"ಬಕೆಟ್, ಚಮಚ ಹಿಡಿಯೋಕೆ ಬರಲ್ಲ.. ಇನ್ನೂ ಜಾಸ್ತಿ ಹಾರಾಡ್ತೀನಿ": ಬಿಗ್‌ ಬಾಸ್ ಕನ್ನಡದ ರಜತ್

ಬಿಗ್‌ ಬಾಸ್ ಕನ್ನಡ ಖ್ಯಾತಿಯ ರಜತ್ ಹಾಗೂ ವಿನಯ್ ಗೌಡ ಇಬ್ಬರು ಒಳ್ಳೆಯ ಸ್ನೇಹಿತರು. ಇತ್ತೀಚೆಗೆ ರಜತ್ ಹಾಗೂ ವಿನಯ್ ಗೌಡ ಇಬ್ಬರೂ ಲಾಂಗ್ ಹಿಡಿದು ರೀಲ್ಸ್ ಮಾಡಿ ಕೇಸ್ ಅನ್ನು ಮೈಮೇಲೆ ಹಾಕಿಕೊಂಡಿದ್ದರು. ಅಷ್ಟೇ ಅಲ್ಲದೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದೂ ಕೂಡ ಗೊತ್ತಿರುವ ಸಂಗತಿ. ಇದರ ಮುಂದುವರೆದ ಭಾಗವಾಗಿ ಇಬ್ಬರ ಗೆಳೆತನದಲ್ಲಿ ಬಿರುಕು ಬಿಟ್ಟಿದೆ ಅನ್ನೋ ಮಾತು ಕೇಳಿ ಬಂದಿತ್ತು.

ರೀಲ್ಸ್ ವಿವಾದದ ಬಳಿಕ ರಜತ್ ಅವರಿಂದ ವಿನಯ್ ಗೌಡ ದೂರವಾಗಿದ್ದಾರೆ. ತಮ್ಮ ಸ್ನೇಹವನ್ನು ಕಡಿದುಕೊಂಡಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಅದಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ರಜತ್ ರೀಲ್ಸ್ ವಿವಾದ, ಜೈಲು ಸೇರಿದ್ದ ವಿಷಯ, ಅವರ ಮೇಲಿರುವ ಕೇಸ್‌ಗಳ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಹಾಗೇ ವಿನಯ್ ಗೌಡ ಹಾಗೂ ರಜತ್ ಸ್ನೇಹಿತ ಮುರಿದು ಬಿದ್ದಿದೆಯಾ? ಇಲ್ಲವಾ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ.

Bigg Boss Kannada fame Rajat Kishan reacted on friendship with Vinay Gowda

"ಜೈಲ್‌ಗೆ ಹೋಗುತ್ತೇವೆ ಅಂದ್ಕೊಂಡಿರಲಿಲ್ಲ"

"ರೀಲ್ಸ್ ಮಾಡುವಾಗ ಹೀಗಾಗುತ್ತೆ ಅಂತ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ನಾರ್ಮಲ್ ರೀಲ್ಸ್ ಅಲ್ವ. ಎಲ್ಲರೂ ಮಾಡುತ್ತಾರೆ. ಅಂತಹದ್ದೊಂದು ಕ್ಯಾರೆಕ್ಟರ್ ಕೊಟ್ಟಿದ್ದರು. ನಾನು ಸ್ವಲ್ಪ ವಿಭಿನ್ನವಾಗಿ ಕಾಸ್ಟ್ಯೂಮ್ ಪ್ಲಾನ್ ಮಾಡೋಣ ಅಂತ ಮಾಡಿದ್ದೆ. ಅದು ಈ ಮಟ್ಟಕ್ಕೆ ಟ್ರೋಲ್ ಆಗುತ್ತೆ. ಜೈಲ್‌ಗೆಲ್ಲ ಹೋಗುತ್ತೇವೆ ಅಂತ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಯಾರೋ ಪುಣ್ಯಾತ್ಮರು ಹೀಗೆಲ್ಲ ಮಾಡುತ್ತಿದ್ದಾರೆ. ಮಾಡಿಕೊಳ್ಳಲಿ ಬಿಡಿ"

