ಇನ್ನೂ 'ಡೆವಿಲ್' ಸಿನಿಮಾ ನೋಡಿಲ್ಲ ಗಿಲ್ಲಿ.. ಬಿಗ್ ಬಾಸ್‌ನಿಂದ ಬಂದ್ಮೇಲೆ ದರ್ಶನ್ ಭೇಟಿನೂ ಮಾಡಲಿಲ್ಲ ಯಾಕೆ?

ಬಿಗ್ ಬಾಸ್ ಕನ್ನಡ ಸೀಸನ್ 12 ರ ವಿನ್ನರ್ ಗಿಲ್ಲಿ ನಟ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹೋಗಿ ಬರುತ್ತಿದ್ದಂತೆ ಗಿಲ್ಲಿಯ ನೇಮ್-ಫೇಮ್ ಎಲ್ಲವೂ ಬದಲಾಗಿದೆ. ಕರ್ನಾಟಕದಾದ್ಯಂತ ಗಿಲ್ಲಿ ನಟನಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಎಲ್ಲಿಗೆ ಹೋದರೂ, ಯಾವುದೇ ಸಮಾರಂಭಕ್ಕೆ ಹೋದರೂ ಗಿಲ್ಲಿ ನಟನನ್ನು ನೋಡುವುದಕ್ಕೆ ಮುತ್ತಿಕೊಳ್ಳುತ್ತಾರೆ. ಆಮಟ್ಟಿಗೆ ಜನರು ಪ್ರೀತಿ ತೋರಿಸುತ್ತಿದ್ದಾರೆ.

ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಅವರು ನಟಿಸಿದ ಸಿನಿಮಾ 'ಡೆವಿಲ್' ರಿಲೀಸ್ ಆಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ ಸಿನಿಮಾ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಗಿಲ್ಲಿ ನಟ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಡೆವಿಲ್' ಪ್ರೋಮೊ ರಿಲೀಸ್ ಆದಾಗ, ಗಿಲ್ಲಿ ನಟನೇ ಹೈಲೈಟ್ ಆಗಿದ್ದರು.

Bigg Boss Kannada 12 winner Gilli Nata revealed why he didn t meet Darshan in Jail

ಬಿಗ್ ಬಾಸ್ ಮನೆಯೊಳಗೆ ಇರುವಾಗ 'ಡೆವಿಲ್' ಸಿನಿಮಾ ಕೂಡ ಗಿಲ್ಲಿ ಸಾಥ್ ಕೊಟ್ಟಿತ್ತು. ಈಗ ತಮ್ಮ ಮತ್ತೊದು ಸಿನಿಮಾ 'ಸೂಪರ್ ಹಿಟ್' ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾದ ಪ್ರಚಾರದ ವೇಳೆ ಗಿಲ್ಲಿ ನಟ 'ಡೆವಿಲ್' ಸಿನಿಮಾ ಬಗ್ಗೆ ಮತಾಡಿದ್ದಾರೆ. ಇನ್ನೂ ಯಾಕೆ ಸಿನಿಮಾ ನೋಡಿಲ್ಲ? ದರ್ಶನ್ ಅವರನ್ನು ಇನ್ನೂ ಭೇಟಿ ಮಾಡಿಲ್ಲ ಯಾಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಗಿಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಹೊರಗಡೆ ತಮಗೆ ಹುಟ್ಟಿಕೊಂಡಿರುವ ಅಭಿಮಾನಿಗಳನ್ನು ನೋಡಿ ಕಂಗಾಲಾಗಿದ್ದರು. ಜನರು ತೋರಿಸುತ್ತಿರುವ ಈ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳಬೇಕು ಅನ್ನೋದು ಗೊತ್ತಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಬಿಗ್ ಬಾಸ್‌ನಲ್ಲಿ ಗೆದ್ದ ಹಣ ನಿಮ್ಮ ಕೈ ಸೇರಿತೇ? ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ. ಜೊತೆಗೆ 'ಡೆವಿಲ್' ಇನ್ನೂ ಯಾಕೆ ನೋಡಿಲ್ಲ? ದರ್ಶನ್‌ರನ್ನು ಭೇಟಿ ಮಾಡುವುದಕ್ಕೆ ಯಾಕೆ? ಹೋಗಿಲ್ಲ ಅನ್ನೋದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ.

