ಲೈವ್‌ನಲ್ಲಿ ಸಮೀರ್ ಆಚಾರ್ಯ ವಿರುದ್ಧ ಹಲ್ಲೆ ಆರೋಪ; ಮರುದಿನ ಪತ್ನಿಯಿಂದ ಮತ್ತೊಂದು ವಿಡಿಯೋ ರಿಲೀಸ್

ಬಿಗ್‌ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ನಿನ್ನೆಯಿಂದ (ಸೆಪ್ಟೆಂಬರ್ 29) ಅದ್ಧೂರಿಯಾಗಿ ಆರಂಭ ಆಗಿದೆ. ಸುಮಾರು 17 ಮಂದಿ ಸ್ಪರ್ಧಿಗಳು ಬಿಗ್‌ ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ. ಎಲ್ಲರೂ ಹೊಸ ಸ್ಪರ್ಧಿಗಳನ್ನು ನೋಡಲು ಕಾತುರದಿಂದ ಇರುವಾಗಲೇ ಬಿಗ್‌ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿ ಸಮೀರ ಆಚಾರ್ಯ ಬಗ್ಗೆ ಸುದ್ದಿಯೊಂದು ಹರಿದಾಡಿತ್ತು.

ಸಮೀರ್ ಆಚಾರ್ಯ ವಿರುದ್ಧ ಪತ್ನಿ ಶ್ರಾವಣಿ ಗಂಭೀರ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲು ಏರಿರುವ ಬಗ್ಗೆ ಸುದ್ಧಿ ಹೊರಬಿದ್ದಿತ್ತು. ಬಿಗ್‌ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅವರ ಪತ್ನಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದರು. ಸಮೀರ್ ಪತ್ನಿ ಶ್ರಾವಣಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇಡಿ ಸಂಸಾರ ಲವಲವಿಕೆಯಿಂದ ಇರುವ ವಿಡಿಯೋಗಳೇ ಇದ್ದವು.

Bigg Boss Kannada 5 contestant Sameer Acharya wife Shravani shared new video after fight

ಆದರೆ, ದಿಢೀರನೇ ಶ್ರಾವಣಿ ಆಚಾರ್ಯ ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ಲೈವ್ ಬಂದಿದ್ದರು. ಈ ವೇಳೆ ಪತ್ನಿ ಸಮೀರ್ ಆಚಾರ್ಯ ಹಾಗೂ ಅವರ ತಂದೆ-ತಾಯಿ ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದಾರೆಂದು ಆರೋಪ ಮಾಡಿದ್ದರು. ಈ ಪ್ರಕರಣ ವೈರಲ್ ಆದ ಬಳಿಕ ಶ್ರಾವಣಿ ಸಮೀರ್ ಆಚಾರ್ಯ ಮತ್ತೊಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಸಮೀರ್ ಹಾಗೂ ಶ್ರಾವಣಿ ಇಬ್ಬರೂ ಪ್ರಶ್ನೆ ಮಾಡಿದ್ದಾರೆ.

ಶ್ರಾವಣಿ ಸಮೀರ್ ಆಚಾರ್ಯ ಲೈವ್‌ಗೆ ಬಂದು ಪತಿ ವಿರುದ್ಧ ಆರೋಪ ಮಾಡಿದ ಬಳಿಕ ದಾಂಪತ್ಯದಲ್ಲಿ ಅಪಸ್ವರ ಎದ್ದಿದೆ ಎಂದು ಸುದ್ದಿ ಹಬ್ಬಿದೆ. ಸೆಪ್ಟೆಂಬರ್ 29ರಂದು ಭಾನುವಾರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ವೇಳೆ ಮಗಳು ಗಲಾಟೆ ಮಾಡುತ್ತಿದ್ದಳು ಅನ್ನೋ ಕಾರಣಕ್ಕೆ ಗದರಿದ್ದರು. ಆ ಬಳಿಕ ಸಮೀರ್ ತಂದೆ ಶ್ರಾವಣಿ ಅವರಿಗೆ ಬೈಯ್ಯುವುದಕ್ಕೆ ಶುರುವಿಟ್ಟುಕೊಂಡಿದ್ದರು. ಹೀಗೆ ಮಾತಿಗೆ ಮಾತು ಬೆಳೆದು ಕಿತ್ತಾಟ ಶುರುವಾಗಿತ್ತು ಎಂದು ವರದಿಯಾಗಿತ್ತು.

