂಡಾಮಂಡಲ ಆಗಿದ್ದಾರೆ.
ಬಿಗ್‌ಬಾಸ್ ಮನೆಯೊಳಗೆ ಲಾಯರ್ ಜಗದೀಶ್ ಪ್ರವೇಶ ಮಾಡಿದ ದಿನದಿಂದಲೇ ನಾಗರಾಜ್ ಕುಡಪಲಿ ತಮ್ಮ ಅಸಮಧಾನ ಹೊರ ಹಾಕಿದ್ದರು. ಲಾಯರ್ ಜಗದೀಶ್‌ರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಲಾಯರ್ ಜಗದೀಶ್ ಹೊರಗೆ ಬಂದ್ಮೇಲೆ ಇಬ್ಬರ ಕಿತ್ತಾಟವೀಗ ತಾರಕಕ್ಕೇರಿದೆ.

ಸದ್ಯ ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರು ಫೋನ್‌ನಲ್ಲಿ ಕಿತ್ತಾಡಿಕೊಂಡ ಸಂಭಾಷಣೆಯ ತುಣುಕುಗಳು ವೈರಲ್ ಆಗುತ್ತಿದೆ. ಇಬ್ಬರೂ ನಾನಾ ನೀನಾ ಅಂತ ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿ ನೆಟ್ಟಿಗರು ಕೂಡ ಮಜಾ ತೆಗೆದುಕೊಂಡಿದ್ದಾರೆ. ಸದ್ಯ ಇಬ್ಬರೂ ಮಾನನಷ್ಟ ಕೇಸ್ ಹಾಕಿಕೊಳ್ಳುವ ಲೆವೆಲ್‌ಗೆ ಬಂದು ನಿಂತಿದೆ.
ಬಿಗ್ ಬಾಸ್ ಜಗದೀಶ್ ಅವರಿಗೆ ಇದ್ದಂತೆಯೇ ನಾಗರಾಜ್ ಕುಡಪಲಿಗೂ ಸೋಶಿಯಲ್ ಮೀಡಿಯಾದಲ್ಲಿ ಬೆಂಬಲಿಗರಿದ್ದಾರೆ. ಅವರ ವಿಡಿಯೋಗಳನ್ನು ಫಾಲೋ ಮಾಡುವವರ ದೊಡ್ಡ ಬಳಗವಿದೆ. ಫೋನ್‌ನಲ್ಲಿ ಇವರಿಬ್ಬರ ಕಿತ್ತಾಟದ ಬಳಿಕ ದರ್ಶನ್ ಅಭಿಮಾನಿಗಳು ನಾಗರಾಜ್ ಬೆಂಬಲಕ್ಕೆ ಬಂತು ನಿಂತಿದ್ದಾರೆ. ಅಷ್ಟಕ್ಕೂ ಇವರಿಬ್ಬರ ಕಿತ್ತಾಟದ ಸಂಭಾಷಣೆಯ ಒಂದು ಝಲಕ್ ಇಲ್ಲಿದೆ.
ನಾಗರಾಜ್: ಬಿಗ್ ಬಾಸ್‌ನಲ್ಲಿ ಹೊಡೆತ ತಿಂದು ಬರುತ್ತಿದ್ದೆಯಲ್ಲ ನೀನು.
ಜಗದೀಶ್: ಇರಲಿ ಬಿಡೋ.. ಹೊಡೆತನೇ ತಿಂದೆ. ನಿನಗೆ ಏನಿವಾಗ? ನೀನು ಬಿಗ್‌ಬಾಸ್‌ಗೆ ಹೋಗಿಲ್ಲ ಅಂತ ನೋವಾ ನಿನಗೆ?