"ಟಾರ್ಗೆಟ್ ಯಾಕೆ ಮಾಡ್ತಿದ್ದಾರೋ ಗೊತ್ತಿಲ್ಲ"

"ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ನಾನು ಹೇಳುವ ಅವಶ್ಯಕತೆನೇ ಇಲ್ಲ. ಅದು ಜನರಿಗೆ ಗೊತ್ತಾಗುತ್ತಿದೆ. ಟಾರ್ಗೆಟ್ ಯಾಕೆ ಮಾಡುತ್ತಿದ್ದಾರೋ? ಏನಕ್ಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ನನ್ನ ದಾರಿಯಲ್ಲಿ ನಾನು ನಡೆದುಕೊಂಡು ಹೋಗುತ್ತಿದ್ದೇನೆ."

"ನಾವೂ ಕಾನೂನು ತಿಳಿದುಕೊಳ್ಳಬೇಕಿತ್ತು"

"ನಾವು ಒರಿಜಿನಲ್ ಮಚ್ಚಿನಲ್ಲಿ ಏನೂ ಮಾಡಿಲ್ಲ. ಅದು ಪ್ರಾಪರ್ಟಿ ಮಚ್ಚು. ಹಾಗಿದ್ದಾಗ, ಅದನ್ನು ಇಟ್ಟು ದೊಡ್ಡದು ಮಾಡುವ ಅವಶ್ಯಕತೆ ಇರಲಿಲ್ಲ. ನಮ್ಮದೂ ತಪ್ಪಿದೆ. ನಾವೂ ಕಾನೂನನ್ನು ತಿಳಿದುಕೊಳ್ಳಬೇಕಿತ್ತು. ನಮಗೆ ಅದರ ಅರಿವು ಇಲ್ಲದೆ ಮಾಡಿದ್ದೇವೆ. ಮಾಡಿದ್ದು ಆಯ್ತು. ಈಗ ಅನುಭವಿಸಿದ್ದೂ ಆಯ್ತು."

Bigg Boss Kannada fame Rajat Kishan reacted on friendship with Vinay Gowda

"ರೀಲ್ಸ್‌ನಲ್ಲಿ ದರ್ಶನ್‌ ಸರ್‌ಗೆ ಅವಮಾನ ಮಾಡಿಲ್ಲ"

"ನನಗೆ ದರ್ಶನ್ ಸರ್ ಫ್ಯಾನ್ಸ್ ಯಾರೂ ಮೆಸೇಜ್ ಮಾಡಿಲ್ಲ. ಈತರ ವಿಡಿಯೋ ಮಾಡಿ ನಮ್ಮ ಬಾಸ್‌ಗೆ ಅವಮಾನ ಮಾಡುತ್ತಿದ್ದೀಯ ಅಂತ ಹೇಳಿಲ್ಲ. ನನಗೆ ಮೆಸೇಜ್ ಕಳಿಸಿದ್ದು ಏನಂದ್ರೆ, ನಮಗೆ ನಿಮ್ಮ ಮೇಲೆ ಏನೂ ಬೇಜಾರಿಲ್ಲ. ನಿಮ್ಮ ಪ್ರೀತಿ, ನಿಮ್ಮ ಅಭಿಮಾನ ತೋರಿಸಿದ್ದೀರ. ಮಾಧ್ಯಮದವರು ದಿಕ್ಕು ತಪ್ಪಿಸುತ್ತಿದ್ದಾರೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾವು ಯಾವತ್ತೂ ನಿಮ್ಮ ಪರ ಇದ್ದೀವಿ ಅಂತಾನೇ ನಮಗೆ ಹೇಳಿರೋದು. ದರ್ಶನ್ ಸರ್ ಫ್ಯಾನ್ಸ್ ಟ್ರೋಲ್ ಏನೂ ಮಾಡಿಲ್ಲ. ಆವಿಡಿಯೋ ತಗೀರಿ ಅಂತಾನೂ ಹೇಳಿಲ್ಲ. ನಮ್ಮ ಬಾಸ್‌ಗೆ ಅವಮಾನ ಆಗುತ್ತಿದೆ. ಹೀಗೆಲ್ಲ ಮಾಡಬೇಡಿ ಅಂತಾನೂ ಹೇಳಿಲ್ಲ."

