Gilli Nata:"ಬರೀ ರನ್ನರ್ ಅಪ್ ಆಗೇ ಉಳ್ಕೊತಿದ್ದ ನನಗೆ ಗೆಲುವಿನ ಕಿರೀಟ ತೊಡಿಸಿದ್ದೀರಾ ಧನ್ಯವಾದ ಎಂದ ಗಿಲ್ಲಿ

giಬಿಗ್ ಬಾಸ್ ಕನ್ನಡ ಸೀಸನ್ 12 ಯಶಸ್ವಿಯಾಗಿ ಅಂತ್ಯ ಕಂಡಿದೆ. ನಿರೀಕ್ಷೆ ಮಾಡಿದಂತೆ ಗಿಲ್ಲಿ ನಟ 12ನೇ ಸೀಸನ್‌ ಅನ್ನು ಗೆದ್ದು ಬೀಗಿದ್ದಾರೆ. ಬಿಗ್ ಬಾಸ್ ಗೆದ್ದ ಕ್ಷಣದಿಂದಲೂ ಅವರ ಅಭಿಮಾನಿಗಳು ಅವರನ್ನು ಹೊತ್ತು ಮೆರೆಸುತ್ತಲೇ ಇದ್ದಾರೆ. ಹುಟ್ಟೂರಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡುತ್ತಿದ್ದಾರೆ. ಗಿಲ್ಲಿ ನಟನ ಜನಪ್ರಿಯತೆ ಈಗ ಯಾವ ಸೆಲೆಬ್ರೆಟಿಗಳಿಗೂ ಕಮ್ಮಿಯಿಲ್ಲ.

ಕಳೆದ ಕೆಲವು ದಿನಗಳಿಂದ ಅಭಿಮಾನಿಗಳ ಅಭಿಮಾನದಲ್ಲಿ ತೇಲುತ್ತಿದ್ದ ಗಿಲ್ಲಿ ತನ್ನನ್ನು ಗೆಲ್ಲಿಸಿದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ವಿಡಿಯೋ ಮಾಡಿ ಇಲ್ಲಿವರೆಗೂ ರನ್ನರ್‌ ಅಪ್ ಆಗಿಯೇ ಇರುತ್ತಿದ್ದ ಗಿಲ್ಲಿಗೆ ಗೆಲುವಿನ ಕಿರೀಟ ತೊಡಿಸಿದ್ದೀರ ಎಂದು ಹೇಳುವ ಮೂಲಕ ಕನ್ನಡದ ಜನತೆಗೆ ಹಾಗೂ ಅಭಿಮಾನಿಗಳಿಗೆ ಧ್ಯನ್ಯವಾದಗಳನ್ನು ಅರ್ಪಿಸಿದ್ದಾರೆ. ಏನು ಹೇಳಿದ್ದಾರೆಂದು ನೋಡುವುದಾರೇ,

Bigg Boss Kannada 12 winner Gilli Nata expresses heartfelt gratitude to his supporters

ಗಿಲ್ಲಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ಹೀಗೆ ಬರೆದು ಧನ್ಯವಾದ ಹೇಳಿದ್ದಾರೆ. "ಇಷ್ಟು ದೂರ ಕರ್ಕೊಂಡು ಬಂದಿದ್ದೀರಾ.. ಮನಸ್ಸಲ್ಲಿ ಜಾಗ ಕೊಟ್ಟಿದ್ದೀರಾ.. ಕೈ ಮೇಲೆ ಹಚ್ಚೆ ಹಾಕಿಸ್ಕೊಂಡಿದ್ದೀರಾ.. ನಿರಂತರವಾಗಿ ಬೆಂಬಲಿಸಿದ್ದೀರಾ.. ಇದೂವರೆಗೂ ಬರೀ ರನ್ನರ್ ಅಪ್ ಆಗೇ ಉಳ್ಕೊತಿದ್ದ ಗಿಲ್ಲಿಗೆ ಗೆಲುವಿನ ಕಿರೀಟ ತೊಡಿಸಿದ್ದೀರಾ.. ಮೆರೆಸಿದ್ದೀರಾ. ಈ ಪ್ರೀತಿಗೆ ಏನು ಹೇಳಿದ್ರು, ಎಷ್ಟು ಹೇಳಿದ್ರು ಕಡಿಮೇನೆ. ಗಿಲ್ಲಿ ಗೆಲುವಿಗಾಗಿ ವೋಟ್ ಮಾಡಿದವರಿಗೆ, ಹರಕೆ ಹೊತ್ತೋರಿಗೆ, ಅಭಿಮಾನದಿಂದ ಜೊತೆ ನಿಂತೋರಿಗೆ 'ರೆಲೆಂಟ್ ಕ್ರಿಯೇಷನ್ಸ್' ಕಡೆಯಿಂದ ದೊಡ್ಡ ನಮಸ್ಕಾರ ಹಾಗೂ ತುಂಬು ಹೃದಯದ ಧನ್ಯವಾದಗಳು. ಈ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ, ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು." ಎಂದು ಹೊಸ ಹಾದಿಯ ಸುಳಿವು ಕೊಟ್ಟಿದ್ದಾರೆ.