ನಾಗರಾಜ್: ಇಲ್ಲಪ್ಪ.. ನಾನ್ಯಾಕೆ ಹೋಗಲಿ ಅಲ್ಲಿ. ಅಲ್ಲೋ ನೀನು ಖಾಲಿ ಇದ್ದೀಯ.. ಅದಕ್ಕೆ ಹೋಗಿದ್ದೀಯ. ಅಲ್ಲೋ ನೀನು ಖಾಲಿ ಇದ್ದಿಯೋ ಜಗದೀಶ. ನೀನು ನನ್ನ ಮನೆಗೆ ಬಂದು ತಿಂದು ಹೋಗಿದ್ದೀಯ. ಋಣ ಇಲ್ಲವಲ್ಲೋ ನಿನಗೆ. ನಿನಗೆ ಕಾನೂನಿನ ಒಂದು ಸೆಕ್ಷನ್ ಗೊತ್ತಿಲ್ಲ. ಒಂದು 439 ಸೆಕ್ಷನ್ ಗೊತ್ತಿಲ್ಲ ನಿನಗೆ. ಹೋಗಿ ಜಾರಕಿಹೊಳಿ ಮೇಲೆ ಕೇಸ್ ಹಾಕಿದ್ದೆ. ಅದನ್ನು ಅಲ್ಲಿಗೆ ಬಿಟ್ಟೆ. ಏನು ಮಾಡಿದ್ದೀಯಾ? ಒಂದು ಕಂಪ್ಲೆಂಟ್ ಕೊಡುವುದಕ್ಕೆ ಬರುತ್ತಾ ನಿನಗೆ? ಕ್ರಿಮಿನಲ್ ನಾಲೆಡ್ಜ್ ಇದೆಯಾ ನಿನಗೆ? ಲಾಯರ್ ನೀನು? ನನಗೆ ಪ್ರಾಕ್ಟೀಸ್ ಆಗಿರೋ ವಯಸ್ಸಾಗಿಲ್ಲ ನಿನಗೆ, ಎಷ್ಟು ಮಾತಾಡುತ್ತೀಯ?
ಜಗದೀಶ್: ಮಾತಾಡು.. ಮಾತಾಡು..
ನಾಗರಾಜ್: ನೀನು ಮಾತಾಡಲೇ. ಸೀನಿಯರ್‌ಗೆ ಲೇ.. ಅಂದಿದ್ದೀಯ. ಮಾನನಷ್ಟ ಕೇಸ್ ಹಾಕುತ್ತೇನೆ. ನಾಳೆನೇ ಹಾಕುತ್ತೇನೆ. ಇಡಲೇ ಫೋನ್ ಇಡಲೇ. ನನ್ನ ಬಾಯಿ ಇನ್ನೂ ಹೊಲಸು ಆಗುತ್ತೆ.
ಲಾಯರ್ ಜಗದೀಶ್ ಹಾಗೂ ಲಾಯರ್ ನಾಗರಾಜ್ ಕುಡಪಲಿ ಫೋನ್ ಸಂಭಾಷಣೆಯನ್ನು ಕೇಳಿಕೊಂಡ ನೆಟ್ಟಿಗರೂ ಮಸ್ತ್ ಆಗಿಯೇ ಕಾಮೆಂಟ್ ಮಾಡಿದ್ದಾರೆ. ಅದರಲ್ಲೂ ಕೆಲವರು ನಾಗರಾಜ್ ಅವರನ್ನು ನಾಗ್ಯ ಬಾಸ್ ಅಂತ ಕರೆಯುವುದಕ್ಕೂ ಶುರು ಮಾಡಿದ್ದಾರೆ. ಅಷ್ಟಕ್ಕೂ ನೆಟ್ಟಿಗರು ಕೊಟ್ಟ ಪ್ರತಿಕ್ರಿಯೆ ಹೇಗಿದೆ? ಅನ್ನೋ ಸ್ಯಾಂಪಲ್ ಇಲ್ಲಿದೆ ನೋಡಿ.
ನೆಟ್ಟಿಗರೊಬ್ಬರು "ಜೈ ಡಿ ಬಾಸ್ ಜೈ ನಾಗು ಬಾಸ್" ಅಂದರೆ, ಇನ್ನೊಬ್ಬರು "ಕುಡುಪಲ್ಲಿ ರಾಕ್.. ಜಾಗಿಂಗ್ ಶಾಕ್" ಎಂದಿದ್ದಾರೆ. "ಎರಡು ಸಿಂಹಗಳ ಕಾಳಗ", "ಇಬ್ಬರು ಹುಚ್ಚು ಸೂ*ಮಕ್ಕಳು ಮಾರಾಯ.. ಒಟ್ಟಾರೆ ನಮಗಂತು ಖುಷಿ" ಎಂದಿದ್ದಾರೆ. "ಸೂಪರ್ ಕುಡುಪಲ್ಲಿ ಸರ್....ನಿಮ್ಮ ಮಾತು ಬೆಂಕಿ" ಹಾಗೇ "ನಮ್ ನಾಗ್ಯ, ಬಾಸ್ ಆಗೋದ್ನೋ" ಅಂತ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ಇಬ್ಬರಿಗೂ ಟೈಟಲ್ ಬೇರೆ ಕೊಟ್ಟಿದ್ದಾರೆ. 'ಜೋಡೆತ್ತು', 'ಬೆಂಕಿ ಜೋಡಿ'. 'ನಾಗು ಬಾಸ್' ಅಂತೆಲ್ಲ ಟೈಟಲ್ ಕೊಟ್ಟಿದ್ದಾರೆ.


Click it and Unblock the Notifications