"ಇನ್ನೂ ಜಾಸ್ತಿನೇ ಹಾರಾಡುತ್ತೇವೆ"

"ಜನರು ಯಾಕೆ ಕಮೆಂಟ್‌ಗಳನ್ನು ಮಾಡುತ್ತಾರೆ. ಈಗ ನಾವೇನು ಹಾರಾಡಿದ್ದೀವಿ. ನಾವೇನು ಮಾಡ್ಬಿಟ್ಟಿದ್ದೀವಿ. ಏನು ದೌವಲತ್ತು ತೋರಿಸಿದ್ದೀವಿ. ಯಾರ ಹತ್ತಿರ ತೋರಿಸಿದ್ದೀವಿ. ಹೇಗೆ ನಾರ್ಮಲ್ ಆಗಿ ಮಾತಾಡಿದ್ದೇವೋ ಹಾಗೇ ಇರೋದು. ನನಗೆ ಬಕೆಟ್ ಹಿಡಿಯೋದು, ಚಮಚ ಮಾಡೋ ಕೆಲಸವೆಲ್ಲ ಬರೋದಿಲ್ಲ. ಫೇಕ್ ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡು ಹಾರಾಡುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಈಗ ಇನ್ನ ಜಾಸ್ತಿ ಹಾರಾಡುತ್ತೇವೆ. ಅವನು ಹೇಳಿದ ತಕ್ಷಣ ಬದಲಾಗುತ್ತೇನಾ ಇಲ್ಲ."

"ಇನ್ಮುಂದೆ ಹುಷಾರಾಗಿರುತ್ತೇವೆ"

"ನಾವು ಯಾರಿಗೋ ಹೆದರಿಸಿದ್ದರೆ, ಡಕಾಯಿತಿ ಮಾಡಿದ್ದರೆ, ಕೊಲೆ ಮಾಡಿದ್ದರೆ ಓಕೆ, ಅದೊಂದು ಸೆಟ್ ಪ್ರಾಪರ್ಟಿ. ಅದನ್ನು ಇಟ್ಕೊಂಡು ರೀಲ್ಸ್ ಮಾಡಿದ್ವಿ. ಅದನ್ನು ಕಾಣದ ಕೈಗಳು ಎಷ್ಟು ಮಾಡುವುದಕ್ಕೆ ಸಾಧ್ಯವೋ ಅಷ್ಟು ಮಾಡಿ ಇಟ್ಟರು. ಅದರಿಂದ ನಾವು ಏನು ಅನುಭವಿಸಬೇಕೋ ಅದನ್ನು ಅನುಭವಿಸಿಕೊಂಡು ಬಂದಿದ್ದೀವಿ. ಇನ್ನೊಂದು ಬಾರಿ ಆ ರೀತಿ ಮಾಡಬಾರದು ಅಂತ ಹುಷಾರಾಗಿ ಇರುತ್ತೇವೆ ಅಷ್ಟೇ. ಅದರಿಂದ ಕುಗ್ಗುವುದು ಅಂತೇನು ಇಲ್ಲ. ಇನ್ನ ಮಾಡಿಕೊಳ್ಳಲಿ, ನಾನು ಕುಗ್ಗುವುದಿಲ್ಲ."

