ವರ್ತೂರು ಸಂತೋಷ್‌ಗೆ 'I Love You'ಎಂದ ತನಿಷಾ ಕುಪ್ಪಂಡ; ಬೆಂಕಿಗೆ ಹಳ್ಳಿಕಾರ್ ಕೊಟ್ಟ ಪ್ರತಿಕ್ರಿಯೆ ಏನು?

ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಅದೆಷ್ಟೋ ಸ್ಪರ್ಧಿಗಳು ಇನ್ನೂ ಮನೆಯೊಳಗಿನ ಬಾಂಧವ್ಯವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಅದರಲ್ಲೂ ಕಳೆದ ಸೀಸನ್ ಬಿಗ್‌ ಬಾಸ್ ಕನ್ನಡ ಇತಿಹಾಸದಲ್ಲೇ ಬೆಸ್ಟ್. ಅದರಲ್ಲಿ ಬಂದ ಸ್ಪರ್ಧಿಗಳು ಇಂದಿಗೂ ಜನ ಮಾನಸದಲ್ಲಿ ಉಳಿದುಕೊಂಡಿದ್ದಾರೆ. ಅದರಲ್ಲೂ ವರ್ತೂರ್ ಸಂತೋಷ್ ಹಾಗೂ ತನಿಷಾ ಕುಪ್ಪಂಡ ಕೂಡ ಇದ್ದಾರೆ.

ಈ ರಿಯಾಲಿಟಿ ಶೋ ಮೂಲಕ ತನಿಷಾ ಕುಪ್ಪಂಡ 'ಬೆಂಕಿ' ಅಂತ ಪಟ್ಟ ಪಡೆದುಕೊಂಡು ಹೊರ ಬಂದಿದ್ದಾರೆ. ಹಾಗೇ ಹಳ್ಳಿಕಾರ್ ಒಡೆಯ ಅಂತಲೇ ಜನಪ್ರಿಯರಾಗಿರುವ ವರ್ತೂರು ಸಂತೋಷ್‌ ಅವರನ್ನೂ ಜನರು ಇಷ್ಟ ಪಟ್ಟಿದ್ದರು. ಅದರಲ್ಲೂ ವರ್ತೂರು ಸಂತೋಷ್ ಹಾಗೂ ತನಿಷಾ ಜೋಡಿಗೆ ವೀಕ್ಷಕರು ಮೆಚ್ಚುಗೆ ಸೂಚಿಸಿದ್ದರು. ಬಿಗ್ ಬಾಸ್ ಮನೆಯೊಳಗೆ ಇರುವಾಗಲೇ ಈ ಜೋಡಿಯ ನಡುವೆ ಏನೋ ಇದೆ ಅನ್ನೋ ಸುದ್ದಿ ಹಬ್ಬಿತ್ತು.

Bigg Boss Kannada contestant Tanisha Kuppanda said I love you to Varthur Santhosh what s his reply

ಕಿರುತೆರೆ ವೀಕ್ಷಕರು ಕೂಡ ಈ ಜೋಡಿಯನ್ನೂ ಒಟ್ಟಿಗೆ ನೋಡುವುದಕ್ಕೆ ಇಷ್ಟಪಟ್ಟಿತ್ತು. ಅದರಲ್ಲೂ ಬಿಗ್ ಬಾಸ್ ಮನೆಯಿಂದ ಹೊರಬಂದ್ಮೇಲೆ ಮಿಸ್ ಮಾಡಿಕೊಂಡಿದ್ದೇ ಹೆಚ್ಚು. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಪ್ರೀತಿ ಮಾಡುತ್ತಿದೆ ಅಂತ ಚರ್ಚೆಯನ್ನೂ ಮಾಡುತ್ತಿದ್ದಾರೆ. ಆ ಬೆನ್ನಲ್ಲೇ ತನಿಷಾ ಕುಪ್ಪಂಡ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್‌ಗೆ ಐ ಲವ್ ಯೂ ಎಂದು ಹೇಳಿದ್ದಾರೆ. ಅದಕ್ಕೆ ವರ್ತೂರು ಸಂತೋಷ್ ಪ್ರತಿಕ್ರಿಯೆ ಏನು?

ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಹೊರ ಬಂದ ಬಳಿಕ ಕೆಲವು ಇವೆಂಟ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಬ್ಬರ ಕೆಮಿಸ್ಟ್ರಿಯನ್ನು ನೋಡದ ವೀಕ್ಷಕರಿಗೆ ಇಬ್ಬರ ನಡುವೆ ಏನೋ ನಡೆಯುತ್ತಿದೆ. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನೂ ಮಾಡುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಈ ಹಿಂದೆನೇ ನಮ್ಮಿಬ್ಬರ ನಡುವೆ ಏನೂ ಇಲ್ಲ ಎಂದೇ ಹೇಳಿಕೊಂಡು ಬಂದಿದ್ದರು.

Bigg Boss Kannada contestant Tanisha Kuppanda said I love you to Varthur Santhosh what s his reply

ಆದರೆ, ಇತ್ತೀಚೆಗೆ ತನಿಷಾ ಕುಪ್ಪಂಡ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ವರ್ತೂರು ಸಂತೋಷ್‌ಗೆ 'ಐ ಲವ್ ಯೂ' ಎಂದು ಹೇಳಿ ಬಿಟ್ಟಿದ್ದಾರೆ. ಕನ್ನಡ ಫಿಲ್ಮಿಸ್ಟ್ರಿ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ತನಿಷಾ ಕುಪ್ಪಂಡ ಸಂದರ್ಶನ ನೀಡುತ್ತಿದ್ದರು. ಈ ಸಂದರ್ಶನದಲ್ಲಿ ಮಧ್ಯೆದಲ್ಲಿ ನಿರೂಪಕರು ವರ್ತೂರು ಸಂತೋಷ್ ಅವರನ್ನು ಮದುವೆ ಆಗುತ್ತೀರಂತೆ ಹೌದಾ? ಎಂದು ಪ್ರಶ್ನೆ ಮಾಡಿದ್ದರು. ಇಬ್ಬರೂ ಲವ್ ಮಾಡುತ್ತಿದ್ದೀರಾ ಎಂದು ಕೇಳಿದ್ದರು. ಅದಕ್ಕೆ ವರ್ತೂರು ಸಂತೋಷ್‌ಗೆ ತನಿಷಾ ಕುಪ್ಪಂಡ ಫೋನ್ ಮಾಡಿ ಐ ಲವ್ ಯೂ ಅಂದಿದ್ದರು.

ಅಷ್ಟಕ್ಕೂ ಆಗಿದ್ದು ಇಷ್ಟು. ವರ್ತೂರ್ ಸಂತೋಷ್‌ಗೆ ಫೋನ್ ಮಾಡಿ "ವರ್ತೂ ನಾನು ಒಂದು ವೇಳೆ ನಿನ್ನ ಮನೆ ಹತ್ತಿರ ಬಂದು ಐ ಲವ್ ಯೂ ಅಂತ ಹೇಳಿದರೆ ಏನು ಮಾಡುತ್ತೀಯಾ?" ಎಂದು ಪ್ರಶ್ನೆ ಹಾಕಿದ್ದರು. ಅದಕ್ಕೆ ವರ್ತೂರು ಸಂತೋಷ್ "ಅದರಲ್ಲೇನಿದೆ ಫ್ರೆಂಡ್ಸ್ ಅಲ್ವಾ ಐ ಲವ್ ಯೂ ಹೇಳುತ್ತಿದ್ದಾರೆ ಅಂದುಕೊಳ್ಳುತ್ತೇನೆ" ಎಂದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಫೋನ್‌ನಲ್ಲಿ ತಮ್ಮಿಬ್ಬರ ನಡುವೆ ಏನೂ ಇಲ್ಲ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ. ಈ ಹಿಂದೆ ಕೂಡ ತನಿಷಾ ಕುಪ್ಪಂಡ ಆಗಲಿ, ವರ್ತೂರು ಸಂತೋಷ್ ಆಗಲಿ ಇಬ್ಬರಿಗೂ ಮದುವೆ ಆಗುತ್ತೀರಾ? ಅನ್ನೋ ಪ್ರಶ್ನೆಯನ್ನು ಹಲವು ಬಾರಿ ಮಾಡಿದ್ದಾರೆ. ಅದಕ್ಕೆ ಈ ಜೋಡಿ ಕೂಡ ನಾವಿಬ್ಬರೂ ಸ್ನೇಹಿತರು ಎಂದು ಹೇಳಿಕೊಂಡೇ ಬರುತ್ತಿದ್ದಾರೆ. ಈ ಬಾರಿ ಸಂದರ್ಶನದಲ್ಲಿ ಕೂಡ ಅದೇ ಆಗಿದೆ.

More from Filmibeat

English summary
Bigg Boss Kannada contestant Tanisha Kuppanda said I Love You to Varthur Santhosh. What's his reply?;
Read more about: bigg boss propose filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X