"ಹೈದರಾಬಾದ್‌ನಲ್ಲಿ ಆ ವ್ಯಕ್ತಿ ಹೇಳಿದ ವಿಷಯವನ್ನು ಚಂದನ್‌ಗೆ ಮುಟ್ಟಿಸಿದ್ದೆ"; ಪ್ರಶಾಂತ್ ಸಂಬರ್ಗಿ
ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ತಮ್ಮ ಫ್ಯಾನ್ಸ್ ಶಾಕ್ ಕೊಟ್ಟಿದ್ದಾರೆ. ಇವರಿಬ್ಬರೂ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇವರಿಬ್ಬರು ಬೇರೆ ಬೇರೆಯಾಗಿದ್ದು ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಏನೇನೋ ಕಾರಣಗಳು ಹರಿದಾಡುತ್ತಿವೆ.
ಈ ಮಧ್ಯೆ ಚಂದನ್ ಶೆಟ್ಟಿ ಗೆಳೆಯ ಹಾಗೂ ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. "ಜೊತೆಗಿರಲು ಗಟ್ಟಿಯಾದ ಭರವಸೆ ಬೇಕು. ದೂರವಾಗಲು ಚಿಕ್ಕದಾದ ಸಂಶಯ ಸಾಕು" ಎಂದು ಹೇಳಿದ್ದರು. ಈಗ ಗ್ಯಾರಂಟಿ ನ್ಯೂಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕೆಲವು ವಿಷಯಗಳನ್ನು ಬಹಿರಂ ಪಡಿಸಿದ್ದಾರೆ.

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಬಗ್ಗೆ ತನಗೆ ಒಂದು ವರ್ಷದ ಹಿಂದೇನೆ ವಿಷಯ ಗೊತ್ತಿತ್ತು ಎಂದು ಹೇಳಿಕೊಂಡಿದ್ದಾರೆ. "ಚಂದನ್ ಶೆಟ್ಟಿ ಆತ್ಮೀಯ ಗೆಳೆಯ. ಚಂದನ್ ಶೆಟ್ಟಿ ಬಿಗ್ ಬಾಸ್ ಸ್ಪರ್ಧಿ. ಚಂದನ್ ಶೆಟ್ಟಿ ನಾವು ಮಾಡಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾದಲ್ಲಿ ಆತ ಹೀರೊ. 15 ದಿನ ನಾವು ಶೂಟಿಂಗ್ ಮಾಡಿದ್ದೇವೆ. ಫೈಟಿಂಗ್ ಮಾಡಿದ್ದೇವೆ. ಹೊಡೆದಾಡಿದ್ದೇವೆ. ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಯಾರು ಅಂದರೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಹೆಸರು ಬರುತ್ತೆ. ಆದ್ರೀಗ ಎಲ್ಲರಿಗೂ ಶಾಕ್ ಆಗಿದೆ. ಆದರೆ, ನನಗೆ ಒಂದು ವರ್ಷದ ಹಿಂದೇನೆ ಈ ವಿಷಯ ಬಂದಿತ್ತು." ಎಂದಿದ್ದಾರೆ.
ಹಾಗೇ ಇವರಿಬ್ಬರ ವಿಚ್ಛೇದನದ ಬಳಿಕ ಹುಟ್ಟಿಕೊಂಡಿರುವ ವದಂತಿಗಳ ಬಗ್ಗೆನೂ ಪ್ರಶಾಂತ್ ಸಂಬರ್ಗಿ ಮಾತಾಡಿದ್ದಾರೆ. "ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಅನೇಕ ಪ್ರಶ್ನೆಗಳು ಬರುತ್ತವೆ. ನಾನು ಕರಿಯರ್‌ಗೋಸ್ಕರ್ ತೆಲುಗು ಪಿಕ್ಚರ್‌ಗೆ ಹೋಗುತ್ತಿದ್ದೇನೆ. ಅಲ್ಲಿ ನನಗೆ ಮದುವೆ ಆಗಿದೆ ಅಂದರೆ, ಅವಕಾಶ ಸಿಗೋದಿಲ್ಲ. ಡಿವೋರ್ಸ್ ಆಗಿದ್ದರೆ ಅವಕಾಶ ಸಿಗುತ್ತೆ ಅನ್ನೋದು ಒಂದು ವದಂತಿ. ನಾವಿಬ್ಬರು ಬೇರೆಯಾಗೋಣ, ನನ್ನ ಜೀವನದಲ್ಲಿ ಯಾರೋ ಬಂದಿದ್ದಾರೆ. ನಿನ್ನ ಜೀವನದ ಶೈಲಿ ನನಗೆ ಇಷ್ಟ ಆಗುತ್ತಿಲ್ಲ. ನನ್ನ ಜೀವನದಲ್ಲಿ ಬೇರೆ ಲೈಫ್ ಸ್ಟೈಲ್ ಬೇಕು ಅಂತ ನಿವೇದಿತಾ ಬಿಟ್ಟು ಹೋಗಿರೋದು ಈ ಎಲ್ಲಾ ಊಹಾ ಪೋಹಗಳನ್ನು ನೋಡಿದಾಗ ಚಂದನ್‌ಗೆ ನಿಜವಾಗಲೂ ಬೇಜಾರಾಗಿದೆ." ಎಂದಿದ್ದಾರೆ.