Bigg Boss Kannada fame Rajat Kishan reacted on friendship with Vinay Gowda

ಜೈಗೆ ಹೋಗಿದ್ದು ಇದೇ ಮೊದಲು

"ಇದು ಫಸ್ಟ್ ಟೈಮ್ ನನಗೂ ಅಭ್ಯಾಸವಿಲ್ಲ. ವಿನಯ್‌ಗೂ ಅಭ್ಯಾಸವಿಲ್ಲ. ನಮಗೆ ಹೇಗಿರುತ್ತೆ ಅನ್ನೋದೂ ಗೊತ್ತಿಲ್ಲ. ಹೋಗುವಾಗ ಬೇಜಾರಾಗಿದ್ದೂ ಉಂಟು. ಏನಪ್ಪ ಇಷ್ಟು ಚಿಕ್ಕ ವಿಷಯಕ್ಕೆ ಒಳಗೆ ಕಳಿಸಿಬಿಟ್ರಲ್ಲ. ನಮ್ಮಂಥ ಈಗ ಬೇಳೆಯುತ್ತಿರುವ ಕಲಾವಿದರಿಗೆ ನಮ್ಮ ಜನ ನಮ್ಮ ಜೊತೆ ನಿಂತು ಸಾಥ್ ಕೊಡಬೇಕು. ಅದೇ ಬೇರೆ ಭಾಷೆಯ ಕಲಾವಿದರು ಮಾಡಿದ್ದರೆ, ಹಂಗೆ ಮಾಡಿದ್ರು ನೋಡು. ಹಿಂಗೆ ಮಾಡಿದ್ರು ನೋಡು ಅಂತಾರೆ. ಆಮೇಲೆ ಆ ಮಟ್ಟಿಗೆ ದ್ವೇಷ ಮಾಡುವಂತಹ ಕೆಲಸವನ್ನು ನಾನಂತೂ ಮಾಡಿಲ್ಲ. ಹೀಗಿದ್ದಾಗ ಬೇಜಾರು ಆಗಿರುತ್ತೆ."

"ನಾನೇನು ರೌಡಿನಾ?"

"ನಾಲ್ಕೈದು ಕೇಸ್ ಮಾಡಿಕೊಳ್ಳುವುದಕ್ಕೆ ನಾನೇನು ರೌಡಿನಾ. ಒಂದು ಕೇಸ್ 324 ಇರೋದೆ. ಅದು ನಮ್ಮ ಚಿಕ್ಕಪ್ಪಂದೇ. ಫ್ಯಾಮಿಲಿ ಗಲಾಟೆ. ನಮ್ಮ ಚಿಕ್ಕಪ್ಪ ಮಾಡಿಕೊಂಡು ಅದನ್ನು ವಾಪಾಸ್ ಪಡೆಯುವುದಕ್ಕೂ ರೆಡಿ ಇದ್ದಾರೆ. ಯಾವುದೇ ಆಸ್ತಿ ವಿಷಯಕ್ಕೆ ಆಗಿರೋದು. ಆಕಸ್ಮಿಕವಾಗಿ ಗಾಡಿ ನಿಲ್ಲಿಸಿದಾಗ ನಡೆದಿದ್ದು, ಆಗ ಅಕ್ಷಿತಾ ಪ್ರೆಗ್ನೆಂಟ್ ಬೇರೆ ಆಗಿದ್ದಳು. ಆಗ ಎಂತಹ ಗಂಡಸಾಗಿದ್ದರೂ ಪ್ರತಿಕ್ರಿಯೆ ನೀಡುತ್ತಾನೆ. ಅವನು ಯಾವನೋ ಕೂತ್ಕೊಂಡು ಕಮೆಂಟ್ ಹಾಕುತ್ತಾನಲ್ಲ. ಅವನು ಬಿಟ್ಟುಬಿಡುತ್ತಿದ್ನಾ? ಬೇಕಂತ ಆಗಿದ್ದಲ್ಲ. ಬೇಕಂತ ಜಗಳ ಮಾಡುವುದಕ್ಕೆ ತಲೆ ಕೆಟ್ಟಿದೆಯಾ ನನಗೆ"

"ವಿನಯ್‌ಗೂ ಪ್ರಬುದ್ಧತೆ ಇದೆ"

