ಈ ಬಾರಿ ಬಿಗ್ ಬಾಸ್ ಗೆಲ್ಲೋರು ಇವರೇ: ಆರ್ಯವರ್ಧನ್ ಕೊಟ್ಟ ಆ '3' ನಂಬರ್ ಯಾವುದು?

ಬಿಗ್ ಬಾಸ್ ಓಟಿಟಿ ಸೀಸನ್ ಒಂದರ ಮೊದಲ ಅಭ್ಯರ್ಥಿಯಾಗಿ ಆರ್ಯವರ್ಧನ್ ಬಿಗ್ ಬಾಸ್ ಪ್ರವೇಶ ಮಾಡಿದ್ದಾರೆ. ದಕ್ಷಿಣ ಭಾರತದ ಮೊದಲ ಬಿಗ್ ಬಾಸ್ ಓಟಿಟಿ ಸೀಸನ್‌ಗೆ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಎಂಟ್ರಿ ಕೊಟ್ಟಿದ್ದು, ಮನೆಯನ್ನು ಒಂದು ಸುತ್ತು ರೌಂಡ್ ಹಾಕುತ್ತಿದ್ದಾರೆ.

ಬಿಗ್ ಬಾಸ್ ಆರಂಭ ಆಗುವುದಕ್ಕೂ ಮುನ್ನವೇ ಆರ್ಯವರ್ಧನ್ ಭವಿಷ್ಯ ನುಡಿದಿದ್ದಾರೆ. ಕಿಚ್ಚ ಸುದೀಪ್ ಕೇಳಿ ಪ್ರಶ್ನೆಗಳಿಗೆ ಆರ್ಯವರ್ಧನ್ ಮನ ಬಿಟ್ಟಿ ಮಾತಾಡಿದ್ದಾರೆ. ತನ್ನ ಬಗ್ಗೆ ಕೆಲವು ಸೀಕ್ರೆಟ್‌ಗಳನ್ನು ಕಿಚ್ಚ ಸುದೀಪ್‌ ಎದುರು ಬಿಟ್ಟುಕೊಟ್ಟಿದ್ದಾರೆ.

ಆಗಸ್ಟ್ 6ರಂದು ಸಂಜೆ 7 ರಿಂದ ಬಿಗ್ ಶೋ ಆರಂಭ ಆಗಿದೆ. ಬಿಗ್ ಬಾಸ್ ವೀಕ್ಷಕರ ಕುತೂಹಲಗಳಿಗೆ ಒಂದೊಂದಾಗಿಯೇ ಉತ್ತರ ಸಿಗುತ್ತಲೇ ಇದೆ. ಸದ್ಯ ಆರ್ಯವರ್ಧನ್ ಈಗ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುವುದಕ್ಕೂ ಮುನ್ನ ಈ ಬಾರಿ ಯಾವ್ಯಾವ ನಂಬರ್‌ನಲ್ಲಿ ವೇದಿಕೆಗೆ ಎಂಟ್ರಿ ಕೊಡುತ್ತಾರೋ ಅವರೇ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಆ ನಂಬರ್‌ಗಳು ಯಾವುವು ಎಂದು ತಿಳಿಯಲು ಮುಂದೆ ನೋಡಿ.

ಆರ್ಯವರ್ಧನ್ ನಂಬರ್ 1

ಆರ್ಯವರ್ಧನ್ ನಂಬರ್ 1

ಆರ್ಯವರ್ಧನ್ ಮೊದಲ ವ್ಯಕ್ತಿಯಾಗಿ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಆದರೆ, ಅವರ ಪ್ರಕಾರ ಮೂರು ಸಂಖ್ಯೆಗಳು ಕೊಟ್ಟಿದ್ದಾರೆ. ಈ ಮೂರು ಸಂಖ್ಯೆಗಳಲ್ಲಿ ವೇದಿಕೆ ಏರುವ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದಿದ್ದಾರೆ. ಅದರಲ್ಲಿ ಅವರದ್ದೇ ಹೆಸರು ನಂಬರ್ ಇಲ್ಲ. ನಂಬರ್ ಅಂದ್ರೆ, ನಾನು.. ನಾನು ಅಂದ್ರೆ ನಂಬರ್ ಅಂತಿದ್ದ ಆರ್ಯವರ್ಧನ್ ಮೊದಲ ಹೆಜ್ಜೆಯಲ್ಲೇ ಹಿನ್ನೆಡೆ ಆಯ್ತು ಅಂತ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ಆರ್ಯವರ್ಧನ್ ಕೊಟ್ಟ ನಂಬರ್ ಯಾವುದು?

ಆರ್ಯವರ್ಧನ್ ಕೊಟ್ಟ ನಂಬರ್ ಯಾವುದು?

ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ವೇದಿಕೆ ಮೇಲೆ ಮೂರು ನಂಬರ್ ಕೊಟ್ಟಿದ್ದಾರೆ. ಅದರಲ್ಲಿ ಆ ಮೂರು ಸಂಖ್ಯೆಗಳ ಕ್ರಮದಲ್ಲಿ ಯಾರು ವೇದಿಕೆ ಪ್ರವೇಶ ಮಾಡುತ್ತಾರೋ ಅವರೇ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಆರ್ಯವರ್ಧನ್ ಕೊಟ್ಟ ಮೂರು ನಂಬರ್ ಅಂದರೆ, ಅದು 3, 5 ಮತ್ತು 6. ಈ ಮೂರು ಕ್ರಮದಲ್ಲಿ ವೇದಿಕೆ ಮೇಲೆ ಏರುವವರು ಈ ಬಾರಿ ಬಿಗ್ ಬಾಸ್ ಒಟಿಟಿ ಗೆಲ್ಲುತ್ತಾರೆ ಎಂದು ಆರ್ಯವರ್ಧನ್ ಭವಿಷ್ಯ ನುಡಿದಿದ್ದಾರೆ.

3 ಕ್ರಮದಲ್ಲಿ ವೇದಿಕೆ ಮೇಲೆ ಬಂದಿದ್ಯಾರು?

3 ಕ್ರಮದಲ್ಲಿ ವೇದಿಕೆ ಮೇಲೆ ಬಂದಿದ್ಯಾರು?

ಆರ್ಯವರ್ಧನ್ ಕೊಟ್ಟ ನಂಬರ್‌ನಲ್ಲಿ ವೇದಿಕೆ ಮೂವರ ಪಟ್ಟಿ ಇಲ್ಲಿದೆ. ಮೂರನೇ ಸಂಖ್ಯೆಯಲ್ಲಿ ವೇದಿಕೆ ಏರಿದ ಸ್ಪರ್ಧಿ ರೂಪೇಶ್ ಶೆಟ್ಟಿ. ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಆರ್‌ಜೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೂಪೇಶ್ ಮನೆಯೊಳಗೂ ಪ್ರವೇಶ ಮಾಡುತ್ತಿದ್ದಂತೆ ಆರ್ಯವರ್ಧನ್ ಪಾಸಿಟಿವ್ ಎನರ್ಜಿ ಕೊಟ್ಟಿದ್ದಾರೆ. ಇನ್ನು ಐದನೇ ಅಭ್ಯರ್ಥಿಯಾಗಿ ಸಾನಿಯಾ ಗೌಡ, 6ನೇ ಅಭ್ಯರ್ಥಿಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಾಮಿಡಿಯನ್ ಲೋಕೇಶ್ ವೇದಿಕೆ ಮೇಲೆ ಪ್ರವೇಶ ಮಾಡಿದ್ದಾರೆ.

ಆರ್ಯವರ್ಧನ್ ಗುರೂಜಿ ಟ್ರೋಲ್

ಆರ್ಯವರ್ಧನ್ ಗುರೂಜಿ ಟ್ರೋಲ್

ಆರ್ಯವರ್ಧನ್ ಗುರೂಜಿ ಸಂಖ್ಯಾಶಾಸ್ತ್ರದಿಂದ ಭವಿಷ್ಯ ನುಡಿದು ಟ್ರೋಲ್ ಆಗಿದ್ದರು. ಐಪಿಎಲ್‌ ಪಂದ್ಯದ ವೇಳೆ ಸುದ್ದಿ ವಾಹಿನಿಯೊಂದರಲ್ಲಿ ಪಂದ್ಯ ಗೆಲ್ಲುವ ಬಗ್ಗೆ ಭವಿಷ್ಯ ನುಡಿದಿದ್ದರು. ಯಾವ ತಂಡ ಗೆಲ್ಲುತ್ತೆ. ಯಾರು ಎಷ್ಟು ರನ್ ಬಾರಿಸುತ್ತಾರೆ? ಯಾರು ಎಷ್ಟು ವಿಕೆಟ್ ತೆಗೆಯುತ್ತಾರೆ ಎಂದಿದ್ದರು. ಅದೆಲ್ಲಾ ಸುಳ್ಳಾಗಿತ್ತು. ಆರ್ಯವರ್ಧನ್ ಲೆಕ್ಕಾಚಾರ ತಲೆ ಕೆಳಗಾದಾಗ, ಸೋಶಿಯಲ್ ಮೀಡಿಯಾದಲ್ಲಿ ಆರ್ಯವರ್ಧನ್ ಟ್ರೋಲ್ ಆಗಿದ್ದರು.

More from Filmibeat

English summary
Bigg Boss Kannada OTT Contestant Number 1: Aryavardhan Guruji Prediction, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X