ಚಂದನ್ ಶೆಟ್ಟಿಗೆ ಅವರ ವೈವಾಹಿಕ ಬದುಕಿನ ಬಗ್ಗೆ ಈ ಹಿಂದೆಯೇ ಮಾಹಿತಿ ಕೊಟ್ಟಿದ್ದು, ನಿನ್ನ ವಸ್ತುವನ್ನು ಕಾಪಾಡಿಕೋ ಎಂದು ಹಲವು ಬಾರಿ ಹೇಳಿದ್ದೆ ಎಂದು ಹೇಳಿದ್ದಾರೆ. "ಚಂದನ್ ಅಮೆರಿಕಾಗೆ ಮ್ಯೂಸಿಕ್ ಕಾರ್ಯಕ್ರಮಕ್ಕೆ ಹೋಗಿದ್ದ. ಆಗ ನಿವೇದಿತಾ ಹೋಗಲಿಲ್ಲ. ನನ್ನ ಮೊದಲನೇ ಪ್ರಶ್ನೆ ಇದ್ದಿದ್ದು ಯಾಕೆ ಅವಳನ್ನು ಕರೆದುಕೊಂಡು ಹೋಗುತ್ತಿಲ್ಲ ಅಂತ. ಆದರೆ, ಬೇರೆ ಟ್ರಿಪ್‌ಗೆ ನೀನು ಕರ್ಕೊಂಡು ಹೋಗಿಲ್ಲ. ಬೇರೆಯವರು ಕರ್ಕೊಂಡು ಹೋಗ್ತಾರೆ. ನೀನು ನಿನ್ನ ಎಮೋಷನ್ಸ್‌ಗೆ ಸ್ಪಂದಿಸಿಲ್ಲ ಅಂದರೆ, ಬೇರೆ ಯಾರೋ ಕೊಡ್ತಾರೆ. ನೀನು ನಿನ್ನ ವಸ್ತುವನ್ನು ಕಾಪಾಡಿಕೋ ಅಂತ ಅನೇಕ ಬಾರಿ ಹೇಳಿದ್ದೇನೆ" ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.
ಪ್ರಶಾಂತ್ ಸಂಬರ್ಗಿ ಹೈದರಾಬಾದ್‌ನಲ್ಲಿ ವ್ಯಕ್ತಿಯೊಬ್ಬರು ನಿವೇದಿತಾ ಗೌಡ ಬಗ್ಗೆ ಹೇಳಿದ್ದ ವಿಷಯವನ್ನು ಚಂದನ್ ಶೆಟ್ಟಿಗೆ ಮುಟ್ಟಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. "ನಾವೂ ಏರ್‌ಪೋರ್ಟ್‌ಗೆ ಹೋಗುತ್ತೇವೆ. ನಾವೂ ಟ್ರಾವೆಲ್ ಮಾಡುತ್ತೇವೆ. ನಾವೂ ಏನೋ ನೋಡಬಾರದ್ದನ್ನು ನೋಡುತ್ತೇವೆ. ಆಗ ನಮಗೊಂದು ಸೂಕ್ಷ್ಮತೆ ಇರುತ್ತೆ. ಪ್ರೊಷೆನಲ್ ಸೂಕ್ಷ್ಮತೆ ಗೊತ್ತಿರುತ್ತೆ. ಹಾಗೇ ಪರ್ಸನಲ್ ಸೂಕ್ಷ್ಮತೆಯನ್ನೂ ನೋಡಿರುತ್ತೇವೆ. ಆಗ ನಾವು ಅವರನ್ನು ಕರೆದು ಎಲ್ಲಾ ಸರಿಯಾಗಿದೆಯಾ? ನಿಂದೂ ಅವರದ್ದು ಹೇಗಿದೆ? ಅಂತ ಕೇಳಿದ್ದೆ. ಯಾಕಂದ್ರೆ, ಮೂರನೇ ವ್ಯಕ್ತಿ ಹೈದರಾಬಾದ್‌ನಲ್ಲಿ ಒಂದು ವಿಷಯ ಹೇಳುತ್ತಾರೆ ಅಂದರೆ, ಅದನ್ನು ಗೆಳೆಯನಾಗಿ ನಾನು ಹೇಳಲೇಬೇಕು. ಅದನ್ನು ಅಸ್ಟ್ರಾಲಿಜಿ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವು. ಎನ್ ಮತ್ತು ಸಿ ಹೊಂದುವುದಿಲ್ಲ ಎಂದು ಹುಬ್ಬಳ್ಳಿಯಲ್ಲಿ ಒಬ್ಬರು ಹೇಳಿದ್ದರು." ಎಂದಿದ್ದಾರೆ.
ಹಾಗೇ ಚಂದನ್ ಶೆಟ್ಟಿ ಸಪೋರ್ಟ್‌ಗೆ ನಿಲ್ಲುವುದಾಗಿ ಹೇಳಿಕೊಂಡಿದ್ದಾರೆ. "ಇರುವ ಸ್ವಿಫ್ಟ್ ಕಾರು ಬಿಟ್ಟು ಬೆನ್ಜ್ ಕಾರು ಬೇಕು ಅಂದರೆ ನಾವೇನು ಮಾಡುವುದಕ್ಕೆ ಆಗುವುದಿಲ್ಲ. ಬೆನ್ಜ್ ಹಿಂದೆ ಹೋಗಿರುವಂತವರು, ದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಅಂತ ಕರ್ನಾಟಕದ ಜನತೆಗೆ ಗೊತ್ತಾಗುತ್ತೆ. ಚಂದನ್‌ಗೆ ನಮ್ಮ ಬ್ರದರ್ಲಿ ಸಪೋರ್ಟ್, ಎಮೋಷನಲ್ ಸಪೋರ್ಟ್ ಇದೆ. " ಎಂದಿದ್ದಾರೆ.


Click it and Unblock the Notifications