ಹಾಗೇ ವಿಡಿಯೋದಲ್ಲಿ ತನಗೆ ಸಿಕ್ಕಿರೋ ಬೆಂಬಲ ಹಾಗೂ ಅಭಿಮಾನಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. "ಕನ್ನಡಿಗರಿಗೆ ಯಾವ ರೀತಿ ಕೃತಜ್ಞತೆಯನ್ನು ಹೇಳಬೇಕು ಅನ್ನೋದೇ ಗೊತ್ತಾಗುತ್ತಿಲ್ಲ. ಬಿಗ್ ಬಾಸ್ ಮನೆಯೊಳಗೆ ಇದ್ದಾಗ ನನಗೆ ಈ ರೀತಿ ಜನರು ಪ್ರೀತಿಸುತ್ತಿದ್ದಾರೆ. ಈ ಮಟ್ಟಿಗೆ ಪ್ರೋತ್ಸಾಹ ಕೊಡ್ತಿದ್ದಾರೆ ಅಂತ ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಹೊರ ಬಂದಾಗ ಸಿಕ್ಕಾಪಟ್ಟೆ ಖುಷಿ ಆಯ್ತು. ನನ್ನನ್ನು ನಾನೇ ನಂಬುವುದಕ್ಕೆ ಆಗುತ್ತಿಲ್ಲ." ಎಂದಿದ್ದಾರೆ.

ಹಾಗೇ ಯಾರೆಲ್ಲ ತಮ್ಮ ಬಗ್ಗೆ ವಿಡಿಯೋ ಮಾಡಿದರೋ ಅವರನ್ನು ನೆನಪಿಸಿಕೊಂಡಿದ್ದಾರೆ. "ಸಖತ್ ಖುಷಿಯಾಗಿದ್ದು ಏನಂದರೆ, ನಮ್ಮ ಯೋಧರು ವಿಡಿಯೋ ಮಾಡಿ ಹಾಕುತ್ತಾರೆ. ಕನ್ನಡಿಗರು ಅಷ್ಟೇ ಅಲ್ಲದೆ ಬೇರೆ ರಾಜ್ಯದಿಂದ ತೆಲುಗು, ತಮಿಳು, ಬೇರೆ ದೇಶದಲ್ಲಿ ಇರೋರು, ನಮ್ಮ ರೈತರು ವಿಡಿಯೋ ಮಾಡಿದ್ದಾರೆ. ಸಂಕ್ರಾಂತಿ ಹಬ್ಬದ ವೇಳೆ ಕಿಚ್ಚ ಹೊಡೆಯುವಾಗ ಹಸುಗಳ ಮೇಲೆ ನನ್ನ ಚಿತ್ರ ಬಿಡಿಸಿ, ಫೋಟೊ ಹಾಕಿಕೊಂಡಿದ್ದಾರೆ. ನಮ್ಮ ಆಟೋ ಡ್ರೈವರ್‌ಗಳು ಸ್ಟಿಕ್ಕರ್‌ಗಳನ್ನು ಹಾಕಿಕೊಂಡರು. ಅವರು ಯಾರು ಅಂತಾನೇ ಗೊತ್ತಿಲ್ಲ. ಟ್ಯಾಟು ಹಾಕೊಂಡು ಅಷ್ಟೊಂದು ಪ್ರೀತಿ ತೋರಿಸಿದರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅಷ್ಟೊಂದು ಪ್ರೀತಿ ಪ್ರೋತ್ಸಾಹ ಕೊಟ್ಟಿದ್ದಾರೆ. ಈಗಲೂ ಕೊಡುತ್ತಿದ್ದೀರಿ." ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಹಾಗೇ ಸೋಶಿಯಲ್ ಮೀಡಿಯಾದಲ್ಲೂ ಬೆಂಬಲ ಸಿಕ್ಕಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. "ಸೋಶಿಯಲ್ ಮೀಡಿಯಾದಲ್ಲಿ ನನಗೆ ಒಂದೇ ಒಂದು ನೆಗೆಟಿವ್ ವಿಡಿಯೋ ಆಗಲಿ, ಟ್ರೋಲ್ ವಿಡಿಯೋ ಆಗಲಿ ಸತ್ಯವಾಗಿಯೂ ನೋಡಿಲ್ಲ. ನಿಮ್ಮ ಪ್ರೀತಿ ಪ್ರೋತ್ಸಾಹ ಕೊನೆವರೆಗೂ ಹೀಗೆ ಇರಲಿ. ನಿಮ್ಮ ಪ್ರೀತಿ, ಪ್ರೋತ್ಸಾಹವನ್ನು ಕೊನೆವರೆಗೂ ಉಳಿಸಿಕೊಳ್ಳುತ್ತೇನೆ." ಎಂದು ಗಿಲ್ಲಿ ನಟ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಗಿಲ್ಲಿ ಮುಂದಿನೆ ಹೆಜ್ಜೆ ಏನು ಅನ್ನೋದನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

More from Filmibeat

English summary
Bigg Boss Kannada 12 winner Gilli Nata expresses heartfelt gratitude to his supporters, crediting them as the real reason behind his grand victory;
Read more about: gilli nata reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X