BBK 12: ಡಿಸಿ 10 ದಿನ ತಾತ್ಕಾಲಿಕ ಪರ್ಮಿಷನ್ ಕೊಟ್ಟರೂ; ಇನ್ನೂ ಯಾಕೆ ಶುರುವಾಗಿಲ್ಲ ಬಿಗ್ ಬಾಸ್?

ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ಎಲ್ಲವೂ ಸರಿಯಾಗಿಯೇ ನಡೆಯುತ್ತಿರುವಾಗಲೇ ಬಿಗ್ ಬಾಸ್ ಶೋ ಸ್ಥಗಿತಗೊಂಡಿತ್ತು. ಬಿಗ್ ಬಾಸ್ ಸೆಟ್ಟು ಹಾಕಿರುವ ಜಾಲಿವುಡ್ ಸ್ಟುಡಿಯೋ ಮಾಡಿರುವ ಎಡವಟ್ಟಿನಿಂದ ನಿನ್ನೆ (ಅಕ್ಟೋಬರ್ 7) ರಾತ್ರಿಯಿಂದ ಬಿಗ್ ಬಾಸ್ ಶೋ ಸ್ಥಗಿತಗೊಂಡಿತ್ತು. ಈ ಸಂಬಂಧ ಕನ್ನಡದ ರಿಯಾಲಿಟಿ ಶೋ ನಡೆಯುತ್ತೋ ಇಲ್ವೋ? ಅನ್ನೋ ಆತಂಕದಲ್ಲಿ ವೀಕ್ಷಕರು ಇದ್ದರು.

ಪರಿಸರದ ನಿಯಮಗಳನ್ನು ಗಾಳಿಗೆ ತೂರಿಸಿದ್ದರಿಂದ ಜಾಲಿವುಡ್‌ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಲವು ಬಾರಿ ನೋಟೀಸ್ ಕಳಿಸಿದ್ದರೂ, ಜಾಲಿವುಡ್ ಕ್ಯಾರೇ ಎಂದಿರಲಿಲ್ಲ. ಈ ಸಂಬಂಧ ಜಾಲಿವುಡ್ ಸ್ಟುಡಿಯೋವನ್ನು ಸೀಲ್ ಡೌನ್ ಮಾಡಲಾಗಿತ್ತು. ಹೀಗಾಗಿ ಅಲ್ಲೇ ನಡೆಯುತ್ತಿದ್ದ ಬಿಗ್‌ಬಾಸ್ ಶೂಟಿಂಗ್‌ ಅನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆಯಿತ್ತು.

Bigg Boss Kannada 12 will start today by evening after Jollywood Studio seal down by KSPCB

ಬಿಗ್ ಬಾಸ್ ಶೋ ಸ್ಥಗಿತಗೊಂಡಿದ್ದು ರಾಜಕೀಯ ರೂಪ ಕೂಡ ಪಡೆದುಕೊಂಡಿತ್ತು. ಕಿಚ್ಚ ಸುದೀಪ್ ಮೇಲಿನ ದ್ವೇಷಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಸಂಚು ರೂಪಿಸಿದ್ದಾರೆಂದು ಆರೋಪಿಸಲಾಗಿತ್ತು. ಅದಕ್ಕೂ ಈಗ ಕ್ಲಾರಿಟಿ ಸಿಕ್ಕಿದೆ. ಬೆಂಗಳೂರು ದಕ್ಷಿಣದ ಜಿಲ್ಲಾಧಿಕಾರಿಗಳೇ 10 ದಿನಗಳ ಕಾಲ ತಾತ್ಕಾಲಿಕ ರಿಲೀಫ್ ಕೊಟ್ಟಿದ್ದಾರೆ. ಹಾಗಿದ್ದರೂ ಇನ್ನೂ ಬಿಗ್ ಬಾಸ್ ಶೋ ಆರಂಭ ಆಗಿಲ್ಲ ಯಾಕೆ? ತಿಳಿಯುವುದಕ್ಕೆ ಮುಂದೆ ಓದಿ.

