"ರಚಿತಾ ರಾಮ್ ಮುಖದಲ್ಲಿ ಆ ಕಳೆ ಇರಲಿಲ್ಲ, ಯಾಕೋ ಭಾವುಕರಾಗಿದ್ದರು"; ಲಾಯರ್ ಜಗದೀಶ್ ಮಾತಿನ ಮರ್ಮವೇನು?

ಬಿಗ್‌ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್ ಪ್ರತಿ ದಿನ ಒಂದಲ್ಲ ಒಂದು ಕಾರಣಕ್ಕೆ ಬ್ಯುಸಿಯಾಗಿದ್ದಾರೆ. ಯೂಟ್ಯೂಬ್ ಚಾನೆಲ್‌ಗಳಿಗೆ ಜಗದೀಶ್ ಸಂದರ್ಶನ ಕೊಡುವ ವೇಳೆ ನೀಡಿದ ಕೆಲವು ಹೇಳಿಕೆಗಳು ಚರ್ಚೆಯಾಗುತ್ತವೆ. ಕೆಲವೇ ದಿನಗಳ ಹಿಂದಷ್ಟೇ ಸ್ಯಾಂಡಲ್‌ವುಡ್ ನಟಿ ಡಿಂಪಲ್‌ ಕ್ವೀನ್ ರಚಿತಾ ರಾಮ್ ಬಗ್ಗೆ ಒಂದು ವಿಡಿಯೋ ಮಾಡಿದ್ದರು. ಅದೂ ಕೂಡ ಈಗ ಚರ್ಚೆಯಾಗುತ್ತಿದೆ.

ಅಷ್ಟಕ್ಕೂ ಆಗಿದ್ದು ಇಷ್ಟು. ದರ್ಶನ್‌ಗೆ ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ಡಿಂಪಲ್ ಕ್ವೀನ್ ರಚಿತಾ ರಾಮ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾಲಾಯ ತಸ್ಮೈ ನಮಃ ಎಂದು ಹೇಳಿ ವಿಡಿಯೋ ಮಾಡಿದ್ದರು. ಆ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಕೂಡ ಆಗಿತ್ತು. ಆ ಬೆನ್ನಲ್ಲೇ ಲಾಯರ್ ಜಗದೀಶ್ ಕೂಡ ರಚಿತಾ ರಾಮ್ ಬಗ್ಗೆ ಒಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು.

Bigg Boss Kannada 11 Lawyer Jagadish feel sad for Rachita Ram do you know why

ಅಲ್ಲಿಂದ ರಚಿತಾ ರಾಮ್ ಬಗ್ಗೆ ಲಾಯರ್ ಜಗದೀಶ್ ಯಾಕೆ ವಿಡಿಯೋ ಮಾಡಿದರು? ರಚಿತಾ ರಾಮ್ ಅವರ ವಿರುದ್ಧ ವಿಡಿಯೋ ಮಾಡಿದರೋ ? ಇಲ್ಲ ಅವರ ಪರವಾಗಿ ವಿಡಿಯೋ ಮಾಡಿದರೋ ಅನ್ನೋ ಅನುಮಾನ ಮೂಡಿತ್ತು. ಅದಕ್ಕೀಗ ಸ್ವತ: ಲಾಯರ್ ಜಗದೀಶ್ ಯೂಟ್ಯೂಬ್ ಚಾನೆಲ್‌ ಒಂದರಲ್ಲಿ ಕಾರಣ ಕೊಟ್ಟಿದ್ದಾರೆ. ತಾನು ನೋಡಿದ ರಚಿತಾ ರಾಮ್ ಈಗಿಲ್ಲ ಅನ್ನುವ ಅರ್ಥದಲ್ಲಿ ಹೇಳಿಕೊಂಡಿದ್ದಾರೆ.

ಲಾಯರ್ ಜಗದೀಶ್‌ಗೆ ರಚಿತಾ ರಾಮ್ ಹಾಗೂ ಪುನೀತ್ ರಾಜ್‌ಕುಮಾರ್ ನಟನೆಯ 'ಚಕ್ರವ್ಯೂಹ' ಸಿನಿಮಾದ ಹಾಡೊಂದನ್ನು ನೋಡಿ ಫ್ಯಾನ್ಸ್ ಆಗಿದ್ದಾರಂತೆ. ಆ ಹಾಡು ರಿಲೀಸ್ ಆದ ಬಳಿಕ ಲಾಯರ್ ಜಗದೀಶ್ ಹಾಗೂ ಅವರ ಪುತ್ರಿ ಇಬ್ಬರೂ ರಚಿತಾ ರಾಮ್ ಫ್ಯಾನ್ ಆಗಿದ್ದಾರಂತೆ. ಅಷ್ಟಕ್ಕೂ ಈ ವಿಷಯವನ್ನು ಫ್ರೀಡಂ ಟಿವಿ ಕನ್ನಡಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

