ಸೀರೆಯುಟ್ರೆ ದೇವತೆ ಅಂತಾರೆ.. ಮಿನಿ ಸ್ಕರ್ಟ್ ಹಾಕಿದ್ರೆ ಉಗೀತಾರೆ: ನಿವೇದಿತಾ ಗೌಡ ಸೀರೆ ರೀಲ್ಸ್‌ಗೆ ಹುಡುಗರ ಪಾಡು ನೋಡಿ
ಮಾಜಿ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ದಿನಕ್ಕೊಂದು ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಾರೆ. ಅದನ್ನು ನೋಡುವುದಕ್ಕೆ ಅಂತಾನೇ ನೆಟ್ಟಿಗರು ತುದಿಗಾಲಲ್ಲಿ ನಿಂತಿರುತ್ತಾರೆ. ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಹೊಸ ವಿಡಿಯೋ ಬರುವುದಕ್ಕೆ ಕಾದು ಕೂರುವವರು ಸಾಕಷ್ಟು ಮಂದಿ ಇದ್ದಾರೆ. ಅದಕ್ಕೆ ಮನಸ್ಸಿಗೆ ಬಂದಂತೆ ಕಮೆಂಟ್ ಮಾಡುತ್ತಾರೆ. ಬಾಯಿಗೆ ಬಂದಂತೆ ಟೀಕೆ ಮಾಡುತ್ತಾರೆ.
ಇನ್ನು ಕೆಲವರು ಆ ಕಮೆಂಟ್‌ಗಳನ್ನು ಓದುವುದಕ್ಕೆ ಅಂತಾನೇ ಬರುತ್ತಾರೆ. ಇದು ಪ್ರತಿದಿನಾವೂ ನಡೆಯುತ್ತಲೇ ಇರುತ್ತೆ. ನಿವೇದಿತಾ ಗೌಡ ಮಿನಿ ಸ್ಕರ್ಟ್ ತೊಟ್ಟು ಗ್ಲಾಮರ್ ಲುಕ್‌ನಲ್ಲಿ ರೀಲ್ಸ್ ಮಾಡಿ ಹಾಕಿದ್ದರು. ಅದಕ್ಕೆ ಕೆಲವರು ಮಾಡಿದ ಕಮೆಂಟ್‌ಗಳನ್ನು ಓದುವುದಕ್ಕೆ ಆಗುವುದಿಲ್ಲ. ಆ ಮಟ್ಟಿಗೆ ಕಮೆಂಟ್ ಮಾಡಿದ್ದರು. ಇವತ್ತು ಸೀರೆಯುಟ್ಟು ರೀಲ್ ಮಾಡಿದ್ದಾರೆ. ಇಂದಿನ ಕಮೆಂಟ್‌ಗಳನ್ನು ಅದೆಷ್ಟು ಬಾರಿ ಓದಿದ್ದಾರೋ ಗೊತ್ತಿಲ್ಲ.

ನಿವೇದಿತಾ ಗೌಡ ಹೊಸ ರೀಲ್ಸ್ ಅನ್ನು ಪೋಸ್ಟ್ ಮಾಡಿದ್ದರು. ಈ ಬಾರಿ ಸೀರೆಯುಟ್ಟು "ಒಲವೇ, ಒಲವೇ, ಒಲವೇ.." ಅನ್ನೋ ಕನ್ನಡ ಹಾಡನ್ನು ಮಿಕ್ಸ್ ಮಾಡಿ ಹಾಕಿದ್ದರು. ಸೀರೆಯಲ್ಲಿ ನಿವೇದಿತಾರನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಹುಡುಗರಂತೂ ದೇವತೆ ಅಂತೆಲ್ಲ ಹೊಗಳಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ರೀಲ್ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿಯೇ 15 ಸಾವಿರ ಮಂದಿ ಲೈಕ್ ಬಟನ್ ಒತ್ತಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.
ವಿಚ್ಚೇದನದ ಬಳಿಕ ನಿವೇದಿತಾ ಗೌಡ ಕೆಲ ಮಂದಿಗೆ ಟಾರ್ಗೆಟ್ ಆಗಿದ್ದರು. ಮಾಡರ್ನ್ ಡ್ರೆಸ್‌ನಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದರೆ, ಉಗಿದು ಹಾಕುತ್ತಿದ್ದರು. ಕೆಲವರಂತೂ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಅಂತ ಬ್ಯುಸಿಯಾಗಿದ್ದಕ್ಕೇ ಡಿವೋರ್ಸ್ ಆಗಿದೆ ಅಂತೆಲ್ಲ ಕಮೆಂಟ್ ಮಾಡಿದ್ದರು. ಆದರೆ, ಇದ್ಯಾವುದಕ್ಕೂ ನಿವೇದಿತಾ ಗೌಡ ಕ್ಯಾರೆ ಅನ್ನಲಿಲ್ಲ. ಹಾಗಂತ ಮಿನಿ ಸ್ಕರ್ಟ್, ಮಾಡರ್ನ್ ಡ್ರೆಸ್ ತೊಟ್ಟು ಬಂದರೆ ಮತ್ತದೇ ಕಮೆಂಟ್‌ಗಳು ಶುರುವಾಗುತ್ತವೆ.