ಬಹು ಕೋಟಿ ವೆಚ್ಚದ ಬಿಗ್ ಬಾಸ್ ಶೋ ಒಂದು ದಿನ ಸ್ಥಗಿತಗೊಂಡರೂ ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತೆ. ಹೀಗಾಗಿ ಈ ಪ್ರಕರಣವನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳುವುದಕ್ಕೆ ತಂಡ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಾಲಿವುಡ್ ಸ್ಟುಡಿಯೋ ಹಾಗೂ ಬಿಗ್ ಬಾಸ್ ಆಯೋಜಕರು ಬೆಂಗಳೂರು ದಕ್ಷಿಣದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿಯನ್ನು ಮಾಡಿಕೊಂಡಿದ್ದರು. ಶೋ ನಡೆಸುವುದಕ್ಕೆ ಕಾಲಾವಕಾಶವನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ 10 ದಿನಗಳ ಕಾಲ ತಾತ್ಕಾಲಿಕ ರಿಲೀಫ್ ನೀಡಿದೆ.

Bigg Boss Kannada 12 will start today by evening after Jollywood Studio seal down by KSPCB

10 ದಿನಗಳಲ್ಲಿ ಎದುರಾಗಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಡಿಸಿ ಸೂಚನೆ ನೀಡಿದ್ದಾಗಿ ವರದಿಯಾಗಿದೆ. ಹೀಗಾಗಿ ತತಕ್ಷಣಕ್ಕೆ ಬಿಗ್ ಬಾಸ್ ಆರಂಭ ಆಗುತ್ತೆಂದು ಊಹೆ ಮಾಡಲಾಗಿತ್ತು. ಆದರೆ, ಇನ್ನೂ ಜಾಲಿವುಡ್‌ಗೆ ಹಾಕಿದ್ದ ಸೀಲ್ ಅನ್ನು ಓಪನ್ ಮಾಡಲಾಗಿಲ್ಲ. ಹಾಗಾಗಿ ಇಂದೇ ಶೂಟಿಂಗ್ ಶುರುವಾಗುತ್ತಾ ಅನ್ನೋ ಅನುಮಾನಗಳು ಶುರುವಾಗಿತ್ತು. ಆದ್ರೀಗ ಬಲ್ಲ ಮೂಲಗಳಿಂದ ಕ್ಲಾರಿಟಿ ಸಿಕ್ಕಿದೆ.

ಬಿಗ್ ಬಾಸ್ ಕನ್ನಡ 12 ಇಂದು (ಅಕ್ಟೋಬರ್ 8) ಸಂಜೆಯಿಂದಲೇ ಆರಂಭ ಆಗುವ ಸಾಧ್ಯತೆಯಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವು ದಾಖಲೆಗಳನ್ನು ಕೇಳಿದ್ದು, ಅದನ್ನು ಜಾಲಿವುಡ್‌ ಹಾಗೂ ಬಿಗ್ ಬಾಸ್‌ ಆಯೋಜಕರು ನೀಡಬೇಕಿದೆ. ಆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಜಾಲಿವುಡ್‌ಗೆ ಹಾಕಿದ್ದ ಸೀಲ್‌ ಓಪನ್ ಮಾಡಲಾಗುತ್ತೆ. ಹೀಗಾಗಿ ಸಂಜೆಯಿಂದಲೇ ಬಿಗ್ ಬಾಸ್ ಕನ್ನಡ 12 ಮತ್ತೆ ಶುರುವಾಗೋದು ಫಿಕ್ಸ್ ಎಂದು ಹೇಳಲಾಗುತ್ತಿದೆ.

More from Filmibeat

English summary
Bigg Boss Kannada 12 will start today by evening after Jollywood Studio seal down by KSPCB.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X