"ನೋಡಿ ವಿನಯ್ ನಿನ್ನೆ ಯುಕೆಜಿ, ಎಲ್‌ಕೆಜಿ ಓದಿಕೊಂಡು ಸ್ಟಾರ್ ಆಗಿಲ್ಲ. ವಿನಯ್ ನನಗಿಂತ ಹತ್ತು ವರ್ಷ ದೊಡ್ಡವನು. ಅವನಿಗೂ ಪ್ರಬುದ್ಧತೆ ಇದೆ. ಏನು ಮಾಡಬೇಕು ಅಂತ ಗೊತ್ತಿದೆ. ನಾನೇನು ಅವರ ಕುತ್ತಿಗೆ ಹಿಡಿದುಕೊಂಡು ನಾನೇನು ರೀಲ್ಸ್ ಮಾಡಲೇಬೇಕು ಅಂತ ಕೂತಿದ್ದಲ್ಲ. ರೆಡಿಯಾದ್ವಿ, ಇಬ್ಬರೂ ಚೆನ್ನಾಗಿ ಕಾಣಿಸಿಕೊಳ್ಳುತ್ತಿದ್ವಿ. ರೀಲ್ಸ್ ಮಾಡೋಣ ಅಂದೆ. ಮಾಡಿದ್ವಿ, ಅಪ್‌ಲೋಡ್ ಮಾಡಿದ್ವಿ ಮುಗಿದು ಹೋಯ್ತು. ಇದು ಉದ್ದೇಶ ಪೂರ್ವಕವಾಗಿ ಮಾಡಿದ್ದಲ್ಲ. ನನಗೆ ನನ್ನ ಬಗ್ಗೆ ಕೆಟ್ಟ ಹೆಸರು ತಂದುಕೊಳ್ಳುವುದಕ್ಕೆ ತಲೆ ಕೆಟ್ಟಿದೆಯಾ? ಏನು ಮಾಡಬೇಕಲ್ವ ಅಂತ ಮಾಡಿದ್ವಿ. ಅದು ಈ ರೀತಿ ಆಗಿ ಹೋಯ್ತು. ಸಂಪೂರ್ಣ ಜವಾಬ್ದಾರಿ ತಗೋತೀನಿ, ಪ್ರಾಪರ್ಟಿ ನನ್ನದೇ, ಕಾಸ್ಟ್ಯೂಮ್ ನನ್ನದೇ. ವಿನಯ್ ಅನ್ನು ಕರೆದಿದ್ದು ನಾನೇ, ಹೋಗಿದ್ದೂ ನಾನೇ. ಹಾಗಾಗಿ ಅವನನ್ನು ಕೆಟ್ಟ ದಾರಿಗೆ ತೆಗೆದುಕೊಂಡು ಹೋಗಬೇಕು ಎನ್ನುವ ಉದ್ದೇಶವಿರಲಿಲ್ಲ"

"ನಿನ್ನನ್ನು ಬಿಟ್ಟುಕೊಡಲ್ಲ ಅಂದ"

"ನನ್ನ ಸಂದರ್ಶನ ನೋಡಿ ಮೆಸೇಜ್ ಮಾಡಿದ್ದ. ಮಚ್ಚಾ ಯಾವತ್ತು ನಿನ್ನನ್ನು ಬಿಟ್ಟುಕೊಡುವುದಿಲ್ಲ ತಲೆ ಕೆಡಿಸಿಕೊಳ್ಳಬೇಡ ಅಂತ ಹೇಳಿದ್ದಾನೆ. ನಾನು ಬಿಟ್ಟುಕೊಡುವುದಿಲ್ಲ." ಎಂದು ವಿನಯ್ ಗೌಡ ಹಾಗೂ ತಮ್ಮ ನಡುವಿನ ವೈಮನಸ್ಸಿನ ಬಗ್ಗೆ ರಜತ್ ಮಾತಾಡಿದ್ದಾರೆ. ಜೈಲಿಗೆ ಹೋಗಿ ಬಂದ ಬಳಿಕ ರಜತ್ ತಮ್ಮ ಬದುಕಿನಲ್ಲಿ ಏನೆಲ್ಲ ಆಯ್ತು? ಏನಲ್ಲ ಟೀಕೆ ಟಿಪ್ಪಣಿಗಳು ಬಂದ್ವು ಅನ್ನೋದನ್ನು ವಿವರಿಸಿದ್ದಾರೆ.

More from Filmibeat

English summary
Bigg Boss Kannada fame Rajat Kishan reacted on friendship with Vinay Gowda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X