" ಬಿಗ್ ಬಾಸ್ ಹಣ ಬರುವುದಕ್ಕೂ ಒಂದು ಪ್ರೋಸಸ್ ಇರುತ್ತೆ. 100 ದಿನ ಎಲ್ಲ ಆಗಲ್ಲ. ಬೇಗನೇ ಹಣ ಬರುತ್ತೆ. ನಾನು ಜಮೀನು ತೆಗೆದುಕೊಂಡಿರೋದು ನನಗೆ ಗೊತ್ತಿಲ್ಲ. ನಾನು ಸೋಶಿಯಲ್ ಮೀಡಿಯಾದಲ್ಲಿ ನೋಡಿದೆ. ಈಗ ಎರಡು ಎಕರೆ ತೆಗೆದುಕೊಳ್ಳುವುದಕ್ಕೆ ಕಷ್ಟ ಆಗಿದೆ. ಇನ್ನು 20 ಎಕರೆ ಬಿಗ್ ಬಾಸ್‌ನಿಂದ ಬಂದ ಕೂಡಲೇ ತೆಗೆದುಕೊಳ್ಳುವುದಕ್ಕೆ ಆಗುತ್ತಾ?" ಎಂದು ಗಿಲ್ಲಿ ನಟ ಹೇಳಿದ್ದಾರೆ.

Bigg Boss Kannada 12 winner Gilli Nata revealed why he didn t meet Darshan in Jail

ಇದೇ ವೇಳೆ ಗಿಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆಂಬ ಸುದ್ದಿನೂ ಹರಿದಾಡಿತ್ತು. ಈಗಾಗಲೇ ರಾಜಕೀಯ ಪಕ್ಷಗಳು ಅವರನ್ನು ಭೇಟಿ ಮಾಡಿದ್ದು, ಪಾಲಿಟಿಕ್ಸ್‌ಗೆ ಬರುವಂತೆ ಆಹ್ವಾನ ನೀಡಿದ್ದಾಗಿ ಸುದ್ದಿಯಾಗಿತ್ತು. ಅದಕ್ಕೆ ಗಿಲ್ಲಿ ಪ್ರತಿಕ್ರಿಯೆ ಹೀಗಿದೆ. "ರಾಜಕೀಯಕ್ಕೂ ನನಗೂ ದೂರ. ನನಗೆ 10 ಪರ್ಸೆಂಟ್ ಅದರ ಬಗ್ಗೆ ಜ್ಞಾನವಿಲ್ಲ. ಅದಕ್ಕೆ ನಾನು ಆ ಕಡೆ ಹೋಗುತ್ತಿಲ್ಲ." ಎಂದು ಗಿಲ್ಲಿ ನಟ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದು ಒಂದು ತಿಂಗಳಾಗುತ್ತಿದೆ. ಆದರೂ 'ಡೆವಿಲ್' ಸಿನಿಮಾವನ್ನು ನೋಡಿಲ್ಲ. ಹಾಗೇ ದರ್ಶನ್‌ರನ್ನು ಭೇಟಿ ಮಾಡಿಲ್ಲ. ಅದಕ್ಕೆ ಕಾರಣವೇನು ಅನ್ನೋದನ್ನು ಹೇಳಿದ್ದಾರೆ. "ನಾನು ಇನ್ನೂ ಡೆವಿಲ್ ಸಿನಿಮಾ ನೋಡಿಲ್ಲ. ಶೀಘ್ರದಲ್ಲಿಯೇ ನೋಡುತ್ತೇನೆ. ಅವರನ್ನು ಭೇಟಿ ಮಾಡುವುದಕ್ಕೆ ನಾನು ಕೇಳಿ ನೋಡಿದೆ. ಸದ್ಯಕ್ಕೆ ಆ ಅವಕಾಶವಿಲ್ಲ ಅಂತ ಹೇಳಿದರು. ನಮ್ಮ ದರ್ಶನ್ ಅಣ್ಣನನ್ನ ಅಲ್ಲಿ ನೋಡುವುದಕ್ಕಿಂತ, ಅವರ ಮನೆಗೆ ಹೋಗಿ ಆಶೀರ್ವಾದ ತೆಗೆದುಕೊಳ್ಳಬೇಕು. ಅದು ನನಗೆ ತುಂಬಾನೇ ಇಷ್ಟ." ಎಂದು ಗಿಲ್ಲಿ ಹೇಳಿದ್ದಾರೆ.

More from Filmibeat

English summary
Bigg Boss Kannada 12 winner Gilli Nata revealed why he didn't meet Darshan in Jail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X