ಸಖತ್ ಸ್ಲಿಮ್ ಆದ ಭದ್ರಾವತಿ ಹುಡುಗಿ ಪ್ರಿಯಾಂಕಾ ತಿಮ್ಮೇಶ್; ಕನ್ನಡದ 2ನೇ ಸಿಕ್ಸ್ ಪ್ಯಾಕ್ ಹುಡುಗಿ ಎಂದ ನೆಟ್ಟಿಗರು

ನಟಿಯರಿಗೆ ಫಿಟ್ನೆಸ್ ಅನ್ನೋದು ತುಂಬಾನೇ ಮುಖ್ಯ. ಅದಕ್ಕಾಗಿ ಡಯೆಟ್, ಫಿಟ್ನೆಸ್ ಅಂತ ಸದಾ ಅದರಲ್ಲೇ ಮುಳುಗಿ ಹೋಗಿರುತ್ತಾರೆ. ಆದರೆ, ಕೆಲವು ನಟಿಯರು ಮಾತ್ರ ಹಾಗಲ್ಲ. ನಟನೆ ಕಡೆಗಷ್ಟೇ ಗಮನ ಹರಿಸುತ್ತಾರೆ. ಆದರೆ, ತೀರಾ ಡಯೆಟ್ ಮಾಡಿ ಸದಾ ಸ್ಲಿಮ್ ಆಗಿ ಕಾಣಿಸಿಕೊಳ್ಳುವ ಉಸಾಬರಿಗೆ ಹೋಗುವುದಿಲ್ಲ.

ಕನ್ನಡದಲ್ಲಿ ಇಂತಹ ನಾಯಕಿಯರು ಇದ್ದಾರೆ. ಅವರಲ್ಲಿ ಕನ್ನಡ ನಟಿ ಪ್ರಿಯಾಂಕಾ ತಿಮ್ಮೇಶ್ ಕೂಡ ಒಬ್ಬರು. ಕನ್ನಡ, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದ ಈ ನಟಿಗೆ ಸಿನಿಮಾಗಳಲ್ಲಿ ಹೇಳಿಕೊಳ್ಳುವಂತಹ ಸಕ್ಸಸ್ ಸಿಕ್ಕಿರಲಿಲ್ಲ. ಆದರೆ, ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಎಂಟ್ರಿ ಕೊಡುತ್ತಿದ್ದಂತೆ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು.

Bigg Boss Kannada fame Priyanka Thimmesh lose weight shows her six pack

ಭದ್ರಾವತಿ ಮೂಲದ ಪ್ರಿಯಾಂಕಾ ತಿಮ್ಮೇಶ್ ಬಿಗ್‌ಬಾಸ್ ಕನ್ನಡ ಸೀನಸ್ 8ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಪ್ರವೇಶ ಪಡೆದುಕೊಂಡಿದ್ದರು. ಅಲ್ಲಿಂದ ಪ್ರಿಯಾಂಕಾಗೆ ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಸಿಗುವುದಕ್ಕೆ ಶುರುವಾಗಿವೆ. ಹಾಗೇ ಸೋಶಿಯಲ್ ಮೀಡಿಯಾದಲ್ಲೂ ಪ್ರಿಯಾಂಕಾ ತಿಮ್ಮೇಶ್ ಆಕ್ಟಿವ್ ಆಗಿದ್ದಾರೆ. ಸದ್ಯ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಅವುಗಳನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್‌ ವರ್ಕ್‌ಔಟ್ ಬಗ್ಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ. ನಟಿಸಿದ ಸಿನಿಮಾಗಳಲ್ಲಿ ತಾವು ಹೇಗಿದ್ದಾರೋ ಹಾಗೇ ಕಾಣಿಸಿಕೊಂಡಿದ್ದರು. ಆದರೆ, ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ಅವರಿಗೆ ಪರ ಭಾಷೆಯ ಸಿನಿಮಾಗಳಿಗೆ ಅವಕಾಶ ಸಿಗುತ್ತಿದೆ. ಹೀಗಾಗಿ ತಮ್ಮ ದೇಹದ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ವರ್ಕ್‌ಔಟ್ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ.

ನಟಿ ಪ್ರಿಯಾಂಕಾ ತಿಮ್ಮೇಶ್ ತಮ್ಮನ್ನು ಫಾಲೋ ಮಾಡುತ್ತಿರುವವರಿಗಾಗಿ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಾಗಂತ ಇದು ಗ್ಲಾಮರಸ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಲ್ಲ. ಕೆಲವು ದಿನಗಳಿಂದ ತನ್ನ ದೇಹವನ್ನು ದಂಡಿಸಿ ಶೇಪ್‌ಗೆ ತಂದುಕೊಂಡಿದ್ದ ಫೋಟೋಗಳು. ಇದರಲ್ಲಿ ಒಂದು ಫೋಟೋ ನೋಡಿದರೆ, ಪ್ರಿಯಾಂಕಾ ತಿಮ್ಮೇಶ್ ಸಿಕ್ಸ್ ಪ್ಯಾಕ್‌ಗೆ ಮುಂದಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡು, ಮಾಹಿತಿ ಹಂಚಿಕೊಂಡಿದ್ದಾರೆ.

"ತೂಕವನ್ನು ಕಳೆದುಕೊಳ್ಳುವುದು ಜೀವನದ ಅತೀ ದೊಡ್ಡ ಟಾಸ್ಕ್. ಒಮ್ಮೆ ನೀವು ಇದನ್ನು ಮಾಡಿದರೆ, ಅದಕ್ಕಿಂತ ಸುಲಭವಾದದ್ದು ಏನೂ ಇಲ್ಲ ಅಂತ ಅನಿಸುತ್ತೆ. ಬ್ಯೂಟಿ ಅನ್ನೋದು ನಮ್ಮ ಕೈನಲ್ಲಿ ಇದೆ. ನಾವು ನಮ್ಮನ್ನು ವಿಶ್ವದ ಮುಂದೆ ಹೇಗೆ ಪ್ರೆಸೆಂಟ್ ಮಾಡಿಕೊಳ್ಳುತ್ತೇವೆ ಅನ್ನುವುದೇ ನಮ್ಮ ಗುರಿ" ಎಂದು ನಟಿ ಪ್ರಿಯಾಂಕಾ ತಿಮ್ಮೇಶ್ ಹೇಳಿಕೊಂಡಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್ ಸದ್ಯ ಈಗ ಕನ್ನಡ ಸೇರಿದಂತೆ ಪರಭಾಷೆಯಲ್ಲೂ ಬ್ಯುಸಿಯಾಗಿದ್ದಾರೆ. ಕೋಮಲ್ ನಟಿಸುತ್ತಿರುವ 25ನೇ ಸಿನಿಮಾ 'ಕುಟೀರ'ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ತೆಲುಗು ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಬ್ಯಾಕ್ ಟು ಬ್ಯಾಕ್ ಆಫರ್‌ಗಳನ್ನು ಗಿಟ್ಟಿಸಿಕೊಂಡಿರುವ ಪ್ರಿಯಾಂಕಾ ದೈಹಿಕ ಸೌಂದರ್ಯದ ಬಗ್ಗೆನೂ ಹೆಚ್ಚು ಗಮನ ಹರಿಸಿದ್ದಾರೆ.

More from Filmibeat

English summary
Actress Priyanka Thimmesh silm look goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X