ಮಿನಿಸ್ಕರ್ಟ್ ತೊಟ್ಟು ಬಂದಾಗ ಉಗೀತಾರೆ, ಅದೇ ಸೀರೆಯುಟ್ಟು ರೀಲ್ಸ್ ಮಾಡಿದರೆ ದೇವತೆ ಕರೀತಾರೆ. ಇಂದಿನ ವಿಡಿಯೋಗೂ ಕೂಡ ಹಾಗೇ ಆಗಿದೆ. ನಿವೇದಿತಾ ಗೌಡ ಕಡು ಗುಲಾಬಿ ಬಣ್ಣದ ಬ್ಲೌಸ್ ಧರಿಸಿ, ಹೂವಿನ ಚಿತ್ತಾರವಿರುವ ಬಿಳಿ ಸೀರೆಯನ್ನು ಉಟ್ಟು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಒಲವೇ ಒಲವೇ ಹಾಡಿಗೆ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ್ದಾರೆ. ಈ ವಿಡಿಯೋ ನೋಡಿ ಹುಡುಗರು ತಲೆ ತಿರುಗಿದೆ. ಇಲ್ಲಿವರೆಗೂ ಒಂದೇ ಒಂದು ನೆಗೆಟಿವ್ ಕಮೆಂಟ್ ಕೂಡ ಬಂದಿಲ್ಲ.
ಅಷ್ಟಕ್ಕೂ ನೆಟ್ಟಿಗರು ನಿವೇದಿತಾ ಗೌಡ ಹೊಸ ವಿಡಿಯೋಗೆ ಏನೆಲ್ಲಾ ಕಾಮೆಂಟ್ ಮಾಡಿದ್ದಾರೆ ಅಂತ ನೋಡಿ. ಒಬ್ಬರು "ಮುದ್ದು ರಾಜಕುಮಾರಿ ನಮ್ಮ ಗೊಂಬೆ" ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ದೇವಲೋಕದಿಂದ ಬಂದ್ರಾ.. ತುಂಬ ಸುಂದರವಾಗಿ ಇದ್ದೀರ" ಎಂದು ಕವಿಯಾಗುವ ಲೆವೆಲ್‌ಗೆ ಹೋಗಿದ್ದಾರೆ. ಮತ್ತೊಬ್ಬರು "ಕಮೆಂಟ್ ನೋಡಬೇಕು ಅಂತ ಬಂದೆ. ಆದ್ರೆ ಇವಳು ಸೀರೆ ಹಾಕಿರೋದು ನೋಡಿದರೆ ಕ್ರಶ್ ಆಗುತ್ತೆ. ಒಂದೊಂದ್ಸಲ ನೋಡಿದ್ರೆ ಬ್ಯಾಡ್ ಕಮೆಂಟ್ ಮಾಡಬೇಕು ಅನಿಸುತ್ತೆ" ತಮ್ಮ ಗೊಂದಲವನ್ನು ಹೊರ ಹಾಕಿದ್ದಾರೆ.
ಚಂದನ್ ಶೆಟ್ಟಿಯಿಂದ ಬೇರೆಯಾದ್ಮೇಲೆ ನಿವೇದಿತಾ ಗೌಡ ತಮ್ಮ ವೃತ್ತಿ ಬದುಕಿನ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ರಿಯಾಲಿಟಿ ಶೋ, ರೀಲ್ಸ್, ಪ್ರಮೋಷನ್ಸ್, ಸಿನಿಮಾ ಅಂತ ಬ್ಯುಸಿಯಾಗಿದ್ದಾರೆ. ಸದ್ಯಕ್ಕೀಗ ಮಾಜಿ ಪತಿ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ 'ಮುದ್ದು ರಾಕ್ಷಿಸಿ' ಸಿನಿಮಾ ಮುಗಿಸಿದ್ದಾರೆ. ಹಾಗೇ ಸೃಜನ್ ಲೋಕೇಶ್ ನಿರ್ದೇಶಿಸಿದ ಜಿಎಸ್‌ಟಿಯಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