ಈ ಜಗಳ ತಾರಕಕ್ಕೇರಿತ್ತು. ಸಮೀರ್ ಆಚಾರ್ಯ ಹಾಗೂ ಅವರ ತಂದೆ ತಾಯಿ ಇಬ್ಬರೂ ಸೇರಿಕೊಂಡು ಮನಸ್ಸಿಗೆ ಬಂದಂತೆ ಹಲ್ಲೆ ಮಾಡಿದ್ದಾರೆ. ತಕ್ಷಣವೇ ಶ್ರಾವಣಿ ಇನ್‌ಸ್ಟಾಗ್ರಾಂನಲ್ಲಿ ಲೈವ್‌ಗೆ ಬಂದು ಘಟನೆಯನ್ನು ವಿವರಿಸಿದ್ದಾರೆ. ಇದು ಗಮನಕ್ಕೆ ಬರುತ್ತಿದ್ದಂತೆ ಬಿಗ್ ಬಾಸ್ ಕನ್ನಡ 5ರ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ ಸಿಟ್ಟಿಗೆದ್ದಿರೋ ಬಗ್ಗೆ ವರದಿಯಾಗಿತ್ತು.

ಇಷ್ಟೆಲ್ಲ ಘಟನೆ ನಡೆದ ಬಳಿಕ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದರು. ಈ ಘಟನೆ ನಡೆದ ಮಾರನೇ ದಿನವೇ ಶ್ರಾವಣಿ ಆಚಾರ್ಯ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಶ್ರಾವಣಿಯ ಫಾಲೋವರ್ಸ್ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಸಲಿಗೆ ಕಾರಣವೇನು ಅಂದರೆ, ಈ ವಿಡಿಯೋದಲ್ಲಿ ಶ್ರಾವಣಿ ಮಗಳೊಂದಿಗೆ ಖುಷಿ ಖುಷಿಯಾಗಿ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದೇ ವಿಡಿಯೋದಲ್ಲಿ ಪತಿ ಸಮೀರ್ ಆಚಾರ್ಯ ಕೂಡ ಕಾಣಿಸಿಕೊಂಡಿದ್ದಾರೆ.

ನಿನ್ನೆ ಜಗಳ ಆಡಿಕೊಂಡಿವರು, ಇವತ್ತು ಜಂಟಿಯಾಗಿ ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಅಲ್ಲಿದೆ ಒಂದೇ ವಿಡಿಯೋವನ್ನು ಇಬ್ಬರೂ ಶೇರ್ ಮಾಡಿಕೊಂಡಿರುವುದು ವಿಶೇಷ. ಇದನ್ನು ನೋಡಿ ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. "ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ ಅಂತ ನ್ಯೂಸ್ ಬಂತು. ನೋಡಿದರೆ, ಇಬ್ಬರೂ ಖುಷಿ ಖುಷಿಯಾಗಿದ್ದಾರೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ನ್ಯೂಸ್‌ನಲ್ಲಿ ಇರೋದು ಸತ್ಯ. ಇವರು ಏನೂ ಗಲಾಟೆ ಆಗಿಲ್ಲ ಅಂತ ಸಾಬೀತು ಮಾಡುವುದಕ್ಕೆ ಹಳೆಯ ವಿಡಿಯೋ ಬಿಟ್ಟಿದ್ದಾರೆ ಅಷ್ಟೇ." ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

More from Filmibeat

English summary
Bigg Boss Kannada 5 contestant Sameer Acharya wife Shravani shared new video after fight
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X