Bigg Boss Kannada 11 Lawyer Jagadish feel sad for Rachita Ram do you know why

"ರಚಿತಾ ರಾಮ್ ಅಂದರೆ, ಹಾಡೊಂದರಲ್ಲಿ ಬಿಎಂಡ್ಲ್ಯೂ ಬೈಕ್‌ನಲ್ಲಿ ನಮ್ಮ ಪುನೀತ್ ಜೊತೆ ಹೋಗುತ್ತಾರೆ. ನಾನು ನೋಡಿದಂತಹ ರಚಿತಾ ರಾಮ್ ಅವರು. ಎಂತಹವರು ಕೂಡ ಫಿದಾ ಆಗುತ್ತಾರೆ. ರಚಿತಾ ರಾಮ್ ಹಾಗೂ ಪುನೀತ್ ಇಬ್ಬರೂ ಮೇಡ್ ಫಾರ್ ಈಚ್ ಅದರ್. ನನ್ನ ಮಗಳಿಗೆ ರಚಿತಾ ರಾಮ್ ಅಂದರೆ ಇಷ್ಟ. ರಚಿತಾ ರಾಮ್ ತರ ನಾನು ಕೂಡ ನಿನ್ನ ಬೈಕ್‌ನಲ್ಲಿ ಹೋಗಬೇಕು ಅಂತಾಳೆ. ನನ್ನ ಮನೆಯಲ್ಲಿರುವ ಬೈಕ್‌ನಲ್ಲಿ ನಾನು ಪುನೀತ್ ರಾಜ್‌ಕುಮಾರ್‌ ತರ ಆಕ್ಟಿಂಗ್. ರಚಿತಾ ರಾಮ್ ತರ ನನ್ನ ಮಗಳು ಮಾಡುತ್ತಾಳೆ. ನಾನು ನೋಡಿದ ರಚಿತಾ ರಾಮ್ ಆ ರಚಿತಾ ರಾಮ್" ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.

ರಚಿತಾ ರಾಮ್ ವಿಡಿಯೋ ಮಾಡಿ ಕಾಲಾಯ ತಸ್ಮೈ ನಮಃ ಎಂದಿದ್ದಕ್ಕೆ ಲಾಯರ್ ಜಗದೀಶ್ ಸಿಕ್ಕಾಪಟ್ಟೆ ಬೇಸರ ಆಗಿತ್ತಂತೆ. ಅದಕ್ಕೆ ವಿಡಿಯೋ ಮಾಡಿದ್ದಾರಂತೆ. "ಮೊನ್ನೆ ಕಾಲಾಯ ತಸ್ಮೈ ನಮಃ ಅಂದರಲ್ಲ. ಮುಖದಲ್ಲಿ ಆ ಕಳೆ ಇರಲಿಲ್ಲ. ಯಾಕೋ ಚಿಂತಾ ಭಾವುಕರಾಗಿದ್ದರು. ಯಾವುದೇ ಹೆಣ್ಣು ಮಗಳು ಈ ರೀತಿ ವಿಡಿಯೋ ಮಾಡಿ ಹಾಕಿದಾಗ ನನಗೆ ಬೇಜಾರು ಆಗುತ್ತೆ. ನಮ್ಮ ಮನೆ ಹೆಣ್ಣು ಮಗಳು ಯಾಕೆ ಈ ತರ ಆಗಿಬಿಟ್ಲು. ಏನಾದರೂ ತೊಂದರೆ ಆಗಿದೆಯಾ? ಹೆಣ್ಣು ಮಕ್ಕಳ ವಿಚಾರದಲ್ಲಿ ಏನೂ ಆಗಬಾರದು. ಆ ಕಾಲಾಯ ತಸ್ಮೈ ನಮಃ ಯಾರಿಗೆ ಹೇಳಿದಳೋ ಗೊತ್ತಾಗಲಿಲ್ಲ ಸರ್. ಯಾಕೋ ಅದು ನನಗೆ ನಾಟಿ ಬಿಡ್ತು" ಎಂದಿದ್ದಾರೆ.

ರಚಿತಾ ರಾಮ್ ವಿಡಿಯೋ ಬಗ್ಗೆ ಮಾತಾಡುವಾಗ ದರ್ಶನ್ ಡಾನ್ ಅಂತ ಹೇಳಿದ್ದಾರೆ. "ಈ ನಡುವೆ ದರ್ಶನ್ ಬೇರೆ ಇಲ್ಲ. ಏನಾದರೂ ಹೋಗಿ ದರ್ಶನ್ ಹತ್ತಿರ ಹೇಳುತ್ತಿದ್ದರೋ ಏನೋ? ಡಾನ್ ಅಲ್ವಾ ಅವರು. ದರ್ಶನ್ ರೀಪ್ಲೆಸ್‌ಮೆಂಟ್‌ಗೆ ನಾನು ಒಂದು ವಿಡಿಯೋ ಮಾಡಿ ಹಾಕಿದೆ. ಬೇಜಾರು ಮಾಡಿಕೊಳ್ಳಬೇಡಿ, ಧೈರ್ಯವಾಗಿರಿ. ನಾನು ನಿಮ್ಮನ್ನು ಗೌರವಿಸುತ್ತಿದ್ದೇನೆ. ನಾನು ಕೂಡ ನಿಮ್ಮ ಅಭಿಮಾನಿ. ಹಾಗಾಗಿ ಒಳ್ಳೆಯದನ್ನೇ ಬಯಸುತ್ತೇನೆ ಅಂತ ವಿಡಿಯೋ ಮಾಡಿ ಹಾಕಿದೆ ಬಿಟ್ಟರೆ, ಬೇರೆ ಏನೂ ಇಲ್ಲ" ಎಂದಿದ್ದಾರೆ.

More from Filmibeat

English summary
Bigg Boss Kannada 11 Lawyer Jagadish feel sad for Rachita Ram do you know why?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X